
ತುಮಕೂರು: ರಾಜ್ಯದಲ್ಲಿ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ೨೦೦ ಮೀಟರ್ ಪುತ್ಥಳಿ ಸ್ಥಾಪನೆ, ರಾಜ್ಯದ ಎಲ್ಲಾ ಕೇಂದ್ರಗಳಲ್ಲಿ ಎಲ್ಲಾ ಜಾತಿ, ಜನಾಂಗದ ಮಕ್ಕಳು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಲು ಉಚಿತ ಕೋಚಿಂಗ್ ಸೆಂಟರ್ ತೆರೆಯುವುದು ಸೇರಿದಂತೆ ವಿವಿಧ ಬೇಡಿಕೆಗಳನಿಟ್ಟುಕೊಂಡು ಬೀದರನಿಂದ ಭೀಮ ಪ್ರಜಾ ಸಂಘ(ರಿ) ವತಿಯಿಂದ ಹೊರಟಿರುವ ಸ್ವಾಭಿ ಮಾನಿಗಳ ಕಾಲ್ನೆಡಿಗೆ ಜಾಥಾ ಇಂದು ತುಮಕೂರು ತಲುಪಿದ್ದು,ಅಂಬೇಡ್ಕರ್ ಅನುಯಾ ಯಿಗಳು, ಜಾಥವನ್ನು ಬರಮಾಡಿಕೊಂಡು ಬಿಳ್ಕೋಟ್ಟರು.
ತುಮಕೂರು ನಗರಕ್ಕೆ ಸ್ವಾಭಿಮಾನಿ ಕಾಲ್ನೇಡಿಗೆ ಜಾಥಾ ಆಗಮಿಸಿದ ವೇಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭೀಮ ಪ್ರಜಾ ಸಂಘ(ರಿ),ನ ಸಂಸ್ಥಾಪಕ ರಾಜ್ಯಾಧ್ಯಕ್ಷ ವೈಟ್‌ಪೀಲ್ಡ್ ಮುರುಗೇಶ್,ದೇಶದಲ್ಲಿ ಹಲವು ಗಣ್ಯರ ಪತ್ರಿಮೆಗಳಿವೆ. ಗುಜರಾತ್‌ನಲ್ಲಿರುವ ಸರದಾರ್ ವಲ್ಲಬಾಯಿ ಪಟೇಲ್ ಪತ್ರಿಮೆ ದೇಶ ದಲ್ಲಿ ದೊಡ್ಡ ಪ್ರತಿಮೆಯಾಗಿದೆ.ಆದರೆ ಇಂದು ದೇಶ ನಡೆಯುತ್ತಿರುವುದು ಬಾಬಾ ಸಾಹೇಬರ ಸಂವಿ ಧಾನದಿಂದ.ಹಾಗಾಗಿಯೇ ಬಾಬಾ ಸಾಹೇಬರ ೨೦೦ ಮಿಟರ್ ಪ್ರತಿಮೆ ಸ್ಥಾಪಿಸುವ ಮೂಲಕ ಬಾಬಾ ಸಾಹೇಬರನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರ ಮಾಡಬೇಕೆಂಬುದು ಭೀಮ ಪ್ರಜಾ ಸಂಘದ ಒತ್ತಾ ಯವಾಗಿದೆ ಎಂದರು.
ಕಳೆದ ಮಾರ್ಚ ೦೨ ರಿಂದ ಬೀದರ್‌ನಿಂದ ಹೊರಟ ಸ್ವಾಭಿಮಾನಿ ಕಾಲ್ನೇಡಿಗೆ ಜಾಥಾ ಏಪ್ರಿಲ್ ೧೪ ರಂದು ಬೆಂಗಳೂರು ತಲುಪಬೇಕಾಗಿತ್ತು. ಆದರೆ ಇದಕ್ಕೆ ಬದಲಾಗಿ ಏ.೧೭ ರಂದು ಬೆಂಗಳೂರು ತಲುಪಿ, ಅಂದೇ ಪ್ರೀಡಂ ಪಾರ್ಕಿನಲ್ಲಿ ಮುಕ್ತಾಯಗೊಳ್ಳಲಿದೆ. ಬಾಬಾ ಸಾಹೇಬರು ಹೇಳಿದಂತೆ ಶಿಕ್ಷಣವೊಂದೇ ಮನುಷ್ಯ ಗುಲಾಮಿತನದಿಂದ ಹೊರಬರಲು ಇರುವ ಏಕೈಕ ಮಾರ್ಗವಾಗಿದೆ.ಹಾಗಾಗಿ ಜಾತಿ, ಧರ್ಮ ನೋಡದೆ ಎಲ್ಲ ವರ್ಗದ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡುವುದರ ಜೊತೆಗೆ, ಎಲ್ಲ ವರ್ಗದ ಮಕ್ಕಳು ಉನ್ನತ ಹುದ್ದೆಗಳನ್ನು ಅಲಂಕರಿಸುವAತಾಗಲು ಸರಕಾರ ಪ್ರತಿ ಜಿಲ್ಲೆಯಲ್ಲಿಯೂ ಉಚಿತವಾಗಿ ಐಎಎಸ್, ಐಪಿಎಸ್ ತರಬೇತಿ ಕೇಂದ್ರಗಳನ್ನು ತೆರೆಯಬೇಕು ಎಂಬುದು ಭೀಮ ಪ್ರಜಾ ಸಂಘದ ಆಶಯವಾಗಿದೆ.ಅಲ್ಲದೆ ಪ್ರತಿ ಗ್ರಾಮದಲ್ಲಿಯೂ ಸ್ಮಶಾ ನಕ್ಕಾಗಿ ಕನಿಷ್ಠ ೨ ಎಕರೆ ಜಾಗವನ್ನು ಮೀಸಲಿ ಡಬೇಕು.ಸಾವಿನಲ್ಲಿಯಾದರೂ ಜನರು ನೆಮ್ಮದಿಯನ್ನು ಕಾಣುವಂತಾಗಲಿ ಎಂದರು.
ಸರಕಾರದ ಲಾಂಚನದಲ್ಲಿ ಸತ್ಯ ಮೇವ ಜಯತೆ ಎಂಬ ಸಂಸ್ಕೃತ ಪದವನ್ನು ಹಿಂದಿಯಲ್ಲಿ ಬರೆಸಲಾಗಿದೆ.ಅದಕ್ಕೆ ಬದಲಾಗಿ ಕನ್ನಡ ಭಾಷೆಯ ಲ್ಲಿಯೇ ಸತ್ಯ ಮೇವ ಜಯತೆ ಬರೆಸಬೇಕು ಎಂಬುದು ನಮ್ಮ ಆಗ್ರಹವಾಗಿದೆ ಸರಕಾರ ಈ ನಿಟ್ಟಿನಲ್ಲಿ ಗಮನ ಹರಿಸಬೇಕು.ಇದಕ್ಕಾಗಿ ಹತ್ತಾರು ಬಾರಿ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ವೈಟ್‌ಫೀಲ್ಡ್ ಮುರುಗೇಶ ನುಡಿದರು.
ಏಪ್ರಿಲ್ ೧೭ ರಂದು ಪ್ರೀಡಂ ಪಾರ್ಕಿನಲ್ಲಿ ನಡೆಯು ವ ಕಾಲ್ನೇಡಿಗೆ ಜಾಥಾದ ಮುಕ್ತಾಯ ಸಮಾರಂಭದಲ್ಲಿ ಬೋದಿ ದತ್ತ ಬಂತೇಜಿ, ಡಿಸಿಪಿ ಸಿದ್ದರಾಜು, ರಾಜ್ಯದ ದಲಿತ ಸಂಘಟನೆಗಳ ಮುಖಂಡರು ಭಾಗವಹಿಸಲಿದ್ದಾರೆ. ಸಾರ್ವಜನಿಕರು, ಬಾಬಾ ಸಾಹೇಬರ ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮುರುಗೇಶ್ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಭೀಮ ಪ್ರಜಾ ಸೇನೆ ಜಿಲ್ಲಾ ಧ್ಯಕ್ಷ ಹಾಗೂ ಜಿಲ್ಲಾ ಆಟ್ರಾಸಿಟಿ ಕಮಿಟಿ ಸದಸ್ಯ ಕೋರ ರಾಜಣ್ಣ, ದಸಂಸ ಜಿಲ್ಲಾಧ್ಯಕ್ಷ ಪಿಎನ್.ರಾಮಯ್ಯ, ಅಖಿಲ ಭಾರತ ಅಂಬೇಡ್ಕ್ರ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಎನ್.ಕೆ.ನಿಧಿಕುಮಾರ್, ನಗರಸಭೆ ಮಾಜಿ ಉಪಾಧ್ಯಕ್ಷ ವಾಲೆಚಂದ್ರು, ದಲಿತ ಸ್ವಾಭಿಮಾನಿ ಸಂಘಟನೆಯ ಜಿಲ್ಲಾಧ್ಯಕ್ಷ ಬಂಡೆಕುಮಾರ್, ಬ್ರಹ್ಮಸಂದ್ರ ಮುನಿರಾಜು, ರಾಕೇಶ್, ಸಂಘಸೇವಕ ಬಂತೇಜಿ, ನಾಗರಾಜು, ಗಜ ಉಪಸ್ಥಿತರಿದ್ದರು.





