
ತುಮಕೂರು: ಕುಟುಂಬದಲ್ಲಿ,ಕೆಲಸಮಾಡುವ ಸ್ಥಳಗಳಲ್ಲಿ ಹೆಣ್ಣಿನ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿರುವುದು ದುರದೃಷ್ಟಕರ,ದೆಹಲಿಯಲ್ಲಿ ನಡೆದ ನಿರ್ಭಯ ಅತ್ಯಾಚಾರ,ಕೊಲೆ ನೋಡಿದರೆ ದೇಶವೇ ನಿಬ್ಬೆರಗಾಗಿತ್ತು,ಹೆಣ್ಣಿಗೆ ಬಲತುಂಬುವ ನಿರ್ಭಯ ಮಹಿಳಾ ಜಾಗೃತಿ ವೇದಿಕೆಯ ಕಾರ್ಯ ಎಲ್ಲರೂ ಮೆಚ್ಚುವಂತಹದ್ದು,ಹೆಣ್ಣಿಗೆ ರಕ್ಷಣೆ ನೀಡಬೇಕು ಜೊತೆಗೆ ಶಾಲಾಹೆಣ್ಣುಮಕ್ಕಳಿಗೆ ಸ್ವಯಂರಕ್ಷಣೆ ತೆಗೆದುಕೊಳ್ಳುವ ಕಾರ್ಯಕ್ರಮವನ್ನು ರೂಪಿಸಿ,ಹೆಣ್ಣು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು ದೇಶದಲ್ಲಿರುವ ಹೆಂಗಸರು ಇಂದು ಚಿಕ್ಕಕೆಲಸದಿಂದ ಹಿಡಿದು ಚಂದ್ರಲೋಕದ ತನಕ ಹೋಗಿಬಂದಿದ್ದಾರೆ ಎಂದರೆ ಹೆಣ್ಣಿನ ಸಾಧನೆ ಎಂತಹುದ್ದು ಎಂದು ಊಹಿಸಿ,ಹೆಣ್ಣು ಮಾಡುವ ಎಲ್ಲ ಉತ್ತಮ ಕೆಲಸಗಳಿಗೆ ಎಲ್ಲರೂ ಸಹಕಾರ ನೀಡಿದರೆ ದೇಶದಲ್ಲಿ ಹೆಣ್ಣುಮಕ್ಕಳಿಗೆ ಸಮಸ್ಯೆಯೇ ಬರುವುದಿಲ್ಲ ಎಂದು ತುಮಕೂರು ಮಹಾನಗರ ಪಾಲಿಕೆ(ಆಡಳಿತ) ಉಪ ಆಯುಕ್ತರಾದ ಸುಪ್ರಿಯಬಣಗಾರ್.ಬಿ ರವರು ಹೇಳಿದರು.
ನಿರ್ಭಯ ಮಹಿಳಾ ಜಾಗೃತಿ ವೇದಿಕೆ(ರಿ)ಎಸ್.ಎಸ್.ಪುರಂನ ಶಿವಲಾಸ್ಯಸಮುದಾಯ ಭವನದಲ್ಲಿ ಆಯೋಜಿಸಿದ್ದ ವಿಶ್ವಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಮಹಿಳೆಯರನ್ನು ಕುರಿತು ಮಾತನಾಡಿದರು.
ಮುಖ್ಯ ಭಾಷಣಕಾರರಾಗಿ ಆಗಮಿಸಿ ಮಾv ನಾಡಿದ ಶ್ರೀಮತಿ ಸಿ.ಎಲ್.ಸುನಂದಮ್ಮನವರು ತುಮಕೂರು ಜಿಲ್ಲೆಯಲ್ಲಿ ಮಹಿಳೆಯರು ಸರ್ಕಾರಿ ಹುದ್ದೆಯ ಉತ್ತಮ ಸ್ಥಾನದಲ್ಲಿದ್ದಾರೆ ಜಿಲ್ಲಾಧಿಕಾರಿ,ಉಪವಿಭಾಗಾಧಿಕಾರಿ,ಪಾಲಿಕೆ ಆಯುಕ್ತರು,ಉಪ ಆಯುಕ್ತರು,ಭೂದಾಖಲೆಗಳ ಉಪನಿರ್ದೇಶಕರು,ತಹಸೀಲ್ದಾರ್,ಜಿಲ್ಲಾ ಪಂಚಾಯತ್ ಸಿಇಓ,ಹೀಗೆ ಹತ್ತಾರು ಉತ್ತಮ ಹುದ್ದೆಗಳಲ್ಲಿ ಮಹಿಳೆಯರು ಇದ್ದು ಬಡವರ ಕಷ್ಟಗಳನ್ನು ನೀಗಿಸುವ ನೊಗ ಹೊತ್ತಿರುವುದು ಜಿಲ್ಲೆಗೆ ಒಂದು ಹೆಮ್ಮೆ,ಹೆಣ್ಣು ಮನಸ್ಸು ಮಾಡಿದರೆ ರಾಜ್ಯವನ್ನು ಸಹ ನಡೆಸಬಲ್ಲಳು,ಪೋಷಕರು ಹೆಣ್ಣುಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ,ಹೆಣ್ಣು ಸರ್ಕಾರಿ ಹುದ್ದೆಯಲ್ಲದೆ ಸಹಕಾರ,ಸ್ವಯಂಉದ್ಯೋಗ,ಕೈಗಾರಿಕೆ ಹೀಗೆ ಹಲವು ಕ್ಷೇತ್ರಗಳಲ್ಲಿ ಉತ್ತಮ ಕೆಲಸಗಳನ್ನುಮಾಡಿ ತನ್ನ ಛಾಪನ್ನು ಮೂಡಿಸಿದ್ದಾಳೆ,ಬಸವಣ್ಣನವರ ಕಾಲದಲ್ಲಿ ಇದ್ದ ಅನುಭವ ಮಂಟಪದಲ್ಲಿ ಹೆಣ್ಣಿಗೆ ಬಸವಣ್ಣನವರು ಉತ್ತಮ ಸ್ಥಾನವನ್ನು ನೀಡಿದ್ದರು,ಅಂದಿನಿ0ದ ಹೆಣ್ಣಿಗೆ ಉತ್ತಮ ಸ್ಥಾನಮಾನ ದೊರೆಯುತ್ತಾ ಬಂದು ಇಂದು ಹೆಣ್ಣು ರಾಜ್ಯ ರಾಷ್ಟçಮಟ್ಟದಲ್ಲಿ ಸೇವೆ ಸಲ್ಲಿಸುತ್ತಿರುವುದು ಎಲ್ಲ ಪೋಷಕರಿಗೂ ಹೆಮ್ಮೆ ಎಂದು ತಿಳಿಸಿದರು.
ವೇದಿಕೆಯಲ್ಲಿ ನಿರ್ಭಯ ಮಹಿಳಾ ಜಾಗೃತಿ ವೇದಿಕೆಯ ಅಧ್ಯಕ್ಷರಾದ ಗೀತಾನಾಗೇಶ್,ಶ್ರೀಮತಿ ಸುಗುಣದೇವಿ.ಸಿ.ಎನ್,ಲತಾನಾರಾಯಣ್,ಶೈಲಾವೆಂಕಟೇಶ್,ಶ್ರೀಮತಿ ನಂದಿನಿ.ಎನ್, ಮಂಗಳಜಯಪ್ರಕಾಶ್, ಅಂಬಿಕಾಮಹೇಶ್, ಜ್ಯೋತಿಆಚಾರ್ಯ, ವೇದಾವತಿ, ಭಾರತಿರವಿಕುಮಾರ್, ಶೈಲಾವೆಂಕಟೇಶ್, ಸವಿತ ಇತರರು ಉಪಸ್ಥಿತರಿದ್ದರು.



