ತುಮಕೂರು: ನಿರಂತರವಾಗಿ ಅಗತ್ಯ ವಸ್ತುಗಳಾದ. ಅಕ್ಕಿ.ಸಕ್ಕರೆ ,ಹಾಲು .ಸಾರಿಗೆ ವೆಚ್ಚ, ಜೀವನ ನಿರ್ವಹಣೆ ವೆಚ್ಚ ಅಕಾಶಕೆರಿದೆ. ಬಂಡವಾಳಿಗರ ಲಾಭವು ಕಡಿವಾಣೆ ಇಲ್ಲ. ಅದರೆ ದುಡಿವ ಜನರಿಗೆ ಬದುಕಲು ಯೋಗ್ಯವಾದ ಕನಿಷ್ಠ ಕೂಲಿ ಜಾರಿಗೆ ಸರ್ಕಾರ. ನ್ಯಾಯಾಂಗ ವ್ಯವಸ್ಥೆ ತಡೆಯಾಗಿದೆ. ಶಾಸಕರ ಲಕ್ಷಗಟ್ಟಲೆ ಸಂಬಂಳ ತಡೆ ಇಲ್ಲ. ಕಾರ್ಮಿಕರ ಕನಿಷ್ಠ ಕೂಲಿಗೇಕೆ ಈ ಅಡ್ಡಿಗಳು ಎಂದು ಸಿಐಟಿಯು ಜಿಲ್ಲಾ ಅಧ್ಯಕ್ಷ ರಾದ. ಸೈಯದ್ ಮುಜೀಬ್ ಅವರು ಕಾರವಾಗಿ ಪ್ರಶ್ನಿಸಿದರು.
ಅವರು ದಿನಾಂಕ 30-10-2026 ಕನಿಷ್ಠ ವೇತನ ಬೆಲೆ ಏರಿಕೆಗೆ ಅನುಗುಣವಾಗಿ ಮಾಸಿಕ 42000 ನಿಗಧಿ ಪಡಿಸಬೇಕು, ಕಾರ್ಮಿಕರಿಗೆ ಕಾನೂನುಬದ್ಧವಾಗಿ ಸಿಗಬೇಕಾದ ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿಮಾಡಿ ,ಎಲ್ಲಾ ಕಾರ್ಮಿಕರನ್ನು ನೇರಪಾವತಿ ಅಡಿ ತಂದು ಖಾಯಂ ಮಾಡಬೇಕೆಂದು ಅಗ್ರಹಿಸಿ ಕರ್ನಾಟಕ ರಾಜ್ಯ ಮುನ್ಸಿಪಲ್ ಕಾರ್ಮಿಕರ ಸಂಘ (ರಿ.), ತುಮಕೂರು ಜಿಲ್ಲಾ ಪೌರಕಾರ್ಮಿಕರ ಸಂಘ (ರಿ.), ಮಹಾನಗರ ಪಾಲಿಕೆ ಕಸದ ಆಟೋ ಚಾಲಕರು, ಸಹಾಯಕರು, ಲೋಡರ್ ಮತ್ತು ಕ್ಲೀನರ್ ಸಂಘ (ರಿ.) ಹಾಗೂ ತುಮಕೂರು ನಗರ ಪಾಲಿಕೆ ನೀರು ಸರಬರಾಜು ನೌಕರರ ಸಂಘ (ರಿ.) ಜಿಲ್ಲಾ ಸಮಿತಿಗಳು ಜಂಟಿಯಾಗಿ ಟೌನ್ಹಾಲ್ ನಿಂದ ತುಮಕೂರು ಮಹಾನಗರ ಪಾಲಿಕೆ ವರಗೆ ಮೆರವಣಿಗೆ ನಡೆಸಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಆಗಮಿಸಿದ ಮಹಾನಗರ ಪಾಲಿಕೆಯ ಲೆಕ್ಕಪತ್ರ ವಿಭಾಗದ ಮುಖ್ಯಸ್ಥ ರೇವಣಸಿದ್ದಯ್ಯ, ಪಾಲಿಕೆ ಮ್ಯಾನೇಜರ್ ಮಧು, ಪರಿಸರ ಇಂಜಿನಿಯರ್ ನಿಖಿತಾ, ಎಇಇ ಪಲ್ಲವಿ ಹಾಗೂ ನೀರು ಸರಬರಾಜು ವಿಭಾಗದ ಎಇಇ ನವೀನ್ ಅವರು ಪ್ರತಿಭಟನಾಕಾರರೊಂದಿಗೆ ಚರ್ಚೆ ನಡೆಸಿದರು. ಆಯುಕ್ತರ ಜೊತೆ ಸಭೆ ನಡೆಸಿ ಸಮಸ್ಯೆ ಇತ್ಯರ್ಥ ಪಡಿಸಲಾಗುವುದಾಗಿ ತಿಳಿಸಿದರು.
ಕುಮಾರ್ ಮತನಾಡಿ ಎಲ್ಲಾ ಗುತ್ತಿಗೆ ಕಾರ್ಮಿಕರನ್ನು ನೇರಪಾವತಿ ಅಡಿಯಲ್ಲಿ ತರಬೇಕೆಂದರು. ಬಾಕಿ ಪಿ.ಎಫ್ ಕಾರ್ಮಿಕರ ಖಾತೆಗೆ ಜಮಾ ಮಾಡಬೇಕೆಂದು.ಮೃತ ನೌಕರರ ಅವಲಬಿಂತರಿಗೆ ಪಿಂಚಣಿ ಸಿಗುವಂತೆ ಕ್ರಮ ವಹಿಸಬೇಕೆಂದರು.
ಪೌರ ಕಾರ್ಮಿಕ ನರಸಿಂಹಮೂರ್ತಿ ಮತನಾಡಿ ಪಾಲಿಕೆಯಲ್ಲಿ ಬಾಕಿ ಉಳದಿರುವ ನೇರ ಪಾವತಿ ಪ್ರಕ್ರೀಯೆ ನೇರ ನೇಮಕಾತಿ ತಕ್ಷಣದಲ್ಲಿ ಪಟ್ಟಿ ಬಿಡುಗಡೆ ಮಾಡಬೇಕೆಂದರು.
ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಕಾರ್ಮಿಕ ಅಧಿಕಾರಿ ಇಬ್ರಾಹಿಂ ರವರು ಕೆಲವು ಇಲಾಖೆಗಳಲ್ಲಿ ಈ ಸಂಬಂದ ಪರಿಶೀಲಿಸಿ, ಕಾನೂನು ಬದ್ದ ಸೌಲಭ್ಯಗಳನ್ನು ಮುಂದಿನವಾರ ತಪಾಸಣೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಕರ್ನಾಟಕ ರಾಜ್ಯ ಮುನ್ಸಿಪಲ್ ಕಾರ್ಮಿಕ ಸಂಘಟನೆಯ ಮುಖಂಡಚಿ.ನಾ.ಹಳ್ಳಿ ರಘು, ಮಹಾನಗರ ಪಾಲಿಕೆ ನೀರು ಸರಬರಾಜು ವಿಭಾಗದ ಮುಖಂಡ ಮಂಜು, ಪೌರಕಾರ್ಮಿಕ ಸಂಘಟನೆಯ ಮುಖಂಡ ಕೆಂಪರಾಜು, ಮಹಾನಗರ ಪಾಲಿಕೆ ವಾಹನ ಚಾಲಕರ ಸಂಘದ ಮುಖಂಡ ಪ್ರಕಾಶ್ ಹಾಗೂ ಕಸದ ಆಟೋ ಚಾಲಕರು ಮತ್ತು ಸಹಾಯಕರ ಸಂಘದ ಮುಖಂಡರಾದ ಮಾರುತಿ ಮತ್ತು ಮಂಜು ಮಾತನಾಡಿದರು.
ಪ್ರತಿಭಟನೆಯ ನೇತೃತ್ವವನ್ನು ಕೆಂಪರಾಜು, ನವೀನ್ ಕುಮಾರ್, ಮಂಜುನಾಥ್, ಕುಮಾರ್, ರಾಜೇಶ್, ರವಿಕುಮಾರ್, ಶ್ರೀನಿವಾಸ್, ಮುತ್ತುರಾಜ್, ಸಾಧಿಕ್, ಪೌರಕಾರ್ಮಿಕರಾದ ಮಂಜುನಾಥ್, ಮನೋಜ್, ಮಹೇಶ್, ನಾಗರಾಜ್, ಕಸವಿಲೇವಾರಿ ಘಟಕದ ಮಾರುತಿ, ಅನ್ನಪೂರ್ಣ, ಆಶಾ, ನಮಿತಾ, ಸಚಿನ್, ಶಿವಕುಮಾರ್, ಅರವಿಂದ್ ಸೇರಿದಂತೆ ಹಲವು ಕಾರ್ಮಿಕರು ವಹಿಸಿದ್ದರು.
(Visited 1 times, 1 visits today)



