ಹುಳಿಯಾರು: ವಾರದ ಸಂತೆಗೆ ಮೂಲ ಸೌಕರ್ಯ ಕೊಡುವವರೆವಿಗೂ ಸುಂಕ ಸಂಗ್ರಹಿಸಬಾರದೆAದು ತಿಳಿಸಿದ್ದರೂ ಸಹ ದೌರ್ಜನ್ಯದಿಂದ ಸುಂಕ ವಸೂಲಿ ಮಾಡುತ್ತಿದ್ದಾರೆಂದು ಆರೋಪಿಸಿ ಧರಣಿ ಸ್ಥಳದಿಂದ ರೈತರು ವಾರದ ಸಂತೆಗೆ ತೆರಳಿ ವಸೂಲಿಗಾರ ಶಿವಣ್ಣನನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡು ಘಟನೆ ಗುರುವಾರ ನಡೆಯಿತು.
ಕಳೆದ ವಾರ ಅಹೋರಾತ್ರಿ ಧರಣಿ ನಡೆಸುತ್ತಿದ್ದಾಗ ತಹಸೀಲ್ದಾರ್ ಕೆ.ಪುರಂದರ ಹಾಗೂ ಪೌರಾಡಳಿತ ಇಲಾಖೆಯ ಪಿಡಿ ಯೋಗಾನಂದ ಅವರು ಮುಂದಿನ ವಾರ ನೀರಿನ ವ್ಯವಸ್ಥೆ, ನಂತರ ಶೌಚಾಲಯ ವ್ಯವಸ್ಥೆ ಕಲ್ಪಿಸುವ ಮತ್ತು ಸಂತೆ ಸ್ಥಳಾಂತರಿಸುವ ಬಗ್ಗೆ ಭರವಸೆ ನೀಡಿದ್ದರು. ಆಗ ಧರಣಿ ಹಿಂಪಡೆಯುವಾಗಲೂ ಸಹ ಮೂಲ ಸೌಕರ್ಯ ಕಲ್ಪಿಸದಿದ್ದರೆ ಸುಂಕ ಕಟ್ಟುವುದಿಲ್ಲ ವೆಂದು ತಿಳಿಸಿದ್ದೇವೆ. ಅವರೂ ಸಹ ಒಪ್ಪಿದ್ದರು. ಆದರೆ ಈಗ ಏಕಾಏಕಿ ಬಲವಂತದಿAದ ಸುಂಕ ಕಟ್ಟಿಸಿಕೊಳ್ಳುತ್ತಿದ್ದಾರೆ ಎಂದು ರೈತರು ಆರೋಪಿಸಿದರು.
ಸುಂಕ ಸಂಗ್ರಹ ಗುತ್ತಿಗೆದಾರ ಶಿವಣ್ಣ ನಾನು ಹರಾಜು ಕೂಗಿಕೊಂಡಿದ್ದು ಪಂಚಾಯ್ತಿಗೆ ಮುಂಗಡ ಹಣ ಕಟ್ಟಿದ್ದೇನೆ. ನನ್ನ ಹಣ ವಾಪಸ್ ಕೊಡಿಸಿ ಇಲ್ಲ ವಸೂಲಿಗೆ ಅವಕಾಶ ಕೊಡಿ ಎಂದು ರೈತರನ್ನು ಕೇಳಿಕೊಂಡರು. ಹರಾಜು ಕೂಗುವ ಸಂದರ್ಭದಲ್ಲೇ ಮೂಲ ಸೌಕರ್ಯದ ಬೇಡಿಕೆ ಇಟ್ಟಿದ್ದೆವು. ಶೀಘ್ರ ಮಾಡುವ ಭರವಸೆ ನೀಡಿ ಹರಾಜು ಪ್ರಕ್ರಿಯೆ ಮುಗಿಸಿದರು. ಆದರೆ ಹರಾಜು ಮುಗಿದು ಆರೇಳು ತಿಂಗಳು ಮುಗಿದಿದ್ದರೂ ಕನಿಷ್ಟ ನೀರಿನ ವ್ಯವಸ್ಥೆ ಮಾಡಿಲ್ಲ. ರಸ್ತೆಯ ಇಕ್ಕೆಲಗಳಲ್ಲಿ ನಡೆಯುತ್ತಿರುವ ಸಂತೆಗೆ ಸುಂಕ ಏಕೆ ಕಟ್ಟಬೇಕು. ಕನಿಷ್ಟ ಸೌಕರ್ಯ ಕೊಡದಿದ್ದ ಮೇಲೆ ನಿಮಗೇಕೆ ಕಟ್ಟಬೇಕು ಸುಂಕ ಎಂದು ತರಾಟೆಗೆ ತೆಗೆದುಕೊಂಡರು.
ಹೀಗೆ ಇಬ್ಬರ ನಡುವೆ ಏರಿದ ಧ್ವನಿಯಲ್ಲಿ ಮಾತಿನ ಚಕಮಕಿ ನಡೆದವು. ನೂಕಾಟ ತಳ್ಳಾಟ ಸಹ ನಡೆಯಿತು. ಸುಂಕ ಸಂಗ್ರಹಗಾರನ ಬೆಂಬಲಕ್ಕೆ ಯಾರೊಬ್ಬರೂ ಬಾರದಿದ್ದ ಕಾರಣ ಕೊನೆಗೆ ಇನ್ಮುಂದೆ ಸುಂಕ ವಸೂಲಿ ಮಾಡುವುದಿಲ್ಲ. ಪಂಚಾಯ್ತಿ ಬಳಿ ನನ್ನ ಡಿಪಾಸಿಟ್ ಹಣ ವಾಪಸ್ ಕೊಡಿ ಎಂದು ಕೇಳುತ್ತೇನೆ. ಎಂದು ರೈತರನ್ನು ಕೇಳಿಕೊಂಡು ಅಲ್ಲಿಂದ ಸುಂಕ ಸಂಗ್ರಹಗಾರ ಕಾಲ್ಕಿತ್ತರು.

(Visited 1 times, 1 visits today)