ಕೊರಟಗೆರೆ: ತಾಲೂಕಿನ ಸಿದ್ದರ ಬೆಟ್ಟದ ಅರಣ್ಯ ಇಲಾಖೆ ನರ್ಸರಿ ತಿರುವಿನಲ್ಲಿ ಭೀಕರ ಅಪಘಾತದಲ್ಲಿ ಪಟ್ಟಣದ ಅಂಬೇಡ್ಕರ್ ವಸತಿ ಶಾಲೆಯ ಕಾಲೇಜು ವಿದ್ಯಾರ್ಥಿಯೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯವಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ತಾಲೂಕಿನ ಸಿದ್ದರ ಬೆಟ್ಟದಲ್ಲಿರುವ ಹಳೆಯ ಸ್ನೇಹಿತನನ್ನ ಮಾತನಾಡಿಸಿಕೊಂಡು ಬರುವಾಗ ಹೋಗಿ ವಾಪಾಸ್ ಬರುವಾಗ ನರ್ಸರಿ ಬಳಿ ಇರುವ ತಿರುವಿನಲ್ಲಿ ವಿದ್ಯಾರ್ಥಿಗಳು ದ್ವಿಚಕ್ರ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರದ ತುಂಡಿಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದ್ದು ಅಪಘಾತದಲ್ಲಿ ಚೇತನ್ (೧೭) ಸ್ಥಳದಲ್ಲೇ ಮೃತಪಟ್ಟಿದ್ದು, ಅಮರೀಶ್ (೧೭) ಹಾಗೂ ಯಶ್ವಂತ್ (೧೭) ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಅದೇ ಮಾರ್ಗದಲ್ಲಿ ಬರುತ್ತಿದ್ದ ತೋವಿನಕೆರೆ ೧೦೮ ಆಂಬುಲೆನ್ಸ್ ಸಿಬ್ಬಂದಿ ಉಮಾದೇವಿ ಹಾಗೂ ಶಿವಕುಮಾರ್ ಅಪಘಾತವನ್ನು ಕಂಡು ಗಾಯಾಳುಗಳನ್ನು ತಕ್ಷಣ ಕೊರಟಗೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಪ್ರಥಮ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗೆ ತುಮಕೂರು ಜಿಲ್ಲಾ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಸಂಬAಧ ಕೊರಟಗೆರೆ ಪೊಲೀಸ್ ಠಾಣೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ.
(Visited 1 times, 1 visits today)



