ತುಮಕೂರು: ತಮ್ಮ ಜೀವದ ಹಂಗು ತೊರೆದು ಇನ್ನೊಬ್ಬರ ಜೀವ ಉಳಿಸಲು ಕೆಲಸ ಮಾಡುವ ಅಂಬ್ಯುಲೆನ್ಸ್ ಡ್ರೈವರ್ ಗಳು ರೋಗಿಗಳ ಪಾಲಿಗೆ ದೇವರಾದರೆ, ಸಮಾಜಕ್ಕೆ ಆಸ್ತಿ ಇದ್ದಂತೆ ಎಂದು ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಅಹಮದ್ ತಿಳಿಸಿದ್ದಾರೆ.
ನಗರದ ಕನ್ನಡ ಭವನದಲ್ಲಿ ಅಖಿಲ ಕರ್ನಾಟಕ ಅಂಬುಲೆನ್ಸ್ ರೋಡ್ ಸೇಪ್ಟಿ (ರಿ)(ಎಕೆಎಆರ್‌ಎಸ್)ನ ತುಮಕೂರು ಜಿಲ್ಲಾ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು,ಇದು ಜೀವ ಕಳೆಯುವವರೇ ಹೆಚ್ಚಿರುವ ಸಂದರ್ಭದಲ್ಲಿ, ಜೀವ ಉಳಿಸುವ ಕೆಲಸ ಮಾಡುವ ಮೂಲಕ ಸಮಾಜವನ್ನು ಬೆಸೆಯುವ ಮಾನವೀಯ,ಪುಣ್ಯದ ಕೆಲಸ ಎಂದರು.
ನಾವು ಇನ್ನೊಬ್ಬರಿಗೆ ನೋವು ಬಯಸಿದರೆ, ದೇವರು ನಮಗೆ ಕೇಡು ಬಯಸುತ್ತಾನೆ ಎಂಬುದಕ್ಕೆ ನಮ್ಮ ನಡುವೆ ಹಲವಾರು ಉದಾಹರಣೆಗಳಿವೆ.ಜಾತಿ, ಧರ್ಮ, ಬಡವ, ಬಲ್ಲಿದನೆಂದು ನೋಡದೆ, ರೋಗಿಯ ಪ್ರಾಣ ಕಾಪಾಡಲು ಹಗಲು, ರಾತ್ರಿ ಎನ್ನದೆ ಶ್ರಮಿಸುವ ಅಂಬುಲೆನ್ಸ್  ಡ್ರೈವರ್ ಗಳು ಮಾನವೀಯ ಗುಣಗಳನ್ನು ಎಲ್ಲೆಡೆ ಪಸರಿಸುವ ಸಂದೇಶವಾಹಕರಾಗಿದ್ದಾರೆ.ಜೀವನ ಎಷ್ಟು ನಶ್ವರ ಎಂಬುದನ್ನು ಬಹಳ ಹತ್ತಿರದಿಂದ ಬಲ್ಲವರು ನೀವು.ಎರಡು ದಿನದ ಬದುಕಿಗೆ ಹೊಡೆದಾಡುವ ಬದಲು ಪರಸ್ವರರನ್ನು ಗೌರವದಿಂದ ಕಾಣುವ ಮೂಲಕ ಮುಂದಿನ ಪೀಳಿಗೆಗೆ ಒಳ್ಳೆಯ, ಶಾಂತಿಯುತ ವಾತಾವರಣವನ್ನು ಬಿಟ್ಟು ಹೋಗೋಣ.ಆ ಮೂಲಕ ಸದೃಢ ಭಾರತ ನಿರ್ಮಾಣಕ್ಕೆ ನಮ್ಮ ಕೈಲಾದ ಕೊಡುಗೆ ನೀಡೋಣ ಎಂಬ ಕಿವಿ ಮಾತನ್ನು ಇಕ್ಬಾಲ್ ಅಹಮದ್ ನುಡಿದರು.
ಸಾರಿಗೆ ಇಲಾಖೆಯ ಇನ್ಸ್ಪೆಕ್ಟರ್ ಮಧುಸೂಧನ್ ಮಾತನಾಡಿ,ಒಂದು ವೃತ್ತಿಯಲ್ಲಿ ತೊಡಗಿರುವವರು ಸಂಘಟಿತರಾಗುವುದು ಒಳ್ಳೆಯ ಕೆಲಸ.ಇದರಿಂದ ನಿಮಗಿಂತ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ.ಚಾಲಕ ವೃತ್ತಿ ಎಂಬುದು ಕೀಳಲ್ಲ.ರೋಗಿಗೆ ಅಂಬುಲೆನ್ಸ್ ಡ್ರೆöÊವರ್ ದೇವರ ಪ್ರತಿನಿಧಿ ಇದ್ದಂತೆ.ನಿಮ್ಮ ಜೀವದ ಹಂಗು ತೊರೆದು ಕೆಲಸ ಮಾಡುವ ಡ್ರೆöÊವರ್‌ಗಳು ತಮ್ಮ ಜೀವನದ ಬಗ್ಗೆ ಕಾಳಜಿ ಹೊಂದಿರಬೇಕು.ಮುಜಾಗ್ರತಾ ಕ್ರಮಗಳನ್ನು ಕೈಗೊಳ್ಳವಲ್ಲಿ ನಿರ್ಲಕ್ಷ ವಹಿಸಬಾರದು ಎಂದು ಕಿವಿ ಮಾತು ಹೇಳಿದರು.
ಸಮಾಜ ಸೇವಕ ವಿನಯಕುಮಾರ್ ಮಾತನಾಡಿ,ಅಂಬುಲೆನ್ಸ್ ಡ್ರೆöÊವರ್ ಕೆಲಸ ಸುಲಭದ ವೃತ್ತಿಯಲ್ಲ.ಹಗಲು, ರಾತ್ರಿ ಎನ್ನದೆ ಸೇವೆಗೆ ಸಿದ್ದರಿರಬೇಕು.ಹಾಗಾಗಿ ನಿಮ್ಮ ಕುಟುಂಬದ ಬಗ್ಗೆಯೂ ಕಾಳಜಿ ಹೊಂದಿರಬೇಕು.ಆರೋಗ್ಯದ ಕಡೆಗೂ ಗಮನಹರಿಸಬೇಕೆಂದು ಸಲಹೆ ನೀಡಿದರು.
ಅಖಿಲ ಕರ್ನಾಟಕ ಅಂಬುಲೆನ್ಸ್ ರೋಡ್ ಸೇಪ್ಟಿ(ರಿ)ನ ರಾಜ್ಯ ಸಂಚಾಲಕ ಜೀಶಾನ್ ಅಸದ್ ಮಾತನಾಡಿ,ನಮ್ಮ ಸಂಘ ಹಲವು ವರ್ಷಗಳಿಂದ ಅಂಬುಲೆನ್ಸ್ಗಳ ಸಂಚಾರಕ್ಕೆ ಜೀರೋ ಟ್ರಾಫೀಕ್ ವ್ಯವಸ್ಥೆ, ಸೂಕ್ತ ತಿಳುವಳಿಕೆ ಮೂಲಕ ನಿಗಧಿ ಗುರಿ ತಲುಪಲು ಚಾಲಕರಿಗೆ ಅಡೆತಡೆಯಿಲ್ಲದಂತೆ ನೋಡಿಕೊಳ್ಳುವ ಕೆಲಸ ಮಾಡಲಾಗುತ್ತಿದೆ.ಹಾಗಾಗಿ ಮಂಗಳೂರಿನಿAದ ಬೆಂಗಳೂರಿಗೆ ನಾಲ್ಕು ಗಂಟೆಗಳಲ್ಲಿ ಜೀವಂತ ಹೃದಯ,ತುರ್ತು ಚಿಕಿತ್ಸೆ ಅಗತ್ಯವಿರುವ ಚಿಕ್ಕಮಕ್ಕಳನ್ನು ಸಾಗಿಸಲು ಸಾಧ್ಯವಾಗಿದೆ.ತುಮಕೂರು ಜಿಲ್ಲಾ ಶಾಖೆ ಆರಂಭವಾಗಿರುವುದು ನಮಗೆ ಮತ್ತಷ್ಟು ಬಲ ತುಂಬಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ನೆಲಮಂಗಲ ಜನಸ್ನೇಹಿ ನಿರಾಶ್ರಿತರ ಕೇಂದ್ರದ ಮುಖ್ಯಸ್ಥ ಜನಸ್ನೇಹಿ ಯೋಗೀಶ್ ಮಾತನಾಡಿ,ನಾನು ವೃತ್ತಿಯಲ್ಲಿ ಟ್ರಾಕ್ಟರ್ ಡ್ರೆöÊವರ್, ೭ನೇ ತರಗತಿವರೆಗೆ ಓದಿದ ನನಗೆ ಇಂದು ೧೬೦ ನಿರ್ಗತಿಕರ ಯೋಗಕ್ಷೇಮ ನೋಡಿಕೊಳ್ಳಲು ಸಾಧ್ಯವಾಗಿದೆ ಎಂದರೆ ಅದಕ್ಕೆ ಕನ್ನಡದ ಜನರ ಉದಾರತೆಯೇ ಕಾರಣ.ಸರಕಾರದ,ವಿದೇಶಿ ಫಂಡ್ ನೆರವಿಲ್ಲದೆ ಕನ್ನಡಿಗರು ನೀಡಿದ ಸಹಾಯದಿಂದಲೇ ಎಲ್ಲವನ್ನು ಮಾಡಲು ಸಾಧ್ಯವಾಗಿದೆ.ಸದ್ಯದಲ್ಲಿಯೇ ಎರಡು ಎಕರೆ ಜಾಗದಲ್ಲಿ ಅನಾಥ ಮಕ್ಕಳಿಗೋಸ್ಕರ ಶಾಲೆ ತೆರೆದು ವಿದ್ಯಾಬ್ಯಾಸ ನೀಡುವ ಗುರಿ ಹೊಂದಿದ್ದೇನೆ. ನಿಮ್ಮೆಲ್ಲರ ಸಹಕಾರ ಅಗತ್ಯವಿದೆ ಎಂದರು.
ಪAಚಭೂತಗಳಿಗೆ ಇಲ್ಲದ ಜಾತಿ, ಧರ್ಮ ಮನುಷ್ಯ, ಮನುಷ್ಯರ ನಡುವೆ ಬೇಡ.ನಾವು ಮಾಡುವ ಒಳ್ಳೆಯ ಕೆಲಸಕ್ಕೆ ದೇವರೇ ಸಾರಥಿ.ಅವಮಾನಗಳಿಗೆ ಕುಗ್ಗದೆ, ಬಹುಮಾನಗಳಿಗೆ ಹಿಗ್ಗದೆ, ಸಮಚಿತ್ತದಿಂದ ನದಿಯ ದಿಕ್ಕನ್ನೇ ಬದಲಾಯಿಸುವ ಬಂಡೆಯAತೆ ಬದುಕೋಣ ಎಂದು ಜನಸ್ನೇಹಿ ಯೋಗೀಶ್ ನುಡಿದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿದ ಎಕೆಎಆರ್‌ಎಸ್‌ನ ತುಮಕೂರು ಜಿಲ್ಲಾ ಮಾಧ್ಯಮ ವಿಭಾಗದ ಮುಖ್ಯಸ್ಥ ಸೈಯದ್ ಷಹನವಾಜ್(ಶಾನು), ತುಮಕೂರು ಜಿಲ್ಲೆಯಲ್ಲಿ ಅಂದಾಜು ೨೫೦-೩೦೦ ಅಂಬುಲೆನ್ಸ್ಗಳಿವೆ. ತುರ್ತು ಸಂದರ್ಭದಲ್ಲಿ ಡ್ರೈವರ್ ಗಳು ನೆರವು ನೀಡುವುದಲ್ಲದೆ, ರಕ್ತದ ಅಗತ್ಯವಿದ್ದರೆ,ಅಕ್ಸಿಜ್ಹನ್ ಅಗತ್ಯವಿದ್ದರೆ ಒದಗಿಸಲು ನೆರವಾಗುವುದಲ್ಲದೆ, ಮಹಾನಗರಗಳ ದೊಡ್ಡ ಆಸ್ಪತ್ರೆಗಳಿಗೆ ರೋಗಿಗಳನ್ನು ಸಾಗಿಸುವ ವೇಳೆ ಆಗತ್ಯವಿರುವ ಝಿರೋ ಟ್ರಾಫಿಕ್ ವ್ಯವಸ್ಥೆ ಸಹ ಮಾಡಲಾಗುತ್ತಿದೆ.ಅಲ್ಲದೆ ಡ್ರೆöÊವರ್‌ಗಳ ಕಷ್ಟ, ಸುಖಃಗಳಿಗೆ ಸ್ಪಂದಿಸಿ ಕೆಲಸ ಮಾಡಲಾಗುತ್ತಿದೆ ಎಂದರು.
ಇದೇ ವೇಳೆ ಸ್ಮಶಾನ ಕಾಯುವ ಯಶೋಧಮ್ಮ, ವಿದ್ಯುತ್ ಚಿತಾಗಾರದ ರಾಮು ಅವರುಗಳನ್ನು ಅಭಿನಂದಿಸಲಾಯಿತು. ವೇದಿಕೆಯಲ್ಲಿ ಅಖಿಲ ಕರ್ನಾಟಕ ಅಂಬುಲೆನ್ಸ್ ರೋಡ್ ಸೇಪ್ಟಿ (ರಿ)ನ ರಾಜ್ಯಾಧ್ಯಕ್ಷ ಸಹೀದ್ ಅಹಮದ್, ಸುಹೇಬ್‌ಪಾಷ, ದರ್ಶನ್.ವಿ.ಪಿ, ದಿನೇಶ್ ಟ.ಆರ್, ಜೀಶಾನ್ ಅಸದ್, ತುಮಕೂರು ಜಿಲ್ಲಾಧ್ಯಕ್ಷ ಇನ್ಯಾಂಟ್ ಸಂದೀಪ್, ಕಿರಣ್,ಕೆ.ಎಂ, ಸೈಯದ್ ಷಹನವಾಜ್(ಶಾನು), ಮಹಮದ್ ಸೂಫಿಯಾನ್, ಮಧುಸೂಧನ್, ಪೃಥ್ವಿ ಮಂಜುನಾಥ್, ಸೈಯದ್ ಇರ್ಫಾನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

 

 

(Visited 1 times, 1 visits today)