
ತುಮಕೂರು: ಸಿರಿಧಾನ್ಯಗಳು ಪೋಷಕಾಂ ಧಗಳ ಸಂಪತ್ತಾಗಿದ್ದು, ಮಧುಮೇಹದಂತಹ ರೋಗಗ ಳಿಗೆ ಮದ್ದಿನಂತೆ ಕೆಲಸ ಮಾಡುತ್ತವೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಲಕ್ಷ್ಮಣ್ ಕಲ್ಲಣ್ಣನವರ್ ಅಭಿಪ್ರಾಯಪಟ್ಟರು.
ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾ ಯತ್, ಕೃಷಿ ಇಲಾಖೆ, ವತಿಯಿಂದ ಸಿರಿಧಾನ್ಯ ಉತ್ಪನ್ನ ಗಳ ಕುರಿತು ಗ್ರಾಹಕರಿಗೆ ಜಾಗೃತಿ ಮೂಡಿಸಲು ಸಿರಿಧಾನ್ಯ ಜಾಥಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನವಣೆ, ಸಾಮೆ, ಕೊರಲೆ ಖಾದ್ಯಗಳು ಮಧುಮೇಹ ರೋಗಿಗಳಿಗೆ ಅಮೃತ ಸಮಾನ ವಾಗಿದ್ದು, ರಕ್ತದಲ್ಲಿನ ಗ್ಲುಕೋಸ್ ನಿಯಂತ್ರಣಕ್ಕೆ ಸಹಕಾರಿಯಾಗುತ್ತವೆ ಎಂದರಲ್ಲದೆ, ರಾಗಿ ಹೆಚ್ಚಿನ ಕ್ಯಾಲ್ಷಿಯಂ ಹಾಗೂ ರಂಜಕಾ0ಶ ಹೊಂದಿರುವುದರಿ0ದ ಎಲುಬು ಮತ್ತು ಹಲ್ಲುಗಳನ್ನು ಗಟ್ಟಿಗೊಳಿಸುವುದರೊಂದಿಗೆ ಮಕ್ಕಳ ಮತ್ತು ಮಹಿಳೆಯರ ಆರೋಗ್ಯಕ್ಕೆ ವಿಶೇಷವಾಗಿ ಪ್ರಯೋಜನಕರವಾಗುತ್ತದೆ ಎಂದು ಹೇಳಿದರು.
ಸಜ್ಜೆ ಮತ್ತು ಸಾಮೆ ಹೆಚ್ಚಿನ ಕಬ್ಬಿಣದಂಶ ಹೊಂದಿರುವುದರಿ0ದ ರಕ್ತಹೀನತೆ ತಡೆಗಟ್ಟಲು ಸಹಕಾರಿಯಾಗಿ. ಮೆಗ್ನೀಶಿಯಂ, ಬಿ-ಸಂಪುಟದ ವಿಟಮಿನ್‌ಗಳು ಹಾಗೂ ಕೆಲವೆಡೆ ಪ್ರೋಟೀನ್ ಅಂಶ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ರೋಗನಿರೋಧಕ ಸಾಮರ್ಥ್ಯವನ್ನು ಹೆಚ್ಚಿಸಲು ಸಹಾಯಮಾಡುತ್ತವೆ. ಸಿರಿಧಾನ್ಯಗಳ ಕೃಷಿಗೆ ಹೆಚ್ಚಿನ ನೀರಿನ ಅಗತ್ಯವಿಲ್ಲ. ಒಣಬೇಸಾಯದಲ್ಲಿ ಬೆಳೆಯಲು ಸಾಧ್ಯವಾಗುವುದರಿಂದ ಕೃಷಿಕರಿಗೆ ಆರ್ಥಿಕ ಬಲ ಒದಗಿಸುವುದರ ಜೊತೆಗೆ ಪರಿಸರ ಸಂರಕ್ಷಣೆಗೆ ಸಹಕಾರಿಯಾಗುತ್ತದೆ ಎಂದರು. ದಿನನಿತ್ಯದ ಆಹಾರದಲ್ಲಿ ಸಿರಿಧಾನ್ಯ ಗಳ ಸೇರ್ಪಡೆ ಆರೋಗ್ಯಕರ ಸಮಾಜ ನಿರ್ಮಾ ಣಕ್ಕೆ ಮಾರ್ಗದರ್ಶಿಯಾಗುತ್ತದೆ ಎಂದು ಅವರು ಹೇಳಿದರು.
ಈ ಸಂಧರ್ಭದಲ್ಲಿ ಸರ್ಕಾರಿ ನೌಕರರ ಸಂಘದ ರಾಜ್ಯ ಉಪಧ್ಯಕ್ಷ ನರಸಿಂಹರಾಜು, ಸೇರಿದಂತೆ ಇಲಾಖೆಯ ಅಧಿಕಾರಿಗಳು, ವಿದ್ಯಾರ್ಥಿಗಳು, ವೈದ್ಯಾಧಿಕಾರಿಗಳು, ಸ್ವಯಂಸೇ ವಕರು ಸಭೆಯಲ್ಲಿ ಉಪಸ್ಥಿತರಿದ್ದರು.



