ಕೊರಟಗೆರೆ: ಕಾಲಭೈರೆವೇಶ್ವರಸ್ವಾಮಿಯನ್ನು ಶ್ರದ್ದಾಭಕ್ತಿ ಹಾಗೂ ನಿಷ್ಠೆಯಿಂದ ಪೂಜಿಸಿದರೆ ಕಾಲಭೈರೇಶ್ವರ ಸ್ವಾಮಿ ಯಾವುದೊರೊಪದಲ್ಲಿ ಬಂದು ಭಕ್ತರ ಕಷ್ಟ ನಿವಾರಣೆ ಮಾಡುವುದರೊಂದಿಗೆ ಇಷ್ಠಾರ್ಥ ನೆರೆವೇರುವುದು ಎಂದು ಶ್ರೀ ಸ್ಪಟಿಕಪುರಿ ಮಹಾ ಸಂಸ್ಥಾನ ಶ್ರೀ ಗುರುಗುಂಡ ಬ್ರಹ್ಮೇಶ್ವರಸ್ವಾಮಿ ಮಠದ ಪೀಠಾಧ್ಯಕ್ಷ ಪರಮಪೂಜ್ಯ ಶ್ರೀ ನಂಜಾವಧೂತ ಮಹಾಸ್ವಾಮೀಜಿ ಗಳು ತಿಳಿಸಿದರು.
ಅವರು ಕೊರಟಗೆರೆ ತಾಲೂಕಿನ ಕೊಳಾಲ ಹೋಬಳಿಯ ಹುಲವಂಗಲ ಬಳಿಯ ಜೆ.ಕೆ.ಪಾಳ್ಯ ಗ್ರಾಮದಲ್ಲಿ ಶ್ರೀ ಕಾಲಬೈರವೇಶ್ವರಸ್ವಾಮಿ ದೇವಾಲಯ ಸೇವಾ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ೭೦ನೇ ವರ್ಷದ ಶ್ರೀ ಕಾಲಬೈರವಾಷ್ಟಮಿ ಪೂಜಾ ಕಾರ್ಯಕ್ರಮದ ದಿವ್ಯ ಸಾನಿದ್ಯ ವಹಿಸಿ ಆಶೀರ್ವಚನ ನೀಡಿ ಕಾಲಭೈರವೇಶ್ವರ ದೇವಾಲಯ ಇರುವ ಕಡೆ ಭಕ್ತರು ನಿಷ್ಠೆಯಿಂದ ಪೂಜೆಸಿದರೆರ ಆ ಭಾಗದ ಸುತ್ತಮುತ್ತಲ ಊರುಗಳನ್ನು ರಕ್ಷಣೆ ಮಾಡುವುದರೊಂದಿಗೆ ಭಕ್ತರ ನೋವು ನಲಿವುಗಳ ನಿವಾರಣೆ ಮಾಡಿ ಇಷ್ಠಾರ್ಥಗಳನ್ನು ಈಡೇರಿಸುತ್ತಾರೆ ಎಂದ ಶ್ರೀಗಳು ಕಾಲಭೈರೆವೇಶ್ವರ ಸ್ವಾಮಿ ಸನಾತನ ಕಲಾದಿಂದಲೂ ಇತಿಹಾಸ ಪ್ರಸ್ತಿದ್ದ ದೇವಾಲಯವಾಗಿದ್ದು ರಾಜ್ಯ ಮತ್ತು ರಾಷ್ಟçದ ಪ್ರಬಲ ಸಮುದಾಯಗಳ ಆರಾದ್ಯ ದೈವವಾಗಿದ್ದು ಕಾಲಬೈರವೇಶ್ವರ ಸಮಾಜದಲ್ಲಿ ದುಷ್ಠರ ಸಂಹಾರಮಾಡಿ ಶಿಷ್ಠರನ್ನು ರಕ್ಷಿಸುವ ದೇವರಾಗಿರುವ ಸದರಿ ಗ್ರಾಮದಲ್ಲಿ ನೆಲೆಸಿರುವ ಕಾಲಭೈರವೇಶ್ವರ ಇತಿಹಾಸ ಪ್ರಸಿದ್ದು ಪುರಾತನ ದೇವಾಲಯವಾಗಿದ್ದು ದೇವಾಲಯದಲ್ಲಿ ನಿಷ್ಠೆ-ನಿಯಮದಿಂದ ಪೂಜಿಸಿದರೆ ಎಲ್ಲರನ್ನು ರಕ್ಷಿಸುತ್ತಾನೆ ಎಂದು ತಿಳಿಸಿದರು.
ಧಾರ್ಮಿಕ ಕಾರ್ಯಕ್ರಮದಲ್ಲಿ ಶ್ರೀ ಕಾಲಬೈರವೇಶ್ವರಸ್ವಾಮಿ ದೇವಾಲಯ ಸೇವಾ ಟ್ರಸ್ಟ್ನ ಎಲ್ಲಾ ಪಧಾದಿಕಾರಿಗಳು ಸ್ಥಳೀಯ ಗ್ರಾಮಸ್ಥರು ಹಾಗೂ ಭಕ್ತವೃಂದ ಹಾಜರಿದ್ದರು.

(Visited 1 times, 1 visits today)