ತುಮಕೂರು: ಪಾಕಿಸ್ಥಾನದ ವಿರುದ್ಧ ಭಾರತೀಯ ಸೇನೆ ಕೈಗೊಂಡಿರುವ ಆಪರೇಷನ್ ಸಿಂಧೂರವನ್ನು ಜಿಲ್ಲಾ ವೀರಶೈವ ಲಿಂಗಾಯತ ಮಹಾಸಭಾ ಹಾಗೂ ನಗರ ವೀರಶೈವ ಸಮಾಜದ ವತಿಯಿಂದ ಬೆಂಬಲಿಸಿ ನಗರದ ಭದ್ರಮ್ಮ ವೃತ್ತದಲ್ಲಿರುವ ಶ್ರೀ ಸೋಮೇಶ್ವರ ದೇವಾಲಯದಲ್ಲಿ ವಿಶೇಷ ಹೋಮ, ಹವನ ಹಾಗೂ ಪೂಜೆಯನ್ನು ನೆರವೇರಿಸಿ, ಭಾರತೀಯ ಸೈನ್ಯಕ್ಕೆ ಹೆಚ್ಚಿನ ಶಕ್ತಿ ತುಂಬುವAತೆ ಪ್ರಾರ್ಥಿಸಲಾಯಿತು.
ಶ್ರೀ ಸೋಮೇಶ್ವರ ದೇವಾಲಯದಲ್ಲಿ ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಹಿರೇಮಠಾಧ್ಯಕ್ಷರಾದ ಡಾ. ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಬೆಳ್ಳಾವಿಯ ಕಾರದ ಮಠದ ಶ್ರೀ ಕಾರದ ವೀರಬಸವ ಸ್ವಾಮೀಜಿ, ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಯವರ ನೇತೃತ್ವದಲ್ಲಿ ದೇಶದ ಒಳಿತಿಗಾಗಿ ಹೋರಾಡುತ್ತಿರುವ ಸೈನಿಕರ ಆರೋಗ್ಯಕ್ಕಾಗಿ ವಿಶೇಷ ಮೃತ್ಯುಂಜಯ ಹೋಮ ನೆರವೇರಿಸಲಾಯಿತು.
ದೇಶದ ಪ್ರಧಾನಮಂತ್ರಿ ಸೇರಿದಂತೆ ಪಾಕಿಸ್ತಾನದ ವಿರುದ್ಧ ಹೋರಾಡುತ್ತಿರುವ ಪ್ರತಿಯೊಬ್ಬ ಸೈನಿಕರಿಗೂ ಆಯಸ್ಸು ಹಾಗೂ ಆರೋಗ್ಯ ಹಾಗೂ ಹೋರಾಡುವ ಶಕ್ತಿ ಕರುಣಸಲಿ ಎಂದು ಇದೇ ಸಂದರ್ಭದಲ್ಲಿ ದೇವರಲ್ಲಿ ಪ್ರಾರ್ಥಿಸಲಾಯಿತು.
ದುಷ್ಟರ ಸಂಹಾರಕ್ಕಾಗಿ ಮಹಾಗಣಪತಿ ಹೋಮ, ಜಯಾಧಿಹೋಮ, ಶೋಭ ರಹಿತ ಹೋಮ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು.
ಹೋಮದಲ್ಲಿ ಪಾಲ್ಗೊಂಡಿದ್ದ ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಪಹಲ್ಗಾಮ್ ಪ್ರಕರಣದ ನಂತರ ಭಾರತ ದೇಶ ಒಂದು ದೃಢ ನಿರ್ಧಾರ ಕೈಗೊಂಡಿದೆ. ಅಮಾಯಕರನ್ನು ಅತ್ಯಂತ ಹೀನಾಯವಾಗಿ ಹತ್ಯೆ ಮಾಡಿರುವುದರ ವಿರುದ್ಧ ಪಾಕಿಸ್ತಾನಕ್ಕೆ ಬುದ್ಧಿ ಕಲಿಸಲು, ಭಯೋತ್ಪಾದಕತೆಯನ್ನು ನಿರ್ಮೂಲನೆ ಮಾಡಲು ದೃಢ ನಿರ್ಧಾರ ಕೈಗೊಂಡಿರುವುದು ಉತ್ತಮ ಬೆಳವಣಿಗೆ ಎಂದರು.
ಭಾರತೀಯರೆಲ್ಲರೂ ಐಕ್ಯತೆಯಿಂದ ಹೋರಾಡಿ ಪಾಕಿಸ್ತಾನದ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಬೇಕು. ಭಾರತ ಯಾವತ್ತೂ ಕೂಡ ಯಾರ ಮೇಲೆ ಆಕ್ರಮಣ ಮಾಡಿದ ದೇಶವಲ್ಲ. ಎಲ್ಲ ಕಡೆ ಶಾಂತಿ ಹಂಚುವAತಹ ದೇಶ ನಮ್ಮದು. ಯಾರ ಮೇಲೂ ಬಂಡೆತ್ತಿ ಹೋಗಿರುವ ಉದಾಹರಣೆ ಇತಿಹಾಸದಲ್ಲಿ ಇಲ್ಲ ಎಂದು ಹೇಳಿದರು.
ನಮ್ಮ ದೇಶ ಮೊನ್ನೆಯೂ ಸಹ ಭಯೋತ್ಪಾದನೆಯ ನೆಲೆಗಳನ್ನು ಧ್ವಂಸ ಮಾಡಿದೆಯಷ್ಟೇ, ಯಾವುದೇ ನಾಗರಿಕರಿಗೆ ತೊಂದರೆ ಮಾಡಿಲ್ಲ. ಆದರೂ ಪಾಕಿಸ್ತಾನ ಬುದ್ಧಿಯನ್ನು ಕಲಿಯದೇ ಪದೇ ಪದೇ ಕದನ ವಿರಾಮ ಉಲ್ಲಂಘನೆ ಮಾಡುತ್ತಿದೆ. ಇದು ಆ ದೇಶದ ನರಿ ಬುದ್ಧಿಯನ್ನು ತೋರ್ಪಡಿಸುತ್ತದೆ ಎಂದರು.
ಭಾರತದ ಹೆಮ್ಮೆ ಎಂದರೆ ನಮ್ಮ ಸೈನಿಕರು. ಹಗಲಿರುಳು ಹೋರಾಟ ಮಾಡುತ್ತಿದ್ದಾರೆ. ಅವರ ಹೋರಾಟ ಫಲ ನಾವಿಂದು ಶಾಂತಿಯಿAದ, ನೆಮ್ಮದಿಯಿಂದ ಬದುಕುತ್ತಿದ್ದೇವೆ ಎಂದರು.
ಪ್ರಧಾನಮಂತ್ರಿಗಳು, ಗೃಹ ಸಚಿವರು, ರಕ್ಷಣಾ ಸಚಿವರು ಹಾಗೂ ಭಾರತೀಯ ಸೇನೆ ದಿಟ್ಟವಾಗಿ ಪಾಕಿಸ್ತಾನದ ದಾಳಿಯನ್ನು ಎದುರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿದ್ದಾರೆ ಎಂದು ಹೇಳಿದರು.
ಹಿರೇಮಠಾಧ್ಯಕ್ಷರಾದ ಡಾ. ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಪಾಕಿಸ್ತಾನದಲ್ಲಿ ನಂಬಿಕೆ, ವಿಶ್ವಾಸ, ಪ್ರಾಮಾಣಿಕತೆ, ಪಾದರ್ಶಕತೆ, ಕರುಣೆ, ದಯೆ ಎಂಬ ಪದಗಳಿಗೆ ಅರ್ಥವೇ ಇಲ್ಲ. ಭಯೋತ್ಪಾದಕರನ್ನು ಉತ್ಪಾದನೆ ಮಾಡುವಂತಹ ದೇಶ ಪಾಕಿಸ್ತಾನ. ಹಾಗಾಗಿ ಅವರ ಭಾಷೆಯಲ್ಲೇ ಉತ್ತರಿಸಬೇಕು ಎಂದರು.
ದೇಶದ ಮನೋಬಲ, ಆತ್ಮಸ್ಥೆöÊರ್ಯವನ್ನು ಹೆಚ್ಚಿಸುವುದಾಗಿ ನಾವೆಲ್ಲರೂ ಒಂದಾಗಬೇಕು. ನಾವೆಲ್ಲರೂ ದೇಶದ ಜತೆ, ಸೈನಿಕರ ಜತೆ ಇರಬೇಕು ಎಂದರು.
ಪಾಕಿಸ್ತಾನ ಬುದ್ಧಿ ಕಲಿಯುವ ದೇಶವಲ್ಲ. ಈ ದೇಶಕ್ಕೆ ವಿಶ್ವದಲ್ಲೇ ಮಾನ್ಯತೆ ಇಲ್ಲ. ಕದನ ವಿರಾಮ ಉಲ್ಲಂಘಿಸಿ ಮತ್ತೆ ದಾಳಿ ಮಾಡಿರುವುದರಿಂದ ಈ ದೇಶದ ಬಗ್ಗೆ ಅನುಕಂಪ ತೋರಬಾರದು. ಪಾಕಿಸ್ಥಾನದ ನರಿ ಬುದ್ಧಿಗೆ ಅಂತ್ಯ ಕಾಣಿಸಬೇಕು ಎಂದರು.
ಬೆಳ್ಳಾವಿ ಕಾರದ ಮಠದ ಶ್ರೀ ಕಾರದ ವೀರಬಸವ ಸ್ವಾಮೀಜಿ ಮಾತನಾಡಿ, ಭಾರತ ಅತ್ಯಂತ ಪವಿತ್ರವಾದ ರಾಷ್ಟç. ನಮ್ಮ ರಾಷ್ಟçದಲ್ಲಿ ಹೆಣ್ಣಿಗೆ ಪ್ರಾತಿನಿಧ್ಯ ಕೊಟ್ಟಿದೆ. ನಾವೆಲ್ಲೂ ಭಾರತಾಂಬೆಯ ಮಕ್ಕಳು. ನಮ್ಮ ಹೆಣ್ಣು ಮಕ್ಕಳನ್ನು ಕೆಣಕಿದ ಪಾಕಿಸ್ತಾನದವರಿಗೆ ನಮ್ಮ ದೇಶದ ಶಕ್ತಿಯನ್ನು ಪ್ರಧಾನಿಗಳು, ರಕ್ಷಣಾ ಸಚಿವರು, ಗೃಹ ಸಚಿವರು ಹಾಗೂ ಸೈನಿಕರು ತೋರಿಸುತ್ತಿದ್ದಾರೆ ಎಂದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷರಾದ ಡಾ. ಎಸ್. ಪರಮೇಶ್ ಮಾತನಾಡಿ, ಡಾ. ಎಸ್. ಪರಮೇಶ್ ಮಾತನಾಡಿ, ಪಾಕಿಸ್ತಾನದವರು ನಮ್ಮ ದೇಶದ ಅಮಾಯಕರನ್ನು ಅವರ ಹೆಸರು, ಜಾತಿಯನ್ನು ಕೇಳಿ ಹೊಡೆದು ಕೊಂದರು. ಅದಕ್ಕೆ ಪ್ರತ್ಯುತ್ತರಾಗಿ ನಮ್ಮ ದೇಶದ ಪ್ರಧಾನಿಗಳು, ರಕ್ಷಣಾ ಸಚಿವರು, ಗೃಹ ಸಚಿವರು ಕಾರ್ಯತಂತ್ರನ್ನು ರೂಪಿಸಿ ಪಾಕಿಸ್ತಾನದ ಉಗ್ರನೆಲೆಗಳನ್ನು ಧ್ವಂಸ ಮಾಡಿದ್ದಾರೆ. ಇದಾದ ಬಳಿಕವೂ ಪಾಕ್ ದೇಶದ ನಾಗರಿಕರನ್ನು ಗುರಿಯಾಗಿಸಿ ದಾಳಿ ಮಾಡುತ್ತಿದೆ. ಈ ದಾಳಿಗೆ ನಮ್ಮ ದೇಶದ ಸೈನಿಕರು ದಿಟ್ಟ ಪ್ರತ್ಯುತ್ತರ ನೀಡುತ್ತಿದ್ದಾರೆ. ನಮ್ಮ ಸೈನಿಕರ ಒಳಿತಿಗಾಗಿ ಪ್ರಾರ್ಥಿಸಿ ಇಂದು ಸೋಮೇಶ್ವರ ದೇಗುಲದಲ್ಲಿ ಹೋಮ, ಹವನ, ಪೂಜೆಯನ್ನು ನೆರವೇರಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಟಿ.ಸಿ. ಓಹಿಲೇಶ್ವರ್, ಮಂಜುನಾಥ್ ಬಾವಿಕಟ್ಟೆ, ದರ್ಶನ್ ಕೆ.ಎಲ್., ಕೊಪ್ಪಲ್ ನಾಗರಾಜು, ಮಹೇಶ್, ಪ್ರದೀಪ್, ಮಾಜಿ ಯೋಧ ನಾಗರಾಜು, ಸತ್ಯಮಂಗಲ ಜಗನ್ನಾಥ್ ಮತ್ತಿತರರು ಪಾಲ್ಗೊಂಡಿದ್ದರು.