ತುರುವೇಕೆರೆ: ಜಾತಿ ನಿಂದನೆ ಕಾಯಿದೆಯನ್ನು ತಾಲೂಕಿನ. ಕೆಲವು ದಲಿತ ಮುಖಂಡರು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುವ ಮೂಲಕ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿದ್ದಾರೆಂದು ಎಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ದಂಡಿನಶಿವರ ಕುಮಾರ್ ಆರೋಪಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ತಾಲೂಕಿನಲ್ಲಿ ಕೆಲವು ದಲಿತ ಮುಖಂಡರು ಎನಿಸಿಕೊಂಡಿರುವ ದಲಿತರ ಪರ ಇರುವ ಕಾನೂನನ್ನು ದುರುಪಯೋಗಪಡಿಸಿಕೊಂಡು ಸಮಾಜದಲ್ಲಿ ವೈರತ್ವ ತಂದು ಹಾಕಿದ್ದಾರೆ. ಹೊಟ್ಟೆಪಾಡಿಗಾಗಿ ಇಲ್ಲದ ದೂರನ್ನು ಪೊಲೀಸ್ ಠಾಣೆಯಲ್ಲಿ ನೀಡುವ ಮೂಲಕ ಶೋಷಿತರಿಂದ ಹಣ ವಸೂಲಿ ಮಾಡುವ ದಂದೆಗೆ ಇಳಿದಿದ್ದಾರೆ ಎಂದರು.
ಮಾಚೇನಹಳ್ಳಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಕಾಳಿಕಾಂಬ ಸಂಘದ ಹಣಕಾಸಿನ ವಿಚಾರದಲ್ಲಿ ಪರಿಶಿಷ್ಠ ಜಾತಿಗೆ ಸೇರಿದ ಸಂಘದ ಸದಸ್ಯೆ ಮಂಜುಳಾ ಎಂಬುವರಿAದ ಕೆಲವು ದಲಿತ ಮುಖಂಡರೆನೆಸಿಕೊAಡಿರುವವರು ಉದ್ದೇಶಪೂರ್ವಕವಾಗಿ ಮಂಜುಳರವರನ್ನು ಎತ್ತಿಕಟ್ಟಿ ಸಂಘದ ಸದಸ್ಯರು ಮತ್ತು ಅಧಿಕಾರಿಗಳ ವಿರುದ್ಧ ದುರುದ್ದೇಶಪೂರ್ವಕವಾಗಿ ಜಾತಿ ನಿಂದನೆ ಪ್ರಕರಣ ದಾಖಲಿಸಿರುವುದು ಖಂಡನೀಯ ಎಂದರು.
ಹಿರಿಯ ದಲಿತ ಮುಖಂಡ ಮುನಿಯೂರು ರಂಗಸ್ವಾಮಿ ಮಾತನಾಡಿ ತಾಲೂಕಿನಲ್ಲಿ ಪರಿಶಿಷ್ಠರು ಮತ್ತು ಇತರೆ ಎಲ್ಲಾ ಸಮುದಾಯದವರು ಬಹಳ ಪ್ರೀತಿ ವಿಶ್ವಾಸದಿಂದ ಬದುಕುತ್ತಿದ್ದಾರೆ. ಆದರೆ ಕೆಲವು ದಲಿತರಿಂದ ನಮ್ಮ ಸಮುದಾಯಕ್ಕೆ ಕೆಟ್ಟ ಹೆಸರು ಬರುತ್ತಿದೆ. ನಮ್ಮ ತಾಲೂಕಿನ ಮುಖಂಡರು ಇತರೆ ತಾಲೂಕಿನ ದಲಿತ ಮುಖಂಡರನ್ನು ಕರೆಸಿಕೊಂಡು ವ್ಯಾಪಾರ ಮಾಡುತ್ತಿದ್ದಾರೆ. ಸಮಾಜದಲ್ಲಿ ಕಂದಕ ಉಂಟು ಮಾಡುತ್ತಿದ್ದಾರೆ. ಸಮಾಜದಲ್ಲಿ ಸಣ್ಣ ಪುಟ್ಟ ಘಟನೆಗಳು ಸಾಮಾನ್ಯ. ಆದರೆ ಅದನ್ನೇ ದೊಡ್ಡದು ಮಾಡಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಮತ್ತು ಜೀವನ ಹೊರೆಯಲು ಬೆಂಕಿ ಹಚ್ಚುವ ಕಾರ್ಯ ಮಾಡುತ್ತಿದ್ದಾರೆ. ಅಂತಹವರು ಗ್ರಾಮಗಳಿಗೆ ಭೇಟಿ ಮಾಡಿದ ಸಂಧರ್ಭದಲ್ಲಿ ಮಹಿಳೆಯರು ಪೊರಕೆ ಸೇವೆ ಮಾಡಿ ಗ್ರಾಮದಿಂದ ಹೊರಗೆ ಹಾಕಬೇಕೆಂದು ಕರೆ ನೀಡಿದರು.
ದಲಿತ ಮುಖಂಡ ಗುರುದತ್ ಮಾತನಾಡಿ ಈ ರೀತಿ ಸಣ್ಣ ಪುಟ್ಟ ವಿಷಯಕ್ಕೆಲ್ಲಾ ಜಾತಿ ನಿಂದನೆ ಪ್ರಕರಣ ದಾಖಲಿಸಿದರೆ ಮುಂದೆ ಬಡ ದಲಿತರಿಗೆ ಸಾಲ ಕೊಡುವವರು ಯಾರು? ಎಂದು ಪ್ರಶ್ನಿಸಿದರು. ರಾಷ್ಟ್ರೀಯ ಬ್ಯಾಂಕ್ ಗಳಲ್ಲಿ ನಮ್ಮ ಸಮುದಾಯಕ್ಕೆ ಸಾಲವೆಂಬುದು ಅಸಾಧ್ಯದ ಮಾತು. ಇಲ್ಲಿ ಕೇವಲ ಆಧಾರ್ ಕಾರ್ಡ್ ಮತ್ತು ಇತರೆ ಸಂಘದ ಸದಸ್ಯರ ಜಾಮೀನಿನ ಮೇರೆಗೆ ಸುಮಾರು ೩ ಲಕ್ಷದಷ್ಟು ಸಾಲ ನೀಡಲಾಗುತ್ತಿದ. ನಮ್ಮ ಅಗತ್ಯಕ್ಕೆ ತಕ್ಕಂತೆ ಸಾಲ ಪಡೆಯಬೇಕಾದುದು ನಮ್ಮ ಕರ್ತವ್ಯ. ಸಂಘದಿAದ ಸಾಲ ಪಡೆದು ಸಾಲ ಹಿಂತಿರುಗಿಸಲು ಸಾಧ್ಯವಿಲ್ಲ ಎಂದರೆ ಹೇಗೆ ಎಂದು ಆಕ್ಷೇಪಿಸಿದರು.
ಈ ಸಂದರ್ಭದಲ್ಲಿ ತಾಲೂಕು ದಲಿತ ಸಂಘರ್ಷ ಸಮಿತಿಯ ಸಂಚಾಲಕ ಮಲ್ಲೂರು ತಿಮ್ಮೇಶ್ , ಜಿಲ್ಲಾ ದಲಿತ ಸಂಘರ್ಷ ಸಮಿತಿಯ ಸಂಘಟನಾ ಸಂಚಾಲಕ ನಾಗರಾಜ್, ಮುಖಂಡರಾದ ಶಿವಣ್ಣ, ಹೊನ್ನೇನಹಳ್ಳಿ ಕೃಷ್ಣ, ಮಾಚೇನಹಳ್ಳಿ ವೆಂಕಟೇಶ್, ಮುನಿಯೂರು ಗಿರೀಶ್ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.

(Visited 1 times, 1 visits today)