ತುಮಕೂರು: ಅಖಿಲ ಕರ್ನಾಟಕ ಸರಕಾರಿ ಪರವಾನಗಿ ಭೂಮಾಪಕರ ಸಂಘ(ರಿ), ಬೆಂಗಳೂರು ಇವರು ನಗರದ ಜೈನಭವನದಲ್ಲಿ ಸಂಘದ ರಾಜ್ಯಾಧ್ಯಕ್ಷರಾದ ತಿರುಮಲೇಗೌಡ ಅವರ ನೇತೃತ್ವದಲ್ಲಿರಾಜ್ಯ ಸಂಘದ ಸದಸ್ಯತ್ವ ನೊಂದಣಿ ಹಾಗೂ ಸಮಾರೋಪ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ರಾಜ್ಯಾಧ್ಯಕ್ಷ ತಿರುಮಲೇಗೌಡ, ರಾಜ್ಯದಲ್ಲಿ ಕಳೆದ ೨೩ ವರ್ಷಗಳಿಂದ ೩೫೦೦ ರಿಂದ ೪೦೦೦ ಜನ ಪರವಾನಗಿ ಪಡೆದ ಭೂಮಾಪಕರು ಕೆಲಸ ಮಾಡುತ್ತಿದ್ದು, ಸರಕಾರ ನೀಡಿದ ಎಲ್ಲಾ ಕೆಲಸ, ಕಾರ್ಯಗಳನ್ನು ಚಾಚು ತಪ್ಪದೆ ನಡೆಸಿಕೊಂಡು ಬಂದಿರುತ್ತೇವೆ. ಆದರೆ ಸರಕಾರದಿಂದ ನಮಗೆ ತಲುಪಬೇಕಾದ ಸೌಲಭ್ಯಗಳು ಸರಿಯಾದರೀತಿಯಲ್ಲಿತಲುಪಿಲ್ಲದಿರುವುದು ವಿಷಾದದ ಸಂಗತಿಯಾಗಿದೆ.ಜನರ ನಡುವೆ ನೇರವಾಗಿ ಕೆಲಸ ಮಾಡುವ ನಮಗೆ ಕೆಲಸ,ಕಾರ್ಯದ ವೇಳೆ ಎಡರು, ತೊಡರುಗಳಿದ್ದರೂ ಅವುಗಳನ್ನು ನಿಭಾಯಿಸಿಕೊಂಡು, ಸರಕಾರ ನಿಗಧಿ ಮಾಡಿದ ಸಮಯಕ್ಕೆಕೊಟ್ಟ ಕೆಲಸವನ್ನು ಮಾಡಿ, ಮುಗಿಸಿ ವರದಿ ನೀಡಿರುತ್ತೇವೆ. ಆದರೆ ಸರಕಾರ ಮಾತ್ರ ನಮ್ಮನ್ನು ಮಲತಾಯಿ ಮಕ್ಕಳಂತೆ ನೋಡುತ್ತಿದೆ.ಹಾಗಾಗಿ ಕಳೆದ ೨೩ ವರ್ಷಗಳ ನಮ್ಮಗಳ ಸೇವೆಯನ್ನು ಪರಿಗಣಿಸಿ,ನಮ್ಮ ಸೇವೆಯನ್ನು ಖಾಯಂಗೊಳಿಸಿ, ನಮ್ಮನ್ನು ಸರಕಾರಿ ಭೂಮಾಪಕರೆಂದು ಪರಿಗಣಿಸಬೇಕೆಂಬುದು ನಮ್ಮಆಗ್ರಹವಾಗಿದೆಎಂದರು.
ಕಳೆದ ಹತ್ತು ಹದಿನೈದು ವರ್ಷಗಳಿಂದ ಸರಕಾರಕ್ಕೆ ಹಲವಾರು ಮನವಿಗಳನ್ನು ಸಲ್ಲಿಸುತ್ತಾ ಬಂದರೂ ಸರಕಾರಗಳು ನಮ್ಮ ಮನವಿಗೆ ಸ್ಪಂದಿಸಿಲ್ಲ, ಸರಕಾರಿ ಭೂಮಾಪಕರಾಗಲು ಬೇಕಾದಎಲ್ಲಾರೀತಿಯ ವೃತ್ತಿ ನೈಪುಣ್ಯತೆ ಮತ್ತುಕೌಶಲ್ಯವನ್ನು ಸರಕಾರಿ ಪರವಾನಗಿ ಪಡೆದ ಭೂಮಾಪಕರು ಹೊಂದಿದ್ದಾರೆ.ಇಷ್ಟೇಲ್ಲಾ ಅರ್ಹತೆಗಳಿದ್ದರೂ ಸರಕಾರ ನಮ್ಮನ್ನು ನಿರ್ಲಕ್ಷ ಮಾಡುತ್ತಿದೆ. ಹಾಗಾಗಿ ಅಖಿಲ ಕರ್ನಾಟಕ ಸರಕಾರಿ ಪರವಾನಗಿ ಪಡೆದ ಭೂಮಾಪಕರ ಸಂಘವನ್ನು ರಚಿಸಿ, ರಾಜ್ಯದಲ್ಲಿರುವ ಎಲ್ಲಾ ಸರಕಾರಿ ಪರವಾನಗಿ ಪಡೆದ ಭೂಮಾಪಕರನ್ನು ಸಂಘದ ಸದಸ್ಯರನ್ನಾಗಿ ಮಾಡಿಕೊಂಡು, ಹೋರಾಟರೂಪಿಸುವ ಹಿನ್ನೆಲೆಯಲ್ಲಿ ಸದಸ್ಯತ್ವ ನೊಂದಣಿಅಭಿಯಾನವನ್ನು ನಡೆಸಿದ್ದು, ಇದರ ಮುಕ್ತಾಯ ಸಮಾರಂಭವನ್ನುಇAದು ಹಮ್ಮಿಕೊಳ್ಳಲಾಗಿದೆ.ಸರಕಾರಕ್ಕೆ ನಮ್ಮದ್ವನಿಯನ್ನು ಆಲಿಸುವಂತೆ ಮಾಡುವ ನಿಟ್ಟಿನಲ್ಲಿಇದೊಂದು ಮಹತ್ವದ ಹೆಜ್ಜೆ.ಈಗಿರುವ ಕೆಲಸಗಳು ತುಂಬಾಇದೆ.ಸರಕಾರ ನಮ್ಮನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ, ಸೇವೆಯನ್ನು ಖಾಯಂಗೊಳಿಸಬೇಕು ಎಂದುರಾಜ್ಯಾಧ್ಯಕ್ಷತಿರುಮಲೇಗೌಡ ನುಡಿದರು.
ಅಖಿಲ ಕರ್ನಾಟಕ ಸರಕಾರಿ ಪರವಾನಗಿ ಪಡೆದ ಭೂಮಾಪಕರ ಸಂಘದಜಿಲ್ಲಾಧ್ಯಕ್ಷ ನಾಗೇಶ್ ಮಾತನಾಡಿ,ಕಳೆದ ೨೩ ವರ್ಷಗಳಿಂದ ಸರಕಾರದ ಪರವಾನಗಿ ಪಡೆದ ಭೂಮಾಪಕರು ಸರಕಾರದಯಾವುದೇ ಭತ್ಯೆ, ವೇತನ ಪಡೆಯದೆರೈತರು ನೀಡಿದ ಶುಲ್ಕವನ್ನು ಪಡೆದ ಕೆಲಸ ಮಾಡುತ್ತಾ ಬಂದಿದ್ದೇವೆ.ಸೇವಾ ಭದ್ರತೆಇಲ್ಲದೆಅತಿಕಡಿಮೆಗೌರವಧನಕ್ಕೆ ಕೆಲಸ ಮಾಡುತ್ತಿದ್ದ ನಮ್ಮ ಮನವಿಗಳನ್ನು ಸರಕಾರ ನಿರ್ಲಕ್ಷ ಮಾಡುತ್ತಾ ಬಂದ ಹಿನ್ನೆಲೆಯಲ್ಲಿ, ಈಗ ಸಂಘಟಿತರಾಗಿ ನಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸಲು ಮುಂದಾಗಿದ್ದೇವೆ.ನಮ್ಮಗಳ ಸೇವೆಯನ್ನು ಖಾಯಂಗೊಳಿಸಿ, ನಮ್ಮನ್ನು ಸರಕಾರಿ ಭೂಮಾಪಕರಾಗಿ ಪರಿಗಣಿಸಬೇಕುಎಂಬುದು ನಮ್ಮ ಏಕೈಕ ಬೇಡಿಕೆಯಾಗಿದೆ.ನಮ್ನ ಸೇವೆ ಖಾಯಂ ಗೊಳಿಸುವವರೆಗೆ ಕನಿಷ್ಠ ವೇತನದಅಡಿಯಲ್ಲಿ ವೇತನ ನೀಡಬೇಕೆಂಬುದು ನಮ್ಮಒತ್ತಾಯ. ಇದಕ್ಕೆಎಲ್ಲಾ ಸರಕಾರಿ ಪರವಾನಗಿ ಪಡೆದ ಭೂ ಮಾಪಕರುಒಗ್ಗೂಡಿ ಹೋರಾಟರೂಪಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮಆಯೋಜಿಸಲಾಗಿದೆಎಂದರು.
ಕಾರ್ಯಕ್ರಮದ ಅಂಗವಾಗಿ ಸಂಜೀವಿನಿ ಬ್ಲಡ್ ಬ್ಯಾಂಕ್‌ನವರ ಸಹಯೋಗದಲ್ಲಿರಕ್ತಧಾನ ಶಿಬಿರವನ್ನು ಆಯೋಜಿಸಲಾಗಿತ್ತು.ವೇದಿಕೆಯಲ್ಲಿ ಅಖಿಲ ಕರ್ನಾಟಕ ಸರಕಾರಿ ಪರವಾನಗಿ ಪಡೆದ ಭೂಮಾಪಕರ ಸಂಘದರಾಜ್ಯಉಪಾಧ್ಯಕ್ಷ ಪ್ರಸನ್ನಕುಮಾರ್,ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಸಂಘಟನಾ ಕಾರ್ಯದರ್ಶಿ ಕೋದಂಡರಾಮು, ಸಹಕಾರ್ಯದರ್ಶಿ ದ್ವಾರಕೀಶ್, ಖಜಾಂಚಿ ಸತೀಶ್ , ಪ್ರಭುರಾಜ್, ನಿರ್ದೇಶಕರುಗಳಾದ ಷಣ್ಮುಖ, ರಾಜಣ್ಣ, ಬಚ್ಚೇಗೌಡ,ಪ್ರಾಣೇಶ್, ಬಸವರಾಜು ವಿವಿಧ ಜಿಲ್ಲೆಗಳ ಜಿಲ್ಲಾಧ್ಯಕ್ಷರುಗಳು, ಪದಾಧಿಕಾರಿಗಳು ಉಪಸ್ಥಿತರಿದ್ದರು.