BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಕೂಲಿಕಾರರು ಸರಿಯಾಗಿ ಕೆಲಸ ಮಾಡಿದರೆ ನಿರಂತರ ಕೆಲಸ
  • ಕೆರೆಯ ನೀರನ್ನ ಅಕ್ರಮವಾಗಿ ತೋಟಕ್ಕೆ ಹರಿಸಿಕೊಂಡ ಆರೋಪ: ಆಕ್ರೋಶ
  • ದಸರಾ ಉತ್ಸವ: ಆಗಮ ರೀತಿಯಲ್ಲಿ ಪೂಜಾ ಕೈಂಕರ್ಯಗಳನ್ನು ನಡೆಸಲು ನಿರ್ಣಯ
  • ಶಾಸಕರೇ ವಿಶ್ವಕರ್ಮ ಸಮುದಾಯದವರಿಗೂ ಅನುದಾನ ನೀಡಿ
  • ವಿಶ್ವಕರ್ಮ ಜನಾಂಗ ಕಾಯಕ, ಶ್ರಮ ಸಂಸ್ಕತಿಯ ಸಂಕೇತ
  • ಸರ್ಕಾರದಿಂದ ಇಂಜಿನಿಯರ್ಸ್ ದಿನ ಆಚರಣೆ
  • ಉಪ ಮುಖ್ಯಮಂತ್ರಿಗಳಿ0ದ ತುಮಕೂರು ದಸರಾ-೨೦೨೬ ಲಾಂಛನ ಬಿಡುಗಡೆ
  • ಶಾಲಾ ಸಾಮಗ್ರಿಗಳಿಂದ ಅರಳಿದ ವಿದ್ಯಾ ಗಣಪತಿ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ನೋವು, ನಲಿವುಗಳಿಗೆ ದನಿಯಾಗಿದ್ದ ದಸಂಸ
news

ನೋವು, ನಲಿವುಗಳಿಗೆ ದನಿಯಾಗಿದ್ದ ದಸಂಸ

By News Desk BenkiyabaleUpdated:November 06, 2024 5:11 pm
????????????????????????????????????

ತುಮಕೂರು: ಶರಣ ಚಳವಳಿಯ ನಂತರ ಅತಿ ಹೆಚ್ಚು ಜನರ ಒಡನಾಟ ಹೊಂದಿದ್ದ ಚಳವಳಿ ಎಂದರೆ ಅದು ದಲಿತ ಸಂಘರ್ಷ ಸಮಿತಿಯ ಹೋರಾಟಗಳಾಗಿವೆ.ಜನರ ನಡುವೆಯೇ ಇದ್ದ, ಅವರ ನೋವು, ನಲಿವುಗಳಿಗೆ ದ್ವನಿಯಾಗಿದ್ದ ದಸಂಸ, ಇದನ್ನು ಕನ್ನಡ ವಿವಿಯ ಆಧ್ಯಯನ ವರದಿಗಳು ದೃಢಪಡಿಸಿವೆ ಎಂದು ಹಿರಿಯ ಗಾಯಕ, ರಾಜೋತ್ಸವ ಪ್ರಶಸ್ತಿ ಪುರಸ್ಕೃತ ಪಿಚ್ಚಳ್ಳಿ ಶ್ರೀನಿವಾಸ್ ತಿಳಿಸಿದ್ದಾರೆ.

ನಗರದ ಪಾವನ ಆಸ್ಪತ್ರೆಯಲ್ಲಿ ಇಂದು ಬಹಜನ ನಾಯಕ ಬೆಲ್ಲದಮಡು ರಂಗಸ್ವಾಮಿ ಅವರ 75ನೇ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ರಾಜೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು,ದಲಿತ ಚಳವಳಿಯ ಆರಂಭದಲ್ಲಿ ಗುರುತಿಸಿಕೊಂಡಿದ್ದ ಎಲ್ಲಾ ನಾಯಕರು ತಾಯ್ತತನದಿಂದ ಕೆಲಸ ಮಾಡಿದ್ದರು.ಹಾಗಾಗಿಯೇ ಎಲ್ಲಾ ವರ್ಗದ ಜನರನ್ನು ತಲುಪಲು ಸಾಧ್ಯವಾಯಿತು ಎಂದರು.

ದಸAಸ ಮತ್ತು ನಮ್ಮದು 45 ವರ್ಷಗಳ ಒಡೆನಾಟ. ಹತ್ತನೇ ತರಗತಿ ಅನುತ್ತೀರ್ಣಗೊಂಡು ದನ ಕಾಯುವಾಗ ಸಮಯ ಕಳೆಯಲು ವಿವಿಧ ರೀತಿಯ ಗೀತೆಗಳನ್ನು ಹಾಡುತ್ತಿದ ನನ್ನನ್ನು ಹಿರಿಯರೊಬ್ಬರು ಕೋಟಗಾನಹಳ್ಳಿ ರಾಮಯ್ಯ ಬಳಿ ತಂದು ಬಿಟ್ಟರು,ಅಲಿಂದ ಆರಂಭವಾದ ದಸಂಸ ಒಡನಾಟ ಇಂದಿಗೂ ಮುಂದುವರೆದಿದೆ.ನಾವು ಇಂದು ಏನಾದರೂ ಆಗಿದ್ದೇವೆ ಎಂದರೆ ಅದಕ್ಕೆ ಕಾರಣ ದಲಿತ ಸಂಘರ್ಷ ಸಮಿತಿ ಮತ್ತು ಅದರಲ್ಲಿದ್ದ ಬೆಲ್ಲದ ಮಡು ರಂಗಸ್ವಾಮಣ್ಣನAತಹ ತಾಯ್ತನದ ಮುಖಂಡರಗಳೇ ಸಹೃದಯವಂತರ ಸಹವಾಸ ಎಂದು ಪಿಚ್ಚಳ್ಳಿ ಶ್ರೀನಿವಾಸ್ ನುಡಿದರು.

ಸಾಧಕರನ್ನು ಅಭಿನಂದಿಸಿದ ಹಿರಿಯ ಹರಿಕಥಾ ವಿದ್ವಾನ್ ಡಾ.ಲಕ್ಷö್ಮಣದಾಸ್ ಮಾತನಾಡಿ,ನಾನು ಮತ್ತು ಬೆಲ್ಲದ ಮಡು ರಂಗಸ್ವಾಮಿ ಒಡನಾಡಿಗಳು,ಅವರು ಹೋರಾಟಗಾರರಾಗಿ ಗುರುತಿಸಿಕೊಂಡರೆ, ನಾನು ಕಲಾವಿದನಾದೆ.ಪುರಾಣ ಕಥೆಗಳಿಗೆ ಸಿಮೀತವಾಗಿದ್ದ ಹರಿಕಥಾ ಕ್ಷೇತ್ರದಲ್ಲಿ ಐತಿಹಾಸಿಕ ವ್ಯಕ್ತಿಗಳ ಜೀವನ ಚರಿತ್ರೆ ಹೇಳುವ ಜನಕಥಾ ಕೀರ್ತನೆ ಸೃಜನೆಯ ಹಿಂದೆ ದಸಂಸದ ಸಂಗಾತಿಗಳ ಒಡನಾಡುವೂ ಕಾರಣ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಚಿಂತಕ ಕೆ.ದೊರೈರಾಜು ಮಾತನಾಡಿ, ಇಂದು ದೇಶದಲ್ಲಿ ಜಾತಿಯತೆ, ಕೋಮು ಪ್ರಚೋದನೆ ಹೆಚ್ಚಲು,ಹಿರಿಯರು ನಮ್ಮ ಪರಂಪರೆ, ಸಂಸ್ಕೃತಿಯನ್ನು ಕಿರಿಯರಿಗೆ ತಿಳಿಸದೆ ಇರುವುದು. ದಸಂಸ ಹುಟ್ಟಿಗೆ ಕಾರಣ ಏನು?, ಅದರ ಸಾಧನೆಗಳೇನು? ಎಂಬುದನ್ನು ಯುವ ಪೀಳಿಗೆಗೆ ತಿಳಿಸುವ ಮೂಲಕ ಒಡೆದು ಆಳುವ ಸಂಸ್ಕೃತಿ ವಿರುದ್ದ ಯುವಕರಿಗೆ ವ್ಯವಸ್ಥಿತವಾಗಿ ಸಂಘಟಿಸಬೇಕಿದೆ ಎಂದರು.

ಈ ಜಗತ್ತು ಯಾವತ್ತು ಸರ್ವಾಧಿಕಾರಿಯನ್ನು ಬೆಳೆಯಲು ಬೆಳೆಯಲು ಬಿಟ್ಟಿಲ.ನಾನು, ನನ್ನದು ಎಂಬುದು ಬಹು ಕಾಲ ನಿಲ್ಲದು,ನಾವು,ನಮ್ಮದು ಎಂಬುದಕ್ಕೆ ಎಂದಿಗೂ ಮನ್ನಣೆ ಇದೆ.ಇದನ್ನು ಇತಿಹಾಸವೇ ತಿಳಿಸಿಕೊಟ್ಟಿದೆ.ನಾನು ಎಷ್ಟೇ ಆರೋಗ್ಯವಂತನಾಗಿದ್ದರೂ, ನನ್ನ ಸುತ್ತಮುತ್ತ ಕೊಳಕು ಇದ್ದರೆ, ನನ್ನನ್ನು ಒಂದು ದಿನ ಕೊಳೆಯುವಂತೆ ಮಾಡುತ್ತದೆ ಎಂಬ ಸತ್ಯವನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕು.ಒಬ್ಬರು ದೈಹಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ, ಅವರ ಕೆಲಸವನ್ನು ಇನ್ನೊಬ್ಬರು ಮುಂದುವರೆಸಿಕೊAಡು ಹೋಗುವುದನ್ನು ನೋಡಿದಾಗ,ಅವರ ಇದ್ದಾರೆ ಎಂಬ ಭಾವನೆ ಮೂಡುತ್ತದೆ ಎಂದು ಕೆ.ದೊರೆರಾಜು ನುಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಪಾವನ ಆಸ್ಪತ್ರೆಯ ಮುಖ್ಯಸ್ಥ ಡಾ.ಮುರುಳೀಧರ ಬೆಲ್ಲದ ಮಡು, ಇಂದು ಕರ್ಮಯೋಗಿ ಬೆಲ್ಲದ ಮಡು ರಂಗಸ್ವಾಮಿ ಅವರ 75ನೇ ಜನ್ಮ ದಿನ. ಇಂದು ಅವರ ನೆನಪಿನಲ್ಲಿ ಅವರ ಬದುಕು, ಹೋರಾಟ ಕುರಿತು ಪುಸ್ತಕವೊಂದನ್ನು ಹೊರತರುವ ಪ್ರಯತ್ನ ನಡೆದಿತ್ತು. ಅತಿಥಿಗಳ ದಿನಾಂಕ ಸರಿಹೊಂದದ ಕಾರಣ ಸಾಧ್ಯವಾಗಲಿಲ್ಲ.ಹಾಗಾಗಿ ಸಾಧಕರನ್ನು ಸನ್ಮಾನಿಸುವ ಕೆಲಸ ನಡೆದಿದೆ.ಸುಮಾರು 44 ವರ್ಷಗಳಿಂದ ಕರಾಟೆ ತರಬೇತಿ ನೀಡುತ್ತಿರುವ ಕರಾಟೆ ಕೃಷ್ಣಮೂರ್ತಿ,ಪತ್ರಕರ್ತರಾದ ಚಿ.ನಿ.ಪುರುಷೋತ್ತಮ, ಹೆಚ್.ವಿ.ವೆಂಕಟಾಚಲ ಹಾಗೂ ಗಾಯಕರಾದ ಪಿಚ್ಚಳ್ಳಿ ಶ್ರೀನಿವಾಸ ಅವರುಗಳನ್ನು ಕರ್ಮಯೋಗಿ ಬೆಲ್ಲದ ಮಡು ರಂಗಸ್ವಾಮಿ ಟ್ರಸ್ಟ್ ವತಿಯಿಂದ ಅಭಿನಂದಿಸಲಾಗುತ್ತಿದೆ.ಅಲ್ಲದೆ ಟ್ರಸ್ಟ್ ವತಿಯಿಂದ ಹೆಲ್ತ್ ಕ್ಯಾಂಪ್ ಸೇರಿದಂತೆ ಹಲವು ಸಮಾಜ ಸೇವಾ ಕಾರ್ಯಕ್ರಮಗಳನ್ನು ಅಯೋಜಿಸಲಾಗುತ್ತಿದೆ ಎಂದರು.

ಅಭಿನAದಿತರಾದ ಕರಾಟೆ ಕೃಷ್ಣಮೂರ್ತಿ,ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಚಿ.ನಿ.ಪುರುಷೋತ್ತಮ್, ಮೈತ್ರಿ ನ್ಯೂಸ್ ಸಂಪಾದಕರಾದ ಹೆಚ.ವಿ.ವೆಂಕಟಾಚಲ ಅವರುಗಳು ಮಾತನಾಡಿದರು.

ವೇದಿಕೆಯಲ್ಲಿ ಡಾ.ಪಾವನ, ದಸಂಸ ಹಿರಿಯರಾದ ನರಸಿಂಹಯ್ಯ, ನರಸೀಯಪ್ಪ, ಸಿಐಟಿಯುನ ಸುಬ್ರಮಣ್ಯ, ಬಿ.ಉಮೇಶ್,ಬೆಲ್ಲದಮಡು ರಂಗಸ್ವಾಮಿ ಅವರ ಸಹೋದರರಾದ ಶಿವಣ್ಣ, ಕೃಷ್ಣಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.

(Visited 1 times, 1 visits today)
ತುಮಕೂರು: ದಲಿತ ಸಂಘರ್ಷ ಸಮಿತಿ ದಸಂಸ ಶರಣ ಚಳವಳಿ
Previous Articleನ.7ರಿಂದ ಪದವಿ ಪೂರ್ವ ಕಾಲೇಜುಗಳ ರಾಜ್ಯ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟ
Next Article ಶಾಂತಿಯ ಬದುಕಿಗೆ ದೇವರ ಅರಿವು ಮತ್ತು ಧರ್ಮದ ಆಚರಣೆಯು ಅವಶ್ಯಕ
News Desk Benkiyabale

Related Posts

ಕೂಲಿಕಾರರು ಸರಿಯಾಗಿ ಕೆಲಸ ಮಾಡಿದರೆ ನಿರಂತರ ಕೆಲಸ

September 17, 2026 5:39 pm news

ಕೆರೆಯ ನೀರನ್ನ ಅಕ್ರಮವಾಗಿ ತೋಟಕ್ಕೆ ಹರಿಸಿಕೊಂಡ ಆರೋಪ: ಆಕ್ರೋಶ

September 17, 2026 5:38 pm news

ದಸರಾ ಉತ್ಸವ: ಆಗಮ ರೀತಿಯಲ್ಲಿ ಪೂಜಾ ಕೈಂಕರ್ಯಗಳನ್ನು ನಡೆಸಲು ನಿರ್ಣಯ

September 17, 2026 5:35 pm news
ತಾಜಾ ಸುದ್ಧಿಗಳು
news

ಕೂಲಿಕಾರರು ಸರಿಯಾಗಿ ಕೆಲಸ ಮಾಡಿದರೆ ನಿರಂತರ ಕೆಲಸ

September 17, 2026 5:39 pm
news

ಕೆರೆಯ ನೀರನ್ನ ಅಕ್ರಮವಾಗಿ ತೋಟಕ್ಕೆ ಹರಿಸಿಕೊಂಡ ಆರೋಪ: ಆಕ್ರೋಶ

September 17, 2026 5:38 pm
news

ದಸರಾ ಉತ್ಸವ: ಆಗಮ ರೀತಿಯಲ್ಲಿ ಪೂಜಾ ಕೈಂಕರ್ಯಗಳನ್ನು ನಡೆಸಲು ನಿರ್ಣಯ

September 17, 2026 5:35 pm
news

ಶಾಸಕರೇ ವಿಶ್ವಕರ್ಮ ಸಮುದಾಯದವರಿಗೂ ಅನುದಾನ ನೀಡಿ

September 17, 2026 5:33 pm
news

ವಿಶ್ವಕರ್ಮ ಜನಾಂಗ ಕಾಯಕ, ಶ್ರಮ ಸಂಸ್ಕತಿಯ ಸಂಕೇತ

September 17, 2026 5:31 pm
news

ಸರ್ಕಾರದಿಂದ ಇಂಜಿನಿಯರ್ಸ್ ದಿನ ಆಚರಣೆ

September 16, 2026 5:32 pm
Our Youtube Channel
Our Picks

ಕೂಲಿಕಾರರು ಸರಿಯಾಗಿ ಕೆಲಸ ಮಾಡಿದರೆ ನಿರಂತರ ಕೆಲಸ

September 17, 2026 5:39 pm

ಕೆರೆಯ ನೀರನ್ನ ಅಕ್ರಮವಾಗಿ ತೋಟಕ್ಕೆ ಹರಿಸಿಕೊಂಡ ಆರೋಪ: ಆಕ್ರೋಶ

September 17, 2026 5:38 pm

ದಸರಾ ಉತ್ಸವ: ಆಗಮ ರೀತಿಯಲ್ಲಿ ಪೂಜಾ ಕೈಂಕರ್ಯಗಳನ್ನು ನಡೆಸಲು ನಿರ್ಣಯ

September 17, 2026 5:35 pm

ಶಾಸಕರೇ ವಿಶ್ವಕರ್ಮ ಸಮುದಾಯದವರಿಗೂ ಅನುದಾನ ನೀಡಿ

September 17, 2026 5:33 pm

ವಿಶ್ವಕರ್ಮ ಜನಾಂಗ ಕಾಯಕ, ಶ್ರಮ ಸಂಸ್ಕತಿಯ ಸಂಕೇತ

September 17, 2026 5:31 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಕೂಲಿಕಾರರು ಸರಿಯಾಗಿ ಕೆಲಸ ಮಾಡಿದರೆ ನಿರಂತರ ಕೆಲಸ

By News Desk BenkiyabaleSeptember 17, 2026 5:39 pm

ಹುಳಿಯಾರು “ಗ್ರಾಮೀಣ ಪ್ರದೇಶದ ಕೂಲಿಕಾರರ ಗುಳೆ ತಪ್ಪಿಸಿ ಸ್ಥಳೀಯವಾಗಿ ಉದ್ಯೋಗ ಕಲ್ಪಿಸಲು ವಿಬಿ ಜಿ ರಾಮ್ ಜಿ ಯೋಜನೆಯಡಿ ೧೨೫…

ಕೆರೆಯ ನೀರನ್ನ ಅಕ್ರಮವಾಗಿ ತೋಟಕ್ಕೆ ಹರಿಸಿಕೊಂಡ ಆರೋಪ: ಆಕ್ರೋಶ

September 17, 2026 5:38 pm

ದಸರಾ ಉತ್ಸವ: ಆಗಮ ರೀತಿಯಲ್ಲಿ ಪೂಜಾ ಕೈಂಕರ್ಯಗಳನ್ನು ನಡೆಸಲು ನಿರ್ಣಯ

September 17, 2026 5:35 pm

ಶಾಸಕರೇ ವಿಶ್ವಕರ್ಮ ಸಮುದಾಯದವರಿಗೂ ಅನುದಾನ ನೀಡಿ

September 17, 2026 5:33 pm
News by Date
September 2026
M T W T F S S
 123456
78910111213
14151617181920
21222324252627
282930  
« Aug    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.