BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಎನ್‌ಹೆಚ್-೨೦೬ ರಸ್ತೆ, ಕೆಪಿಟಿಸಿಎಲ್, ಬಿಎಸ್‌ಎನ್‌ಎಲ್ ೪ಜಿ ಯೋಜನೆಗಳ ಪ್ರಗತಿ ಪರಿಶೀಲನೆ: ಕಾಮಗಾರಿಗಳಿಗೆ ವೇಗ ನೀಡಲು ಜಿಲ್ಲಾಧಿಕಾರಿ ಸೂಚನೆ
  • ರೈಲ್ವೆ ಇಲಾಖೆಯ ರಾಜ್ಯ ಸಚಿವ ವಿ.ಸೋಮಣ್ಣ ಅವರ ಹುಟ್ಟು ಹಬ್ಬ ಆಚರಣೆ
  • ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ ಖಂಡಿಸಿ ಪ್ರತಿಭಟನೆ
  • ಬೀದಿನಾಯಿಗಳ ಅಟ್ಟಹಾಸ: ಸಾರ್ವಜನಿಕರ ಆಕ್ರೋಶ!
  • ಅಂ. ವಿಮಾನ ನಿಲ್ದಾಣ ಬೆಂಗಳೂರು-೨ ನಿರ್ಮಾಣ ಪ್ರಸ್ತಾವನೆ ಸ್ವಾಗಾತಾರ್ಹ
  • ೫೬ ಶಿಬಿರಾರ್ಥಿಗಳಿಗೆ ಉಚಿತ ಕ್ಷೌರ ಸೇವೆ
  • ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಜಿಲ್ಲಾಧಿಕಾರಿ ಭೇಟಿ: ಸಮಸ್ಯೆ ಪರಿಹಾರಕ್ಕೆ ಕ್ರಮ
  • ಆರು ತಿಂಗಳ ಇಂಧನ ಬವಣೆಗೆ ಮುಕ್ತಿ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಆರ್ಥಿಕ ಬೆಳವಣಿಗೆಗೆ ಸಹಕಾರಿ ಸಂಸ್ಥೆಗಳು ಸಹಕಾರಿ
ಇತರೆ ಸುದ್ಧಿಗಳು

ಆರ್ಥಿಕ ಬೆಳವಣಿಗೆಗೆ ಸಹಕಾರಿ ಸಂಸ್ಥೆಗಳು ಸಹಕಾರಿ

ಸಿಟಿ ಕ್ರೆಡಿಟ್ ಸೌಹಾರ್ದ ಸೊಸೈಟಿ ಕಾರ್ಯಕ್ರಮದಲ್ಲಿ ಹಿರೇಮಠ ಶ್ರೀ ಅಭಿಮತ
By News Desk BenkiyabaleUpdated:June 13, 2026 5:19 pm

ತುಮಕೂರು: ಸಂಘಜೀವಿ ಮನುಷ್ಯ ಸಹಕಾರ ಜೀವಿಯಾಗಿ ಪರಸ್ಪರ ಬೆಳವಣಿಗೆಯಾಗಲು ಸಹಕಾರ ಕ್ಷೇತ್ರ ಸಹಕಾರಿಯಾಗಿದೆ. ಸಹಕಾರ ಸಂಸ್ಥೆಗಳಿAದ ಸಾಲಸೌಲಭ್ಯ ಪಡೆದು ತಾನೂ ಬೆಳೆದು ಸಂಸ್ಥೆಯ ಬೆಳವಣಿಗೆಗೂ ನೆರವಾಗುವ ಈ ಕ್ಷೇತ್ರವು ಮತ್ತಷ್ಟು ವಿಸ್ತಾರವಾಗಿ ಬೆಳೆದು ಹೆಚ್ಚು ಜನರಿಗೆ ಸಹಾಯವಾಗಲಿ ಎಂದು ಹಿರೇಮಠದ ಡಾ. ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಆಶಿಸಿದರು.
ಶನಿವಾರ ನಗರದಲ್ಲಿ ತುಮಕೂರು ಸಿಟಿ ಕ್ರೆಡಿಟ್ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯ ೧೪ನೇ ವರ್ಷದ ಸರ್ವಸದಸ್ಯರ ಸಭೆ ಉದ್ಘಾಟಿಸಿ ಮಾತನಾಡಿದ ಸ್ವಾಮೀಜಿ, ತುಮಕೂರು ಜಿಲ್ಲೆಯು ಸಹಕಾರಿ ಕ್ಷೇತ್ರದಲ್ಲಿ ತನ್ನದೇ ಆದ ವಿಶಿಷ್ಠತೆ ಹೊಂದಿದೆ. ಜಿಲ್ಲೆಯ ಸಹಕಾರಿ ಪಿತಾಮಹರಾಗಿರುವ ಕೆ.ಎನ್. ರಾಜಣ್ಣನವರ ಕಾಳಜಿ, ಪ್ರೋತ್ಸಾಹದಿಂದಾಗಿ ಜಿಲ್ಲೆಯಲ್ಲಿ ೩ ಸಾವಿರಕ್ಕೂ ಹೆಚ್ಚು ಸಹಕಾರಿ ಸಂಸ್ಥೆಗಳು ಸ್ಥಾಪನೆಯಾಗಿ ಲಕ್ಷಾಂತರ ಜನರಿಗೆ ಸಹಕಾರಿಯಾಗಿವೆ ಎಂದರು.
ನೀವು ಚೆನ್ನಾಗಿದ್ದರೆ ನಾವೂ ಚೆನ್ನಾಗಿರುತ್ತೇವೆ ಎಂಬುದು ಸಹಕಾರಿಯ ಉದ್ದೇಶ. ಸರ್ವಜನರೂ ಸುಖವಾಗಿರಬೇಕು ಎಂಬ ಬಹುಜನರ ಹಿತ ಬಯಸುವ ಸಹಕಾರಿ ಕ್ಷೇತ್ರ ಪರಸ್ಪರ ಬೆಳವಣಿಗೆಗೆ ಪೂರಕವಾಗಿದೆ. ಸಹಾಯಾಸ್ತವು ಈಗ ಸಹಕಾರಿ ಹಸ್ತವಾಗಿದೆ. ಸಹಕಾರಿ ಸಂಸ್ಥೆಗಳನ್ನು ಬಳಸಿಕೊಂಡು ಆರ್ಥಿಕವಾಗಿ ಬೆಳವಣಿಗೆಯಾಗಬಹುದು, ಸಕಾಲದಲ್ಲಿ ಸಾಲ ಮರುಪಾವತಿ ಮಾಡಿ ಸಂಸ್ಥೆಯನ್ನೂ ಉಳಿಸಿ ಬೆಳೆಸಬೇಕು ಎಂದು ಹೇಳಿದರು.
ತುಮಕೂರು ಸಿಟಿ ಕ್ರೆಡಿಟ್ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಕೆ.ಎನ್. ಶಶಿಧರ್ ಮಾತನಾಡಿ, ನಮ್ಮ ಸಹಕಾರಿಯು ಕಡಿಮೆ ಅವಧಿಯಲ್ಲಿ ಹೆಚ್ಚಿನ ಪ್ರಗತಿ ಸಾಧಿಸಲು ಸದಸ್ಯರ ಹಾಗೂ ಆಡಳಿತ ಮಂಡಳಿಯವರ ಸಹಕಾರವೇ ಕಾರಣ. ಪ್ರಸ್ತುತ ೨೦೪೬ ಸದಸ್ಯರನ್ನು ಹೊಂದಿರುವ ಸಂಸ್ಥೆ ೮೬,೬೯,೧೪೭ ರೂ.ಗಳ ನಿವ್ವಳ ಲಾಭ ಗಳಿಸಿದೆ. ೨,೨೨,೧೫,೮೦,೮೨೬ ರೂ.ಗಳ ವಹಿವಾಟು ನಡೆಸಿದೆ ಎಂದರು.
ಸಹಕಾರಿಯು ಮೂರು ಶಾಖೆಗಳನ್ನು ಹೊಂದಿದ್ದು ಎಲ್ಲವೂ ಪ್ರಗತಿಯಲ್ಲಿವೆ. ಸಂಸ್ಥೆಯಿAದ ಸದಸ್ಯರಿಗೆ ಹಲವು ರೀತಿಯ ಸಹಾಯ ದೊರೆಯುತ್ತಿದೆ. ೧೦ ಸಾವಿರ ರೂ. ಮರಣೋತ್ತರ ನಿಧಿ ಹಾಗೂ ಸದಸ್ಯರ ಆರೋಗ್ಯ ಸೇವೆಯಲ್ಲಿ ಸಹಾಯ ಮಾಡಲು, ಯಾವುದಾದರೂ ಶಸ್ತç ಚಿಕಿತ್ಸೆ ಮಾಡಿಸಿಕೊಂಡಲ್ಲಿ ೧೦ರಿಂದ ೨೫ ಸಾವಿರ ರೂ. ಸಹಾಯ ಪಡೆಯಬಹುದು ಎಂದು ಹೇಳಿದರು.
ಸಹಕಾರಿಯ ಉಪಾಧ್ಯಕ್ಷ ಎಂ.ಎಸ್. ಚಿದಾನಂದ, ನಿರ್ದೇಶಕರಾದ ಕೆ.ಎನ್. ರಾಮಚಂದ್ರಬಾಬು, ಎಂ.ಎಸ್. ಕಲ್ಲೇಶಯ್ಯ, ರವಿಶಂಕರ್, ಎಸ್.ಬಿ. ಶಿವಬಸಪ್ಪ, ಕೆ.ಎಸ್. ಗಿರೀಶ್, ಜೆ.ಟಿ. ಜಗದೀಶ್, ಕೆ.ಎಸ್. ವಿಕಾಸ್, ಪದ್ಮ ಪಾಲನೇತ್ರ, ಜಿ. ಮಾನಸ, ಸಿಇಓ ಕೆ.ಪಿ. ಶಿಲ್ಪಶ್ರೀ, ಶಾಖಾ ವ್ಯವಸ್ಥಾಪಕರಾದ ಕೆ.ಜಿ. ಹರ್ಷಿತ, ಮನೋಜ್‌ಕುಮಾರ್ ಮೊದಲಾದವರು ಇದ್ದರು.

(Visited 1 times, 1 visits today)
hoiremutt karnataka local news tumkur
Previous Articleವಿದ್ಯಾರ್ಥಿಗಳಿಗೆ ಕಾನೂನು ಅರಿವು ಅಗತ್ಯ
Next Article ಗೋವನ್ನು ರಾಷ್ಟಿಯ ಪ್ರಾಣಿಯನ್ನಾಗಿ ಘೋಷಿಸಿ
News Desk Benkiyabale

Related Posts

ಎನ್‌ಹೆಚ್-೨೦೬ ರಸ್ತೆ, ಕೆಪಿಟಿಸಿಎಲ್, ಬಿಎಸ್‌ಎನ್‌ಎಲ್ ೪ಜಿ ಯೋಜನೆಗಳ ಪ್ರಗತಿ ಪರಿಶೀಲನೆ: ಕಾಮಗಾರಿಗಳಿಗೆ ವೇಗ ನೀಡಲು ಜಿಲ್ಲಾಧಿಕಾರಿ ಸೂಚನೆ

July 21, 2026 5:46 pm news

ರೈಲ್ವೆ ಇಲಾಖೆಯ ರಾಜ್ಯ ಸಚಿವ ವಿ.ಸೋಮಣ್ಣ ಅವರ ಹುಟ್ಟು ಹಬ್ಬ ಆಚರಣೆ

July 21, 2026 5:42 pm news

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ ಖಂಡಿಸಿ ಪ್ರತಿಭಟನೆ

July 21, 2026 5:40 pm news
ತಾಜಾ ಸುದ್ಧಿಗಳು
news

ಎನ್‌ಹೆಚ್-೨೦೬ ರಸ್ತೆ, ಕೆಪಿಟಿಸಿಎಲ್, ಬಿಎಸ್‌ಎನ್‌ಎಲ್ ೪ಜಿ ಯೋಜನೆಗಳ ಪ್ರಗತಿ ಪರಿಶೀಲನೆ: ಕಾಮಗಾರಿಗಳಿಗೆ ವೇಗ ನೀಡಲು ಜಿಲ್ಲಾಧಿಕಾರಿ ಸೂಚನೆ

July 21, 2026 5:46 pm
news

ರೈಲ್ವೆ ಇಲಾಖೆಯ ರಾಜ್ಯ ಸಚಿವ ವಿ.ಸೋಮಣ್ಣ ಅವರ ಹುಟ್ಟು ಹಬ್ಬ ಆಚರಣೆ

July 21, 2026 5:42 pm
news

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ ಖಂಡಿಸಿ ಪ್ರತಿಭಟನೆ

July 21, 2026 5:40 pm
news

ಬೀದಿನಾಯಿಗಳ ಅಟ್ಟಹಾಸ: ಸಾರ್ವಜನಿಕರ ಆಕ್ರೋಶ!

July 21, 2026 5:38 pm
news

ಅಂ. ವಿಮಾನ ನಿಲ್ದಾಣ ಬೆಂಗಳೂರು-೨ ನಿರ್ಮಾಣ ಪ್ರಸ್ತಾವನೆ ಸ್ವಾಗಾತಾರ್ಹ

July 21, 2026 5:36 pm
news

೫೬ ಶಿಬಿರಾರ್ಥಿಗಳಿಗೆ ಉಚಿತ ಕ್ಷೌರ ಸೇವೆ

July 20, 2026 5:26 pm
Our Youtube Channel
Our Picks

ಎನ್‌ಹೆಚ್-೨೦೬ ರಸ್ತೆ, ಕೆಪಿಟಿಸಿಎಲ್, ಬಿಎಸ್‌ಎನ್‌ಎಲ್ ೪ಜಿ ಯೋಜನೆಗಳ ಪ್ರಗತಿ ಪರಿಶೀಲನೆ: ಕಾಮಗಾರಿಗಳಿಗೆ ವೇಗ ನೀಡಲು ಜಿಲ್ಲಾಧಿಕಾರಿ ಸೂಚನೆ

July 21, 2026 5:46 pm

ರೈಲ್ವೆ ಇಲಾಖೆಯ ರಾಜ್ಯ ಸಚಿವ ವಿ.ಸೋಮಣ್ಣ ಅವರ ಹುಟ್ಟು ಹಬ್ಬ ಆಚರಣೆ

July 21, 2026 5:42 pm

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ ಖಂಡಿಸಿ ಪ್ರತಿಭಟನೆ

July 21, 2026 5:40 pm

ಬೀದಿನಾಯಿಗಳ ಅಟ್ಟಹಾಸ: ಸಾರ್ವಜನಿಕರ ಆಕ್ರೋಶ!

July 21, 2026 5:38 pm

ಅಂ. ವಿಮಾನ ನಿಲ್ದಾಣ ಬೆಂಗಳೂರು-೨ ನಿರ್ಮಾಣ ಪ್ರಸ್ತಾವನೆ ಸ್ವಾಗಾತಾರ್ಹ

July 21, 2026 5:36 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds kannada news karnataka Kn rajanna kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಎನ್‌ಹೆಚ್-೨೦೬ ರಸ್ತೆ, ಕೆಪಿಟಿಸಿಎಲ್, ಬಿಎಸ್‌ಎನ್‌ಎಲ್ ೪ಜಿ ಯೋಜನೆಗಳ ಪ್ರಗತಿ ಪರಿಶೀಲನೆ: ಕಾಮಗಾರಿಗಳಿಗೆ ವೇಗ ನೀಡಲು ಜಿಲ್ಲಾಧಿಕಾರಿ ಸೂಚನೆ

By News Desk BenkiyabaleJuly 21, 2026 5:46 pm

ತುಮಕುರು: ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರ ಅಧ್ಯಕ್ಷತೆಯಲ್ಲಿ ರಾಷ್ಟಿಯ ಹೆದ್ದಾರಿ (ಎನ್‌ಹೆಚ್)-೨೦೬ ನಾಲ್ಕು ಪಥಗಳ ರಸ್ತೆ ಕಾಮಗಾರಿ, ಕೆಪಿಟಿಸಿಎಲ್ ವಿದ್ಯುತ್…

ರೈಲ್ವೆ ಇಲಾಖೆಯ ರಾಜ್ಯ ಸಚಿವ ವಿ.ಸೋಮಣ್ಣ ಅವರ ಹುಟ್ಟು ಹಬ್ಬ ಆಚರಣೆ

July 21, 2026 5:42 pm

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ ಖಂಡಿಸಿ ಪ್ರತಿಭಟನೆ

July 21, 2026 5:40 pm

ಬೀದಿನಾಯಿಗಳ ಅಟ್ಟಹಾಸ: ಸಾರ್ವಜನಿಕರ ಆಕ್ರೋಶ!

July 21, 2026 5:38 pm
News by Date
July 2026
M T W T F S S
 12345
6789101112
13141516171819
20212223242526
2728293031  
« Jun    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.