
ತುಮಕೂರು: ಜನ ಐದು ವರ್ಷಕ್ಕೊಮ್ಮೆ ನಮ್ಮನ್ನು ಆರಿಸಿ ಕಳಿಸುತ್ತಾರೆ ನಾವು ಮಾಡಿದ ಕೆಲಸ ಅವರಿಗೆ ಇಷ್ಟವಾದರೆ ಮತ್ತೊಮ್ಮೆ ನಮ್ಮನ್ನು ರಿನಿವಲ್ ಮಾಡಿಕೊಳ್ಳುತ್ತಾರೆ ಇಲ್ಲದಿದ್ದರೆ ತಿರಸ್ಕರಿಸುತ್ತಾರೆ ಎಂದು ಶಾಸಕ ಸಿ ಬಿ ಸುರೇಶ್ ಬಾಬು ರವರು ಅಭಿಪ್ರಾಯಪಟ್ಟರು ಶಿರಾ ತಾಲೂಕು, ಬುಕ್ಕಾಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬನ್ನಿ ನಗರದ ಬಳಿ ನೂತನ ಅಂಗನವಾಡಿ ಕಟ್ಟಡ ಉದ್ಘಾಟನೆ ಹಾಗೂ ಗ್ರಾಮ ಪಂಚಾಯಿತಿ ವತಿಯಿಂದ ನಿರ್ಮಿಸಿದ್ದ ವಾಣಿಜ್ಯ ಮಳಿಗೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು
ಜನ ಕೊಟ್ಟ ಅಧಿಕಾರ ಶಾಶ್ವತವಲ್ಲ ಅಧಿಕಾರವಧಿಯಲ್ಲಿ ನಾವು ಮಾಡಿದ ಕೆಲಸಗಳೇ ಶಾಶ್ವತವಾಗಿ ನಮ್ಮ ಹೆಸರನ್ನು ಉಳಿಸುತ್ತವೆ. ಬುಕ್ಕಾಪಟ್ಟಣ ಗ್ರಾಮ ಪಂಚಾಯಿತಿ ಸದಸ್ಯರು ಅಂತಹ ಒಂದು ಉತ್ತಮ ಕಾರ್ಯಕ್ಕೆ ಮುಂದಾಗಿದ್ದಾರೆ ತಮ್ಮ ಅನುದಾನದ ಅಡಿಯಲ್ಲಿ ನರೇಗಾ ಕಾಮಗಾರಿ ಅಡಿಯಲ್ಲಿ ಹಾಗೂ ೧೫ನೇ ಹಣಕಾಸು ಯೋಜನೆ ಅಡಿಯಲ್ಲಿ ಸಂಪನ್ಮೂಲಗಳನ್ನು ಬಳಸಿಕೊಂಡು ವಾಣಿಜ್ಯ ಮಳಿಗೆಗಳನ್ನು ನೂತನವಾಗಿ ನಿರ್ಮಿಸಿ ಪಂಚಾಯಿತಿಗೆ ಶಾಶ್ವತವಾಗಿ ಆದಾಯ ಬರುವಂತೆ ಮಾಡುವ ಉತ್ತಮ ಕಾರ್ಯ ಮಾಡಿದ್ದಾರೆ ಕಟ್ಟಡದ ಮೇಲ್ಭಾಗದಲ್ಲಿ ಮತ್ತಷ್ಟು ಮಳಿಗೆಗಳನ್ನು ನಿರ್ಮಿಸಲು ಶಾಸಕರ ಅನುದಾನದ ಅಡಿಯಲ್ಲಿ ೧೦ ಲಕ್ಷ ರೂಪಾಯಿಗಳನ್ನು ನೀಡುವುದಾಗಿ ತಿಳಿದರು. ಬುಕ್ಕಾಪಟ್ಟಣ ಹೋಬಳಿಯ ಅಭಿವೃದ್ಧಿಗೆ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ಸಿಂಹ ಪಾಲನ್ನು ನೀಡುತ್ತಿದ್ದು ಯಾವುದೇ ಕಾರಣಕ್ಕೂ ತಾರತಮ್ಯವನ್ನು ಎಸಗಿಲ್ಲ ಹೋಬಳಿಯ ಅಗತ್ಯಗಳ ಅಭಿವೃದ್ಧಿಗಾಗಿ ೩೭ ಕೋಟಿಗಳನ್ನು ಒದಗಿಸಿದ್ದು ಬುಕ್ಕಾಪಟ್ಟಣ ಹಾಗಲವಾಡಿ ಮುಖ್ಯ ರಸ್ತೆ, ಹೂಯಿಲ್ ದೊರೆ ಯಿಂದ ಮಣ್ಣಮ್ಮನ ದೇವಸ್ಥಾನ ಮುಖ್ಯರಸ್ತೆ, ಹೊನ್ನೇನಹಳ್ಳಿ ಇಂದ ಬೆಂಚೆ ಗೇಟ್ ವರೆಗೆ ಮುಖ್ಯ ರಸ್ತೆಗಳನ್ನು ಅಭಿವೃದ್ಧಿಪಡಿಸುವ ಕಾಮಗಾರಿಗಳು ಪ್ರಗತಿಯಲ್ಲಿವೆ, ಬೆಂಚಿ ಗೇಟ್ನಿಂದ ರಾಮಲಿಂಗಪುರವರೆಗೆ ರಸ್ತೆ ಅಭಿವೃದ್ಧಿ ಹಾಗೂ ಬುಕ್ಕಾಪಟ್ಟಣ ತಾವರೆಕೆರೆ ಮುಖ್ಯರಸ್ತೆ, ಗಳನ್ನು ಮುಂದಿನ ದಿನಗಳಲ್ಲಿ ವಿಶೇಷ ಅನುದಾನದ ಅಡಿಯಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು.
ಟೀಕೆಗಳಿಗೆ ಕೆಲಸದಿಂದಲೇ ಉತ್ತರ ನೀಡುವೆ – ಇತ್ತೀಚೆಗೆ ಕೆ ಎನ್ ರಾಜಣ್ಣನವರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಹೆಗಲ ಮೇಲೆ ಶಾಸಕರು ಕೈ ಹಾಕಿದ ತಕ್ಷಣ ನಮ್ಮ ಮನೆಯಲ್ಲಿ ಊಟ ಮಾಡಿದ ತಕ್ಷಣ ನಮಗೆ ಭಾಗ್ಯ ಬಂದು ಬಿಡುವುದಿಲ್ಲ ಎಂದು ಹೇಳಿದ ಬಿ ಆರ್ ಎಂ ಸತ್ಯನಾರಾಯಣರವರಿಗೆ ವೇದಿಕೆಯಲ್ಲಿ ಉತ್ತರ ನೀಡಿದ ಶಾಸಕರು ನಿಮ್ಮ ಅಧಿಕಾರವಧಿಯ ಕಾಲದಲ್ಲಿ ಎಷ್ಟು ರಸ್ತೆಗಳನ್ನು ಅಭಿವೃದ್ಧಿ ಪಡಿಸಿದ್ದೀರಿ ತೋರಿಸಿ ಮಂತ್ರಿಗಳನ್ನು ಅಧಿಕಾರದಲ್ಲಿಟ್ಟುಕೊಂಡು ಎಷ್ಟು ಬೇಕಾದರೂ ಅಭಿವೃದ್ಧಿ ಮಾಡಬಹುದಿತ್ತು ಆದರೆ ನೀವು ಅವುಗಳನ್ನು ಮಾಡಲಿಲ್ಲ ಕೇವಲ ಅವರ ಹಿಂದೆ ಓಡಾಡಿಕೊಂಡು ಸಮಯ ವ್ಯರ್ಥ ಮಾಡಿದಿರಿ ಈಗ ನಮ್ಮ ಮೇಲೆ ಟೀಕೆ ಮಾಡುತ್ತಿದ್ದೀರಿ ಕೆಲಸದಿಂದಲೇ ಉತ್ತರ ನೀಡುತ್ತೇನೆ ಎಂದು ಜವಾಬು ನೀಡಿದರು.
ಬುಕ್ಕಾಪಟ್ಟಣದ ಬಿಲಾಲ್ ಮಸೀದಿಗೆ ಭೇಟಿ ನೀಡಿದ ಶಾಸಕರು ಮುಸ್ಲಿಂ ಮುಖಂಡರೊ0ದಿಗೆ ಸಮಾಲೋಚನೆ ನಡೆಸಿ ಸಮುದಾಯಕ್ಕೆ ಬೇಕಾದ ಖಬರಸ್ಥಾನ, ಹಾಗೂ ಶಾದಿ ಮಹಲ್ ನಿರ್ಮಿಸಿಕೊಡಲು ಅನುದಾನ ಕೊಡುವ ಬಗ್ಗೆ ಭರವಸೆ ನೀಡಿದರು ಕಾರ್ಯಕ್ರಮದಲ್ಲಿ ಮುಖಂಡರಾದ ಶಾಂತಕುಮಾರ್ ಹೊಸ ಪಾಳ್ಯ ಸತ್ಯನಾರಾಯಣ, ಹೊಸ ಪಾಳ್ಯ ಜೈಪ್ರಕಾಶ್, ಬಿ ಆರ್ ಎಂ ಸತ್ಯನಾರಾಯಣ, ಬುಕ್ಕಾಪಟ್ಟಣ ಗ್ರಾಮ ಪಂಚಾಯತಿ ಅಧ್ಯಕ್ಷ ಮುಜಾಹಿದ್, ಉಪಾಧ್ಯಕ್ಷೆ ಗಂಗಮ್ಮ, ಪಿ ಡಿ ಓ ಶಿವಶಂಕರ್, ಸದಸ್ಯರಾದ ದಿವಾಕರ್, ಬಿ ಎಂ ಕಾಂತರಾಜು, ಯಶೋದಮ್ಮ, ಜ್ಯೋತಿ, ಸೌಭಾಗ್ಯಮ್ಮ, ಬಸವರಾಜು, ರಮೇಶ್,ನೂರ್ ಆಯೇಶಾ, ನಾಗರತ್ನಮ್ಮ, ಗಂಗರಾಜು, ಹೇಮಲತಾ ಕಾಂತರಾಜು, ಕಮಲಮ್ಮ, ಗುರುರಾಜು, ನರಸಿಂಹಯ್ಯ, ಆಟೋ ಕಾಂತರಾಜು, ಸೇರಿದಂತೆ ಎಲ್ಲ ಪಕ್ಷಗಳ ಮುಖಂಡರು ಗ್ರಾಮಸ್ಥರು ಸಾರ್ವಜನಿಕರು ಹಾಜರಿದ್ದರು.




