
ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಬಡಕೆಗುಡ್ಲು ಗ್ರಾಮದ ಎ.ಕೆ.ಕಾಲೋನಿಯಲ್ಲಿ ನೀರಿನ ಸಮಸ್ಯೆ ನೀಗಿಸುವಂತೆ ನಿವಾಸಿಗರು ಒತ್ತಾಯಿಸಿದ್ದಾರೆ.
ಬಡಕೆಗುಡ್ಲು ಗ್ರಾಮ ಹಿಂದುಳಿದ ಪ್ರದೇಶವಾಗಿದೆ. ಈ ಗ್ರಾಮದ ಎ.ಕೆ. ಕಾಲೋನಿಯಲ್ಲಿ ಸುಮಾರು ೨೫ ಬಡಕುಟುಂಬಗಳು ವಾಸಿಸುತ್ತಿದೆ. ಕೂಲಿ ಮಾಡಿಕೊಂಡು ಜೀವಿಸುತ್ತಿರುವ ಈ ಕಾಲೋ ನಿಯಲ್ಲಿ ವೃದ್ದರು, ಬಾಣಂತಿಯರು ಹಾಗೂ ಚಿಕ್ಕ ಮಕ್ಕಳಿದ್ದು ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಳೆದ ಎರಡು ವರ್ಷದಿಂದ ಕಾಡುತ್ತಿದೆ, ಇದಲ್ಲದೆ ಉತ್ತಮ ರಸ್ತೆಯಾಗಲಿ, ಚರಂಡಿ ವ್ಯವಸ್ಥೆಯಾಗಲಿ ಈ ಕಾಲೋನಿಗಿಲ್ಲದೆ ಅನೈರ್ಮಲ್ಯದ ವಾತಾವರಣದಲ್ಲಿ ಬದುಕುತ್ತಿ ದ್ದಾರೆ. ಹಲವು ಬಾರಿ ಪಂಚಾಯಿತಿಗೆ ದೂರು ನೀಡಿದ್ದರೂ ಅಧಿಕಾರಿಗಳಾಗಲಿ, ಜನ ಪ್ರತಿನಿಧಿ ಗಳಾಗಲಿ ಗಮನಹರಿಸಿಲ್ಲ, ಪಂಚಾಯಿತಿ ಅಭಿ ವೃದ್ದಿ ಅಧಿಕಾರಿ ಎರಡು ದಿನದಲ್ಲಿ ಸಮಸ್ಯೆ ನಿವಾ ರಣೆ ಮಾಡಲಾಗುತ್ತದೆ ಎಂದು ಹೇಳಿ ಹೋಗಿ ತಿಂಗಳಾದರೂ ಈ ಕಡೆ ತಿರುಗಿ ನೋಡಿಲ್ಲ ಎಂದು ಗ್ರಾಮದ ಮಹಿಳೆಯರು ಹಾಗೂ ಸ್ಥಳೀಯರು ಪಂಚಾಯಿತಿ ಕಾರ್ಯಾಲಯದ ಮುಂದೆ ಖಾಲಿಕೊಡ ಹಿಡಿದು ಪ್ರತಿಭಟನೆ ನಡೆಸಿದ್ದಾರೆ.
ನಮ್ಮ ಹಕ್ಕುಗಳು ಈಡೇರದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದೆಂದು ನಿವಾಸಿಗಳು ಎಚ್ಚರಿಸಿದ್ದಾರೆ.





