
ಮಧುಗಿರಿ: ಸ್ನೇಹ ಸಮ್ಮಿಲನ ಸಮಾರಂಭಗಳು ನಮಗೆ ಶಾಲೆಯ ಬಗ್ಗೆ ಗೌರವ ಹೆಚ್ಚುವಂತೆ ಮಾಡುತ್ತದೆ. ಕಲಿತ ಶಾಲೆ ಕಲಿಸಿದ ಗುರುಗಳನ್ನು ಎಂದಿಗೂ ಮರೆಯಬಾರದು ಎಂದು ನಿವೃತ್ತ ಮುಖ್ಯೋಪಾಧ್ಯಾಯ ಪಿ. ರಾಮಕೃಷ್ಣಪ್ಪ ಅಭಿಪ್ರಾಯ ಪಟ್ಟರು.
ತಾಲೂಕಿನ ದೊಡ್ಡೇರಿ ಹೋಬಳಿ ದಬ್ಬೇಗಟ್ಟ ಸರ್ಕಾರಿ ಫ್ರೌಢಶಾ ಲೆಯಲ್ಲಿ ೨೦೦೨- ೦೩ ನೇ ಸಾಲಿನ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಸ್ನೇಹಸಮ್ಮಿಲನ ಮತ್ತು ಗುರುವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ ೧೯೯೩ ರಲ್ಲಿ ಈ ಶಾಲೆಯು ಆರಂಭವಾಯಿತು, ಕೊಠಡಿಗಳ ಕೊರತೆಯಿಂದ ಗುಡಿಸಿಲಿನಲ್ಲಿ ಪಾಠಮಾಡುತ್ತಿದ್ದೆವು. ಶಾಲೆ ಆರಂಭವಾದಾಗಿನಿ0ದ ೨೧ ವರ್ಷಗಳ ಕಾಲ ಒಂದೇ ಶಾಲೆಯಲ್ಲಿ ಸೇವೆಸಲ್ಲಿಸಿದ್ದೇನೆ. ಈ ಶಾಲೆಯ ನೆನಪುಗಳು ಎಂದಿಗೂ ನನ್ನಿಂದ ಅಳಿಸಲಾಗುವುದಿಲ್ಲ,
ಅಂದಿನ ಕಾಲದಲ್ಲಿ ನಮ್ಮ ಶಾಲೆಗೆ ಪ್ರವೇಶಾತಿ ಪಡೆಯಲು ಪೈಪೋಟಿ ಇತ್ತು, ಕಾರಣ ಇಲ್ಲಿನ ಎಲ್ಲಾ ಸಿಬ್ಬಂದಿಗಳು ಪೈಪೋಟಿಯಿಂದ ಪಾಠ ಮಾಡುತ್ತಿದ್ದರು. ಮುಂದೆಯೂ ದಬ್ಬೇಗಟ್ಟ ಶಾಲೆಯ ಒಳ್ಳೆಯ ಹೆಸರು ಉಳಿಯಬೇಕು ಎಂದರು.
ಗಣಿತ ಶಿಕ್ಷಕ ಗುರುಪ್ರಸಾದ್ ಮಾತನಾಡಿ ನನ್ನ ವೃತ್ತಿ ಜೀವನದಲ್ಲೊಂದು ನನಗೆ ಹೆಗ್ಗುರುತು ನೀಡಿದ ಶಾಲೆ ಎಂದರೆ ತಪ್ಪಾಗಲಾರದು. ಶಾಲೆಯ ಒಳ್ಳೆಯ ವಾತಾವರಣ ನಮಗೆ ಪ್ರೇರಣೆ ನೀಡಿತು. ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.
ಕನ್ನಡ ಶಿಕ್ಷಕಿ ಕವಯಿತ್ರಿ ಪಿ.ಎಸ್.ನಾಗರತ್ನಮ್ಮ ಮಾತನಾಡಿ ಈ ಶಾಲೆಯಲ್ಲಿ ನಾವು ಒಂದು ರೀತಿ ಕೂಡುಕುಟುಂಬದ0ತೆ ಇದ್ದೆವು. ಸಹಶಿಕ್ಷಕಿಯರೊಂದಿಗೆ ಎಂದಿಗೂ ಜಗಳವಾಡದೆ ಕಲಿಕೆಯ ವಿಷಯದಲ್ಲಿ ಪೈಪೋಟಿಗಿಳಿಯುತ್ತಿದ್ದೆವು ಎಂದು ಸಹ ಶಿಕ್ಷಕಿಯರಾದ ದಿವಂಗತ ಜೆ.ಸಿ.ಭುವನೇಶ್ವರಿ ಮತ್ತು ಡಿ.ಎಂ.ನಳಿನಾಕ್ಷಿಯವರನ್ನು ನೆನೆಸಿಕೊಂಡು ಭಾವುಕರಾದರು.
ಕಾರ್ಯಕ್ರಮದಲ್ಲಿ ನಿವೃತ್ತ ದೈಹಿಕ ಶಿಕ್ಷಕ ಟಿ.ವಿಜಯ್ ಕುಮಾರ್, ಡಿ.ರಂಗನಾಥ್,ಶಿಕ್ಷಕಿಯರಾದ ಎನ್.ರೂಪ, ವಿ.ನಿರ್ಮಲ, ಗೋಪಾಲಕೃಷ್ಣ, ಜಯಲಕ್ಷ್ಮಿ, ನಿರಂಜನ್, ಹಾಗೂ ನಿಧನ ಹೊಂದಿದ ಶಿಕ್ಷಕರ ಕುಟುಂಬದವರಾದ ರೇಣು ಕಮ್ಮ ತಿಮ್ಮಯ್ಯ, ಗಂಗಮ್ಮ ನರಸರಾಜು , ಚಂದ್ರಣ್ಣ, ನಿವೃತ್ತ ಪ್ರಥಮ ದರ್ಜೆ ಸಹಾಯಕ ಸುಧಾಕರ್, ಗ್ರಾ.ಪಂ ಅಧ್ಯಕ್ಷ ರಂಗ ನಾಥ್,ಗ್ರಾ.ಪಂ ಸದಸ್ಯ ಶ್ರೀಧರ್, ಹಳೆಯ ವಿಧ್ಯಾರ್ಥಿ ಗಳಾದ ಕಾಮರಾಜು, ನಾಗೇಂದ್ರ, ಸಿಕಂದರ್, ಕಿರಣ್ ಕುಮಾರ್, ಪುನೀತ್ ಕುಮಾರ್, ಜಿ.ಹೆಚ್.ಮಾರುತಿ, ಡಿ. ರಂಗನಾಥ್ ಮಮತ ಹೆಚ್, ಸಣ್ಣಲಿಂಗಮ್ಮ, ಧರ್ಮವೀರ,ಸೇರಿದಂತೆ ೨೦೦೨-೦೩ ನೇ ಸಾಲಿನ ಎಲ್ಲಾ ವಿಧ್ಯಾರ್ಥಿಗಳು ಹಾಜರಿದ್ದರು.




