ತುಮಕೂರು: ನಗರದ ಏಂಪ್ರೆಸ್ ಬಾಲಕಿಯರ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ರ‍್ಯಾಂಕ್ ನಜೀರ್ ಅಹಮದ್ ಅವರ ಪ್ಯೂಚರ್‌ಜೆನ್ ಸ್ಕಾರ‍್ಸ್ ಕ್ಯಾಲಿಪೋರ್ನಿಯ. ಅಮೇರಿಕ ಸಂಸ್ಥೆ ವತಿಯಿಂದ ಪ್ರಥಮ ಮತ್ತು ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿದ ಪ್ಯೂಚರ್‌ಜೆನ್ ಸ್ಕಾರ‍್ಸ್ನ ನಿರ್ದೇಶಕಿ ನೈಲಾ ಅಹಮದ್ ಮಾತನಾಡಿ,ಇಂದು ನಿಮ್ಮೊಂದಿಗೆ ಇರುವುದು ನನಗೆ ಮನೆಗೆ ಬಂದAತೆ ಭಾಸವಾಗುತ್ತಿದೆ.ಈ ನಗರ ನನಗೆ ಅಪರಿಚಿತವಲ್ಲ,ಅಥವಾ ಭಾರತ ವಿದೇಶಿ ಭೂಮಿಯೂಅಲ್ಲ. ಇದು ನನ್ನ ಬೇರುಗಳ ನಾಡು, ನನ್ನ ಪೂರ್ವಜರ ನಾಡು.ಅದಕ್ಕಾಗಿಯೇ ನಾನು ಇಂದು ಹೆಮ್ಮೆ ಮತ್ತು ನಮ್ರತೆಯಿಂದ ಹೇಳುತ್ತೇನೆ, ನಾನು ನಿಮ್ಮಲ್ಲಿ ಅಪರಿಚಿತನಲ್ಲ, ನಾನು ತುಮಕೂರು ಮತ್ತು ಕರ್ನಾಟಕದ ಮಗಳು ಎಂದರು.
ನಾವು ಇತಿಹಾಸದಲ್ಲಿ ಅಸಾಧಾರಣ ಸಮಯವನ್ನು ಎದುರಿಸುತ್ತಿದ್ದೇವೆ. ಶಿಕ್ಷಣ ಮತ್ತು ಕೆಲಸದ ಸ್ಥಳದ ಭವಿಷ್ಯವು ನಮ್ಮ ಪೋಷಕರು ತಿಳಿದಿದ್ದಕ್ಕಿಂತ ಬಹಳ ಭಿನ್ನವಾಗಿಕಾಣುತ್ತದೆ. ಒಂದು ಕಾಲದಲ್ಲಿ ಯಶಸ್ಸನ್ನು ಖಾತರಿಪಡಿಸಿದ ಕೌಶಲ್ಯಗಳು ಇನ್ನು ಮುಂದೆ ಸಾಕಾಗುವುದಿಲ್ಲ. ಈ ಹೊಸ ಪ್ರಪಂಚವು ಹೊಸ ಜ್ಞಾನ ಮತ್ತು ತ್ವರಿತವಾಗಿ ಹೊಂದಿಕೊಳ್ಳುವ ಸಾಮರ್ಥ್ಯವನ್ನು ಬಯಸುತ್ತದೆ.ಈ ಭವಿಷ್ಯವುಎಷ್ಟು ರೋಮಾಂಚನಕಾರಿಯಾಗಿದ್ದರೂ, ಅದು ಆಳವಾಗಿ ಕಳವಳಕಾರಿಯಾಗಿದೆ. ಈ ಹೊಸ ಜಗತ್ತಿನಲ್ಲಿಅಭಿವೃದ್ಧಿ ಹೊಂದಲುಅಗತ್ಯವಿರುವ ಸಾಧನಗಳು ಎಲ್ಲರಿಗೂ ಲಭ್ಯವಿಲ್ಲ. ಇದು ಅಪಾಯಕಾರಿ ವಿಭಜನೆಯನ್ನು ಸೃಷ್ಟಿಸುತ್ತಿದೆ, ಅವಕಾಶವನ್ನು ಹೊಂದಿರುವವರು ಮತ್ತು ಇಲ್ಲದವರ ಜಗತ್ತು.ಆ ದರೆಇದು ಬದಲಾಗಬಹುದು ಮತ್ತು ಅದನ್ನು ಬದಲಾಯಿಸಬೇಕು ಎಂದು ನಾನು ನಂಬುತ್ತೇನೆಎAದು ನೈಲಾ ಅಹಮದ್ ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮಾಜಿ ಶಾಸಕ ಹಾಗೂ ಹೆಚ್.ಎಂ.ಎಸ್.ಐ.ಟಿ ನಿರ್ದೇಶಕ ಡಾ.ರಫೀಕ್ ಅಹಮದ್ ಲ್ಯಾಂಕ್ ನಜೀರ್ ಅಹಮದ್ ಅವರ ಮೊಮ್ಮಗಳಾದ ನೈಲಾ ಅಹಮದ್ ನೇತೃತ್ವದ ಪ್ಯೂಚರ್‌ಜೆನ್ ಸ್ಕಾಲರ್ಸ್ ಸಂಸ್ಥೆ ಅಮೆರಿಕ ಮತ್ತುಆಫ್ರಿಕಾದ ಬಡ ಮತ್ತುಗ್ರಾಮೀಣ ಮಕ್ಕಳ ಶೈಕ್ಷಣಿಕಅಭಿವೃದ್ಧಿಗೆ ಸಹಾಯ ನೀಡುತ್ತಾ ಸಮಾಜಸೇವೆ ಮಾಡುತ್ತಾ ಬಂದಿದೆ ಎಂದರು.
ಕಾರ್ಯಕ್ರಮದಅಧ್ಯಕ್ಷತೆ ವಹಿಸಿದ್ದ ಬ್ಯಾಂಕ್ ನಜೀರ್‌ಅಹಮದ್ ಸೊಸೆ ಹೀನಾ ಕೌಸರ್ ಮಾತನಾಡಿ,ಇಂದುಕೃತಕ ಬುದ್ದಿಮತ್ತೆ ಎಂಬ ಹೊಸ ತಂತ್ರಜ್ಞಾನ ನಮ್ಮನ್ನು ಬಹುವೇಗವಾಗಿ ತೆಗೆದುಕೊಂಡು ಹೋಗುತ್ತಿದೆ. ವ್ಯಾಪಾರ, ಕೃಷಿ, ಶಿಕ್ಷಣ ಎಲ್ಲ ವಿಷಯಗಳಲ್ಲಿಯೂ ಎಐ ಬಳಕೆಯಾಗುತ್ತಿದೆ. ಹಾಗಾಗಿ ನಾವುಗಳು ಆ ವೇಗಕ್ಕೆ ತಕ್ಕಂತೆ ಬದಲಾಗಬೇಕಾಗಿದೆ. ಶಿಕ್ಷಣವೆಂಬುದು ವ್ಯಕ್ತಿಗೆ ಸೂಪರ್ ಪವರ್‌ಇದ್ದಂತೆ, ಅದರಿಂದ ಮನುಷ್ಯನಲ್ಲಿ ಪ್ರಶ್ನಿಸುವ ಧೈರ್ಯ ಮತ್ತು ಮುನ್ನುವ ಆತ್ಮಸ್ಥೆರ್ಯ ಉಂಟಾಗುತ್ತದೆ. ಇದನ್ನು ನಿವೆಲ್ಲರೂ ಪಡೆದುಕೊಳ್ಳಬೇಕೆಂದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಪಾವಗಡದ ಶ್ರೀರಾಮಕೃಷ್ಣ ಸೇವಾಶ್ರಮ ಡಾ.ಶ್ರೀಜಪಾನಂದಜೀ, ದೇಶದ ಸ್ಥಿತಿ ಹಿಂದಿನAತೆಇಲ್ಲ. ಶಿಕ್ಷಣ ಪಡೆದ ಹೆಣ್ಣು ಮಕ್ಕಳಿಂದ ಬದಲಾವಣೆಕಾಣುತ್ತಿದೆ.ನೈಲಾ ಅಹಮದ್‌ಅವರುತಮ್ಮತಾತನ ಹೆಸರು ಉಳಿಸುವ ನಿಟ್ಟಿನಲ್ಲಿತನ್ನ ಮೂಲ ಬೇರು ಹುಡುಕಿಕೊಂಡು ಬಂದು, ತನ್ನಕೈಲಾದ ಸಹಾಯ ಮಾಡಿದ್ದಾರೆ. ಇಲ್ಲಿನ ಶಿಕ್ಷಣ ಪಡೆದು, ವಿದೇಶದಲ್ಲಿ ನೆಲೆಸಿರುವ ಎಲ್ಲಾ ಭಾರತೀಯರು ಈ ರೀತಿ ಯೋಚಿಸಿದರೆ ನನ್ನಂತಹ ಸ್ವಾಮೀಜಿಗೆ ಕೆಲಸವೇ ಇರುವುದಿಲ್ಲ.ಸಿನಿಮಾ ಮಂದಿ ಯುವಜನರಿಗೆ ಆದ ರ್ಶವಲ್ಲ.ದೂರದಅಮೇರಿಕಾದಲ್ಲಿದ್ದೂ, ತನ್ನ ಮೂಲವನ್ನು ಮರೆಯರ‍್ಯಾಂಕ್ ನಜೀರ್‌ಅವರ ಮೊಮ್ಮಗಳು ನೈಲಾ ಅಹಮದ್ ನಮಗೆ ಆದರ್ಶವಾಗಬೇಕು ಎಂದರು.
ಎAಪ್ರೆಸ್ ಮಹಿಳಾ ಪದವಿಪೂರ್ವಕಾಲೇಜಿನ ಪ್ರಾಂಶು ಪಾಲರಾದ ಅನ್ನಪೂರ್ಣಮ್ಮ ಮಾತನಾಡಿ,
ವೇದಿಕೆಯಲ್ಲಿರ್ಯಾಂಕ್ ನಜೀರ್ ಸಹೋದರರಾದ ಮುನೀರ್‌ಅಹ್ಮದ್, ಅಕ್ಷರ ದಾಸೋಹದ ಉಮೇಶ್, ಎಂಪ್ರೆಸ್‌ಕೆಪಿಎಸ್ ಶಾಲೆಯಎಲ್ಲಾ ವಿಭಾಗಗಳ ಮುಖ್ಯೋಪಾ ಧ್ಯಾಯರು ಹಾಗೂ ಶಿಕ್ಷಕರುಗಳು ಉಪಸ್ಥಿತರಿದ್ದರು.
(Visited 1 times, 1 visits today)