ಪಾವಗಡ: ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಹಾವು ಕಡಿತದ ಔಷಧಿ ಸೇರಿದಂತೆ ಯಾವುದೇ ತುರ್ತು ಚಿಕಿತ್ಸೆಯ ಔಷಧಿಗಳ ಕೊರತೆಯಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ವದಂತಿಗಳು ಸಂಪೂರ್ಣ ಸತ್ಯಕ್ಕೆ ದೂರವಾಗಿವೆ ಎಂದು ಆಡಳಿತ ವೈದ್ಯಾಧಿಕಾರಿ ಡಾ. ಗಣೇಶ್ ಬಾಬು ಸ್ಪಷ್ಟಪಡಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆಸ್ಪತ್ರೆಯಲ್ಲಿ ಔಷಧಿ ಕೊರತೆ ಇರಲಿಲ್ಲ ಎಂಬುದಕ್ಕೆ ದಾಖಲೆಗಳೇ ಸಾಕ್ಷಿ. ಸಾರ್ವಜನಿಕರು ರಾಜಕೀಯ ಅಥವಾ ವೈಯಕ್ತಿಕ ಲಾಭದ ಅಪಪ್ರಚಾರಕ್ಕೆ ಕಿವಿಗೊಡಬಾರದು. ಹಾವು ಕಡಿತದಿಂದ ಯುವಕ ಮೃತಪಟ್ಟ ಘಟನೆ ಮುಂದಿಟ್ಟುಕೊAಡು ಸಕಾಲಕ್ಕೆ ಔಷಧಿ ಸಿಗದೆ ಮೃತಪಟ್ಟಿದ್ದಾನೆ ಎಂದು ಮಾಡುತ್ತಿರುವ ಅಪಪ್ರಚಾರದಲ್ಲಿ ಸತ್ಯಾಂಶವಿಲ್ಲ ಎಂದು ಖಂಡಿಸಿದರು.
ರಾತ್ರಿ ಪಾಳಿಯಲ್ಲಿ ವೈದ್ಯರು ಇರುವುದಿಲ್ಲ ಎಂಬುದು ಸುಳ್ಳು. ತುರ್ತು ಸೇವೆಗೆ ೨೪ ಗಂಟೆಯೂ ವೈದ್ಯರು ಹಾಗೂ ಸಿಬ್ಬಂದಿ ಲಭ್ಯರಿದ್ದಾರೆ. ಕರ್ತವ್ಯದಲ್ಲಿ ಲೋಪವಾಗದಂತೆ ಕಟ್ಟುನಿಟ್ಟಿನ ಕ್ರಮವಿದೆ. ಸರ್ಕಾರಿ ಆಸ್ಪತ್ರೆಗಳು ಬಡ-ಮಧ್ಯಮ ವರ್ಗದ ಆಶಾಕಿರಣ. ಸತ್ಯಾಸತ್ಯತೆ ಅರಿಯದೆ ಅಪಪ್ರಚಾರ ಮಾಡುವುದು ಸಿಬ್ಬಂದಿಯ ನೈತಿಕ ಸ್ಥೆöÊರ್ಯ ಕುಗ್ಗಿಸುತ್ತದೆ ಎಂದರು.
ಲೋಪ ಕಂಡುಬAದರೆ ನೇರವಾಗಿ ನನ್ನ ಗಮನಕ್ಕೆ ತನ್ನಿ, ಸರಿಪಡಿಸಲು ಸಿದ್ಧ. ಹಾವು ಕಡಿತವಾದ ತಕ್ಷಣ ನಾಟಿ ಔಷಧಿ, ಮೂಢನಂಬಿಕೆ ಬಿಟ್ಟು ರೋಗಿಯನ್ನು ಆಸ್ಪತ್ರೆಗೆ ಕರೆತರಬೇಕು. ಹಾವು-ಚೇಳು ಕಡಿತ ಸೇರಿದಂತೆ ಎಲ್ಲ ತುರ್ತು ಸಂದರ್ಭಗಳಿಗೆ ಬೇಕಾದ ಔಷಧಿ ದಾಸ್ತಾನು ಸಮರ್ಪಕವಾಗಿದೆ ಎಂದು ತಿಳಿಸಿದರು.
(Visited 1 times, 1 visits today)


