ಹುಳಿಯಾರು: ಸಂತೆ ಸ್ಥಳದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ವಿರೋಧಿಸಿ ರೈತ ಸಂಘವು ಗುರುವಾರದಿಂದ ಅಹೋರಾತ್ರಿ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ, ಹುಳಿಯಾರಿನ ಬಸವೇಶ್ವರನಗರ ಕಲ್ಯಾಣ ಮಂಟಪ ದಲ್ಲಿ ಅಧಿಕಾರಿಗಳು ಹಾಗೂ ವಿವಿಧ ಸಂಘ-ಸAಸ್ಥೆಗಳ ಮುಖಂಡರ ತುರ್ತು ಸಭೆ ನಡೆಯಿತು.
ಸಭೆ ರೈತ ಸಂಘದ ರಾಜ್ಯಾಧ್ಯಕ್ಷ ಹೊಸಹಳ್ಳಿ ಚಂದ್ರಣ್ಣ ಮಾತನಾಡಿ ಹಾಲಿ ನಡೆಯುತ್ತಿರುವ ಸಂತೆ ಸ್ಥಳದಲ್ಲಿ ಮೂಲಭೂತ ಸೌಕರ್ಯಗಳಾದ ನೆರಳು, ನೀರಿನ ವ್ಯವಸ್ಥೆ ಮತ್ತು ಶೌಚಾಲಯಗಳ ಕೊರತೆ ಇದೆ. ಮೂಲ ಸೌಕರ್ಯ ಕಲ್ಪಿಸದೆ ಮರ‍್ನಲ್ಕು ದಶಕಗಳಿಂದ ಸಂಗ್ರಹಿಸಿರುವ ಸುಂಕ ಏನಾಗಿದೆ. ಮುಂದಿನ ದಿನಗಳಲ್ಲಿ ಇದರ ಲೆಕ್ಕ ಕೊಡಿ ಚಳುವಳಿ ಸಹ ಮಾಡಬೇಕಾಗುತ್ತದೆ. ಹಾಗಾಗಿ ವಾರದ ಸಂತೆ ಸ್ಥಳ ಸ್ಥಳಾಂತರಿಸಿ, ಇಲ್ಲವಾದಲ್ಲಿ ಮೂಲ ಸೌಕರ್ಯ ಕಲ್ಪಿಸದೆ ಸುಂಕ ವಸೂಲಿ ಮಾಡಲು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ರೈತ ಸಂಘದ ಹುಳಿಯಾರು ಹೋಬಳಿ ಅಧ್ಯಕ್ಷ ಕೆಂಕೆರೆ ಬಸವರಾಜು ಮಾತನಾಡಿ ಹಾಲಿ ಸ್ಥಳದಲ್ಲಿ ಸೌಕರ್ಯಗಳಿಲ್ಲ. ಹಿರಿಯೂರಿಗೆ ಹೋಗುವ ಮಾರ್ಗ ಗೂಗಲ್ ಆಪ್ ಹಾಕಿಕೊಂಡಲ್ಲಿ ಸಂತೆಯ ಸ್ಥಳವನ್ನು ತೋರಿಸುತ್ತದೆ. ಸಂತೆಯ ಕಿಷ್ಕಿಂದೆ ಜಾಗದಲ್ಲಿ ವಾಹನಗಳು ಕೂಡ ಬರುವುದರಿಂದ ಸಾಕಷ್ಟು ತೊಂದರೆ ಆಗುತ್ತಿದೆ. ಎಪಿಎಂಸಿ ಕೇವಲ ಅರ್ಧ ಕಿ.ಮೀ. ದೂರವಿದ್ದು ಅಲ್ಲಿಗೆ ಬರುವ ಜನಕ್ಕೆ ಯಾವುದೇ ತೊಂದರೆ ಆಗುವುದಿಲ್ಲ. ಯಾವುದೇ ಸೌಕರ್ಯಗಳು ಇಲ್ಲದೆ ರಸ್ತೆಯಲ್ಲಿ ನಡೆಯುತ್ತಿರುವ ಸಂತೆಯ ಜಾಗವನ್ನು ಈ ಕೂಡಲೇ ಎಪಿಎಂಸಿಗೆ ಬದಲಾವಣೆ ಮಾಡಲೇಬೇಕು ಎಂದು ಆಗ್ರಹಿಸಿದರು.
ಕರವೇ ತಾಲ್ಲೂಕ್ ಅಧ್ಯಕ್ಷ ಬೇಕರಿ ಪ್ರಕಾಶ್ ಮಾತನಾಡಿ ಪಟ್ಟಣ ಪಂಚಾಯ್ತಿ ರೈತರಿಂದ ಸುಂಕ ವಸೂಲಿ ಮಾಡಿದ ಮೇಲೆ ಸೌಕರ್ಯ ಕೊಡುವುದು ಕರ್ತವ್ಯ. ಆದರೆ ತಮ್ಮ ಕರ್ತವ್ಯ ಪಂಚಾಯ್ತಿ ಮರೆತಿರುವುದರಿಂದ ರೈತರು ಸುಂಕ ಕಟ್ಟಿದಕ್ಕೆ ಪ್ರತಿಯಾಗಿ ನೀರು, ನೆರಳು, ಶೌಚಾಲಯ ವ್ಯವಸ್ಥೆ ಮಾಡಿಕೊಡಿ ಎಂದು ಧರಣಿ ಕೂರುವಂತಾಗಿದೆ. ಇನ್ನಾದರೂ ಅನ್ನದಾತನಿಗೆ ಅವಮಾನಿಸದೆ ಸೌಕ ರ್ಯ ಕಲ್ಪಿಸಿಕೊಡಿ ಎಂದು ತಿಳಿಸಿದರು.
ಎಪಿಎಂಸಿ ಉಪ ನಿರ್ದೇಶಕ ಡಾ.ಬಿ.ರಾಜಣ್ಣ ಮಾತನಾಡಿ ಹುಳಿಯಾರು ಎಪಿಎಂಸಿಯಲ್ಲಿ ರೈತರ ಕೃಷಿ ಉತ್ಮನ್ನಗಳ ಮಾರಾಟದ ಉದ್ದೇಶಕ್ಕೆ ವರ್ತಕರಿಗೆ ಈಗಾಗಲೇ ಮಳಿಗೆಗಳನ್ನು ಹಂಚಿಕೆ ಮಾಡಿದ್ದು, ತರಕಾರಿ ಸಂತೆ ನಡೆಸಲು ಸಾಕಷ್ಟು ಜಾಗ ಲಭ್ಯವಿಲ್ಲ. ಅಲ್ಲದೆ, ಎಪಿಎಂಸಿ ಕಾನೂನಿನಡಿ ತರಕಾರಿ ಸಂತೆ ನಡೆಸಲು ಅವಕಾಶವಿರುವುದಿಲ್ಲ. ಹೀಗಾಗಿ ಸಂತೆ ನಡೆಸಲು ಸ್ಥಳಾವಕಾಶ ಇಲ್ಲವೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಇದರಿಂದ ಆಕ್ರೋಶಗೊಂಡ ರೈತರು ನಾವು ಈಗಾಗಲೇ ಎಪಿಎಂಸಿ ನೋಡಿ ಬಂದಿದ್ದೇವೆ. ಸಂತೆ ಮಾಡಲು ಸಾಕಷ್ಟು ಅವಕಾಶವಿದೆ. ಅಲ್ಲದೆ ಗುಬ್ಬಿ, ಚಿಕ್ಕನಾಯಕನಹಳ್ಳಿ ಸೇರಿದಂತೆ ಅನೇಕ ಕಡೆ ಎಪಿಎಂಸಿಯಲ್ಲೇ ಸಂತೆಗೆ ಅವಕಾಶ ಕಲ್ಪಿಸಿದ್ದಾರೆ. ರೈತರಿಗೆ ಅನುಕೂಲ ಮಾಡುವ ಮನೋಭಾವ ಇದ್ದರೆ ಎಲ್ಲವೂ ಸಾಧ್ಯ. ಬನ್ನಿ ಎಪಿಎಂಸಿಗೆ ನಾವೇ ಜಾಗ ತೋರಿಸುತ್ತೇವೆ ಎಂದು ಖಾರವಾದರಲ್ಲದೆ ಸಂತೆ ಸ್ಥಳವನ್ನು ಕೂಡಲೇ ಬದಲಿಸಿರಿ, ಅಲ್ಲಿ ಸೂಕ್ತ ಸೌಕರ್ಯ ಕಲ್ಪಿಸಿರಿ. ಅಲ್ಲಿಯವರೆಗೂ ನಾವು ಸುಂಕ ಕಟ್ಟುವುದಿಲ್ಲ. ಇದೇ ಗುರುವಾರದಿಂದ ನಾವು ಪಟ್ಟಣ ಪಂಚಾಯಿತಿ ಮುಂದೆ ಅಹೋರಾತ್ರಿ ಧರಣಿ ಮುಂದುವರೆಸುತ್ತಿದ್ದು ನಮ್ಮ ಬೇಡಿಕೆ ಈಡೇರು ವವರೆಗೂ ಯಾವುದೇ ಕಾರಣಕ್ಕೂ ಕದಲುವುದಿಲ್ಲ ಎಂದು ಹೇಳಿ ಸಭೆಯಿಂದ ಹೊರ ನಡೆದರು.
ಸಭೆಯಲ್ಲಿ ತಹಸೀಲ್ದಾರ್ ಕೆ.ಪುರಂದರ, ಹುಳಿಯಾರು ಪಪಂ ಮುಖ್ಯಾಧಿಕಾರಿ ಮಂಜು ನಾಥ್, ಅಧ್ಯಕ್ಷೆ ರತ್ನಮ್ಮ, ಉಪಾಧ್ಯಕ್ಷೆ ಕಾವ್ಯರಾಣಿ, ಮಾಜಿ ಅಧ್ಯಕ್ಷ ಕಿರಣ್ ಕುಮಾರ್, ಸದಸ್ಯರುಗಳಾದ ಸೈಯದ್ ಜಹೀರ್ ಸಾಬ್, ಅಬೂಬಕರ್ ಸಿದ್ದಿಕ್, ಮಹಮ್ಮದ್ ಜುಬೇರ್ ಮಂಜನಾಯ್ಕ್, ವೆಂಕಟೇಶ್, ಮಾಜಿ ಪಪಂ ಸದಸ್ಯ ರಾಘವೇಂದ್ರ, ಕರವೇ ಜಿಲ್ಲಾ ಉಪಾಧ್ಯಕ್ಷ ಮೆಡಿಕಲ್ ಚನ್ನಬಸ ವಯ್ಯ, ಹುಳಿಯಾರು ಹೋಬಳಿ ಅಧ್ಯಕ್ಷ ಗೌಡಿ, ಕಾಮನಬಿಲ್ಲು ಫೌಂಡೇಷನ್ ಅಧ್ಯಕ್ಷ ಚನ್ನಕೇಶವ, ಇಮ್ರಾಜ್, ರೈತ ಸಂಘದ ತಾಲೂಕು ಅಧ್ಯಕ್ಷ ಕರಿಯಪ್ಪ, ನೀರಾ ಈರಣ್ಣ, ಪ್ರಶಾಂತ್, ಜಗದೀಶ್, ಲಕ್ಷಿ÷್ಮ, ಪುಷ್ಪಾವತಿ, ಬಸವೇಶ್ವರ ನಗರದ ಶಂಕರೇಶ್, ಮಿಲ್ ಶಿವಣ್ಣ ಸೇರಿದಂತೆ ಸಾರ್ವಜನಿಕರು ಭಾಗವಹಿಸಿದ್ದರು.
(Visited 1 times, 1 visits today)