ತುಮಕೂರು: ಸ್ಲಂ ಜನಾಂದೋಲನ ಕರ್ನಾಟಕ ಮತ್ತು ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯಿಂದ ನಗರದ ಸ್ಲಂ ಜನರ ವಿವಿಧ ಹಕ್ಕೋತ್ತಾಯಗಳಿಗೆ ಒತ್ತಾಯಿಸಿ ಶಿರಾಗೇಟ್‌ನಲ್ಲಿರುವ ಸ್ಲಂ ಬೋರ್ಡ್ ಕಛೇರಿ ಮುಂದೆ ಪ್ರತಿಭಟನಾ ಧರಣಿಯನ್ನು ಹಮ್ಮಿಕೊಳ್ಳಲಾಗಿತ್ತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸ್ಲಂ ಜನಾಂದೋಲನ ಕರ್ನಾಟಕದ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ ಈಗಾಗಲೇ ಕಳೆದ ಒಂದು ವರ್ಷಗಳಿಂದ ಜಿಲ್ಲಾಡಳಿತಕ್ಕೆ ಸ್ಲಂ ಜನರ ಕುಂದು ಕೊರತೆ ಬಗ್ಗೆ ಗಮನಕ್ಕೆ ತರಲಾಗಿದೆ, ಜಿಲ್ಲಾಧಿಕಾರಿಗಳು ಸೇರಿದಂತೆ ಸ್ಲಂ ಬೋರ್ಡ್ ಆಯುಕ್ತರು, ನಗರಪಾಲಿಕೆ ಆಯುಕ್ತರು ಹಾಗೂ ಸ್ಲಂ ಬೋರ್ಡ್ ಇಂಜಿನಿರ‍್ಸ್ಗಳು ಸಭೆ ನಡೆಸಿಸಮಸ್ಯೆಗಳನ್ನು ಕೇಳಿ ಪರಿಹರಿಸುತ್ತೇವೆ ಎಂದು ಸಮಯಗಳನ್ನು ತೆಗದುಕೊಂಡು ಕ್ರಮವಹಿಸಿಲ್ಲ, ಇಲಾಖೆಗಳ ಸಮನ್ವಯತೆ ಮತ್ತು ಅಧಿಕಾರಿಗಳ ನಿರ್ಲ ಕ್ಷö್ಯತೆಯಿಂದ ಸ್ಲಂ ಜನರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ವಿಫಲವಾಗಿದ್ದು, ಈ ಕಾರಣಕ್ಕಾಗಿ ಇಂದು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಗೆ ಮುತ್ತಿಗೆ ಹಾಕಿ ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡುತ್ತಿದ್ದೇವೆ. ನಗರದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ೫೦೩ ಮನೆಗಳ ಕಾಮಗಾರಿ ಅರ್ಧಂಬರ್ಧಕ್ಕೆ ನಿಲ್ಲಿಸಲಾಗಿದೆ ಅವುಗಳನ್ನು ೬೦ ದಿನಗಳಲ್ಲಿ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿದರು.
ಪದಾಧಿಕಾರಿಗಳಾದ ಜಾಬೀರ್‌ಖಾನ್ ಮತ್ತು ಶಂಕರಯ್ಯ ಮಾತನಾಡಿ ನಗರದ ಅಘೋಷಿತ ಸ್ಲಂಗಳನ್ನು ಸ್ಲಂ ಕಾಯಿದೆ ೧೯೭೩ರಡಿ ಘೋಷಣೆ ಮಾಡಬೇಕೆಂದರು, ನಿವೇಶನ ರಹಿತರ ಹೋರಾಟ ಸಮಿತಿಯ ಮಂಗಳಮ್ಮ ಮತ್ತು ಪೂರ್ಣಿಮಾ ಮಾತನಾಡಿ ನಗರದ ನಿವೇಶನ ರಹಿತರು ಕಳೆದ ೫ ವರ್ಷಗಳಿಂದ ಸುದೀರ್ಘವಾಗಿ ಹೋರಾಟ ಮಾಡುತ್ತ ಬರುತ್ತಿದ್ದು, ಈಗಾಗಲೇ ನಗರ ಪಾಲಿಕೆ ೩೬೦ ಕುಟುಂಬಳನ್ನು ಅರ್ಹರು ಎಂದು ಗುರುತಿಸಿದ್ದು ಅವರಿಗೆ ಮರಳೇನಹಳ್ಳಿ ಹಾಗೂ ಸತ್ಯಮಂಗಲ ಸರ್ವೇ ನಂಬರ್‌ಗಳ ಸರ್ಕಾರಿ ಜಾಗದಲ್ಲಿ ಪಿಎಂಎವೈ ಮನೆಗಳ ನಿರ್ಮಾಣ ಮಾಡಲು ಡಿಪಿಆರ್ ಸಿದ್ದಗೊಳಿಸಬೇಕೆಂದು ಆಗ್ರಹಿಸಿದರು.
ಸಾವಿತ್ರಿಬಾಯಿ ಪುಲೆ ಮಹಿಳಾ ಸಂಘಟನೆಯ ಅನು ಪಮಾ ಮತ್ತು ಗಂಗಾ ಮಾತನಾಡಿ ಕೊಳಚೆ ಪ್ರದೇಶಗಳಲ್ಲಿ ಹಕ್ಕುಪತ್ರ ಸಮೀಕ್ಷೆ ಮಾಡಿ ೧ ವರ್ಷ ಕಳೆದರು ಹಕ್ಕು ಪತ್ರ ನೀಡದೇ ನಿರ್ಲಕ್ಷö್ಯ ಮಾಡಲಾಗಿದೆ ಆದ್ದರಿಂದ ಮುಖ್ಯಮಂತ್ರಿಗಳು ಜಿಲ್ಲೆಗೆ ಬರುವ ಸಂದರ್ಭದಲ್ಲಿ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ನಮ್ಮ ಹೋರಾಟ ಅನಿವಾರ್ಯವಾಗಿದೆ ಎಂದರು.
ಪ್ರತಿಭಟನಕಾರರ ಮನವಿಯನ್ನು ಸ್ವೀಕರಿಸಿ ಮಾತನಾಡಿದ ಕರ್ನಾಟಕ ಕೊಳಗೇರಿ ಅಭಿವರದ್ಧಿ ಮಂಡಳಿ ತುಮಕೂರು ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಭಾನುಪ್ರತಾಪ್ ಸಿಂಹ ಮಾತನಾಡಿ ಜಿಲ್ಲೆಯಲ್ಲಿ ಸರ್ಕಾರದ ಆದೇಶದನ್ವಯ ಇದುವರೆಗೂ ಹಕ್ಕುಪತ್ರಗಳಿಲ್ಲದ ೫೮೧೬ ಕುಟುಂಬಗಳ ಪೈಕಿ ೩೬೪೩ ಕುಟುಂಬಗಳನ್ನು ಸಮೀಕ್ಷೆ ಮಾಡಿದ್ದು ಇದರಲ್ಲಿ ೧೪೯೩ ಕುಟುಂಬಗಳಿಗೆ ಹಕ್ಕುಪತ್ರ ನೀಡಬೇಕಿದೆ. ಜಿಲ್ಲೆಗೆ ಒಟ್ಟು ೭೧೭೮ ಪಿಎಂಎವೈ ಮನೆಗಳು ಮಂಜೂರಾಗಿದ್ದು ಇವುಗಳಲ್ಲಿ ೨೫೨೫ ಮನೆಗಳಲು ಪೂರ್ಣಗೊಂಡಿದ್ದು ಹಸ್ತಾಂತರ ಮಾಡಬೇಕಿದೆ, ಜಿಲ್ಲೆಯಲ್ಲಿ ೧೩೦ ಕೊಳಚೆ ಪ್ರದೇಶಗಳಿದ್ದು ಅಘೋಷಿತ ಕೊಳಚೆ ಪ್ರದೇಶಗಳನ್ನು ಗುರುತಿಸಿ ಘೋಷಣೆ ಮಾಡಿಸುವ ಪ್ರಕ್ರಿಯೆಯನ್ನು ಮಂಡಳಿಯಿAದ ಕೈಗೊಂಡಿದೆ, ಸ್ಲಂ ಜನರು ತಮ್ಮ ಹಕ್ಕುಗಳಿಗಾಗಿ ನಡೆಸುವ ಹೋರಾಟ ನ್ಯಾಯುತವಾಗಿದ್ದು ಸಾದ್ಯವಾದಷ್ಟು ಸಮಸ್ಯೆಗಳನ್ನು ಪರಿಹರಿಸಲು ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ. ೪೫ ದಿನಗಳಲ್ಲಿ ಈ ಎಲ್ಲಾ ಹಕ್ಕೋತ್ತಾಯಗಳನ್ನು ಈಡೇರಿಸುವುದಾಗಿ ಹೇಳಿದರು ಮಂಡಳಿಯ ಅಧಿಕಾರಿಗಳಾದ ರಕ್ಷಿತ್, ಜಗದೀಶ್.ಮೌನ ಇದ್ದರು.
ಪ್ರತಿಭಟನೆ ನೇತೃತ್ವವನ್ನು ತುಮಕೂರು ಸ್ಲಂ ಸಮಿತಿಯ ಪದಾಧಿಕಾರಿಗಳಾದ ಕಣ್ಣನ್, ತಿರುಮಲಯ್ಯ, ಕೃಷ್ಣಮೂರ್ತಿ, ಅರುಣ್, ಧನಂಜಯ್, ಗುಲ್ನಾಜ್, ಶಾರದಮ್ಮ, ಮುಬಾರಕ್, ಕೆಂಪಣ್ಣ, ಪೂರ್ಣಿಮಾ, ಶಿವಕುಮಾರ್, ಅಬಿಬುನ್ನೀಸಾ, ಅಶ್ವತ್, ರಂಗನಾಥ್, ನೇತೃತ್ವವನ್ನು ವಹಿಸಿದ್ದರು.

(Visited 1 times, 1 visits today)