
ಹುಳಿಯಾರು: ಹುಳಿಯಾರಿನಲ್ಲಿ ಭಗೀರಥ ಭವನ ನಿರ್ಮಾಣಕ್ಕೆ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ 50 ಲಕ್ಷ ರೂ. ನೀಡಲಾಗಿದ್ದು PWD ಅಥವಾ ಜಿಪಂಗೆ ಕಟ್ಟಣ ನಿರ್ಮಾಣದ ಏಜೆನ್ಸಿ ಕೊಟ್ಟು ಶೀಘ್ರದಲ್ಲೇ ಶಂಕುಸ್ಥಾಪನೆ ಮಾಡಲಾಗುವುದು ಎಂದು ಶಾಸಕರಾದ ಸಿ.ಬಿ.ಸುರೇಶ್‌ಬಾಬು ತಿಳಿಸಿದರು.
ಹುಳಿಯಾರು ಸಮೀಪದ ಕೋಡಿಪಾಳ್ಯದ ಶ್ರೀ ಸೇವಾಲಾಲ್ ಸಾಂಸ್ಕöತಿಕ ಸದನದಲ್ಲಿ ಚಿಕ್ಕನಾಯಕನಹಳ್ಳಿ ತಾಲೂಕು ಭಗೀರಥ ನೌಕರರ ಕ್ಷೇಮಾಭಿವೃದ್ಧಿ ಸಂಘ ಮತ್ತು ಶ್ರೀ ಭಗೀರಥ ವಿದ್ಯಾನಿಧಿ ಸೇವಾ ಚರಿಟಬಲ್ ಟ್ರಸ್ಟ್ ಹಾಗೂ ತಾಲೂಕು ಭಗೀರಥ ಉಪ್ಪಾರ ಸಂಘದ ಸಂಯುಕ್ತ ಆಶಯದಲ್ಲಿ ಭಾನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ, ನಿವೃತ್ತ ನೌಕರರು ಮತ್ತು ನೂತನ ನೌಕರರು ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪೋಷಕರು ತಮ್ಮ ಮಕ್ಕಳನ್ನು ಶೈಕ್ಷಣಿಕವಾಗಿ ಬೆಳೆಸುವ ಜೊತೆಗೆ ಸಂಸ್ಕಾರ, ಸಂಸ್ಕೃತಿ ಕಲಿಸಬೇಕು. ಸಾಹಿತ್ಯ, ಸಂಗೀತ, ಕ್ರೀಡೆ, ಯೋಗಧ್ಯಾನದಲ್ಲಿ ತೊಡಗಿಕೊಳ್ಳುವಂತೆ ಮಾಡಬೇಕು. ಗುರುಹಿರಿಯರಲ್ಲಿ ಗೌರವಭಾವನೆ, ಸೇವಾಗುಣ ರೂಢಿಸಬೇಕು. ಒಟ್ಟಾರೆ ದೊಡ್ಡವರಾದ ಮೇಲೆ ನಮ್ಮವರು. ನಮ್ಮೂರು ಎಂಬ ಭಾವನೆಯಿಂದ ನಡೆದುಕೊಳ್ಳುವಂತೆ ಮಾಡಬೇಕು ಎಂದು ಕಿವಿ ಮಾತು ಹೇಳಿದರು.
ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಅತೀ ಹೆಚ್ಚು ಉಪ್ಪಾರ ಜನಾಂಗದವರು ಇದ್ದಾರೆ. ಆದರೆ ಉಪ್ಪಾರ ನಿಗಮದಿಂದ ವಾರ್ಷಿಕ ಕೊಡುವ ೨ ಕೊಳವೆಬಾವಿ ಸಾಲದು. ಹಾಗಾಗಿ ಜನಸಂಖ್ಯೆಯ ಆಧಾರದ ಮೇಲೆ ಕೊಳವೆಬಾವಿ ಹಾಗೂ ಸಾಲಸೌಲಭ್ಯಗಳನ್ನು ಕೊಡಬೇಕು ಎಂದರಲ್ಲದೆ ಕಾಲೇಜು ಪಕ್ಕದಲ್ಲಿರುವ ಜಾಗವನ್ನು ಉಪ್ಪಾರ ಸಮಾಜದವರಿಗೆ ಕೊಡಲು ಪಪಂ ಮುಖ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಪೊಲೀಸ್ ಠಾಣೆ ಬಳಿ ಭಗೀರಥ ಪುತ್ಥಳಿ ನಿರ್ಮಾಣಕ್ಕೆ ಚಿಂತನೆ ಮಾಡಿರುದಾಗಿ ತಿಳಿಸಿದರು.
ಕ್ಲಾಸಿಕ್ ಸಮೂಹ ಸಂಸ್ಥೆಗಳ ಸಂಸ್ಥಾಪಕ ನಿರ್ದೇಶಕರಾದ ಲಕ್ಷ÷್ಮಣ್ ಎಸ್ ಉಪ್ಪಾರ್ ಮಾತನಾಡಿ ಬಡತನ ಮತ್ತು ಅವಮಾನ ಸಾಧಿಸುವ ಛಲ ಹುಟ್ಟಿಸುತ್ತದೆ. ಮಲಗಲು ಬಿಡದ ಕನಸು ಗುರಿ ಮುಟ್ಟಿಸುತ್ತದೆ ಎನ್ನುವುದನ್ನು ವಿದ್ಯಾರ್ಥಿಗಳುಮನದಲ್ಲಿಕೊಳ್ಳಬೇಕು ಎಂದರಲ್ಲದೆ ಉತ್ತಮ ಆರೋಗ್ಯ, ಜ್ಞಾನ ವೃದ್ಧಿ, ನೈತಿಕತೆ, ಒಂದಾಗಿರುವ ನಡೆನುಡಿ, ಯೋಗಧ್ಯಾನ ಇವುಗಳ ಬಗ್ಗೆ ಗಮನ ಹರಿಸಿದರೆ ಸಾಧನೆ ಸುಲಭ ಸಾಧ್ಯ ಎಂದರು.
ತುಮಕೂರು ಜಿಲ್ಲಾ ಉಪ್ಪಾರ ಸಂಘದ ಅಧ್ಯಕ್ಷ ಮಂಜುನಾಥ್ ಅವರು ಮಾತನಾಡಿ ಪ್ರತಿಯೊಂದು ಉಪ್ಪಾರ ಮನೆಯಿಂದಲೂ ಪ್ರತಿ ತಿಂಗಳೂ 100 ರೂ. ಸಂಗ್ರಹ ಮಾಡಿ ಉಪ್ಪಾರ ಎಜುಕೇಷನ್ ಟ್ರಸ್ಟ್ ಮಾಡುವ ಚಿಂತನೆ ಇದ್ದು ಎಲ್ಲರೂ ಧನ ಸಹಾಯ ಮಾಡುವ ಮೂಲಕ ಸಹಕಾರ ನೀಡಬೇಕು ಎಂದರು.
ತಾಲ್ಲೂಕು ಭಗೀರದ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಟಿ.ನಾಗೇಂದ್ರಪ್ಪ ಮಾತನಾಡಿ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಉಪ್ಪಾರ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ನೆರವು ಮತ್ತು ಪ್ರೋತ್ಸಾಹ ನೀಡಲು ಭಗೀರಥ ವಿದ್ಯಾನಿಧಿ ಸ್ಥಾಪಿಸಿದ್ದೇವೆ. ಇದರಲ್ಲಿ ಈಗಾಗಲೇ 50 ಲಕ್ಷ ರೂ. ಠೇವಣಿ ಇಟ್ಟು ಇದರಲ್ಲಿ ಬರುವ ಲಾಭಾಂಶದಲ್ಲಿ ವಿದ್ಯಾರ್ಥಿ ವೇತನ, ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ ಎಂದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಹೊಸದುರ್ಗ ಭಗೀರಥ ಪೀಠದ ಡಾ.ಪುರುಷೋತ್ತಮಾನಂದಪುರಿ ಸ್ವಾಮೀಜಿ ವಹಿಸಿದ್ದರು. ರಾಜ್ಯ ಉಪ್ಪಾರ ಸಂಘದ ಪ್ರಧಾನ ಕಾರ್ಯದರ್ಶಿ ವೆಂಕೋಬ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕಲ್ಲೇಶ್, ಖ್ಯಾತ ಉದ್ಯಮಿ ನಾಗರಾಜು, ತಾಲೂಕು ಭಗೀರಥ ಉಪ್ಪಾರ ಸಂಘದ ಅಧ್ಯಕ್ಷ ಹೆಚ್.ಹನುಮಂತಯ್ಯ, ಡಾ| ಎನ್.ಎಸ್.ದೇವರಾಜು, ರೇಣುಕಯ್ಯ, ದಾಸಪ್ಪ, ಸಿದ್ದಬಸಪ್ಪ, ಅನಂತಯ್ಯ, ರೂಪನಾಗೇಶ್, ರಮೇಶ್, ಪ್ರದೀಪ್, ರಂಗಧಾಮಯ್ಯ, ಯಲ್ಲಪ್ಪ, ರವೀಂದ್ರನಾಥ್, ನಾರಾಯಣಸ್ವಾಮಿ, ಶಿವಯ್ಯ, ರಾಮಚಂದ್ರಯ್ಯ, ಜಯಮ್ಮ, ಮಲ್ಲಿಕಾರ್ಜುನಯ್ಯ, ಬಸವರಾಜು, ಗಿರೀಶ್, ಜಯಣ್ಣ, ಮಂಜುನಾಥ್, ದಯಾನಂದ್, ನಾಗರಾಜು, ಅನಂತಯ್ಯ, ಜಗದೀಶ್, ರಾಮಯ್ಯ, ಮಾಲ್ತೇಶಯ್ಯ, ರಾಮಯ್ಯ, ರಂಗಧಾಮಯ್ಯ ಸೇರಿದಂತೆ ಅನೇಕರು ಇದ್ದರು.





