
ಗುಬ್ಬಿ: ಶ್ರೀ ಸಿದ್ದರಾಮೇಶ್ವರರು ತಪಸ್ಸು ಮಾಡಿರುವಂತಹ ಪುಣ್ಯ ಭೂಮಿ ಇದಾಗಿದ್ದು ಇಂತಹ ಸುಕ್ಷೇತ್ರಗಳು ಅಭಿವೃದ್ಧಿ ಮಾಡುವುದಕ್ಕೆ ತಾವೆಲ್ಲರೂ ಮುಂದಾಗಬೇಕು ಎಂದು ಕಾರೆ ಕುರ್ಚಿ ಸಿದ್ದರಾಮೇಶ್ವರ ತಪೋವನ ಕ್ಷೇತ್ರದ ಅಧ್ಯಕ್ಷರಾದ ಮೃತ್ಯುಂಜಯ ಮಹಾಸ್ವಾಮೀಜಿ ತಿಳಿಸಿದರು.
ತಿಪಟೂರು ಹಾಗೂ ಗುಬ್ಬಿ ತಾಲೂಕಿನ ಗಡಿಭಾಗವಾದ ಶ್ರೀ ಸಿದ್ದರಾಮೇಶ್ವರರ ತಪೋವನದಲ್ಲಿ ಲಕ್ಷದೀಪೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಬಹಳ ಇತಿಹಾಸ ಪೂರ್ವ ದೇವಾಲಯವಾಗಿದ್ದು ಇದರ ಅಭಿವೃದ್ಧಿ ಕೆಲಸಗಳು ನಿರಂತರವಾಗಿ ಇಲ್ಲಿ ಸಾಗುತ್ತಿದೆ ಶ್ರೀ ಸಿದ್ದರಾಮೇಶ್ವರರು ಇಲ್ಲಿ ತಪಸ್ಸು ಮಾಡಿರುವಂತಹ ಪುಣ್ಯಭೂಮಿಯಾಗಿದ್ದು ಅನಾದಿಕಾಲದಿಂದಲೂ ತನ್ನದೇ ಆದ ಶರಣರ ಪರಂಪರೆಯನ್ನು ನಡೆಸಿಕೊಂಡು ಬಂದಿದೆ. ಯಾತ್ರಿ ನಿವಾಸ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳು ದೇವಾಲಯದಲ್ಲಿ ನಡೆಯುತ್ತಿವೆ ಎಂದು ತಿಳಿಸಿದರು.
ಕರಡಿ ಗವಿ ಮಠದ ಶಿವಶಂಕರ ಶಿವಯೋಗಿ ಮಹಾಸ್ವಾಮೀಜಿಗಳು ಮಾತನಾಡಿ ಶ್ರೀ ಸಿದ್ದರಾಮೇಶ್ವರರು ನಾಡಿನಾದ್ಯಂತ ಸಂಚಾರವನ್ನು ಮಾಡುವ ಮೂಲಕ ಸಾಮಾಜಿಕವಾಗಿ ಧಾರ್ಮಿಕವಾಗಿ ಸಾಕಷ್ಟು ಕೆಲಸವನ್ನು ಮಾಡಿದಂತಹ ಮಹಾಪುರುಷರಾಗಿದ್ದರು. ಕೆರೆ ಕಟ್ಟೆ ಅರಣ್ಯ ದೇವಾಲಯ ಹೀಗೆ ನಾನಾ ರೀತಿಯಲ್ಲಿ ಕೆಲಸ ಮಾಡಿ ದೊಡ್ಡ ಶರಣ ಬಣವನ್ನು ಕಟ್ಟಿದವರು ಇಲ್ಲಿಯೂ ಸಹ ಆಗಮಿಸಿ ಲೋಕ ಕಲ್ಯಾಣಕ್ಕಾಗಿ ತಪ್ಪಸ್ಸು ಮಾಡಿರುವ ಜಾಗವಿದು ಖಂಡಿತ ಇದು ಮುಂದಿನ ದಿನದಲ್ಲಿ ದೊಡ್ಡ ಮಟ್ಟದಲ್ಲಿ ಧಾರ್ಮಿಕ ಕೇಂದ್ರವಾಗಿ ಬೆಳೆಯುತ್ತದೆ ಎಂದು ತಿಳಿಸಿದರು.
ಇದೆ ಸಂದರ್ಭದಲ್ಲಿ ಕೆರೆಗೋಡಿ ರಂಗಪುರದ ಗುರು ಪರದೇಶಿ ಕೇಂದ್ರ ಮಹಾಸ್ವಾಮೀಜಿ,ಬಳೆ ಕಟ್ಟೆಯ ಇಮ್ಮಡಿ ಕರಿ ಬಸವದೇಶೀ ಕೇಂದ್ರ ಸ್ವಾಮೀಜಿ,ಯಳನಾಡು ಸಂಸ್ಥಾನದ ಜ್ಞಾನ ಪ್ರಭು ಸಿದ್ದರಾಮೇಶ್ವರ ದೇಶಿಕೇಂದ್ರ ಸ್ವಾಮೀಜಿ, ಸೇರಿದಂತೆ ಟ್ರಸ್ಟ್ ನಾ ಅಧ್ಯಕ್ಷರು ಉಪಾಧ್ಯಕ್ಷರು, ಸದಸ್ಯರು ಸಾವಿರಾರು ಭಕ್ತರು ಹಾಜರಿದ್ದರು.





