
ತುಮಕೂರು: ಜಮೀನನ ಸರ್ವೆ ನೆಪದಲ್ಲಿ ಹಾಲಿ ಮಾಲೀಕರಿಗೆ ಯಾವುದೇ ನೋಟಿಷ್ ನೀಡದೆ ದಲಿತರ ಒಡೆತನದಲ್ಲಿರುವ ಭೂಮಿಗೆ ಅತಿಕ್ರಮ ಪ್ರವೇಶ ಮಾಡಿ, ಭೂಮಿಯಲ್ಲಿ ಆಳವಡಿಸಿದ್ದ ಸಿಸಿ ಟಿವಿ ಕ್ಯಾಮಾರ ಬಿಚ್ಚಿರುವ ತಿಪಟೂರು ಉಪವಿಭಾಗಾಧಿಕಾರಿಗಳು ಮತ್ತು ತುರುವೇಕೆರೆ ತಹಸೀಲ್ದಾರ್ ಮತ್ತು ತುರುವೇಕೆರೆ ತಾಲೂಕಿನ ಭೂಮಾಪಕ ಸಹಾಯಕ ನಿರ್ದೇಶಕರು ಮತ್ತು ತುರುವೇಕೆರೆ ತಾಲ್ಲೂಕು, ಮಾಯಸಂದ್ರ ವೃತ್ತದ ವಿಎಓ ಸತೀಶ್ ಅವರ ವಿರುದ್ದ ತನಿಖೆ ನಡೆಸಿ,ಕ
ಕಾನೂನು ಕ್ರಮ ಜರುಗಿಸಬೇಕೆಂದು ತುಮಕೂರು ಜಿಲ್ಲಾ ದಲಿತ ಸಂಘಟನೆಗಳ ಒಕ್ಕೂಟದ ಹೆಚ್.ಬಿ.ರಾಜೇಶ್ ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಈ ಸಂಬ0ಧ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿರುವ ಅವರು, ದಿನಾಂಕ :೦೩.೦೭.೨೦೨೬ ರಂದು ಬೆಳಗ್ಗೆ ೭.೦೦ ರಿಂದ ೮.೦೦ ಗಂಟೆ ಸಮಯದಲ್ಲಿ ತುರುವೇಕೆರೆ ತಾಲೂಕು, ಮಾಯಸಂದ್ರ ಹೋಬಳಿ, ಕಾಡಲ್‌ಗಿಡದಕಾವಲ್ ಗ್ರಾಮದ ಸ.ನಂ. ೭ ರಲ್ಲಿ ಮೇಲ್ಕಂಡ ಆಸ್ವಾಮಿಗಳು ಹಾಗೂ ಅಧಿಕಾರಿಗಳು ಜಮೀನಿನ ಮಾಲೀಕರಿಗೆ ನೋಟಿಷ್ ನೀಡದೆ,ಗಮನಕ್ಕೂ ತಾರದೆ,ಹೈಕೋರ್ಟಿಗೆ ವರದಿ ಸಲ್ಲಿಸಬೇಕು ಎಂಬ ನೆಪ ಮಾಡಿಕೊಂಡು,ಜಮೀನಿಗೆ ಸಂಬAಧಪಡದ ವ್ಯಕ್ತಿಯನ್ನು ನಿಲ್ಲಿಸಿ,ಫೋಟೋ ಮತ್ತು ವಿಡಿಯೋ ಮಾಡಿಕೊಂಡು ಹೋಗಿರುವುದಲ್ಲದೆ, ತಮ್ಮ ಅವ್ಯವಹಾರಕ್ಕೆ ಸಾಕ್ಷಿ ಸಿಗಬಾರದು ಎಂಬ ಕಾರಣಕ್ಕೆ ಜಮೀನಿನಲ್ಲಿ ಅಳವಡಿಸಿದ್ದ ಸಿಸಿ ಟಿ.ವಿ.ಕ್ಯಾಮರ ಸಹ ಬಿಚ್ಚಿಕೊಂಡು ಹೋಗಿದ್ದಾರೆ.
ಸದರಿ ಜಮೀನಿನ ವಿಚಾರವಾಗಿ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಹಾಗೂ ಇನ್ನಿತರ ನ್ಯಾಯಾಲಯಗಳಲ್ಲಿ ಪ್ರಕರಣಗಳ ವಿಚಾರಣೆ ಬಾಕಿ ಇದ್ದಾಗಲೂ, ತುರುವೇಕೆರೆ ತಾಲೂಕು ತಹಸೀಲ್ದಾರ್ ಹಾಗೂ ತುರುವೇಕೆರೆ ಭೂಮಾಪಕರಾದ ಸಹಾಯಕ ನಿರ್ದೇಶಕರ ರವರ ಸರ್ವೆಯರ್ ರಮೇಶ್, ಹಾಗೂ ತುರುವೇಕೆರೆ ತಾಲೂಕು, ಕಾಡಲ್‌ಗಿಡದಕಾವಲ್ ಗ್ರಾಮದ ಸೆಕ್ರೇಟರಿ ಸತೀಶ್ ರವರು ಸ.ನಂ. ೭ ರ ಜಮೀನಿಗೆ ಸಂಬAಧ ಪಡದ ಆನಂದ, ಗಂಗಾಧರ, ನರಸಿಂಹಮೂರ್ತಿ, ಸಾವಿತ್ರಮ್ಮ, ರಾಜಣ್ಣ.ಎಂ.ಎಲ್. ಗೋವಿಂದರಾಜು, ಲಕ್ಷ್ಮೀದೇವಮ್ಮ, ಶಿವಮ್ಮ, ಮಂಜಣ್ಣ, ಲಕ್ಷ್ಮೀ, ಲಕ್ಷ್ಮೀದೇವಮ್ಮ, ಹಾಗೂ ಮಾಯಸಂದ್ರ ಗ್ರಾಮದ ಅಕ್ಕಪಕ್ಕದವರನ್ನು ಎತ್ತಿಕಟ್ಟಿ, ಜಮೀನಿನಲ್ಲಿದ್ದ ಸಿಸಿ ಟಿವಿಯನ್ನು ತೆಗೆಯಲು ಪ್ರೇರೇಪಿಸಿ, ಜಮೀನಿನಲ್ಲಿದ್ದ ಸಿಸಿ ಟಿವಿಯನ್ನು ಬಿಚ್ಚಿ, ಕದ್ದುಕೊಂಡು ಹೋಗಿರುತ್ತಾರೆ. ದಲಿತರ ಜಮೀನಿಗೆ ಸಂಬAಧಪಟ್ಟಿಲ್ಲದವರನ್ನು ಜಮೀನಿನಲ್ಲಿ ನಿಲ್ಲಿಸಿ, ಪೋಟೋ ತೆಗೆಸಿ, ದಾಖಲಾತಿ ಮಾಡುತ್ತೇವೆಂದು ಪ್ರೇರೇಪಿಸಿ, ದಲಿತರನ್ನು ಒಕ್ಕಲ್ಲೆಬ್ಬಿಸುವ ಕೆಲಸ ಮಾಡುತ್ತಿರುತ್ತಾರೆ. ಇದು ಕಾನೂನು ರೀತಿಯಲ್ಲಿ ಅಪರಾಧವಾಗಿದ್ದು, ಜಿಲ್ಲಾಡಳಿತ ಮೇಲಿನ ಅಧಿಕಾರಿಗಳ ವಿರುದ್ದ ತನಿಖೆ ನಡೆಸಬೇಕೆಂಬುದು ತುಮಕುರು ಜಿಲ್ಲಾ ದಲಿತ ಸಂಘಟನೆಗಳ ಒಕ್ಕೂಟದ ಒತ್ತಾಯವಾಗಿದೆ.
ಈಗಾಗಲೇ ಈ ಭೂಮಿಯ ಮೇಲೆ ದಿನಾಂಕ ೦೬.೦೯.೨೦೨೫ ರಂದು ಸಂಜೆ ೪.೩೦ ರಿಂದ ೫.೩೦ ಸಮಯದಲ್ಲಿ ಈ ಮೇಲ್ಕಂಡ ಆಸ್ವಾಮಿಗಳು ಮೇಲ್ಕಂಡ ಅಧಿಕಾರಿಗಳ ಕುಮ್ಮಕ್ಕಿನಿಂದ ಹಾಗೂ ತುರುವೇಕೆರೆ ಸರ್ಕಲ್ ಇನ್‌ಪೆಕರ್ ರವರ ಮತ್ತು ಕುಣಿಗಲ್ ಪೊಲೀಸ್ ಡಿ.ವೈ.ಎಸ್ ರವರ ಸಪೋರ್ಟ್ನಿಂದ ವಿಚಾರಕ್ಕೆ ಸಂಬAಧಿಸಿದAತೆ, ದಿ:೨೨.೦೧.೨೦೨೬ ರಂದು ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಜಮೀನಿನಲ್ಲಿದ್ದ ೧೫೦ ಕ್ಕಿಂತ ಹೆಚ್ಚಿನ ಕಲ್ಲುಕಂಭಗಳನ್ನು ಹೊಡೆದುಹಾಕಿ ಜಾತಿ ನಿಂದನೆ ಮಾಡಿದ್ದು, ಈ ಎಸ್.ಸಿ/ಎಸ್.ಟಿ. ದೌರ್ಜನ್ಯ ಕಾಯಿದೆಯಡಿ ಕೇಸು ದಾಖಲಾಗಿರುತ್ತದೆ. ಆದಾದ ಮೇಲೆ ದಿ:೧೪.೦೬.೨೦೨೬ ರಂದು ಮತ್ತೆ ರಾತ್ರಿ ೧ ಗಂಟೆ ೧೦ ನಿಮಿಷ ೪೧ ಸೆಕೆಂಡ್‌ನಲ್ಲಿ ನಮ್ಮ ಜಮೀನಿನಲ್ಲಿದ್ದ ಸಿಸಿ ಟಿವಿಯನ್ನು ತೆಗೆದುಕೊಂಡು ಹೋಗಿರುತ್ತಾರೆ. ಈ ವಿಚಾರಕ್ಕೆ ಸಂಬAಧಿಸಿದAತೆ, ದಿ: ೨೧.೦೬.೨೦೨೬ ರಂದು ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಎಫ್.ಐ.ಆರ್ ದಾಖಲಾಗಿರುತ್ತದೆ.
ಸದರಿ ಭೂಮಿಯ ಮೇಲ್ಜಾತಿಯ ಕೆಲವರು ಕಣ್ಣಿಟ್ಟಿದ್ದು, ಇನ್ನಿಲ್ಲದ ತೊಂದರೆ ನೀಡುತ್ತಿದ್ದಾರೆ. ಕಾನೂನಿನ ರೀತಿ ಭೂಮಿಯ ಸ್ವಾಧೀನದಲ್ಲಿದ್ದರೂ ಸಹ ಭೂಮಿಗೆ ಅತಿಕ್ರಮ ಪ್ರವೇಶ ಮಾಡಿ, ಕಲ್ಲು ಕಂಬ ಮುರಿದು, ಸಿಸಿ ಟಿವಿ ಕಿತ್ತುಕೊಂಡು ದೌರ್ಜನ್ಯ ಎಸಗಿದ್ದಾರೆ. ಈ ಎಲ್ಲಾ ವಿಚಾರಗಳು ಹಿರಿಯ ಅಧಿಕಾರಿಗಳ ಗಮನದಲ್ಲಿದೆ. ಹಾಗಿದ್ದೂ ಮತ್ತೊಮ್ಮೆ ಅತಿಕ್ರಮ ಪ್ರವೇಶ ಮಾಡಿ ಸಿಸಿಟಿವಿ ಕಿತ್ತು,ಸರ್ವೆ ಮಾಡಿರುವುದು ದಲಿತರನ್ನು ಭೂಮಿಯಿಂದ ಒಕ್ಕಲೆಬ್ಬಿಸಲು ಹೂಡಿದ ತಂತ್ರವಾಗಿದೆ.ಹಾಗಾಗಿ ಜಿಲ್ಲಾಧಿಕಾರಿಗಳು ಸದರಿ ಅಧಿಕಾರಿಗಳ ವಿರುದ್ದ ತನಿಖೆ ನಡೆಸಿ, ಕಾನೂನು ಕ್ರಮ ಜರುಗಿಸಬೇಕೆಂದು ತುಮಕೂರು ಜಿಲ್ಲಾ ದಲಿತ ಸಂಘಟನೆಗಳ ಒಕ್ಕೂಟದ ಹೆಚ್.ಬಿ.ರಾಜೇಶ್ ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ವೇಳೆ ತುಮಕೂರು ಜಿಲ್ಲಾ ದಲಿತ ಸಂಘಟನೆಗಳ ಒಕ್ಕೂಟದ ಗೌರವಾಧ್ಯಕ್ಷ ಟಿ.ಆರ್.ಗುರುಪ್ರಸಾದ್, ಪ್ರಧಾನ ಕಾರ್ಯದರ್ಶಿ ಜಿ.ಆರ್.ಗಿರೀಶ್,ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಗೋಪಾಲ್.ಸಿ., ಮುಖಂಡರಾದ ಗೂಳೂರು ರಾಜಣ್ಣ, ಅಂಬೇಡ್ಕರ್ ಸೇನೆ ಮಹಿಳಾ ಜಿಲ್ಲಾಧ್ಯಕ್ಷರಾದ ಸುಮಾ,ದಲಿತ ಮಹಿಳಾ ಘಟಕದ ಅಧ್ಯಕ್ಷರಾದ ಶೋಭಾ, ಮುಖಂಡರಾದ ಶಿವಲಿಂಗಯ್ಯ,ತುರುವೇಕೆರೆ ದಲಿತ ಮುಖಂಡರಾದ ಮೂರ್ತಪ್ಪ, ತಿಪಟೂರು ಮುಖಂಡರಾದ ಚನ್ನಕೇಶವಯ್ಯ ಮತ್ತಿತರರು ಪಾಲ್ಗೊಂಡಿದ್ದರು.


