
ಹುಳಿಯಾರು: ಹುಳಿಯಾರಿನ ಗ್ರಾಮದೇವತೆ ಶ್ರೀ ಹುಳಿಯಾರಮ್ಮ ದೇವಿಯವರ ೧೩ ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ ಮುಂಜಾನೆ ಏರ್ಪಡಿಸಿದ್ದ ಕಳಸೋತ್ಸವವು ವೈಭ ವದಿಂದ ನೆರವೇರಿತು.
ಹುಳಿಯಾರು ಗ್ರಾಮದೇವತೆ ದುರ್ಗಮ್ಮನವರು , ಹುಳಿಯಾರು ಕೆಂಚಮ್ಮದೇವಿ, ಸೋಮಜ್ಜನಪಾಳ್ಯದ ಅಂತರಘಟ್ಟೆ ಅಮ್ಮನವರು, ಗೌಡಗೆರೆ ದುರ್ಗಮ್ಮ, ದಮ್ಮಡಿಹಟ್ಟಿ ಈರಬೊಮ್ಮಕ್ಕ ದೇವಿ, ,ಕೆ.ಸಿ.ಪಾಳ್ಯದ ಅಂತರಘಟ್ಟೆ ಅಮ್ಮ ಹಾಗೂ ದೊಡ್ಡಬಿದರೆ ಕರಿಯಮ್ಮ ದೇವರುಗಳ ಆಗಮನ ಹಾಗೂ ಕೂಡು ಭೇಟಿ ನಂತರ ಕಳಸೋತ್ಸವ ಆರಂಭವಾಯಿತು.
ಹುಳಿಯಾರು ಕೆರೆ ಮೈದುಂಬಿದ್ದರಿAದ ಕೆರೆಯಲ್ಲಿ ಸ್ಥಾಪಿಸಲಾಗುತ್ತಿದ್ದ ಕಲಶವನ್ನು ಹುಳಿಯಾರ ಮ್ಮನವರ ಮೂಲಗುಡಿಯ ಬಳಿ ಸ್ಥಾಪಿಸಲಾಯಿತು. ಅಲ್ಲಿಂದ ಪಟ್ಟಣದಲ್ಲಿನ ಹುಳಿಯಾರಮ್ಮನ ದೇವ ಸ್ಥಾನದವರೆವಿಗೂ ಐವತ್ತಕ್ಕೂ ಹೆಚ್ಚು ಕಳಸಗಳ ಉತ್ಸವವು ಮಂಗಳವಾದ್ಯ ಹಾಗೂ ಅಪಾರ ಭಕ್ತರ ಸಮ್ಮುಖದಲ್ಲಿ ನೆರವೇರಿತು.
ಉತ್ಸವದಲ್ಲಿ ಕೋಡಿಪಾಳ್ಯ, ಲಿಂಗಪ್ಪನಪಾಳ್ಯ, ಕಾಮಶೆಟ್ಟಿಪಾಳ್ಯ, ಹುಳಿಯಾರು, ಕೇಶವಾಪುರ ಹಾಗೂ ಸೋಮಜ್ಜನಪಾಳ್ಯ ಗ್ರಾಮಗಳ ಹೆಣ್ಣು ಮಕ್ಕಳು ಭಕ್ತಿ ಪೂರ್ವಕವಾಗಿ ಶ್ರೀ ಹುಳಿಯಾರಮ್ಮನವರ ಕಳಸವನ್ನು ತಲೆ ಮೇಲೆ ಹೊತ್ತು ನಡೆಮುಡಿಯೊಂದಿಗೆ ಮೂಲ ಸ್ಥಾನಕ್ಕೆ ಆಗಮಿಸಿದರು.
ಈ ಕಳಸೋತ್ಸವವು ಮಂಗಳವಾದ್ಯಗಳೊAದಿಗೆ ಶ್ರೀ ಅಮ್ಮನವರ ಮೂಲ ಸ್ಥಾನದಿಂದ ಹೊರಟು ಅಲ್ಲಿಂದ ಶ್ರೀ ರಂಗನಾಥಸ್ವಾಮಿ ದೇವಸ್ಥಾನ ರಸ್ತೆ ಮೂಲಕ ಹುಳಿಯಾರಮ್ಮ ದೇವಸ್ಥಾನ ತಲುಪಿತು. ಈ ಕಳಸೋತ್ಸವ ನೋಡಲು ಜನಜಾತ್ರೆಯೇ ನೆರೆದಿತ್ತು. ಬೆಳಿಗ್ಗೆಯಿಂದಲೇ ಅನ್ನಸಂತರ್ಪಣೆ ಸಹ ನಡೆಸಲಾಯಿತು.



