
ತುರುವೇಕೆರೆ: ತಾಲೂಕಿನ ಅರೇಮಲ್ಲೇನಹಳ್ಳಿ ಗ್ರಾಮದಲ್ಲಿ ಚಿರತೆಗಳ ಕಾಟ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಕೈಗೊಂಡ ಕಾರ್ಯಾಚರಣೆ ಯಶಸ್ವಿಯಾಗಿದ್ದು, ಎರಡನೇ ಚಿರತೆಯನ್ನು ಸೆರೆಹಿಡಿಯುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಸೆರೆಸಿಕ್ಕ ಚಿರತೆ ಸುಮಾರು ಐದು ವರ್ಷದ ಹೆಣ್ಣು ಚಿರತೆ ಆಗಿದ್ದು, ಇದರಿಂದಾಗಿ ಕೇವಲ ಎರಡು ದಿನಗಳಲ್ಲಿ ಎರಡು ಚಿರತೆಗಳು ಸೆರೆಸಿಕ್ಕಂ ತಾಗಿದೆ. ಈಗಾಗಲೇ ಸೆರೆಹಿಡಿದಿರುವ ಎರಡೂ ಚಿರತೆ ಗಳನ್ನು ಹಿರಿಯ ಅಧಿಕಾರಿಗಳ ಸೂಚನೆಯ ಮೇರೆಗೆ ಸುರಕ್ಷಿತವಾಗಿ ಕಾಡು ಪ್ರದೇಶಕ್ಕೆ ಬಿಡ ಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇತ್ತೀಚೆಗೆ ಅರೇಮಲ್ಲೇನಹಳ್ಳಿ ಗ್ರಾಮದಲ್ಲಿ ದನ ಮೇಯಿಸಲು ತೆರಳಿದ್ದ ಸುಜಾತ ಎಂಬ ಮಹಿಳೆಯ ಮೇಲೆ ಎರಗಿದ ಚಿರತೆ ಕೊಂದು ಹಾಕಿತ್ತು. ಇದರಿಂದ ಎಚ್ಚೆತ್ತ ಅರಣ್ಯ ಇಲಾಖೆ ಕಾರ್ಯಚರಣೆ ನಡೆಸಿದೆ.
(Visited 1 times, 1 visits today)





