
ಚಿಕ್ಕನಾಯಕನಹಳ್ಳಿ: ರೈತರು ಪೌತಿ ಖಾತೆ ಸಂಬAಧ ಎದುರಿಸುತ್ತಿರುವ ಸಮಸ್ಯೆಗಳನ್ನು ಮನಗಂಡು, ಡಿಸೆಂಬರ್ ೨೯ರಂದು ಚಿಕ್ಕನಾಯ ಕನಹಳ್ಳಿ ಪಟ್ಟಣದ ತೀ. ನಂ. ಶ್ರೀ ಭವನದಲ್ಲಿ ಪೌತಿ ಖಾತೆ ಆಂದೋಲನವನ್ನು ಆಯೋಜಿಸಲಾಗಿದೆ ಎಂದು ಶಾಸಕ ಸುರೇಶ್ ಬಾಬು ಸೋಮವಾರ ತಿಳಿಸಿದ್ದಾರೆ.
ಈ ಆಂದೋಲನದ ಮೂಲಕ ಪೌತಿ ಖಾತೆ ಸಂಬ0ಧಿತ ಗೊಂದಲಗಳಿಗೆ ಪರಿಹಾರ ಒದಗಿಸುವ ಉದ್ದೇಶವಿದ್ದು, ರೈತರು ಇದರ ಸಂಪೂರ್ಣ ಸದು ಪಯೋಗ ಪಡೆದುಕೊಳ್ಳಬೇಕೆಂದು ಅವರು ಮನವಿ ಮಾಡಿದರು. ಪೌತಿ ಖಾತೆ ಪ್ರಕ್ರಿಯೆಯಲ್ಲಿ ರೈತರಿಗೆ ಎದುರಾಗುತ್ತಿರುವ ಅಡಚಣೆಗಳನ್ನು ನಿವಾ ರಿಸಲು ಸಂಬ0ಧಪಟ್ಟ ಅಧಿಕಾರಿಗಳ ಸಹಕಾರ ದೊಂದಿಗೆ ಈ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಆಂದೋಲನದಲ್ಲಿ ಭಾಗವಹಿಸುವ ರೈತರು ಅಗತ್ಯ ದಾಖಲೆಗಳನ್ನು ಕಡ್ಡಾಯವಾಗಿ ತರಬೇಕು ಎಂದು ಶಾಸಕ ಸುರೇಶ್ ಬಾಬು ಸೂಚಿಸಿದರು. ಮೃತರ ಹೆಸರಿನಲ್ಲಿ ಇರುವ ಪಹಣಿ ದಾಖಲೆಗಳು, ಮೃತರ ಮರಣ ಪ್ರಮಾಣ ಪತ್ರ, ವಂಶವೃಕ್ಷ ದೃಢೀಕರಣ ಪತ್ರ, ಆಧಾರ್ ಕಾರ್ಡ್ ಸೇರಿದಂತೆ ಸಂಬ0ಧಪಟ್ಟ ಎಲ್ಲಾ ದಾಖಲೆಗಳನ್ನು ಹಾಜರುಪಡಿಸಿದರೆ ಪೌತಿ ಖಾತೆ ಪ್ರಕ್ರಿಯೆ ಸುಲಭಗೊಳ್ಳಲಿದೆ ಎಂದು ಹೇಳಿದರು.
ಪೌತಿ ಖಾತೆ ಸಮಸ್ಯೆಗಳಿಂದ ರೈತರಿಗೆ ಆಗುತ್ತಿ ರುವ ಅನ್ಯಾಯವನ್ನು ಸರಿಪಡಿಸುವ ನಿಟ್ಟಿನಲ್ಲಿ ಈ ಆಂದೋಲನ ಮಹತ್ವದ ಹೆಜ್ಜೆಯಾಗಿದೆ ಎಂದು ಅವರು ಹೇಳಿದರು.



