
ತುರುವೇಕೆರೆ: ನಮ್ಮ ಭಾರತೀಯ ಪರಪಂಪರೆಯಲ್ಲಿ ವಿಶ್ವದಲ್ಲಿಯೇ ಹೃದಯ ಶ್ರೀಮಂತಿಕೆಯಲ್ಲಿ ಹೊಂದಿರುವ ಶ್ರೀಮಂತ ರಾಷ್ಟç ಎಂದು ಬೆಂಗಳೂರು ವಿಶ್ವವಿದ್ಯಾಲಯ ಅಮೃತ ಸಿಂಚನ ಆದ್ಯಾತ್ಮಿಕ ಮುಖ್ಯ ಮಾಹಿತಿ ಅಧಿಕಾರಿ ಮಧುಕಿರಣ್ ತಿಳಿಸಿದರು.
ತಾಲೂಕಿನ ಚುಮ್ಮನಹಳ್ಳಿ ಮುನಿಶ್ವರಸ್ವಾಮಿ ಮಹಾಸಂಸ್ಥಾನ ದಾಸೋಹ ಮಠ, ಮುನೀಶ್ವರ ಸ್ವಾಮಿ ಛಾರಿಟಿ ಮತ್ತು ಶೈಕ್ಷಣಿಕ ಟ್ರಸ್ಟ್, ಮುನೀಶ್ವರ ಗುರುಕುಲ ವಿದ್ಯಾಮಂದಿರ ದಶಮಾನೋತ್ಸವ ಮುನಿಶ್ರೀ ದೀಪ್ತಿ ರರತ್ನ ವಿಶೇ ಸಂಚಿಕ ಬಿಡುಗಡೆ ಹಾಗೂ ಪ್ರಶಸ್ತಿ ಪ್ರದಾನ ಅಪರ್ಣಾದೇವಿ ಪುಷ್ಕರಣೆ ಮತ್ತು ವಿದ್ಯಾರ್ಥಿ ನಿಲಯ ಶಿಲಾನ್ಯಾಸ ಸಮಾರಂಬದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಆವರು ಭಾರತೀಯ ಸನಾತನ ಧರ್ಮದಲ್ಲಿ ಗುರು ಪರಂಪರೆಗೆ ತನ್ನದೇಯಾದ ವಿಶೇಷವಾಗಿ ಸ್ಥಾನ ಇದೆ. ಆದರೆ ಅದುನಿಕ ಜಗತ್ತಿನ ಸಂಸೃತಿಗೆ ಶಿಕ್ಷಣಕ್ಕೆ ಮಾರು ಹೋಗಿ ನಮ್ಮ ಮೂಲ ನೆಲೆಯ ಬೇರು ಅಲುಗಾಡುತ್ತಿದೆ. ಬ್ರಿಟೀಷರ ಭಾರತಕ್ಕೆ ಆಗಮಿಸಿ ಮಕಾಲೆ ಶಿಕ್ಷಣದಿಂದಾಗಿ ಸಮಾಜದಲ್ಲಿ ಒಡೆದು ಹಾಳುವಂತ ಶಿಕ್ಷಣವನ್ನು ಕಲಿಯುವಂತಾಗಿದೆ. ನಮ್ಮ ಹಿಂದಿನ ಗುರುಕುಲದ ಶಿಕ್ಷಣದಲ್ಲಿ ಎಲ್ಲರನ್ನು ಒಟ್ಟಾಗಿ ಸೇರಿಸುವಂತಹ ಶಿಕ್ಷಣ ನೀಡುತ್ತಿದ್ದರು. ಮುಂದಿನ ಪೀಳಿಗೆಗೆ ಸಂಸ್ಕಾರಯುತ ಮೌಲ್ಯಯುತ ಶಿಕ್ಷಣವನ್ನು ನೀಡಬೇಕಿದೆ ಎಂದರು.
ದಿವ್ಯ ಸಾನಿದ್ಯ ವಹಿಸಿದ್ದ ಮಾಗಡಿ ತಾಲೂಕಿನ ಪಾಲನ ಹಳ್ಳಿ ಶ್ರೀ ಶನೈಶ್ಚರ ಪುಣ್ಯ ಮಠದ ಮಠಾದ್ಯಕ್ಷರಾದ ಸಿದ್ದರಾಜುಸ್ವಾಮಿಗಳು ಆಶೀರ್ವಚನ ನೀಡಿ ಮಾತನಾಡಿ ಶಿವಪ್ಪನವರು ನಗರದಲ್ಲಿ ಶಿಕ್ಷಣ ಸಂಸ್ಥೆಯನ್ನು ತೆರೆಯದೆ ಚುಮ್ಮನಹಳ್ಳಿ ಮುನಿಶ್ವರ ಶಿಕ್ಷಣ ಟ್ರಸ್ಟ್ ಮೂಲಕ ಗ್ರಾಮೀಣ ಭಾಗದ ಜನರಿಗೆ ಉನ್ನತ ಗುಣ ಮಟ್ಟದ ಶಿಕ್ಷಣ ನೀಡುತ್ತಿದ್ದಾರೆ. ಬಡ ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿ ನಿಲಯಗಳನ್ನು ತೆರೆಯುತ್ತಿದ್ದು ಶಿಕ್ಷಣ ಸಂಸ್ಥೆ ಉನ್ನತ ಮಟ್ಟದಲ್ಲಿ ಬೆಳೆಯಲಿ ಎಂದು ತಿಳಿಸಿದರು.
ಈ ಸಂದರ್ಬದಲ್ಲಿ ಬೆಂಗಳೂರು ಅಮೃತ ಸಿಂಚನ ಆದ್ಯಾತಿಕ ವಿಶ್ವವಿದ್ಯಾಲಯ ಕುಲಾದಿಪತಿಗಳಾದ ಡಾ.ಹರೀಶ್, ಬೆಂಗಳೂರು ಆದ್ಯಾತಿಕ ಚಿಂತಕರು ಹಾಗೂ ಮೋದಿ ವಿಚಾರ್ ಮಂಚ್ ವಿಜಯ್ ಪದ್ನನಾಭ, ಮೈಸೂರು ಶಂಕರ ವಿಲಾಸ ಸಂಸೃತ ಪಾಠ ಶಾಲೆ ಪ್ರಾಂಶುಪಾಲ ಪ್ರೋ.ವಿದ್ವಾನ್ ಶ್ರೀನಿವಾಸ ಮೂರ್ತಿ ಹಾಗೂ ತುಮಕೂರು ಮುಖ್ಯ ಲೆಕ್ಕಾದಿಕಾರಿ ಕೆ.ಸಿ.ನರಸಿಂಹಮೂರ್ತಿ ರವರನ್ನು ಮುನಿಶ್ರೀ ದೀಪ್ತಿ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ೬೫ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಮುನಿಶ್ವರ ಕ್ಷೇತ್ರ ಸಂಸ್ಥಾಪಕ ಶಿವಪ್ಪರನ್ನು ಶಾಲಾ ಸಿಬ್ಬಂದಿ ಹಾಗೂ ವಿವಿದ ಗಣ್ಯರು ಸನ್ಮಾನಿಸಿ ಅಭಿನಂದಿಸಿದರು. ಕಾರ್ಯಕ್ರಮದ ನಂತರ ತುಮಕೂರಿನ ಮಾರುತಿ ಕಲಾ ಸಂಘದಿAದ ದಕ್ಷಯಜ್ಞ ಎಂಬ ಪೌರಾಣಿಕ ನಾಟಕ ಪ್ರದರ್ಶನ ನೆಡೆಯಿತು.
ಕಾರ್ಯಕ್ರಮದಲ್ಲಿ ಸಾರಿಗೆ ಇಲಾಕೆ ಚಿನ್ನಸ್ವಾಮಿ, ರಂಗ ಕಲಾವಿದ ಡಾ. ಲಕ್ಷö್ಮಣದಾಸ್, ಮುಖಂಡರಾದ ಮುರುಳಿಧರ್, ಸೋಮಶೇಖರ್, ಮಹಾಲಿಂಗಪ್ಪ, ಸಿ.ಎ.ರಂಗಯ್ಯ, ಗಂಗಣ್ಣ, ಎಸ್.ಡಿ.ಪ್ರಜ್ವಲ್, ರಂಗಸ್ವಾಮಿ, ಎಂ.ವಿ.ನಾಗಣ್ಣ ಮುನಿಶ್ವರ ಟ್ರಸ್ಟ್ ಪದಾದಿಕಾರಿಗಳು, ಶಾಲಾ ಪ್ರಾಂಶುಪಾಲರು, ಸಿಬ್ಬಂದಿ, ಪೋಷಕರು, ಮಕ್ಕಳು ಇದ್ದರು.
೨೨ಪೋಟೋ ಶಿರ್ಷಿಕೆ೦೧ ತಾಲೂಕಿನ ಚುಮ್ಮನಹಳ್ಳಿ ಮುನಿಶ್ವರಸ್ವಾಮಿ ಮಹಾಸಂಸ್ಥಾನ ದಾಸೋಹ ಮಠ, ಮುನೀಶ್ವರ ಸ್ವಾಮಿ ಛಾರಿಟಿ ಮತ್ತು ಶೈಕ್ಷಣಿಕ ಟ್ರಸ್ಟ್, ಮುನೀಶ್ವರ ಗುರುಕುಲ ವಿದ್ಯಾಮಂದಿರ ದಶಮಾನೋತ್ಸವ ಮುನಿಶ್ರೀ ದೀಪ್ತಿ ರರತ್ನ ವಿಶೇ ಸಂಚಿಕ ಬಿಡುಗಡೆ ಹಾಗೂ ಪ್ರಶಸ್ತಿ ಪ್ರದಾನ ಅಪರ್ಣಾದೇವಿ ಪುಷ್ಕರಣೆ ಮತ್ತು ವಿದ್ಯಾರ್ಥಿ ನಿಲಯ ಶಿಲಾನ್ಯಾಸ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು.

 
									 
					


