ತುಮಕೂರು: ಪರಸ್ಪರ ಸಹಕಾರ, ಸೌಹಾರ್ದತೆಯಿಂದ ಕೂಡಿ ನೆರವಾಗುವ ಸಹಕಾರಿ ಸಂಸ್ಥೆಯನ್ನು ಕಟ್ಟಿ ಬೆಳೆಸಬೇಕು. ಆ ಮೂಲಕ ಸಾಲ ಸೌಲಭ್ಯ ಪಡೆದು ತಮ್ಮ ಅಭಿವೃದ್ಧಿಗೂ ಅವಕಾಶ ಮಾಡಿಕೊಂಡು ಬೆಳೆಯಬೇಕು. ಈ ಸಹಕಾರಿ ಸಂಘ ಯಶಸ್ವಿಯಾಗಿ ಮುನ್ನೆಡೆಯಬೇಕಾದರೆ ಸಾಲ ಪಡೆದ ಗ್ರಾಹಕರು ಸಕಾಲಕ್ಕೆ ಮರು ಪಾವತಿ ಮಾಡುವುದು ಅತ್ಯಾವಶ್ಯಕ. ಬಾಕಿ ಉಳಿಸಿಕೊಂಡರೆ ಸಹಕಾರಿ ಸಂಘಗಳು ಯಶಸ್ವಿಯಾಗಲು ಸಾಧ್ಯವಿಲ್ಲ ಎಂದು ಮಾಜಿ ಸಹಕಾರ ಸಚಿವ, ಶಾಸಕ ಕೆ.ಎನ್. ರಾಜಣ್ಣ ಹೇಳಿದರು.
ಭಾನುವಾರ ನಗರದ ಮಂಜುನಾಥ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಹೋಟೆಲು ಮತ್ತು ಉಪಹಾರ ಮಂದಿರಗಳ ಸಂಘದ ೮೦ನೆ ವರ್ಷದ ಅಮೃತ ಮಹೋತ್ಸವ ಹಾಗೂ ಹೋಟೆಲು ಮಾಲೀಕರ ಸೌಹಾರ್ದ ಸಹಕಾರಿ ಸಂಘದ ೫೦ನೆ ಸುವರ್ಣ ಮಹೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
೮ ದಶಕಗಳ ಇತಿಹಾಸದ ತುಮಕೂರಿನ ಹೋಟೆಲ್ ಮತ್ತು ಉಪಹಾರ ಮಂದಿರಗಳ ಸಂಘದವರು ಹೋಟೆಲ್ ಉದ್ಯಮದಲ್ಲಿ ತೊಡಗಿಸಿಕೊಂಡವರ ಅನುಕೂಲಕ್ಕಾಗಿ ಐದು ದಶಕದ ಹಿಂದೆ ಸ್ಥಾಪಿಸಿದ ಸಹಕಾರಿ ಸಾರ್ಥಕ ೫೦ ವರ್ಷಗಳನ್ನು ಕಂಡಿರುವುದು ಪ್ರಶಂಸನಾರ್ಹ. ಯಾವುದೇ ಸಹಕಾರಿ ಸಂಘವಾಗಲಿ, ಸಂಘ ಸಂಸ್ಥೆಗಳಾಗಲೀ ಅದರ ಯಶಸ್ಸಿಗೆ ಸದಸ್ಯರ ಪಾಲ್ಗೊಳ್ಳುವಿಕೆ ಬಹಳ ಮುಖ್ಯ ಎಂದು ಹೇಳಿ, ೨ ಸಂಘವನ್ನು ಮುನ್ನಡೆಸಿಕೊಂಡು ಬಂದ ಸಂಘದ ಹಿರಿಯರು, ಪದಾಧಿಕಾರಿಗಳನ್ನು ಈ ಸಂದರ್ಭದಲ್ಲಿ ಗೌರವಿಸುತ್ತಿರುವುದು ಒಳ್ಳೆಯ ಕಾರ್ಯ. ಶತಮಾನ ದಾಟಿ ಸಂಘವು ಶ್ರೇಯೋಭಿವೃದ್ಧಿ ಕಾಣಲಿ ಎಂದು ಆಶಿಸಿದರು.
ಶಾಸಕ ಜಿ.ಬಿ.ಜ್ಯೋತಿ ಗಣೇಶ್ ಮಾತನಾಡಿ, ಉಡುಪಿ ಭಾಗದ ಹೋಟೆಲ್‌ಗಳು ರಾಜ್ಯ, ದೇಶ ಮಾತ್ರವಲ್ಲದೆ ವಿದೇಶದಲ್ಲೂ ಪ್ರಸಿದ್ದಿಯಾಗಿವೆ. ಹಸಿದು ಬಂದವರಿಗೆ ಶುಚಿ, ರುಚಿಯಾಗಿ ಹೊಟ್ಟೆ ತುಂಬಿಸುವ ಕಾರ್ಯ ಹೋಟೆಲ್ ಉಪಹಾರ ಮಂದಿರಗಳಿಗಿAದ ಆಗುತ್ತಿದ್ದು, ಬೇರೆಡೆಯಿಂದ ಪಟ್ಟಣ, ನಗರ ಪ್ರದೇಶಕ್ಕೆ ಓದಲು ಬಂದ ವಿದ್ಯಾರ್ಥಿಗಳು, ಕಾರ್ಮಿಕರು, ನೌಕರರು, ಪ್ರವಾಸಿಗರು, ಸ್ಥಳೀಯರು ಸೇರಿ ಎಲ್ಲರೂ ಹೋಟೆಲ್ ಉಪಹಾರ ಮಂದಿರಗಳ ಅವಲಂಬಿತರಾಗಿದ್ದು, ಹೋಟೆಲ್ ಒಂದು ದೊಡ್ಡ ಉದ್ಯಮವಾಗಿ ಬೆಳೆದಿದೆ. ತುಮಕೂರಿನ ಹೋಟೆಲ್ ಮತ್ತು ಉಪಹಾರ ಮಂದಿರಗಳ ಸಂಘದವರು ಸಾಕಷ್ಟು ಸಮಾಜ ಸೇವಾ ಕಾರ್ಯವನ್ನು ಮಾಡಿಕೊಂಡು ಬಂದಿದ್ದು, ಸಹಕಾರಿ ಸಂಘವನ್ನು ೫೦ ವಷದ ಹಿಂದೆಯೇ ಸ್ಥಾಪಿಸಿರುವುದು ಈ ಉದ್ಯಮದಲ್ಲಿನ ಹಿರಿಯರ ದೂರದೃಷ್ಟಿಯ ಸಂಕೇತ ಎಂದು ತಿಳಿಸಿದರು.
ಸಮಾರಂಭದ ಸಾನಿಧ್ಯ ವಹಿಸಿದ್ದ ರಾಮಕೃಷ್ಣ ವಿವೇಕಾನಂದ ಆಶ್ರಮದ ಮುಖ್ಯಸ್ಥರಾದ ವಿರೇಶಾನಂದ ಸರಸ್ವತಿ ಸ್ವಾಮೀಜಿ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ್ದರು. ಮಾಜಿ ಸಚಿವ ಸೊಗಡು ಶಿವಣ್ಣ, ಕೆ.ಎಸ್.ಎಚ್.ಎ ಮಧುಕರ್ ಶೆಟ್ಟಿ,ರಾಜ್ಯ ಸೌಹಾರ್ದ ಸಹಕಾರಿ ಅಧ್ಯಕ್ಷ ಜಿ.ನಂಜನಗೌಡ ಪಾಲ್ಗೊಂಡರು.
ಇದೇ ವೇಳೆ ಉಭಯ ಸಂಘದ ಮಾಜಿ ಅಧ್ಯಕ್ಷರುಗಳಾದ ಸಿ.ವಿ.ಮಹದೇವಯ್ಯ, ಯು.ಡಿ.ಸುರೇಶ್ ಹೊಳ್ಳ, ಹೆಚ್. ಶ್ರೀನಿವಾಸ್ ಹತ್ವಾರ್, ಶ್ರೀಧರ್ ಕೊರವಡಿ, ಟಿ.ಅಬ್ದುಲ್ಲಾ, ಮಾಧವ ಡಿ.ನಾಯಕ್, ಮಾಜಿ ಉಪಾಧ್ಯಕ್ಷರಾದ ಟಿ.ಕೆ.ಶಿವಶಂಕರ್, ಕೆ.ಟಿ.ಶಿವಪ್ರಸಾದ್, ಟಿ.ಎಸ್.ಪ್ರಕಾಶ್, ಜಿ.ಕೆ.ಶ್ರೀನಿವಾಸ್, ಹಾಲಿ ಅಧ್ಯಕ್ಷ ಹಿಂದಿನ ಉಪಾಧ್ಯಕ್ಷ ವಾಸುದೇವ ಶೆಟ್ಟಿ, ಮಾಜಿ ಪ್ರಧಾನ ಕಾಯದರ್ಶಿಗಳಾದ ಕೆ.ಆರ್.ಅನಂತಮೂರ್ತಿ, ಹಾಲಿ ಉಪಾಧ್ಯಕ್ಷ ಹಿಂದಿನ ಪ್ರಧಾನ ಕಾಯದರ್ಶಿ ಟಿ.ಜಿ.ವೇದಮೂರ್ತಿ, ಸಂಘದ ಹಿರಿಯ ಲೆಕ್ಕ ಪರಿಶೋಧಕ ಟಿ.ಜಿ.ಚನ್ನಬಸವರಾಜು ಹಾಗೂ ೧೫ ವರ್ಷಕ್ಕೂ ಮೇಲ್ಪಟ್ಟು ಹೋಟೆಲ್ ಉಪಹಾರ ಮಂದಿರದಲ್ಲಿ ದುಡಿದ ಕಾರ್ಮಿಕರಿಗೆ ಸನ್ಮಾನ ನೆರವೇರಿಸಲಾಯಿತು.
ಹೋಟೆಲ್ ಮತ್ತು ಉಪಹಾರ ಮಂದಿರಗಳ ಸಂಘದ ಅಧ್ಯಕ್ಷ ವಾಸುದೇವ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಸಿ.ವಿ.ಮಹದೇವಯ್ಯ, ಉಪಾಧ್ಯಕ್ಷ ಟಿ.ಜಿ. ವೇದಮೂರ್ತಿ, ಪ್ರಧಾನ ಕಾಯದರ್ಶಿ ಕೆ.ಟಿ.ಗುರುಪ್ರಕಾಶ್ ಬಳ್ಳುಕರಾಯ, ಜಂಟಿ ಕಾಯದರ್ಶಿ ಆರ್.ಪ್ರವೀಣ್ ಕುಮಾರ್, ಖಜಾಂಚಿ ಜಿ.ಆರ್.ಶ್ರೀನಿವಾಸ್, ಸಂಘಟನಾ ಕಾಯದರ್ಶಿ ಆರ್.ರಾಜಣ್ಣ, ನಿರ್ದೇಶಕರುಗಳು ಹಾಗೂ ಸೌಹಾರ್ದ ಸಹಕಾರಿ ಅಧ್ಯಕ್ಷ ಸುರೇಶ್ ಹೊಳ್ಳ., ಉಪಾಧ್ಯಕ್ಷ ಬಸವರಾಜು ಹಾಗೂ ನಿರ್ದೇಶಕರುಗಳು ಪಾಲ್ಗೊಂಡರು.

(Visited 1 times, 1 visits today)