
ತುಮಕೂರು: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಹಿಳಾ ಸಬಲೀಕರಣ ಘಟಕ, ತುಮಕೂರು ಹಾಗೂ ನಿಟ್ಟೂರು ಪಟ್ಟಣದ ವಿನಾಯಕ ಪದವಿ ಪೂರ್ವ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗೆ ಕಾಲೇಜು ವಿದ್ಯಾರ್ಥಿಗಳಿಗೆ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾ ಮಹಿಳಾ ಸಬಲೀಕರಣ ಘಟಕದ ಜಿಲ್ಲಾ ಮಿಷನ್ ಸಂಯೋಜಕ ಶಶಿಧರ ಹೆಚ್.ಜಿ., ಮಾತನಾಡಿ, ಮಹಿಳಾ ಮತ್ತು ಮಕ್ಕಳ ಸಂಬAಧಿ ಯೋಜನೆಗಳಾದ ಬೇಟಿ ಬಚಾವೋ ಬೇಟಿ ಪಡಾವೋ, ಪ್ರಧಾನಮಂತ್ರಿ ಮಾತೃವಂದನಾ ಯೋಜನೆ, ಐ.ಸಿ.ಡಿ.ಎಸ್ ಯೋಜನೆ, ಪೌಷ್ಠಿಕ ಪುರ್ನವಸತಿಕೇಂದ್ರ, ನರೇಗಾ ಯೋಜನೆ, ವರ-ದಕ್ಷಿಣೆ, ವಧು-ದಕ್ಷಿಣೆ ಮಿಷನ್ ಶಕ್ತಿ ಯೋಜನೆಯ ಮಹಿಳಾ ಸಬಲೀಕರಣ ಘಟಕದ ಬಗ್ಗೆ ಮಹಿಳಾ ಸಬಲೀಕರಣ ಘಟಕವು ಮಹಿಳೆಯರ ಸುರಕ್ಷತೆ, ಭದ್ರತೆ ಮತ್ತು ಸಬಲೀಕರಣಕ್ಕಾಗಿ ಪ್ರಾರಂಭಿಸಲಾದ ಒಂದು ಮಿಷನ್ ಮೋಡ್ ಯೋಜನೆಯಾಗಿದೆ ಹಾಗೂ ಮಹಿಳಾ ಸಬಲೀಕರಣ ಮಹತ್ವ ಮತ್ತು ಹೆಣ್ಣು ಮಕ್ಕಳ ಶಿಕ್ಷಣದ ಮಹತ್ವದ ಬಗ್ಗೆ ಮಕ್ಕಳಿಗೆ ತಿಳಿಸಿದರು.
ವಿನಾಯಕ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ.ಆರ್. ರಾಮ್‌ದಾಸ್ ಮಾತನಾಡಿ, ವಿದ್ಯಾರ್ಥಿಗಳು ಸರ್ಕಾರದ ವಿವಿಧ ಯೋಜನೆಗಳು, ಮಹಿಳಾ ಮತ್ತು ಮಕ್ಕಳ ರಕ್ಷಣೆಗೆ ಸಂಬAಧಿಸಿದ ಕಾಯ್ದೆಗಳು ಹಾಗೂ ಮೂಲ ಸೌಲಭ್ಯಗಳ ಕುರಿತು ಸಮಗ್ರ ಅರಿವು ಹೊಂದುವುದು ಅಗತ್ಯವೆಂದು ತಿಳಿಸಿದರು. ಇಂತಹ ಅರಿವು ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಕಾನೂನು ಜಾಗೃತಿ, ಆತ್ಮವಿಶ್ವಾಸ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ಬೆಳೆಸಲು ಸಹಕಾರಿಯಾಗುತ್ತವೆ ಎಂದರು.
ಮಹಿಳಾ ಸಬಲೀಕರಣ ಘಟಕದ ಜಂಡರ್ ಸ್ಪೆಷಲಿಸ್ಟ್ ರಶ್ಮಿ ಆರ್. ಮೇತ್ರಿ ಮಾತನಾಡಿ, PಔSಊ (Pಡಿeveಟಿಣioಟಿ oಜಿ Sexuಚಿಟ ಊಚಿಡಿಚಿssmeಟಿಣ) ಕಾಯ್ದೆ ೨೦೧೩ ಭಾರತದ ಮಹಿಳೆಯರು ಕೆಲಸ ಮಾಡುವ ಸ್ಥಳಗಳಲ್ಲಿ ಲೈಂಗಿಕ ಕಿರುಕುಳವನ್ನು ತಡೆಯಲು, ನಿಷೇಧಿಸಲು ಮತ್ತು ಪರಿಹರಿಸಲು ಜಾರಿಗೆ ಬಂದ ವಿಶೇಷ ಕಾನೂನು. ಇದು ೧೦ ಅಥವಾ ಅದಕ್ಕಿಂತ ಹೆಚ್ಚು ನೌಕರರನ್ನು ಹೊಂದಿರುವ ಎಲ್ಲಾ ಸಾರ್ವಜನಿಕ/ಖಾಸಗಿ ಸಂಸ್ಥೆಗಳಿಗೆ ಅನ್ವಯಿಸುತ್ತದೆ ಎಂದು ತಿಳಿಸಿದರು.
ಪ್ರಧಾನಮಂತ್ರಿ ಮಾತೃವಂದನಾ ಕಾರ್ಯಕ್ರಮದ ಜಿಲ್ಲಾ ಸಂಯೋಜಕ ಹೆಚ್. ಎಲ್.ರಂಗನಾಥ ಮಾತನಾಡಿ, ಸೈಬರ್ ಕೈಂ ಅಪರಾಧ, ಇಂಟರ್ನೆಟ್, ಡಿಜಿಟಲ್ ಸಾಧನಗಳನ್ನು ಬಳಸಿ ಮಾಡುವ ಕಾನೂನುಬಾಹಿರ ಚಟುವಟಿಕೆ, ಆನ್‌ಲೈನ್ ಬ್ಯಾಂಕಿAಗ್ ವಂಚನೆ, ಮಾಹಿತಿ ಕಳ್ಳತನ, ಹ್ಯಾಕಿಂಗ್ ಮತ್ತು ಸಾಮಾಜಿಕ ಮಾಧ್ಯಮ ಕಿರುಕುಳ ಇದರ ಮುಖ್ಯ ವಿಧಗಳು, ವಂಚನೆಗೆ ಒಳಗಾದ ತಕ್ಷಣ ೧೯೩೦ ಗೆ ಕರೆ ಅಥವಾ ದೂರು ದಾಖಲಿಸುವುದು ಎಂದು ಮಕ್ಕಳಿಗೆ ಸೈಬರ್ ಕೈಂ ಬಗ್ಗೆ ಮಾಹಿತಿಯನ್ನು ನೀಡಿದರು.
ಅಕೌಂಟೆAಟ್ ಪೂಜಾಶ್ರೀ ಎಸ್., ಮಾತನಾಡಿ, ಇಲಾಖೆಯಲ್ಲಿ ಅನುಷ್ಠಾನಗೊಳ್ಳುತ್ತಿರುವ ಮಹಿಳಾ ಸಹಾಯವಾಣಿ-೧೮೧, ಮಕ್ಕಳ ಸಹಾಯವಾಣಿ೧೦೯೮, ಮತ್ತು ಪೊಲೀಸ್ ಇಲಾಖೆಯ ತುರ್ತು ಸಹಾಯವಾಣಿ-೧೧೨ಗಳ ಕುರಿತು ಮಾಹಿತಿ ನೀಡಿದರು. ಬಾಲ್ಯ ವಿವಾಹ ನಿಷೇಧ ಕಾಯ್ದೆ-೨೦೦೬, ೨೦೧೬ರ ತಿದ್ದುಪಡಿಕಾಯ್ದೆ ಹಾಗೂ ೨೦೨೫ರ ತಿದ್ದುಪಡಿಕಾಯ್ದೆ ಕುರಿತು ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮದ ಸಹಾಯಕಿ ರಂಜಿತ ಬಿ.ಆರ್., ಸುಕನ್ಯಾ ಸಮೃದ್ಧಿ ಯೋಜನೆಯು ಭಾರತ ಸರ್ಕಾರವು ಹೆಣ್ಣು ಮಕ್ಕಳ ಆರ್ಥಿಕ ಭವಿಷ್ಯ, ಉನ್ನತ ಶಿಕ್ಷಣ ಮತ್ತು ವಿವಾಹದ ವೆಚ್ಚಗಳಿಗಾಗಿ ಪರಿಚಯಿಸಿರುವ ಜನಪ್ರಿಯ ಸಣ್ಣ ಉಳಿತಾಯ ಯೋಜನೆಯಾಗಿದೆ. ಇದು ಬೇಟಿ ಬಚಾವೋ, ಬೇಟಿ ಪಡಾವೋ ಯೋಜನೆಯ ಭಾಗವಾಗಿದೆ ಎಂದು ಹೇಳಿದರು.ಈ ವೇಳೆ ಆಡಳಿತ ವರ್ಗ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.


