BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ೨೬ ವರ್ಷಗಳ ನಂತರ ಪ್ರೌಢಶಾಲೆ ಸ್ನೇಹಿತರ ಸಮ್ಮಿಲನ
  • ದುರಸ್ತಿ ವೇಳೆ ಬಯಲಾದ ಮಹಾ ನಿರ್ಲಕ್ಷ
  • ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಶಬರಿಮಲೆ ಯಾತ್ರೆ
  • ಹುಳಿಯಾರಿನಲ್ಲಿ ಮಧ್ಯವರ್ತಿ ಮುಕ್ತ ಅಭಿಯಾನ
  • ಇ-ಪೌತಿ ಖಾತಾ ಆಂದೋಲನ ಸಹಕಾರ ಅಗತ್ಯ: ಡಿಸಿ
  • ಯುವಜನಾಂಗಕ್ಕೆ ಸಮುದಾಯದ ಪರಂಪರೆಯ ಅರಿವು ಮೂಡಿಸಿ
  • ನನ್ನ ಆರೋಗ್ಯಕ್ಕಿಂತ ನಿಮ್ಮ ಅಭಿಮಾನವೇ ಮುಖ್ಯ: ಡಿಸಿಎಂ
  • ಬಡವರ ಗೋಳು ಕೇಳುವರ‍್ಯಾರು
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಅಲೆಮಾರಿ ಹೆಣ್ಣುಮಕ್ಕಳ ಬಳಿಗೆ ಮಹಿಳಾ ಆಯೋಗದ ಅಧ್ಯಕ್ಷರು
ಕರ್ನಾಟಕ ಸುದ್ಧಿಗಳು

ಅಲೆಮಾರಿ ಹೆಣ್ಣುಮಕ್ಕಳ ಬಳಿಗೆ ಮಹಿಳಾ ಆಯೋಗದ ಅಧ್ಯಕ್ಷರು

By News Desk BenkiyabaleUpdated:December 04, 2024 5:27 pm

ಚಿಕ್ಕನಾಯಕನಹಳ್ಳಿ; ದಕ್ಕಲಿಗ ಅಲೆಮಾರಿಗಳು ವಾಸವಿರುವ ಪಟ್ಟಣದ ಗಾಂಧಿನಗರಕ್ಕೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ ನಾಗಲಕ್ಷ್ಮಿ ಚೌಧರಿ’ಯವರು ಶುಕ್ರವಾರ ಭೇಟಿ ನೀಡಿ ಅಲ್ಲಿನ ಮಹಿಳೆ ಮತ್ತು ಮಕ್ಕಳ ಕುಂದು-ಕೊರತೆ ಬಗ್ಗೆ ಪರಿಶೀಲನೆ ನಡೆಸಿ, ಸ್ಥಳೀಯ ಆಡಳಿತದ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ಶುಕ್ರವಾರ ಬೆಳಗ್ಗೆ ತಾಲ್ಲೂಕಿನ ಹುಳಿಯಾರು ಪಟ್ಟಣದ ಕನಕ ವೃತ್ತದಲ್ಲಿ ರಾಷ್ಟ್ರೀಯ ಸಂತ-ಕವಿ ಕನಕದಾಸರ ಪುತ್ಥಳಿಯ ಅನಾವರಣ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅವರು, ತಾಲ್ಲೂಕಿನ ಅಲೆಮಾರಿಗಳ ಕುಂದು-ಕೊರತೆಗಳ ಬಗ್ಗೆ ಖುದ್ದಾಗಿ ತೆರಳಿ ಅಲ್ಲಿನ ಸಮಸ್ಯೆಗಳನ್ನು ಆಲಿಸಿದರು.
ಹುಳಿಯಾರು ಪಟ್ಟಣದ ಕೆರೆ ದಂಡೆಯಲ್ಲಿ ವಾಸವಿರುವ ಅಲೆಮಾರಿಗಳು ಮತ್ತು ಬಡ ಕುಟುಂಬಗಳ ಪರಿಸ್ಥಿತಿ ಕಂಡು, ಅಧಿಕಾರಿಗಳಿಗೆ ಹಲವು ಸಲಹೆ-ಸೂಚನೆಗಳನ್ನು ಸ್ಥಳದಲ್ಲೇ ನೀಡಿದರು. ಅಲ್ಲಿನ ಮಕ್ಕಳು ಮತ್ತು ಮಹುಳೆಯರ ಜೊತೆ ಸ್ನೇಹ-ಸಲುಗೆಯಿಂದ ಒಳಗೊಂಡ ಮಹಿಳಾ ಆಯೋಗದ ಅಧ್ಯಕ್ಷರು, ಅಲ್ಲಿನ ಎಲ್ಲ ಬಡವರಿಗೂ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು. ಅವರ ಜೊತೆ ಪ್ರಗತಿಪರ ಚಿಂತಕ ಹಾಗೂ ಯುವನಾಯಕ ನಿಕೇತ್ ರಾಜ್ ಮೌರ್ಯ ಕೂಡ ಇದ್ದರು. ನಂತರ, ಸ್ವತಃ ವೃತ್ತಿಯಿಂದ ವೈದ್ಯೆಯಾಗಿರುವ ಡಾ ನಾಗಲಕ್ಷ್ಮಿ ಚಾಧರಿಯವರು, ನೇರ ಅಲ್ಲಿಂದು ಹುಳಿಯಾರು ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಭೇಟಿ ಕೊಟ್ಟು ಅಲ್ಲಿನ ಅವ್ಯವಸ್ಥೆಗಳನ್ನು ಕಂಡು ಬೆಚ್ಚಿಹೋದರು. ಆಸ್ಪತ್ರೆಯ ಶುಶ್ರೂಷಕಿಯರಿಗೆ (ನರ್ಸು) ಸ್ಟೆರಲೈಜ ಮಾಡುವ ವಿಧಾನವೇ ಗೊತ್ತಿಲ್ಲದಿದ್ದನ್ನು ಕಂಡು, ಹೌಹಾರಿದರು. ಅಲ್ಲಿನ ಕೊಠಡಿಗಳು, ಸ್ಟೋರ್ ರೂಮುಗಳು, ಚಿಕಿತ್ಸಾ ಕೊಠಡಿಯಲ್ಲಿನ ದುರ್ಗಂಧ ಹಾಗೂ ಗಲೀಜನ್ನು ಕಂಡು ಸೇವಾನಿರತ ವೈದ್ಯರನ್ನು ತರಾಟೆಗೆ ತೆಗೆದುಕೊಂಡರು. ಅಲ್ಲಿ ಪ್ರಭಾರ ಕಾರ್ಯ ನಿರ್ವಹಿಸುತ್ತಿರುವ ವೈದ್ಯ ಡಾ.ಮಧುರವರನ್ನು ಉದ್ದೇಶಿಸಿ ಮಹಿಳಾ ಆಯೋಗದ ಅಧ್ಯಕ್ಷರು ಸ್ಪಷ್ಟ ಎಚ್ಚರಿಕೆಗಳನ್ನು ನೀಡಿದರು. ತಹಸೀಲ್ದಾರ್ ಕೆ ಪುರಂದರ್’ರವರ ಬಳಿ ಆಸ್ಪತ್ರೆಯ ಅವ್ಯವಸ್ಥೆಯ ಬಗ್ಗೆ ಅವರು ತೀವ್ರ ಬೇಸರ ವ್ಯಕ್ತಪಡಿಸಿದರು.
ಅಲ್ಲಿಂದ ನೇರ ಚಿಕ್ಕನಾಯಕನಹಳ್ಳಿ ಪಟ್ಟಣದ ಗಾಂಧಿನಗರದಲ್ಲಿ ವಾಸವಿರುವ ದಕ್ಕಲಿಗ ಜನಾಂಗದ ಅಲೆಮಾರಿಗಳ ಕಾಲೊನಿಗೆ ಸಂಜೆ 7.00 ಗಂಟೆಯಷ್ಟೊತ್ತಿಗೆ ಭೇಟಿಕೊಟ್ಟ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ.ನಾಗಲಕ್ಷ್ಮಿ ಚೌಧರಿಯವರು, ಅಲ್ಲಿನ ಮಹಿಳೆಯರ ಮೂಲಭೂತ ಹಕ್ಕಾದ ಶೌಚಾಲಯ ವ್ಯವಸ್ಥೆಯನ್ನೇ ಮಾಡಿಕೊಡಲಾಗದ ಪುರಸಭೆಯ ಮುಖ್ಯಾಧಿಕಾರಿ ಮಂಜಮ್ಮನವರನ್ನು ಕರೆ ಮಾಡಿ ಛೀಮಾರಿ ಹಾಕಿದರು.

(Visited 1 times, 1 visits today)
ಚಿಕ್ಕನಾಯಕನಹಳ್ಳಿ ಡಾ ನಾಗಲಕ್ಷ್ಮಿ ಚೌಧರಿ ದಕ್ಕಲಿಗ ಅಲೆಮಾರಿಗಳು ಮಹಿಳಾ ಆಯೋಗ
Previous Articleಎಕ್ಸ್ಪ್ರೆಸ್ ಕೆನಾಲ್ ಕಾಮಗಾರಿ ನಿಲ್ಲಿಸಲು ಒತ್ತಾಯ
Next Article ಪರೀಕ್ಷಾ ಕೇಂದ್ರಗಳಲ್ಲಿ ವೆಬ್ ಕ್ಯಾಮರಾ ಅಳವಡಿಕೆ
News Desk Benkiyabale

Related Posts

೨೬ ವರ್ಷಗಳ ನಂತರ ಪ್ರೌಢಶಾಲೆ ಸ್ನೇಹಿತರ ಸಮ್ಮಿಲನ

June 16, 2026 5:29 pm news

ದುರಸ್ತಿ ವೇಳೆ ಬಯಲಾದ ಮಹಾ ನಿರ್ಲಕ್ಷ

June 16, 2026 5:25 pm news

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಶಬರಿಮಲೆ ಯಾತ್ರೆ

June 16, 2026 5:22 pm news
ತಾಜಾ ಸುದ್ಧಿಗಳು

೨೬ ವರ್ಷಗಳ ನಂತರ ಪ್ರೌಢಶಾಲೆ ಸ್ನೇಹಿತರ ಸಮ್ಮಿಲನ

June 16, 2026 5:29 pm

ದುರಸ್ತಿ ವೇಳೆ ಬಯಲಾದ ಮಹಾ ನಿರ್ಲಕ್ಷ

June 16, 2026 5:25 pm

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಶಬರಿಮಲೆ ಯಾತ್ರೆ

June 16, 2026 5:22 pm

ಹುಳಿಯಾರಿನಲ್ಲಿ ಮಧ್ಯವರ್ತಿ ಮುಕ್ತ ಅಭಿಯಾನ

June 16, 2026 5:20 pm

ಇ-ಪೌತಿ ಖಾತಾ ಆಂದೋಲನ ಸಹಕಾರ ಅಗತ್ಯ: ಡಿಸಿ

June 16, 2026 5:05 pm

ಯುವಜನಾಂಗಕ್ಕೆ ಸಮುದಾಯದ ಪರಂಪರೆಯ ಅರಿವು ಮೂಡಿಸಿ

June 15, 2026 5:26 pm
Our Youtube Channel
Our Picks

೨೬ ವರ್ಷಗಳ ನಂತರ ಪ್ರೌಢಶಾಲೆ ಸ್ನೇಹಿತರ ಸಮ್ಮಿಲನ

June 16, 2026 5:29 pm

ದುರಸ್ತಿ ವೇಳೆ ಬಯಲಾದ ಮಹಾ ನಿರ್ಲಕ್ಷ

June 16, 2026 5:25 pm

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಶಬರಿಮಲೆ ಯಾತ್ರೆ

June 16, 2026 5:22 pm

ಹುಳಿಯಾರಿನಲ್ಲಿ ಮಧ್ಯವರ್ತಿ ಮುಕ್ತ ಅಭಿಯಾನ

June 16, 2026 5:20 pm

ಇ-ಪೌತಿ ಖಾತಾ ಆಂದೋಲನ ಸಹಕಾರ ಅಗತ್ಯ: ಡಿಸಿ

June 16, 2026 5:05 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds Kn rajanna kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest R. Rajendra tumakur tumkur Tumkur dc yspatil Tumkur mahanagara palike tumur turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss

೨೬ ವರ್ಷಗಳ ನಂತರ ಪ್ರೌಢಶಾಲೆ ಸ್ನೇಹಿತರ ಸಮ್ಮಿಲನ

By News Desk BenkiyabaleJune 16, 2026 5:29 pm

ತುಮಕೂರು: ಶಾಲೆ ಬಿಟ್ಟ ನಂತರ ಸ್ನೇಹಿತರನ್ನು ಭೇಟಿ ಮಾಡುವುದೇ ಕಷ್ಟ ಅಂತಹುದರಲ್ಲಿ ಪ್ರೌಢಶಾಲೆಯಲ್ಲಿ ಕಲಿತ ಎಲ್ಲಾ ಸ್ನೇಹಿತರನ್ನು ಕಲೆ ಹಾಕಿ…

ದುರಸ್ತಿ ವೇಳೆ ಬಯಲಾದ ಮಹಾ ನಿರ್ಲಕ್ಷ

June 16, 2026 5:25 pm

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಶಬರಿಮಲೆ ಯಾತ್ರೆ

June 16, 2026 5:22 pm

ಹುಳಿಯಾರಿನಲ್ಲಿ ಮಧ್ಯವರ್ತಿ ಮುಕ್ತ ಅಭಿಯಾನ

June 16, 2026 5:20 pm
News by Date
June 2026
M T W T F S S
1234567
891011121314
15161718192021
22232425262728
2930  
« Apr    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.