BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಅಡಿಕೆ ತೋಟದಲ್ಲಿ ಪತ್ತೆಯಾಯಿತು ಶಾಸನ
  • ಎಸ್‌ಐಆರ್: ಮನೆ ಮನೆಗೆ ತೆರಳಿ ಗಣತಿ ನಮೂನೆ ವಿತರಿಸುತ್ತಿರುವ ಬಿಎಲ್‌ಒಗಳು
  • ಆಧುನಿಕ ಕೃಷಿ ಪದ್ದತಿಗಳ ಬಳಕೆಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಕರೆ
  • ತಾತ್ಕಾಲಿಕವಾಗಿ ಪಿಂಚಣಿ ಸ್ಥಗಿತ: ದಾಖಲೆ ಲೋಪ ಕಾರಣ
  • ಬಹುದಿನಗಳಿಂದ ನೆನಗುದಿಗೆ ಬಿದಿದ್ದ ರೈಲ್ವೆ ಕಾಮಗಾರಿ ಪ್ರಾರಂಭ
  • ಅಕ್ಟೋಬರ್ ವೇಳೆಗೆ ತುಮಕೂರಿಗೆ ಎತ್ತಿನ ಹೊಳೆ ನೀರು
  • ಸ್ಲಂ ಮಕ್ಕಳು ಭವಿಷ್ಯ ದೃಷ್ಠಿಯಿಂದ ವಿದ್ಯಾವಂತರಾಗಿ ಜಿ.ಬಿ.ಜ್ಯೋತಿ ಗಣೇಶ್ ಕರೆ
  •  ಜು.೨೯ರವರೆಗೆ ಮನೆ-ಮನೆ ಭೇಟಿ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಗಾಂಧೀಜಿ ಶಾಂತಿ ಸಂದೇಶ, ಶಾಸ್ತಿçಯವರ ದೃಢ ಸಂಕಲ್ಪ ವಿಶ್ವಕ್ಕೆ ಮಾದರಿ
ತುಮಕೂರು

ಗಾಂಧೀಜಿ ಶಾಂತಿ ಸಂದೇಶ, ಶಾಸ್ತಿçಯವರ ದೃಢ ಸಂಕಲ್ಪ ವಿಶ್ವಕ್ಕೆ ಮಾದರಿ

By News Desk BenkiyabaleUpdated:October 02, 2023 4:39 pm

ತುಮಕೂರು:


ಜಗತ್ತಿಗೆ ಶಾಂತಿ ಹಾಗೂ ಅಹಿಂಸೆಯ ಅಸ್ತçಗಳನ್ನು ಕೊಟ್ಟಂತಹವರು ಮಹಾತ್ಮ ಗಾಂಧೀಜಿ, ಸರಳತೆಯನ್ನು ತಿಳಿಸಿಕೊಟ್ಟವರು ಲಾಲ್ ಬಹದ್ದೂರ್ ಶಾಸ್ತಿçಜೀ. ಇಂತಹ ಮಹನೀಯರು ಹಾಕಿ ಕೊಟ್ಟಂತಹ ಆದರ್ಶಗಳನ್ನು ಅನುಕರಣೆ ಮಾಡುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಅವರು ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಏರ್ಪಡಿಸಲಾಗಿದ್ದ ೧೫೪ನೇ ಮಹಾತ್ಮ ಗಾಂಧಿ ದಿನಾಚರಣೆ ಮತ್ತು ಲಾಲ್ ಬಹದ್ದೂರ್ ಶಾಸ್ತಿç ಅವರ ಜನ್ಮದಿನಾಚರಣೆ ಹಾಗೂ ಪ್ರಬಂಧ ವಿಜೇತ ಅಭ್ಯರ್ಥಿಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಮಾತನಾಡಿದ ಅವರು, ತುಮಕೂರು ಜಿಲ್ಲೆಗೆ ಮಹಾತ್ಮ ಗಾಂಧೀಜಿಯವರು ಸ್ವಾತಂತ್ರö್ಯ ಪೂರ್ವ ಚಳುವಳಿ ಸಂಬAಧ ಜಾಗೃತಿ ಮೂಡಿಸಲು ೧೯೨೭ರ ಆಗಸ್ಟ್ ತಿಂಗಳಿನಲ್ಲಿ ಕಸ್ತೂರಬಾರವರೊಂದಿಗೆ ಆಗಮಿಸಿದ್ದರು ಎಂದು ಸ್ಮರಿಸಿದರು.
ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತಂಗಿದ್ದ ಮಹಾತ್ಮ ಗಾಂಧೀಜಿಯವರು ಬಹಿರಂಗ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ್ದರು. ಮರುದಿನ ಬೆಳಿಗ್ಗೆಯೇ ಕೋತಿತೋಪು ಬಳಿಯ ಹರಿಜನರ ಕೇರಿಗೆ ಭೇಟಿ ನೀಡಿ ಅಲ್ಲಿನ ಜನರ ಸಮಸ್ಯೆಗಳನ್ನು ಆಲಿಸಿ, ಅದೇ ದಿನ ಸಂಜೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಹಾಸ್ಟೇಲ್‌ಗೆ ಭೇಟಿ ನೀಡಿದ್ದರು ಎಂದು ಸ್ಮರಿಸಿದರು.
ಭಾರತದ ಜನತೆಗೆ ಗಾಂಧೀಜಿಯವರು ನೀಡಿದ ಕೊಡುಗೆ ಎಂದರೆ ಅದು ಸತ್ಯಕ್ಕೆ ಆಗ್ರಹ ಅಂದರೇ ಸತ್ಯಾಗ್ರಹ, ಬ್ರಿಟೀಷರ ವಿರುದ್ದ ಹೋರಾಡಲು ಅವರು ಬಳಸಿದ ಅಸ್ತçವೆಂದರೆ ಶಾಂತಿ, ಅಹಿಂಸೆ ಹಾಗೂ ಧರ್ಮ. ಈ ಮೂರು ಅಸ್ತçಗಳೊಂದಿಗೆ ಬ್ರಿಟೀಷರ ಪಾರುಪತ್ಯವನ್ನು ಮಾಹಾತ್ಮ ಗಾಂಧಿಜಿಯವರು ಕೊನೆಗಾಣಿಸಿದರು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರು ಮಾತನಾಡಿ, ಶೋಷಿತ ಜನಾಂಗದವರ ಅದರಲ್ಲೂ ಹರಿಜನರ ಪರ ಧ್ವನಿಯೆತ್ತಿದ್ದ ಮಹಾತ್ಮ ಗಾಂಧೀಜಿಯವರು ‘ಹರಿಜನ ಪತ್ರಿಕೆ’ಯ ಮೂಲಕ ಶೋಷಿತ ಸಮುದಾಯದ ಸಮಸ್ಯೆಗಳನ್ನು ಸಮಾಜಕ್ಕೆ ತೋರಿಸಿದ್ದರು.
ಇಂದಿನ ಪೀಳಿಗೆ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತಿçಯವರ ಆದರ್ಶಗಳನ್ನು ಪಾಲಿಸಬೇಕಿದೆ. ಇಂದಿನ ಕ್ಷೀರಾಕ್ರಾಂತಿಗೆ ಲಾಲ್ ಬಹದ್ದೂರ್ ಶಾಸ್ತಿçಯವರು ಕಾರಣೀಭೂತರಾಗಿದ್ದಾರೆ ಎಂದು ಸ್ಮರಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಏರ್ಪಡಿಸಿದ್ದ ಮಹಾತ್ಮ ಗಾಂಧಿ ಕುರಿತ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಈ ಸಂದರ್ಭ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು. ನಗರ ಶಾಸಕ ಜ್ಯೋತಿಗಣೇಶ್, ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು, ಉಪವಿಭಾಗಾಧಿಕಾರಿ ಗೌರವ್‌ಕುಮಾರ್‌ಶೆಟ್ಟಿ ಅವರುಗಳು ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಮಾಣಪತ್ರ ಹಾಗೂ ನಗದು ಬಹುಮಾನ ವಿತರಿಸಿದರು.
ಪ್ರೌಢಶಾಲಾ ವಿಭಾಗದಲ್ಲಿ ಪಾವಗಡದ ಗಂಗೋತ್ರಿ, ಶಿರಾ ತಾಲ್ಲೂಕಿನ ಚೇತನ ಜಿ,ಎಸ್., ತಿಪಟೂರಿನ ನವ್ಯಶ್ರೀ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಪ್ರಶಸ್ತಿ ಪಡೆದಿದ್ದಾರೆ. ಪದವಿ ಪೂರ್ವ ವಿಭಾಗದಲ್ಲಿ ತುಮಕೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ತಾರಾ, ಶ್ರೀನಿವಾಸ ಡಿ.ಕೆ., ರೇಣುಕಾಪ್ರಸಾದ್ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನಗಳನ್ನು ಗಳಿಸಿದ್ದಾರೆ. ಪದವಿ/ಸ್ನಾತಕೋತ್ತರ ವಿಭಾಗದಲ್ಲಿ ತುಮಕೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಆಂಗ್ಲ ಭಾಷಾ ವಿಭಾಗದ ಸಹನ ವಿ, ಸ್ನಾತಕೋತ್ತರ ಕನ್ನಡ ಅಧ್ಯಯನ ವಿಭಾಗದ ಡಿ.ಎನ್.ಚಂದನ್ ಮತ್ತು ಚಿಕ್ಕನಾಯಕನಹಳ್ಳಿ ಪ್ರಥಮ ದರ್ಜೆ ಕಾಲೇಜಿನ ಕೆ.ಸಹನ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನಗಳನ್ನು ಗಳಿಸುವ ಮೂಲಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕಾರ್ಯಕ್ರಮದಲ್ಲಿ ನಗರ ಶಾಸಕ ಜ್ಯೋತಿಗಣೇಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು, ಉಪವಿಭಾಗಾಧಿಕಾರಿ ಗೌರವ್‌ಕುಮಾರ್‌ಶೆಟ್ಟಿ, ಜಿಲ್ಲಾ ವಾರ್ತಾಧಿಕಾರಿ ಮಮತ ಎಂ.ಆರ್., ತಹಶೀಲ್ದಾರ್ ಸಿದ್ದೇಶ್, ವಾರ್ತಾ ಸಹಾಯಕ ಯೋಗೀಶ್‌ಗೌಡ, ಪ್ರಶಿಕ್ಷಣಾರ್ಥಿ ನರಸಿಂಹಮೂರ್ತಿ ಎನ್.ಕೆ., ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

(Visited 1 times, 1 visits today)
tumkur
Previous Articleವಿಶ್ವವೇ ಮೆಚ್ಚಿದ ಮಹನೀಯ ಮಹಾತ್ಮಾ ಗಾಂಧಿ
Next Article ತುಮಕೂರು ರಿಸರ್ಚ್ ಫೌಂಡೇಶನ್ ಉದ್ಘಾಟನೆ
News Desk Benkiyabale

Related Posts

ಅಡಿಕೆ ತೋಟದಲ್ಲಿ ಪತ್ತೆಯಾಯಿತು ಶಾಸನ

July 02, 2026 4:59 pm news

ಎಸ್‌ಐಆರ್: ಮನೆ ಮನೆಗೆ ತೆರಳಿ ಗಣತಿ ನಮೂನೆ ವಿತರಿಸುತ್ತಿರುವ ಬಿಎಲ್‌ಒಗಳು

July 02, 2026 4:36 pm news

ಆಧುನಿಕ ಕೃಷಿ ಪದ್ದತಿಗಳ ಬಳಕೆಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಕರೆ

July 02, 2026 4:33 pm news
ತಾಜಾ ಸುದ್ಧಿಗಳು

ಅಡಿಕೆ ತೋಟದಲ್ಲಿ ಪತ್ತೆಯಾಯಿತು ಶಾಸನ

July 02, 2026 4:59 pm

ಎಸ್‌ಐಆರ್: ಮನೆ ಮನೆಗೆ ತೆರಳಿ ಗಣತಿ ನಮೂನೆ ವಿತರಿಸುತ್ತಿರುವ ಬಿಎಲ್‌ಒಗಳು

July 02, 2026 4:36 pm

ಆಧುನಿಕ ಕೃಷಿ ಪದ್ದತಿಗಳ ಬಳಕೆಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಕರೆ

July 02, 2026 4:33 pm

ತಾತ್ಕಾಲಿಕವಾಗಿ ಪಿಂಚಣಿ ಸ್ಥಗಿತ: ದಾಖಲೆ ಲೋಪ ಕಾರಣ

July 02, 2026 4:29 pm

ಬಹುದಿನಗಳಿಂದ ನೆನಗುದಿಗೆ ಬಿದಿದ್ದ ರೈಲ್ವೆ ಕಾಮಗಾರಿ ಪ್ರಾರಂಭ

July 02, 2026 4:26 pm

ಅಕ್ಟೋಬರ್ ವೇಳೆಗೆ ತುಮಕೂರಿಗೆ ಎತ್ತಿನ ಹೊಳೆ ನೀರು

July 02, 2026 4:19 pm
Our Youtube Channel
Our Picks

ಅಡಿಕೆ ತೋಟದಲ್ಲಿ ಪತ್ತೆಯಾಯಿತು ಶಾಸನ

July 02, 2026 4:59 pm

ಎಸ್‌ಐಆರ್: ಮನೆ ಮನೆಗೆ ತೆರಳಿ ಗಣತಿ ನಮೂನೆ ವಿತರಿಸುತ್ತಿರುವ ಬಿಎಲ್‌ಒಗಳು

July 02, 2026 4:36 pm

ಆಧುನಿಕ ಕೃಷಿ ಪದ್ದತಿಗಳ ಬಳಕೆಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಕರೆ

July 02, 2026 4:33 pm

ತಾತ್ಕಾಲಿಕವಾಗಿ ಪಿಂಚಣಿ ಸ್ಥಗಿತ: ದಾಖಲೆ ಲೋಪ ಕಾರಣ

July 02, 2026 4:29 pm

ಬಹುದಿನಗಳಿಂದ ನೆನಗುದಿಗೆ ಬಿದಿದ್ದ ರೈಲ್ವೆ ಕಾಮಗಾರಿ ಪ್ರಾರಂಭ

July 02, 2026 4:26 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds kannada news karnataka Kn rajanna kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss

ಅಡಿಕೆ ತೋಟದಲ್ಲಿ ಪತ್ತೆಯಾಯಿತು ಶಾಸನ

By News Desk BenkiyabaleJuly 02, 2026 4:59 pm

ತುಮಕೂರು/ಶಿವಮೊಗ್ಗ: ತುಮಕೂರಿನ ಇತಿಹಾಸ ಸಂಶೋಧಕರ ತಂಡ ಶಿವಮೊಗ್ಗ ತಾಲೂಕಿನ ಬಿದಿರಿ ಗ್ರಾಮದಲ್ಲಿ ವಿಜಯನಗರ ಕಾಲದ ಅತ್ಯಂತ ಮಹತ್ವದ ಹಾಗೂ ಇಂದಿನವರೆಗೂ…

ಎಸ್‌ಐಆರ್: ಮನೆ ಮನೆಗೆ ತೆರಳಿ ಗಣತಿ ನಮೂನೆ ವಿತರಿಸುತ್ತಿರುವ ಬಿಎಲ್‌ಒಗಳು

July 02, 2026 4:36 pm

ಆಧುನಿಕ ಕೃಷಿ ಪದ್ದತಿಗಳ ಬಳಕೆಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಕರೆ

July 02, 2026 4:33 pm

ತಾತ್ಕಾಲಿಕವಾಗಿ ಪಿಂಚಣಿ ಸ್ಥಗಿತ: ದಾಖಲೆ ಲೋಪ ಕಾರಣ

July 02, 2026 4:29 pm
News by Date
July 2026
M T W T F S S
 12345
6789101112
13141516171819
20212223242526
2728293031  
« Jun    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.