ಹುಳಿಯಾರು: ಹುಳಿಯಾರಿನ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಪತ್ತೆಯಾಗಿರುವ ನೂರಾರು ಸ್ಯಾನಿಟರಿ ಪ್ಯಾಡ್‌ಗಳ ರಾಶಿಯ ಹಿಂದೆ ದಶಕಗಳ ಇತಿಹಾಸವಿರುವ ಭೀಕರ ಬೇಜವಾಬ್ದಾರಿತನ ಹಾಗೂ ಆಡಳಿತಾತ್ಮಕ ನಿರ್ಲಕ್ಷ÷್ಯ ಅಡಗಿರುವುದು ಈಗ ಬೆಳಕಿಗೆ ಬಂದಿದೆ. ಹಿಂದೆ ವಿತರಿಸದೆ ಕೊಠಡಿಯಲ್ಲಿ ಕೂಡಿಟ್ಟು ಹಳತಾಗಿದ್ದ ಈ ಸಾಮಗ್ರಿಗಳನ್ನು, ಈಗ ಕಟ್ಟಡ ದುರಸ್ತಿಯ ನೆಪದಲ್ಲಿ ಕಾಲೇಜಿನ ಕಾಂಪೌAಡ್‌ನ ಮೂಲೆಯಲ್ಲಿ ಅತ್ಯಂತ ಅವೈಜ್ಞಾನಿಕವಾಗಿ ಎಸೆದಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಎಲ್‌ಪಿಬಿಎಸ್ ಶಾಲಾ ಕಟ್ಟಡದಲ್ಲೇ ಉಳಿದಿದ್ದ ಸೌಲಭ್ಯ!: ವಿಶ್ವಸನೀಯ ಮೂಲಗಳ ಪ್ರಕಾರ, ಈ ಸ್ಯಾನಿಟರಿ ಪ್ಯಾಡ್‌ಗಳು ಇತ್ತೀಚಿನವುಗಳಲ್ಲ. ಈ ಹಿಂದೆ ಎಲ್‌ಪಿಬಿಎಸ್ ಶಾಲೆಯ ಹಳೆಯ ಕಟ್ಟಡದಲ್ಲಿ ಬಾಲಕಿಯರ ಕಾಲೇಜು ನಡೆಯುತ್ತಿದ್ದ ಸಂದರ್ಭದಲ್ಲಿ ‘ಶುಚಿ’ ಯೋಜನೆಯಡಿ ವಿದ್ಯಾರ್ಥಿನಿಯರಿಗೆ ವಿತರಿಸಲು ಇವುಗಳನ್ನು ತರಿಸಲಾಗಿತ್ತು. ಆದರೆ, ಅಂದಿನ ಕಾಲೇಜು ಆಡಳಿತ ಮಂಡಳಿಯು ಅರ್ಹ ಕಿಶೋರಿಯರಿಗೆ ಇವುಗಳನ್ನು ಸಕಾಲದಲ್ಲಿ ವಿತರಿಸದೆ ನಿರ್ಲಕ್ಷ÷್ಯ ವಹಿಸಿತ್ತು. ಪರಿಣಾಮವಾಗಿ, ನೂರಾರು ಪ್ಯಾಕೆಟ್‌ಗಳು ಬಳಕೆಯಾಗದೆಯೇ ಕೊಠಡಿಯೊಳಗೆ ಧೂಳು ಹಿಡಿಯುವಂತಾಗಿತ್ತು.
ಕಚೇರಿ ಶಿಫ್ಟ್ ಆಯ್ತು, ಜವಾಬ್ದಾರಿ ಶಿಫ್ಟ್ ಆಗಲಿಲ್ಲ!: ಕೆಲವು ವರ್ಷಗಳ ಹಿಂದೆ ಕಾಲೇಜು ಹಳೆಯ ಕಟ್ಟಡದಿಂದ ಈಗಿನ ಹೊಸ ಕಟ್ಟಡಕ್ಕೆ ಸ್ಥಳಾಂತರಗೊAಡಿತು. ಈ ಸಂದರ್ಭದಲ್ಲಿ ಕಚೇರಿಯ ದಾಖಲೆ ಪತ್ರಗಳು ಮತ್ತು ಪೀಠೋಪಕರಣಗಳನ್ನು ಸ್ಥಳಾಂತರಿಸಿದ ಸಿಬ್ಬಂದಿ, ಈ ಸ್ಯಾನಿಟರಿ ಪ್ಯಾಡ್‌ಗಳ ಅವಧಿ ಮುಗಿದಿದೆ (ಇxಠಿiಡಿeಜ) ಎಂಬ ಒಂದೇ ಕಾರಣಕ್ಕೆ ಅವುಗಳನ್ನು ಹಳೆಯ ಕಟ್ಟಡದಲ್ಲೇ ಬಿಟ್ಟು ಕೈತೊಳೆದುಕೊಂಡಿದ್ದರು. ಸರ್ಕಾರದ ಸೊತ್ತನ್ನು ಹಾಗೂ ಪರಿಸರಕ್ಕೆ ಮಾರಕವಾಗಬಲ್ಲ ಪ್ಲಾಸ್ಟಿಕ್ ಒಳಗೊಂಡ ಸಾಮಗ್ರಿಗಳನ್ನು ದಶಕಗಳ ಕಾಲ ಹಳೆಯ ಕೊಠಡಿಯಲ್ಲೇ ಕೊಳೆಯಲು ಬಿಟ್ಟಿದ್ದು ಆಡಳಿತ ವ್ಯವಸ್ಥೆಯ ಅಟ್ಟಹಾಸಕ್ಕೆ ಹಿಡಿದ ಕನ್ನಡಿಯಾಗಿದೆ.
ದುರಸ್ತಿ ಕಾರ್ಯದ ವೇಳೆ ಬಯಲಾದ ಸತ್ಯ: ಸದ್ಯ ಎಲ್‌ಪಿಬಿಎಸ್ ಶಾಲೆಯ ಹಳೆಯ ಕಟ್ಟಡದ ದುರಸ್ತಿ ಕಾರ್ಯಗಳು ಆರಂಭವಾಗಿವೆ. ಈ ಹಿನ್ನೆಲೆಯಲ್ಲಿ ಹಳೆಯ ಕೊಠಡಿಯನ್ನು ಖಾಲಿ ಮಾಡುವಾಗ ಅಲ್ಲಿದ್ದ ದಶಕಗಳ ಹಳೆಯ ಸ್ಯಾನಿಟರಿ ಪ್ಯಾಡ್‌ಗಳ ರಾಶಿಯನ್ನು ಕಾರ್ಮಿಕರು ಹೊರಗೆ ತಂದು ಕಾಲೇಜಿನ ಕಾಂಪೌAಡ್‌ನ ಮೂಲೆಯಲ್ಲಿ ಬೇಕಾಬಿಟ್ಟಿಯಾಗಿ ಸುರಿದಿದ್ದಾರೆ. ವರ್ಷಗಟ್ಟಲೆ ಕೊಠಡಿಯ ಕತ್ತಲಲ್ಲಿದ್ದ ಬೇಜವಾಬ್ದಾರಿತನ, ಇಂದು ಕಾಲೇಜು ಆವರಣದ ಸೂರ್ಯನ ಬೆಳಕಿನಲ್ಲಿ ನಗ್ನವಾಗಿ ಸಾರ್ವಜನಿಕರಿಗೆ ದರ್ಶನ ನೀಡುತ್ತಿದೆ.
ಹಳೆಯ ಕಟ್ಟಡದಿಂದ ಹೊಸಕಟ್ಟಡಕ್ಕೆ ಶಿಫ್ಟ್ ಆಗಿ ದಶಕಗಳೇ ಕಳೆದಿದೆ. ಕಾಲೇಜಿನಲ್ಲಿ ಈಗಿರುವ ಪ್ರಾಚಾರ್ಯರು ಸೇರಿದಂತೆ ಎಲ್ಲರೂ ಹೊಸಬರಾಗಿದ್ದಾರೆ. ಅಲ್ಲದೆ ಹಳೆಯ ಕಟ್ಟಡಕ್ಕೆ ಪೂರ್ಣ ಶಿಥಿಲವಾಗಿದ್ದು ಬೀಗ ಜಡಿದು ದಶಕಗಳೇ ಕಳೆದಿದೆ. ಹಾಗಾಗಿ ಈಗಿರುವ ಸಿಬ್ಬಂದಿಗಳನ್ನು ಈ ವಿಷಯದಲ್ಲಿ ಹೊಣೆ ಮಾಡಲಾಗದು. ಅಲ್ಲದೆ ವೈಜ್ಞಾನಿಕ ವಿಲೆವಾರಿಯ ಬಗ್ಗೆ ಅರಿವಿಲ್ಲದ ಕಾರ್ಮಿಕರು ಎಸೆದಿರುವುದರಿಂದ ಅವರ ಮೇಲೂ ಕ್ರಮ ಕೈಗೊಳ್ಳಲಾಗದು. ಆದರೆ ಈಗಲಾದರೂ ವೈಜ್ಞಾನಿಕ ವಿಲೆ ಮಾಡಲು ಅವಕಾಶವಿದ್ದು ಸಂಬAಧಪಟ್ಟವರು ತಕ್ಷಣ ವೈಜ್ಞಾನಿಕ ವಿಲೆವಾರಿಗೆ ಮುಂದಾಗಬೇಕಿದೆ.

(Visited 1 times, 1 visits today)