ತುಮಕೂರು: ಪ್ರಾಥಮಿಕ ಶಾಲಾ ಸೇವಾ ನಿರತ ಪದವಿಧರ ಶಿಕ್ಷಕರಿಗೆ ಸಂಬ0ಧಿಸಿದ ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿ ಕಡತಕ್ಕೆ ತಕ್ಷಣವೇ ಅನುಮೋದನೆ ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ(ರಿ)ದ ತುಮಕೂರು ಜಿಲ್ಲಾ ಶಾಖೆವತಿಯಿಂದ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಸಿಇಓ, ಡಿಡಿಪಿಐ ಅವರಿಗೆ ಮನವಿ ಸಲ್ಲಿಸಲಾಯಿತು.
ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತುಮಕೂರು ಜಿಲ್ಲಾಧ್ಯಕ್ಷ ಆರ್.ಪರಶಿವಮೂರ್ತಿ ಮತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಆರ್.ಜಯರಾಂ ಅವರ ನೇತೃತ್ವದಲ್ಲಿ ಸಂಘದ ಜಿಲ್ಲಾ ಪದಾಧಿಕಾರಿಗಳು, ವಿವಿಧ ತಾಲೂಕುಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಜಿಲ್ಲಾಧಿಕಾರಿಗಳು, ಸಿಇಓ ಹಾಗೂ ಡಿಡಿಪಿಐ ಅವರುಗಳನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತುಮಕೂರು ಜಿಲ್ಲಾಧ್ಯಕ್ಷ ಆರ್.ಪರಶಿವಮೂರ್ತಿ, ಸರಕಾರ ೨೦೧೭ ರ ನಂತರ ನೇಮಕವಾದ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ತಂದಿರುವ ಹೊಸ ವೃಂದ ಮತ್ತು ನೇಮಕಾತಿ ನಿಯಮವನ್ನು ೨೦೧೬ ರ ಹಿಂದೆ ನೇಮಕವಾದ ಪದವಿಧರ ಶಿಕ್ಷಕರಿಗೂ ಅನ್ವಯಿಸಲು ಮುಂದಾಗಿದೆ. ಇದರಿಂದ ಪದವಿಧರ ಶಿಕ್ಷಕರಿಗೆ ಸಾಕಷ್ಟು ತೊಂದರೆಯಾಗಲಿದೆ.ಅಲ್ಲದೆ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಒಂದರಿ0ದ ಐದನೇ ತರಗತಿಯವರೆಗೆ ಮಾತ್ರ ನಿಗಧಿಗೊಳಿಸಿ, ಡಿ ಗ್ರೇಡ್ ಮಾಡಲಾಗುತ್ತಿದೆ.ಕಳೆದ ಒಂದು ವರ್ಷದಿಂದ ಪ್ರಾಥಮಿಕ ಶಾಲಾ ಶಿಕ್ಷಕರ ಹೊಸ ವೃಂದ ಮತ್ತು ನೇಮಕಾತಿ ನಿಯಮವನ್ನು ೨೦೧೬ಕ್ಕೂ ಹಿಂದೆ ನೇಮಕವಾದ ಶಿಕ್ಷಕರಿಗೆ ಪೂರ್ವಾನ್ವಯ ಮಾಡದಂತೆ ಒತ್ತಾಯ ಮಾಡುತ್ತಾ ಬಂದರೂ ಸರಕಾರ ಮತ್ತು ಇಲಾಖೆ ಗಮನಹರಿಸುತ್ತಿಲ್ಲ.ಈ ಸಂಬAಧ ಬೆಂಗಳೂರಿನಲ್ಲಿ ಸೆಪ್ಟಂಬರ್ ೦೪ ರಣದಯ ಪ್ರತಿಭಟನೆ ಸಹ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಪ್ರಾಥಮಿಕ ಶಾಲೆಗೆ ೨೦೧೬ಕ್ಕಿಂತಲೂ ಹಿಂದೆ ನೇಮಕವಾಗಿರುವ ಪದವಿಧರ ಶಿಕ್ಷಕರಿಗೆ ಮುಖ್ಯ ಶಿಕ್ಷಕರು, ಹಿರಿಯ ಮುಖ್ಯಶಿಕ್ಷಕರ ಹುದ್ದೆಗೆ ಬಡ್ತಿ ನೀಡುವ ಪ್ರಕ್ರಿಯನ್ನು ಜೇಷ್ಠತೆಯ ಆಧಾರದ ಮೇಲೆ ಕೈಗೊಳ್ಳಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ.ಅಲ್ಲದೆ ಶಿಕ್ಷಕರನ್ನು ಬೋಧನೆಗೆ ಮಾತ್ರ ಸಿಮಿತಗೊಳಿಸಿ, ಬಿಸಿಯೂಟ, ಮೊಟ್ಟೆ ಹಂಚಿಕೆ,ಕ್ಷೀರಭಾಗ್ಯ ಇನ್ನಿತರ ಕೆಲಸಗಳಿಂದ ವಿನಾಯಿತಿ ನೀಡದರೆ, ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಹೆಚ್ಚು ಹೊತ್ತು ಪಾಠ, ಪ್ರವಚನ ಮಾಡಲು ಕಾಲಾವಕಾಶ ದೊರೆಯಲಿದೆ. ಹಾಗಾಗಿ ಶಿಕ್ಷಕರ ಮೇಲಿನ ಬೋಧನರಹಿತ ಹೊರೆಯನ್ನು ಕಡಿಮೆ ಮಾಡಬೇಕೆಂದರು.
ಸ0ಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಆರ್.ಜಯರಾಂ ಮಾತನಾಡಿ,ಈಗಾಗಲೇ ೨೦೧೭ರ ವೃಂದ ಮತ್ತು ನೇಮಕಾತಿ ನಿಯಮಗಳ ಪೂರ್ವಾನ್ವಯ ಕುರಿತಂತೆ ಎರಡು ಬಾರಿ ಕಾನೂನು ಇಲಾಖೆ ಮತ್ತು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಸಹ ಅಭಿಪ್ರಾಯವನ್ನು ತಿಳಿಸಿದೆ.ಅರ್ಥಿಕ ಇಲಾಖೆಯ ಅಭಿಪ್ರಾಯವಷ್ಟೇ ಬಾಕಿ ಇದೆ.ಹಾಗಾಗಿ ವೃಂದ ಮತ್ತು ನೇಮಕಾತಿ ತಿದ್ದುಪಡಿ ಮಸೂದೆಗೆ ಶೀರ್ಘವೇ ಅನುಮೋದನೆ ನೀಡಬೇಕೆಂಬುದು ನಮ್ಮಗಳ ಒತ್ತಾಯವಾಗಿದೆ ಎಂದರು.
ಈ ಸಂಬ0ಧ ಮನವಿಯನ್ನು ಮುಖ್ಯಮಂತ್ರಿಯವರಿಗೆ ಕಳುಹಿಸಲು, ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರಿಗೆ ಸಲ್ಲಿಸಿದರು.ಮನವಿ ಸಲ್ಲಿಸುವ ವೇಳೆ ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಪದಾಧಿಕಾರಿಗಳಾದ ಜಿಲ್ಲಾಧ್ಯಕ್ಷ ಆರ್.ಪರಶಿವಮೂರ್ತಿ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯರಾಂ, ಉಪಾಧ್ಯಕ್ಷರಾದ ಕಾಳೇಗೌಡ, ಖಜಾಂಚಿ ಷಣ್ಮುಖಪ್ಪ,ಸಹ ಕಾರ್ಯದರ್ಶಿ ದಿನೇಶ್.ಪಿ,ಎನ, ಸಂಘಟನಾ ಕಾರ್ಯದರ್ಶಿ ಮಂಜಣ್ಣ, ಮಹಿಳಾ ಸಂಘಟನಾ ಕಾರ್ಯದರ್ಶಿ ಜಯಲಕ್ಷö್ಮಮ್ಮ,ತಾಲೂಕು ಅಧ್ಯಕ್ಷರುಗಳಾದ ತಿಮ್ಮೇಗೌಡ.ಪಿ.ಜಿ,ಗೌರವಾಧ್ಯಕ್ಷ ಶಿವಕುಮಾರ್,ಬೋರೇಗೌಡ,ವೆಂಕಟರಮಣ, ಮಂಜಣ್ಣ, ಷಣ್ಮುಖಪ್ಪ,ಪಟ್ಟಾಭಿರಾಮು, ತಾಲೂಕು ಕಾರ್ಯದರ್ಶಿಗಳಾದ ನಂದನಿ, ಗಿರೀಶ್, ಕುಮಾರ್, ಭಾರತಿ ಸೇರಿದಂತೆ ಹಲವು ಶಿಕ್ಷಕರು ಉಪಸ್ಥಿತರಿದ್ದರು.