BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಬೇಟರಾಯಸ್ವಾಮಿ ಸ್ವಾಮಿ ಬ್ರಹ್ಮ ರಥೋತ್ಸವ
  • ಶುಶ್ರೂಷಕಿಯರ ಸೇವೆ ಜಗತ್ತಿನ ಸರ್ವಶ್ರೇಷ್ಠ ಸೇವೆ
  • ಪೌರಕಾರ್ಮಿಕರಿಗೆ ಶೂ, ಕೈಗವಸು, ಮಾಸ್ಕ್ ವಿತರಿಸಲು ಅಧಿಕಾರಿಗಳಿಗೆ ಪಿ. ರಘು ಸೂಚನೆ
  • ಬಲಿಜ ಸಮುದಾಯ ಅತ್ಯಂತ ಸಂಘಟಿತ ಸಮುದಾಯ
  • ಬೆಳ್ಳಾವಿ ಸೋಮೇಶ್ವರಸ್ವಾಮಿಯ ವೈಭವದ ರಥೋತ್ಸವ
  • ಖಾಲಿಯಿರುವ ಪೌರಕಾರ್ಮಿಕರ ನೇಮಕಾತಿ ವಿಳಂಬ
  • ವಿಕಲಚೇತನರು ಸ್ವಾವಲಂಬಿಗಲು ಅವಕಾಶ ಕಲ್ಪಿಸಿ
  • ಕುಡಿಯುವ ನೀರಿನ ಯೋಜನೆ ಅಸಮರ್ಪಕ: ಆರೋಪ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ವಿಶ್ವವಿದ್ಯಾನಿಲಯ ಸಮಕಾಲೀನ ಜಗತ್ತಿಗೆ ಸ್ಪಂದಿಸಬೇಕು: ಪ್ರೊ. ಎಸ್.ಎ. ಬಾರಿ
ತುಮಕೂರು

ವಿಶ್ವವಿದ್ಯಾನಿಲಯ ಸಮಕಾಲೀನ ಜಗತ್ತಿಗೆ ಸ್ಪಂದಿಸಬೇಕು: ಪ್ರೊ. ಎಸ್.ಎ. ಬಾರಿ

By News Desk BenkiyabaleUpdated:March 21, 2025 4:28 pm


ತುಮಕೂರು: ವಿಶ್ವವಿದ್ಯಾನಿಲಯವೆಂದರೆ ಕೇವಲ ಜ್ಞಾನವನ್ನು ವರ್ಗಾಯಿಸುವ ಕೇಂದ್ರವಲ್ಲ. ಅದು ಸುತ್ತಲಿನ ಸಮಾಜ ಹಾಗೂ ರಾಷ್ಟçದ ಭಾವನೆಗಳನ್ನು ಪ್ರತಿಬಿಂಬಿಸಬೇಕು. ಸಮಕಾಲೀನ ಜಗತ್ತಿನ ಅಗತ್ಯಗಳಿಗೆ ಸ್ಪಂದಿಸಬೇಕು ಎಂದು ಕುವೆಂಪು ವಿಶ್ವವಿದ್ಯಾನಿಲಯ ಹಾಗೂ ಗುಜರಾತ್‌ನ ಕೇಂದ್ರೀಯ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ. ಎಸ್.ಎ. ಬಾರಿ ತಿಳಿಸಿದರು.
ತುಮಕೂರು ವಿಶ್ವವಿದ್ಯಾನಿಲಯ ಗುರುವಾರ ಆಯೋಜಿಸಿದ್ದ ೨೧ನೇ ಸಂಸ್ಥಾಪನಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಇಂದು ತಂತ್ರಜ್ಞಾನ ಬಹುವಾಗಿ ಬೆಳೆದಿದೆ. ನಾವೀಗ ಜಾಗತಿಕ ಮಟ್ಟದಲ್ಲೂ ಅಲ್ಲ, ಜಗತ್ತಿನಾಚೆಗಿನ ಬ್ರಹ್ಮಾಂಡದ ಕುರಿತು ಯೋಚಿಸಬೇಕಾಗಿದೆ ಎಂದರು.
ಉನ್ನತ ಶಿಕ್ಷಣರಂಗದಲ್ಲಿ ಭಾರತದ ವಿಶ್ವವಿದ್ಯಾನಿಲಯಗಳ ಪಾತ್ರ ಏನು ಎಂದು ನಾವೀಗ ಪ್ರಶ್ನಿಸಿಕೊಳ್ಳಬೇಕಾಗಿದೆ. ದೇಶದಲ್ಲಿ ೧೬೦೦ ವಿಶ್ವವಿದ್ಯಾನಿಲಯಗಳಿವೆ. ಜಾಗತಿಕ ರ‍್ಯಾಂಕಿAಗ್‌ನಲ್ಲಿ ಶ್ರೇಷ್ಠ ೧೦೦ ವಿವಿಗಳ ಪೈಕಿ ಭಾರತದ ಒಂದು ವಿಶ್ವವಿದ್ಯಾನಿಲಯವೂ ಇಲ್ಲದಿರುವುದು ಯೋಚಿಸಬೇಕಾದ ಸಂಗತಿ ಎಂದರು.
ಸಾಮಾನ್ಯರAತೆ ಇರುವ ವಿದೇಶಿ ವಿಶ್ವವಿದ್ಯಾನಿಲಯಗಳ ಪ್ರಾಧ್ಯಾಪಕರು ನೊಬೆಲ್ ಪ್ರಶಸ್ತಿ ಪಡೆದುಕೊಳ್ಳುತ್ತಾರೆ. ಏಕೆಂದರೆ ನೈಜ ಹೊಸ ಸಂಶೋಧನೆಗಳನ್ನು ಕೈಗೊಳ್ಳುತ್ತಾರೆ. ನಮ್ಮಲ್ಲಿ ಮಾಡಿದ ಸಂಶೋಧನೆಗಳದ್ದೇ ಪುನರಾವರ್ತನೆ ನಡೆಯುತ್ತದೆ. ಇದರಿಂದಾಗಿ ಭಾರತದ ವಿವಿಗಳಲ್ಲಿರುವ ಪ್ರಾಧ್ಯಾಪಕರಿಗೆ ನೊಬೆಲ್ ಪ್ರಶಸ್ತಿಗಳು ಬರುತ್ತಿಲ್ಲ ಎಂದರು.
ಇAದು ಮಾಹಿತಿ ಎಲ್ಲೆಡೆ ಲಭ್ಯವಿದೆ. ವಿದ್ಯಾರ್ಥಿಗಳು ತರಗತಿಗಳಲ್ಲೇ ಎಲ್ಲವನ್ನು ತಿಳಿದುಕೊಳ್ಳುವ ಅನಿವಾರ್ಯತೆ ಇಲ್ಲ. ವಿಜ್ಞಾನ ಮತ್ತು ತಂತ್ರಜ್ಞಾನ, ಸಾಮಾಜಿಕ ಅಭಿವೃದ್ಧಿ, ಆರ್ಥಿಕತೆ ಮೊದಲಾದ ರಂಗಗಳಲ್ಲಿ ನಮ್ಮನ್ನು ನಾವು ಸ್ವಾವಲಂಬಿಗಳನ್ನಾಗಿ ಮಾಡುವ ಶಿಕ್ಷಣ ನೀಡಬೇಕಾಗಿದೆ ಎಂದರು.
ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಮಾತನಾಡಿ, ನಮ್ಮ ವಿಶ್ವವಿದ್ಯಾನಿಲಯವು ಇಪ್ಪತ್ತೊಂದರ ತರುಣನಾಗಿದೆ. ಪರಿಶ್ರಮದಿಂದ ಸಾಧನೆಗಳನ್ನು ಮಾಡಬೇಕಾದ ವಯಸ್ಸು ಇದು. ಈ ವಿಶ್ವವಿದ್ಯಾನಿಲಯವನ್ನು ಜಾಗತಿಕ ಮಟ್ಟಕ್ಕೆ ಒಯ್ಯುವ ಜವಾಬ್ದಾರಿ ಎಲ್ಲ ಬೋಧಕ-ಬೋಧಕೇತರ ಸಿಬ್ಬಂದಿಗಳ ಮೇಲೆ ಇದೆ ಎಂದರು.
ವಿಶ್ವವಿದ್ಯಾನಿಲಯ ಒಬ್ಬರಿಂದ ನಿರ್ಮಾಣವಾದದ್ದಲ್ಲ. ಹಲವರ ಪರಿಶ್ರಮ ಇದರ ಹಿಂದಿದೆ. ಹಲವು ಬಗೆಯ ಅಡೆತಡೆಗಳನ್ನು ಬದಿಗೊತ್ತಿ ನಮ್ಮ ವಿವಿ ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.
ಹಿರಿಯ ಪ್ರಾಧ್ಯಾಪಕ ಪ್ರೊ. ಎಲ್. ಪಿ. ರಾಜು ವಿಶ್ವವಿದ್ಯಾನಿಲಯ ಸಾಗಿ ಬಂದ ದಾರಿಯ ಅವಲೋಕನ ನಡೆಸಿದರು. ಕುಲಸಚಿವೆ ನಾಹಿದಾ ಜûಮ್ ಜûಮ್, ಪರೀಕ್ಷಾಂಗ ಕುಲಸಚಿವ ಪ್ರೊ. ಪ್ರಸನ್ನಕುಮಾರ್ ಕೆ., ಸಿಂಡಿಕೇಟ್ ಸದಸ್ಯೆ ಪ್ರಿಯದರ್ಶಿನಿ, ಹಣಕಾಸು ಅಧಿಕಾರಿ ನರಸಿಂಹಮೂರ್ತಿ, ಸಂಸ್ಥಾಪನಾ ದಿನಾಚರಣೆ ಸಮಿತಿ ಅಧ್ಯಕ್ಷ ಪ್ರೊ. ಮನೋಹರ ಶಿಂದೆ, ಸಂಚಾಲಕ ಡಾ. ಎ. ಎಂ ಮಂಜುನಾಥ ಮತ್ತಿತರರು ಉಪಸ್ಥಿತರಿದ್ದರು. ವಿವಿ ಪ್ರಗತಿಪಥದ ಕುರಿತ ಸಾಕ್ಷö್ಯಚಿತ್ರ ಪ್ರದರ್ಶಿಸಲಾಯಿತು. ಡಾ. ಸಿಬಂತಿ ಪದ್ಮನಾಭ ನಿರೂಪಿಸಿದರು.

(Visited 1 times, 1 visits today)
tumkur ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ
Previous Articleಲೈಂಗಿಕ ಕಿರುಕುಳ ಕಾಯ್ದೆ ಅನುಷ್ಠಾನಕ್ಕಾಗಿ ಸಮಿತಿ ರಚನೆ
Next Article ಜೇನುಕೃಷಿ ತರಬೇತಿ ಕಾರ್ಯಾಗಾರ ಯಶಸ್ವಿ
News Desk Benkiyabale

Related Posts

ಜ.10, 11: 26ನೇ ವರ್ಷದ ದುರ್ಗಪೂಜೆ

January 05, 2026 3:45 pm ತುಮಕೂರು

ಅಧ್ಯಯನದಿಂದ ಯಶಸ್ಸು ಸಾಧ್ಯ

January 05, 2026 3:41 pm ತುಮಕೂರು

ಆರ್‌ಡಿಪಿಆರ್‌ನಲ್ಲಿ ಸೇವೆಯ ಅವಕಾಶ ದೊಡ್ಡ ಸೌಭಾಗ್ಯ: ಜಿ.ಪ್ರಭು

January 05, 2026 3:38 pm ತುಮಕೂರು
ತಾಜಾ ಸುದ್ಧಿಗಳು
ಇತರೆ ಸುದ್ಧಿಗಳು

ಬೇಟರಾಯಸ್ವಾಮಿ ಸ್ವಾಮಿ ಬ್ರಹ್ಮ ರಥೋತ್ಸವ

March 03, 2026 2:58 pm
ಇತರೆ ಸುದ್ಧಿಗಳು

ಶುಶ್ರೂಷಕಿಯರ ಸೇವೆ ಜಗತ್ತಿನ ಸರ್ವಶ್ರೇಷ್ಠ ಸೇವೆ

March 03, 2026 2:57 pm
ಇತರೆ ಸುದ್ಧಿಗಳು

ಪೌರಕಾರ್ಮಿಕರಿಗೆ ಶೂ, ಕೈಗವಸು, ಮಾಸ್ಕ್ ವಿತರಿಸಲು ಅಧಿಕಾರಿಗಳಿಗೆ ಪಿ. ರಘು ಸೂಚನೆ

March 03, 2026 2:55 pm
ಇತರೆ ಸುದ್ಧಿಗಳು

ಬಲಿಜ ಸಮುದಾಯ ಅತ್ಯಂತ ಸಂಘಟಿತ ಸಮುದಾಯ

March 03, 2026 2:54 pm
ಇತರೆ ಸುದ್ಧಿಗಳು

ಬೆಳ್ಳಾವಿ ಸೋಮೇಶ್ವರಸ್ವಾಮಿಯ ವೈಭವದ ರಥೋತ್ಸವ

March 03, 2026 2:52 pm
ಇತರೆ ಸುದ್ಧಿಗಳು

ಖಾಲಿಯಿರುವ ಪೌರಕಾರ್ಮಿಕರ ನೇಮಕಾತಿ ವಿಳಂಬ

March 03, 2026 2:50 pm
Our Youtube Channel
Our Picks

ಬೇಟರಾಯಸ್ವಾಮಿ ಸ್ವಾಮಿ ಬ್ರಹ್ಮ ರಥೋತ್ಸವ

March 03, 2026 2:58 pm

ಶುಶ್ರೂಷಕಿಯರ ಸೇವೆ ಜಗತ್ತಿನ ಸರ್ವಶ್ರೇಷ್ಠ ಸೇವೆ

March 03, 2026 2:57 pm

ಪೌರಕಾರ್ಮಿಕರಿಗೆ ಶೂ, ಕೈಗವಸು, ಮಾಸ್ಕ್ ವಿತರಿಸಲು ಅಧಿಕಾರಿಗಳಿಗೆ ಪಿ. ರಘು ಸೂಚನೆ

March 03, 2026 2:55 pm

ಬಲಿಜ ಸಮುದಾಯ ಅತ್ಯಂತ ಸಂಘಟಿತ ಸಮುದಾಯ

March 03, 2026 2:54 pm

ಬೆಳ್ಳಾವಿ ಸೋಮೇಶ್ವರಸ್ವಾಮಿಯ ವೈಭವದ ರಥೋತ್ಸವ

March 03, 2026 2:52 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds Kn rajanna kodigenahalli Koratagere kunigal madhugiri Mla Mla jyothiganesh mlc r.rajendra pavagada Police Protest R. Rajendra tumakur tumkur Tumkur dc yspatil Tumkur mahanagara palike tumur turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಪಟೂರು ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm

ಭಾಷೆ ಮನುಷ್ಯನಿಗೆ ಉಸಿರಿನಷ್ಟೇ ಅನಿವಾರ್ಯ

November 04, 2022 4:36 pm
Don't Miss
ಇತರೆ ಸುದ್ಧಿಗಳು

ಬೇಟರಾಯಸ್ವಾಮಿ ಸ್ವಾಮಿ ಬ್ರಹ್ಮ ರಥೋತ್ಸವ

By News Desk BenkiyabaleMarch 03, 2026 2:58 pm

ತುರುವೇಕೆರೆ: ಪಟ್ಟಣದ ಇತಿಹಾಸ ಪ್ರಸಿದ್ದ ಬೇಟರಾಯ ಸ್ವಾಮಿ ಸ್ವಾಮಿ ಬ್ರಹ್ಮ ರಥೋತ್ಸವ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆಯಿ0ದ ಸೋಮವಾರ…

ಶುಶ್ರೂಷಕಿಯರ ಸೇವೆ ಜಗತ್ತಿನ ಸರ್ವಶ್ರೇಷ್ಠ ಸೇವೆ

March 03, 2026 2:57 pm

ಪೌರಕಾರ್ಮಿಕರಿಗೆ ಶೂ, ಕೈಗವಸು, ಮಾಸ್ಕ್ ವಿತರಿಸಲು ಅಧಿಕಾರಿಗಳಿಗೆ ಪಿ. ರಘು ಸೂಚನೆ

March 03, 2026 2:55 pm

ಬಲಿಜ ಸಮುದಾಯ ಅತ್ಯಂತ ಸಂಘಟಿತ ಸಮುದಾಯ

March 03, 2026 2:54 pm
News by Date
March 2026
M T W T F S S
 1
2345678
9101112131415
16171819202122
23242526272829
3031  
« Feb    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.