ತುಮಕೂರು: ನಗರದ ಕ್ಯಾತ್ಸಂದ್ರ ಸಮೀಪ ಮೈದಾಳ ರಸ್ತೆಯಲ್ಲಿ ಪರಿಶಿಷ್ಟ ಪಂಗಡಗಳ ಹಾಗೂ ಇತರೆ ಸಮುದಾಯಗಳ ವಿದ್ಯಾರ್ಥಿನಿಲಯಗಳಲ್ಲಿ ಸುಮಾರು ೩೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು, ಅವರು ನಿತ್ಯ ತುಮಕೂರಿಗೆ ಕಾಲೇಜಿಗೆ ಹೋಗಿ ಬರಲು ಸಾರಿಗೆ ವ್ಯವಸ್ಥೆ ಇಲ್ಲದೆ ತೊಂದರೆ ಅನುಭವಿ ಸುತ್ತಿದ್ದಾರೆ. ಸಾರಿಗೆ ಸಂಸ್ಥೆ ಹಾಗೂ ಜಿಲ್ಲಾಡಳಿತ ತಕ್ಷಣ ಕ್ರಮ ತೆಗೆದುಕೊಂಡು ಈ ಮಾರ್ಗದಲ್ಲಿ ಬಸ್ ಸೇವೆ ಒದಗಿಸಬೇಕು ಎಂದು ಕ್ಯಾತ್ಸಂದ್ರದ ಡಾ. ಪುನಿತ್ ರಾಜ್‌ಕುಮಾರ್ ಬಡಾ ವಣೆ ಹಿತರಕ್ಷಣಾ ಸಮಿತಿ ಅಧ್ಯಕ್ಷ ಪ್ರತಾಪ್ ಮದಕರಿ ಒತ್ತಾಯಿಸಿದ್ದಾರೆ.
ಈ ಬಗ್ಗೆ ಹಲವಾರು ಬಾರಿ ಸಾರಿಗೆ ಸಂಸ್ಥೆಗೆ ಮನವಿ ಮಾಡಿದರೂ ಸ್ಪಂದಿಸಿ ಬಸ್ ವ್ಯವಸ್ಥೆ ಮಾಡಿಲ್ಲ. ನಿತ್ಯ ೩೦೦ ವಿದ್ಯಾರ್ಥಿಗಳು ಕಾಲೇಜಿಗೆ ಹೋಗಿಬರಲು ದೂರದ ಕ್ಯಾತ್ಸಂದ್ರ ನಿಲ್ದಾಣಕ್ಕೆ ಬರುವಂತಾಗಿದೆ. ಕ್ಯಾತ್ಸಂದ್ರವರೆಗಿನ ನಗರ ಸಾರಿಗೆ ಬಸ್ ಸೇವೆಯನ್ನು ಡಾ.ಪುನಿತ್ ರಾಜ್‌ಕುಮಾರ್ ಬಡಾವಣೆವರೆಗೂ ವಿಸ್ತರಿಸಿದರೆ ಹಾಸ್ಟೆಲ್ ವಿದ್ಯಾ ರ್ಥಿಗಳಿಗೆ ಅನುಕೂಲವಾಗುತ್ತದೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳದಿದ್ದರೆ ವಿದ್ಯಾರ್ಥಿಗಳೊಂದಿಗೆ, ನಾಗರೀಕರು, ಕನ್ನಡಪರ ಸಂಘಟನೆಗಳು, ದಲಿ ತಪರ ಸಂಘಟನೆಗಳೊ0ದಿಗೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಡಾ.ಪುನಿತ್ ರಾಜ್‌ಕುಮಾರ್ ನಾಗರೀಕ ಹಿತರ ಕ್ಷಣಾ ಸಮಿತಿ, ಪ್ರಜಾ ಪರಿವರ್ತನಾ ಸಮಿತಿ, ವಿದ್ಯಾರ್ಥಿ ಬಂಧು ವೇದಿಕೆ ಹಮ್ಮಿಕೊಂಡಿದ್ದ ಡಾ.ಅಂಬೇಡ್ಕರ್ ಪರಿನಿರ್ವಾಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈಗ ಕಾಲೇಜು ಪರೀಕ್ಷೆಗಳು ಆರಂಭವಾಗುವ ಸಮಯ. ಈ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳು ಕಾಲೇಜಿಗೆ ಹೋಗಿಬರಲು ತೀವ್ರ ಸಮಸ್ಯೆಯಾಗುತ್ತಿದೆ. ಇದನ್ನು ಮನಗಂಡು ಬಸ್ ಸೇವೆ ಒದಗಿಸಬೇಕು ಎಂದು ಪ್ರತಾಪ್ ಮದಕರಿ ಒತ್ತಾಯಿಸಿದರು.
ನಾಗರೀಕ ಹಿತರಕ್ಷಣಾ ಸಮಿತಿ ಕಾರ್ಯದರ್ಶಿ ಸಂಪತ್‌ಕುಮಾರ್, ಸಹ ಕಾರ್ಯದರ್ಶಿ ಮಂಜು ನಾಥ್, ನಿವೃತ್ತ ಪ್ರಾಚಾರ್ಯ ಗಂಗಹನುಮಯ್ಯ, ಸದಸ್ಯರಾದ ಪ್ರದೀಪ್‌ಕುಮಾರ್, ಸಂಜೀವಯ್ಯ ಹಾಗೂ ಹಾಸ್ಟೆಲ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.

(Visited 1 times, 1 visits today)