ತುಮಕೂರು: ಹಲವಾರು ವರ್ಷಗಳಿಂದ ನಿರಂತರವಾಗಿ ಸಾರ್ವಜನಿಕವಾಗಿ ಗಣಪತಿ ಪ್ರತಿಷ್ಠಾಪನೆ ಮಾಡಿ ಗಣೇಶೋತ್ಸವ ಆಚರಿಸಿಕೊಂಡು ಹಿಂದೂ ಸಮಾಜ ಪೋಷಣೆ ಮಾಡುತ್ತಾ, ಧಾರ್ಮಿಕ ಪರಂಪರೆಯನ್ನು ಮುಂದುವರೆಸುತ್ತಿರುವ ನಗರದ ವಿವಿಧ ಬಡಾವಣೆಗಳ ೫೮ ಗಣೇಶೋತ್ಸವ ಮಂಡಳಿಗಳ ಪದಾಧಿಕಾರಿಗಳನ್ನು ಗುರುವಾರ ತುಮಕೂರು ದಸರಾ ಸಮಿತಿಯಿಂದ ದಸರಾ ಉತ್ಸವ ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಇದೇ ವೇಳೆ, ತಮ್ಮದೇ ಆದರೀತಿಯಲ್ಲಿ ಸಮಾಜಕ್ಕೆ ವಿವಿಧ ಕೊಡುಗೆ ನೀಡಿರುವ ನಗರದ ನಾನಾ ಸಂಘಟನೆಗಳ ಮುಖಂಡರಿಗೆ ‘ಸಾರ್ಥಕ ಜೀವನ ಸಾಧಕ’ ಎಂದು ಗೌರವಿಸಿ ಸನ್ಮಾನಿಸಲಾಯಿತು.
ಹಿರಿಯ ಪತ್ರಕರ್ತ, ಪ್ರಜಾಪ್ರಗತಿ ಸಂಪಾದಕ ಡಾ.ಎಸ್.ನಾಗಣ್ಣ ಅವರು ಕಾರ್ಯಕ್ರಮ ಉದ್ಘಾಟಿಸಿ, ಶತಶತಮಾನಗಳಿಂದ ಭಾರತ ದೇಶಾದ್ಯಂತ ಹಿಂದೂ ಸಂಸ್ಕೃತಿ ಹಿನ್ನೆಲೆಯಲ್ಲಿ ನವರಾತ್ರಿ ಉತ್ಸವ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ತುಮಕೂರು ದಸರಾ ಸಮಿತಿಯು ೩೫ ವರ್ಷಗಳಿಂದ ಸಾಂಪ್ರದಾಯಕ, ಧಾರ್ಮಿಕವಾಗಿ ದಸರಾ ಉತ್ಸವ ಆಚರಿಸಿಕೊಂಡು ಬರುತ್ತಿದೆ. ಮುಂದೆಯೂ ನಿರಂತರವಾಗಿ ತುಮಕೂರಿನಲ್ಲಿ ಸಮಿತಿಯಿಂದ ದಸರಾ ಉತ್ಸವ ಮುಂದುವರೆಯಲಿ ಎಂದು ಆಶಿಸಿದರು.
ಹಿಂದೂ ಧರ್ಮದ ಆಚರಣೆಯಾಗಿ ಗಣೇಶೋತ್ಸವ ನಡೆಸಿ ಕೊಂಡು ಬರುತ್ತಿರುವ ಮಂಡಳಿಯವರನ್ನು ಸನ್ಮಾನಿಸುತ್ತಿರುವುದು ಉತ್ತಮ ಕೆಲಸ. ಗಣೇಶೋತ್ಸವಗಳು ಬಣಗಳಾಗಬಾರದು. ಭಕ್ತಿಯು ಉನ್ಮಾದ ಆಗಬಾರದು, ಮೆರವಣಿಗೆಯ ಕುಣಿತ ಸ್ವಚ್ಛೇ ಆಗಬಾರದು. ಪ್ರತಿದಿನ ವಿಧಿವತ್ತಾಗಿ ಪೂಜಿಸಿದ್ದ ಗಣಪತಿಯನ್ನು ವಿಸರ್ಜನೆ ಮಾಡುವಾಗ ಶ್ರದ್ಧಾಭಕ್ತಿಯಿಂದ ಆಚರಿಸಬೇಕು ಎಂದು ಹೇಳಿದರು.
ದಸರಾ ಮೆರವಣಿಗೆ ಸಮಿತಿ ಅಧ್ಯಕ್ಷ ಕೋರಿ ಮಂಜುನಾಥ್ ಮಾತನಾಡಿ, ನಗರದಲ್ಲಿ ಸಾಕಷ್ಟು ಗಣಪತಿ ಮಂಡಳಿಗಳು ವಿಜೃಂಭಣೆಯಿAದ ಆಚರಿಸಿ ನಮ್ಮ ಹಿಂದೂ ಧರ್ಮ ಆಚರಣೆಯನ್ನು ಪ್ರತಿಪಾದಿಸುತ್ತಿದ್ದಾರೆ. ನಗರದ ಎಲ್ಲಾ ಗಣಪತಿಗಳ ವಿಸರ್ಜನಾ ಮಹೋತ್ಸವವನ್ನು ಒಂದೇ ದಿನ ನಡೆಸಿದರೆ ಉತ್ತಮ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ದಸರಾ ಮಹೋತ್ಸವದ ಅಂಗವಾಗಿ ಗುರುವಾರ ಮಧ್ಯಾಹ್ನ ವಿವಿಧ ಭಜನಾ ಮಂಡಳಿಗಳ ಮಾತೆಯರು ಲಲಿತಾ ಸಹಸ್ರನಾಮ ಪಠಣ ನಡೆಸಿಕೊಟ್ಟರು. ನಂತರ ಚಾಮುಂಡೇಶ್ವರಿ ಮಾತೆಗೆ ಕುಂಕುಮಾರ್ಚನೆ ಕಾರ್ಯಕ್ರಮವಿತ್ತು.
ಪ್ರಧಾನ ವೇದಿಕೆಯಲ್ಲಿ ಏರ್ಪಡಿಸಲಾಗಿದ್ದ ಜನಪದ ಗೀತೆಗಳ ಸ್ಪರ್ಧೆಯಲ್ಲಿ ೭೬ ಮಂದಿ ಸ್ಪರ್ಧಿಗಳು ಭಾಗವಹಿಸಿದ್ದರು. ಬುಧವಾರ ನಡೆದ ರಂಗಗೀತೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಈ ವೇಳೆ ನಗದು ಬಹುಮಾನ ಹಾಗೂ ಪಾರಿತೋಷಕ ವಿತರಿಸಿ ಸನ್ಮಾನಿಸಲಾಯಿತು.
ಹೆಬ್ಬೂರು ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ರಾದ ಎನ್.ಅಕ್ಕಮ್ಮ ಅವರು ರಂಗಗೀತೆ ಸ್ಪರ್ಧೆಯಲ್ಲಿ ಪ್ರ ಥಮ ಬಹುಮಾನ ಪಡೆದರು. ಪೊಲೀಸ್ ಇಲಾಖೆಯ ಹೆಚ್.ಕೃಷ್ಣಮೂರ್ತಿ ದ್ವಿತೀಯ ಹಾಗೂ ಕೆ.ಆರ್.ಧನುಷ್ ತೃತೀಯ ಬಹುಮಾನ ಸ್ವೀಕಾರ ಮಾಡಿದರು. ಬೆಂಕಿರಹಿತ ಅಡುಗೆ ಸ್ಪರ್ಧೆ ವಿಜೇತರಿಗೆ ಬಹುಮಾನ ನೀಡಲಾಯಿತು.
ನಂತರ ಸಾಗರ್ ಮತ್ತು ತಂಡದಿAದ ಜಾನಪದ ನೃತ್ಯ ವೈಭವ ಕಾರ್ಯಕ್ರನ ನಡೆಯಿತು.
ದಸರಾ ಸಮಿತಿ ಅಧ್ಯಕ್ಷ ಬಿ.ಎಸ್.ಮಂಜುನಾಥ್, ಕಾರ್ಯಾಧ್ಯಕ್ಷ ಡಾ.ಜೆ.ಲಕ್ಷಿö್ಮÃಕಾಂತ್, ಸಮಿತಿ ಖಜಾಂಚಿ ಜಿಎಸ್.ಬಸವರಾಜು. ಕಾರ್ಯದರ್ಶಿ ಕೆ.ಶಂಕರ್ ಮೊದಲಾದವರು ಭಾಗವಹಿಸಿದ್ದರು.

(Visited 1 times, 1 visits today)