
ಪಾವಗಡ: ಕರ್ನಾಟಕ ರಾಜ್ಯ ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯ ರವರು ದೀರ್ಘಾವಧಿ ಮುಖ್ಯಮಂತ್ರಿಯಾಗಿ ಇಂದು ದಾಖಲೆ ಬರೆದ ಹಿನ್ನೆಲೆಯಲ್ಲಿ ತಾಲೂಕು ಬ್ಲಾಕ್ ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ಅಭಿಮಾನಿ ಬಳಗದ ವತಿಯಿಂದ ಕೇಕ್ ಕತ್ತರಿಸುವ ಮೂಲಕ ಸಂಭ್ರಮಾಚರಣೆಯನ್ನು ಮಾಡಲಾಯಿತು.
ಬ್ಲಾಕ್ ಕಾಂಗ್ರೆಸ್ ಕಛೇರಿಯಿಂದ ಇಂದಿರಾ ಗಾಂಧಿ ವೃತ್ತದವರೆಗೆ ತೆರಳಿ ಸಿದ್ದರಾಮಯ್ಯ ರವರ ಪರ ಘೋಷಣೆಗಳನ್ನು ಕೂಗಿ, ಪಟಾಕಿ ಸಿಡಿಸಿ ಕಾರ್ಯಕರ್ತರು ಸಂಭ್ರಮಿಸಿದರು,ಮಾಜಿ ಸಚಿವರಾದ ವೆಂಕಟರಮಣಪ್ಪ ಕೇಕ್ ಕತ್ತರಿಸುವ ಮೂಲಕ ಸಿದ್ದರಾಮಯ್ಯ ರವರಿಗೆ ಅಭಿನಂದನೆಗಳನ್ನು ತಿಳಿಸಿದರು.
ನಂತರ ಕನಕ ವೃತ್ತದ ಬಳಿ ತೆರಳಿ ಕನಕ ವಿಗ್ರಹಕ್ಕೆ ಮಾಲಾರ್ಪಣೆ ಮಾಡಿದರು. ತದನಂ ತರ ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು ಸಂವಿಧಾನ ಶಿಲ್ಪಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷರು ಹಾಗೂ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುದೇಶ್ ಬಾಬು,ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಾಮಾಂಜಿನಪ್ಪ, ಕಾಳಿದಾಸ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಮೈಲಾರಪ್ಪ, ಮಹಿಳಾ ಘಟಕದ ಅಧ್ಯಕ್ಷರು ಹಾಗೂ ಪುರಸಭೆ ಮಾಜಿ ಅಧ್ಯಕ್ಷರಾದ ಸುಮಾ ಅನಿಲ್,ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷರಾದ ಶೇಷಗಿರಿ, ಗುತ್ತಿಗೆದಾರರಾದ ಆರ್ ಎ ಹನುಮಂತರಾಯಪ್ಪ,ಈರಾರೆಡ್ಡಿ, ತಾಲೂಕು.ಪಂಚಾಯಿತಿ ಮಾಜಿ ಉಪಾಧ್ಯಕ್ಷರಾದ ಐ.ಜಿ. ನಾಗ ರಾಜ್, ಬೊಮ್ಮತನಹಳ್ಳಿ ದೇವ ರಾಜ್, ವೇಲುರಾಜು,ಗುಮ್ಮಘಟ್ಟ ಶ್ರೀನಿವಾಸುಲು,ರಾಮಚಂದ್ರರೆಡ್ಡಿ, ಬಳಸಮುದ್ರ ಗೋವಿಂದಪ್ಪ,ನಿವೃತ್ತ ಶಿಕ್ಷಕ ನಾರಾಯಣಪ್ಪ, ಗುಟ್ಟಹಳ್ಳಿ ಅಂಜಿನಪ್ಪ, ನಂಜು0ಡ ಸ್ವಾಮಿ, ವಿಜಯ್ ಕುಮಾರ್, ಗ್ರಾಮ ಪಂಚಾ ಯಿತಿ ಸದಸ್ಯರುಗಳಾದ ಕೃಷ್ಣಮೂರ್ತಿ, ಲಕ್ಷ್ಮಿನಾರಾಯಣ, ವೆಂಕಟೇಶಮೂರ್ತಿ, ಮುಖಂಡರುಗಳಾದ ನಾಗಭೂಷಣ, ಪ್ರಸನ್ನ, ನಾಗರಾಜ್, ಈಶ್ವರ್, ಉಣ್ಣೆ ಮತ್ತು ಕೈಮಗ್ಗ ನೇಕಾರರ ಮಹಾಮಂಡಳದ ನಿರ್ದೇಶಕರಾದ ರಂಜಿತ್, ಉಣ್ಣೆ ಮತ್ತು ರೇಷ್ಮೆ ಉತ್ಪಾದನಾ ಸಹಕಾರ ಸಂಘದ ನಿರ್ದೇಶಕರಾದ ಸದಕುಮಾರ್, ಪಾವಗಡ ಶೇಷಗಿರಿ, ಐ.ಜಿ.ಜಗನ್ನಾಥ್, ವಕೀಲರಾದ ಹನುಮಂತರಾಯಪ್ಪ, ರಾಮಾಂಜಿನಪ್ಪ,ವೀರಭದ್ರ,ಪ್ರಕಾಶ್, ಹನುಮೇಶ್, ಪಾಪಣ್ಣ, ತಿಪ್ಪೇಸ್ವಾಮಿ,ಪಿ.ಎಲ್.ಮಣಿ, ಮೂರ್ತಿ,ಮಂಜು ಸೇರಿದಂತೆ ಹಲವು ಪ್ರಮುಖರು ಹಾಜರಿದ್ದರು





