
ತುಮಕೂರು: ಕಲೆಗಳಲ್ಲಿ ಸಂಗೀತಕ್ಕೆ ವಿಶೇಷ ಸ್ಥಾನವಿದೆ. ಸಂಗೀತವಿಲ್ಲದೆ ಜೀವನವೇ ಇಲ್ಲ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಹೇಳಿದರು.
ನಗರದ ಪ್ರೆಸ್ ಕ್ಲಬ್ ಆವರಣ ಆಲದ ಮರ ಪಾರ್ಕ್ ನಲ್ಲಿ ಸೋಮವಾರ ಸ್ವರಾಮೃತ ಲೋಗೋ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಪ್ರೆಸ್ ಕ್ಲಬ್, ಕರ್ನಾಟಕ ನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಸ್ವರಾಮೃತ ತಂಡ ಸ್ವರಾಮೃತ ಎಂಬ ವಿನೂತನ ಕಾರ್ಯಕ್ರಮ ಆಯೋಜಿಸಿರುವುದು ಅರ್ಥಪೂರ್ಣ ಎಂದರು.
ಸಾಮೂಹಿಕವಾಗಿ ತರಬೇತಿ ಕೊಟ್ಟು ಹಾಡಿಸುವರು. ಜೀವನ ಅಂದರೆ ಸಂಗೀತ. ಕಾರ್ಯಕ್ರಮ ಯಶಸ್ವಿಯಾಗಲಿ. ತಿಂಗಳಿಗೆ ೧-೨ ಕಾರ್ಯಕ್ರಮಗಳು ನಡೆಯಲಿ ಎಂದು ಆಶಿಸಿದರು.
ಸಂಗೀತ ಧ್ಯಾನ: ಜಿಲ್ಲಾಧಿಕಾರಿ ಶುಭಾಕಲ್ಯಾಣ್ ಮಾತನಾಡಿ ಸಂಗೀತ ಧ್ಯಾನ. ಒತ್ತಡ ನಿಯಂ ತ್ರಿಸುತ್ತದೆ. ಪ್ರತಿಯೊಂದು ಸಂಗೀತವೂ ತನ್ನ ದೇಯಾದ ಸೊಗಸು ಹೊಂದಿದೆ. ನಾನು ಎಲ್ಲಾ ಭಾಷೆಯ ಸಂಗೀತವನ್ನು ಕೇಳುತ್ತೇನೆ , ಆನಂದಿಸುತ್ತೇನೆ0ದರು.
ಸ0ಗೀತಕ್ಕೆ ಮಹತ್ವ: ಎಸ್ ಪಿ ಕೆ.ವಿ.ಅಶೋಕ್ ಮಾತನಾಡಿ, ತುಮಕೂರಲ್ಲಿ ಕ್ರೀಡೆ , ಸಂಸ್ಕೃತಿಗೆ ಆದ್ಯತೆಯಿದೆ. ಸಂಗೀತಕ್ಕೆ ಮಹತ್ವದ ಸ್ಥಾನವಿದೆ. ಕರ್ನಾಟಕ ಸಂಗೀತ ತನಗಿಷ್ಟ ಎಂದರು.
ಸಮೂಹ ಸಂಗೀತ: ಮಹಾನಗರ ಪಾಲಿಕೆ ಆಯುಕ್ತೆ ಶುಭಾ ಬಿ. ಮಾತನಾಡಿ, ಮನೆಯಲ್ಲಿ ಅಂತ್ಯಕ್ಷರಿ ಅಂತಹ ಸಮೂಹ ಸಂಗೀತ ನಡೆಸು ತ್ತೇವೆ. ಹೀಗೆ ಸಾರ್ವಜನಿಕವಾಗಿ ಸಾಮೂಹಿಕ ಹಾಡುಗಾರಿಕೆ ನೋಡಿರಲಿಲ್ಲ. ಸ್ವರಾಮೃತ ಚಂದದ ಪರಿಕಲ್ಪನೆ ಎಂದರು.
ಕಾರ್ಯಕ್ರಮದಲ್ಲಿ ಸ್ವರಾಮೃತ ಟೀಂ ಸಂಸ್ಥಾಪಕಿ ರೇಖಾ ಶಿವಕುಮಾರ್, ಕೆಯುಬ್ಲುಜೆ ಜಿಲ್ಲಾಧ್ಯಕ್ಷ ಎಲ್.ಯೋಗೀಶ್, ಪ್ರೆಸ್ ಕ್ಲಬ್ ಅಧ್ಯಕ್ಷ ಶಶಿಧರ್ ಎಸ್.ದೋಣಿಹಕ್ಲು ಇದ್ದರು.



