
ತುರುವೇಕೆರೆ: ಜಿಲ್ಲಾಡಳಿತ ಅಗತ್ಯ ಕ್ರಮವಹಿಸಿ ತಾಲೂಕಿನಲ್ಲಿನ ಚಿರತೆ ಹಾವಳಿಯನ್ನು ತಡೆಗಟ್ಟಬೇಕು ಎಂದು ಮಾಜಿ ಶಾಸಕ ಮಸಾಲಜಯರಾಮ್ ತಿಳಿಸಿದರು.
ತಾಲೂಕಿನ ಅರೇಮಲ್ಲೇನಹಳ್ಳಿ ಗ್ರಾಮದಲ್ಲಿ ಚಿರತೆ ದಾಳಿಗೆ ಬಲಿಯಾಗಿದ್ದ ರೈತ ಮಹಿಳೆ ಸುಜಾತ ಕುಟುಂಬಕ್ಕೆ ೫೦ ಸಾವಿರ ನೆರವು ನೀಡಿ ಸಾಂತ್ವನ ಹೇಳಿ ಮಾತನಾಡಿದ ಅವರು ತಾಲೂಕಿನಲ್ಲಿ ಚಿರತೆ ಹಾವಳಿ ಹೆಚ್ಚಾಗಿದೆ. ರೈತರು ತಮ್ಮ ತೋಟದ ಕೃಷಿ ಕೆಲಸಗಳು ಮಾಡಲು, ತಮ್ಮ ದನ ಹಸು ಮೇಹಿಸಲು ತೋಟ ಹೊಲಗಳಿಗೆ ತೆರಳಬೇಕಾಗಿತ್ತದೆ. ಅರಣ್ಯ ಇಲಾಖೆ ಚಿರತೆ ಹಿಡಿಯಲು ತುರ್ತು ಕ್ರಮ ಕೈಗೊಳ್ಳಬೇಕು. ಮಹಿಳೆ ಮೇಲೆ ದಾಳಿ ಮಾಡಿದ ಸ್ಥಳದ ಅಸು ಪಾಸಿನಲ್ಲಿ ಅರಣ್ಯ ಇಲಾಖೆ ೨ ಚಿರತೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಚಿರತೆ ದಾಳಿಯಿಂದ ಸಾವು ಹಾಗುವಂತಹ ದುರ್ಘಟನೆಗಳು ಮತ್ತೆ ತಾಲೂಕಿನಲ್ಲಿ ಮರುಕಳಿಸಬಾರದು ಎಂದು ಎಚ್ಚರಿಸಿ ಹೆಚ್ಚು ಚಿರತೆ ಹಾವಳಿ ಇರುವ ಕಡೆಗಳಲ್ಲಿ ಬೋನ್ ಗಳನ್ನು ಇಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಕೆಂಪೇಗೌಡ, ಜಯರಾಂ, ರವೀಗೌಡ, ರತೀಶ್, ತಮ್ಮಣ್ಣಗೌಡ, ಮಂಜುನಾಥ್, ಶ್ರೀಧರ್, ವಿ.ಬಿ.ಸುರೇಶ್, ಚಿದಾನಂದ್, ಸೋಮಶೇಖರ್, ಚಲುವೇಗೌಡ ಇದ್ದರು.



