
ತುಮಕೂರು: ದಂತಗಳನ್ನು ಸುರಕ್ಷಿತವಾಗಿರುಸುವುದು ಎಲ್ಲ ವಯಸ್ಸಿನವರು ಪಾಲಿಸಬೇಕಾದ ಮೂಲಭೂತ ಆರೋಗ್ಯ ಸಂಕಲ್ಪ. ದಂತಗಳ ಸಂರಕ್ಷಣೆ ಬಗ್ಗೆ ಜಾಗೃತಿ ಅಗತ್ಯ ಎಂದು ಸೂಫಿಯಾ ಲಾ ಕಾಲೇಜಿನ ಸಿಇಒ ಮೊಹಮ್ಮದ್ ಝೈದ್ ತಿಳಿಸಿದರು.
ನಗರದ ಶಿರಾಗೇಟ್‌ನಲ್ಲಿರುವ ಎಚ್‌ಎಂಎಸ್ ನ್ಯೂ ಮಾಡೆಲ್ ಪ್ರಾಥಮಿಕ ಶಾಲಾ ಕ್ಯಾಂಪಸ್‌ನಲ್ಲಿ ಹಮ್ಮಿಕೊಂಡಿದ್ದ ಶ್ರೀ ಸಿದ್ಧಾರ್ಥ ದಂತ ವೈದ್ಯಕೀಯ ಕಾಲೇಜಿನ ಸಾರ್ವಜನಿಕ ಆರೋಗ್ಯ ವಿಭಾಗದ ವತಿಯಿಂದ ಹಮ್ಮಿಕೊಂಡಿದ್ದ ಉಚಿತ ದಂತ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಶಿಬಿರದಲ್ಲಿ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ದಂತ ತಪಾಸಣೆ ಮಾಡಿ ಹಲ್ಲುಗಳನ್ನು ಹೇಗೆ ರಕ್ಷಿಸಿಕೊಳ್ಳಬೇಕು ಎಂಬುದರ ಬಗ್ಗೆ ವೈದ್ಯರು ಅರಿವು ಮೂಡಿಸುತ್ತಿದ್ದಾರೆ ಎಂದರು.
ಪ್ರಾAಶುಪಾಲರಾದ ಪ್ರೊ. ಇಕ್ಬಾಲ್ ಹುಸೇನ್ ಮಾತನಾಡಿ, ನಮ್ಮ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರೂ ಹಾಗೂ ಮಾಜಿ ಶಾಸಕರಾದ ಎಸ್. ಶಫೀ ಅಹಮದ್ ಹಾಗೂ ಮುಖ್ಯ ಸಹ ಅಧ್ಯಕ್ಷರಾದ ಸೂಫಿಯಾ ಅವರ ಮಾರ್ಗದರ್ಶನದಲ್ಲಿ ನಾವಿಂದು ಈ ದಂತ ತಪಾಸಣಾ ಶಿಬರವನ್ನು ಆಯೋಜಿಸಲಾಗಿದೆ. ನಮ್ಮ ಶಾಲೆಯ ೨೪೦ ಮಕ್ಕಳಿಗೆ ಈ ದಂಥ ಶಿಬಿರದಲ್ಲಿ ಹಲ್ಲುಗಳನ್ನು ತಪಾಸಣೆ ಮಾಡಲಿದ್ದು, ಪ್ರಮುಖವಾಗಿ ಮಕ್ಕಳು ಇತ್ತೀಚೆಗೆ ಎನಂದರೆ ಅದನ್ನೇ ಸೇವಿಸುತ್ತಿದ್ದಾರೆ. ಚಾಕೋಲೇಟ್, ಝಂಕ್ ಫೂಡ್ ಸೇರಿದಂತೆ ಮತ್ತಿತರೇ ತಿಂಡಿ ಪದಾರ್ಥಗಳನ್ನು ಸೇವಿಸುತಿದ್ದು, ಅದರಿಂದ ಅವರ ಹಲ್ಲುಗಳ ಬೇಗನೇ ಹಾಳಾಗಿ ಹುಳುಕಾಗುತ್ತಿವೆ. ಆದ್ದರಿಂದ ಮಕ್ಕಳಿಗೆ ಏನು ತಿನ್ನಬೇಕು, ಏನನ್ನು ತಿನ್ನಬಾರದು ಎಂಬುದರ ಬಗ್ಗೆ ಪೋಷಕರು ಅರಿವು ಮೂಡಿಸುತ್ತಿದ್ದು, ನಾವು ಸಿದ್ಧಾರ್ಥ ಕಾಲೇಜಿನ ದಂತ ವೈದ್ಯರ ಸಹಕಾರದೊಂದಿಗೆ ಮಕ್ಕಳಲ್ಲಿ ದಂತ ಸಂರಕ್ಷಣೆ ಬಗ್ಗೆ ಅರಿವು ಮೂಡಿಸುತ್ತಿದ್ದೇವೆ ಎಂದರು.
ಶ್ರೀ ಸಿದ್ಧಾರ್ಥ ದಂತ ವೈದ್ಯಕೀಯ ಕಾಲೇಜಿನ ಸಾರ್ವಜನಿಕ ಆರೋಗ್ಯ ವಿಭಾಗದ ವೈದ್ಯೆ ಹಾಗೂ ಶಿಬಿರ ಸಂಯೋಜಕಿ ಡಾ. ಜಾನ್ಹವಿ ಮಾತನಾಡಿ, ಮಕ್ಕಳು ಇತ್ತೀಚೆಗೆ ಚಾಕೋಲೇಟ್ ಸೇರಿದಂತೆ ಹಲ್ಲುಗಳು ಬೇಗನೆ ಹಾಳಾಗುವ ಹಾಗೂ ಹುಳುಕಾಗುವ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸುತ್ತಿದ್ದಾರೆ. ಜತೆಗೆ ಅವರು ಸರಿಯಾದ ರೀತಿಯಲ್ಲಿ ತನ್ನ ಹಲ್ಲುಗಳನ್ನು ಶುಭ್ರ ಮಾಡಿಕೊಳ್ಳುತ್ತಿಲ್ಲ. ಆದ್ದರಿಂದಲೇ ನಮ್ಮ ಸಿದ್ಧಾರ್ಥ ದಂತ ವೈದ್ಯಕೀಯ ಕಾಲೇಜು ವತಿಯಿಂದ ಈ ರೀತಿಯ ಉಚಿತ ಶಿಬಿರವನ್ನು ಆಯೋಜನೆ ಮಾಡಿ ದಂತದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ದಂತ ವೈದ್ಯದರಾದ ಡಾ. ಹರಿಪ್ರಿಯಾ, ಹಿಪ್ಸಾ, ಹಾಜಿರಾ ತನ್ಸಿಮ್ ಅವರು ಪಾಲ್ಗೊಂಡು ಎಲ್ಲಾ ಮಕ್ಕಳನ್ನು ತಪಾಸಣೆ ನಡೆಸಿ, ಸೂಕ್ತ ಸಲಹೆ, ಮಾರ್ಗದರ್ಶನದ ಜೊತೆಗೆ, ಅಗತ್ಯ ಇರುವ ಮಕ್ಕಳಿಗೆ ಔಷಧಿ ಸಹ ವಿತರಿಸಿದರು.
ಈ ವೇಳೆ ಮುಖ್ಯೋಪಾಧ್ಯಾಯರಾದ ಕುಮ್ಮಟಯ್ಯ, ಸಹ ಮುಖ್ಯೋಪಾಧ್ಯಾಯರಾದ ನಸೀಬ್ ಹುನ್ನೀಸಾ, ಶಿಕ್ಷಕರಾದ ರಮೇಶ್, ನವೀದ್, ರಿಹಿನಾ, ಶಿಲ್ಪಾ, ಶಬ್ರಿನ್, ದಿವ್ಯಾ, ಆಶಾ, ವನಜಾಕ್ಷಿ, ಗೀತಾ ಬೋಸ್ಲೆ, ರೇಷ್ಮಾ ಸೇರಿದಂತೆ ಇನ್ನಿತರರು ಇದ್ದರು.





