ತುಮಕೂರು: ಉನ್ನತಿಯ ಜೀವನ ಸಾಧ್ಯವಾಗಬೇಕೆಂದರೆ ಮನುಷ್ಯ ತನ್ನನ್ನು ತಾನು ತಿಳಿಯುವ ಪ್ರಯತ್ನ ಮಾಡಬೇಕು. ಸ್ವಧ್ಯಾಯ ಪ್ರತಿಯೊಂದು ಜೀವಿಗೂ ಅವಶ್ಯಕ ಎಂದು ಆಚಾರ್ಯಶ್ರೀ ೧೦೮ ಪ್ರಮುಖ್ ಸಾಗರ್‌ಜೀ ಮಹಾರಾಜ್ ಸ್ವಾಮೀಜಿ ಸಂದೇಶ ನೀಡಿದರು.
ಚಾತುರ್ಮಾಸ ಕಳಸ ಸ್ಥಾಪನೆ ಅಂಗವಾಗಿ ಶುಕ್ರವಾರ ನಗರದ ಜೈನ ಭವನದಲ್ಲಿ ನಡೆದ ವೀರ ಶಾಸನ ಜಯಂತಿ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಜೈನ ಧರ್ಮವು ಎಲ್ಲಾ ಜೀವಿಗಳ ಕಲ್ಯಾಣ ಬಯಸುತ್ತದೆ. ಅಹಿಂಸೆ, ಪರಸ್ಪರ ಶಾಂತಿ, ಸೌಹಾರ್ದಯುತ ಜೀವನ ಜೈನ ಧರ್ಮದ ಸಂದೇಶವಾಗಿದೆ ಎಂದು ತಿಳಿಸಿದರು.
೨೪ನೇ ತೀರ್ಥಂಕರರಾದ ಮಹಾವೀರರ ಉಪದೇಶ ಅನುಷ್ಠಾನಗೊಂಡ ದಿನವನ್ನು ವೀರ ಶಾಸನ ದಿವಸನ್ನಾಗಿ ಇಂದು ಆಚರಿ ಸುತ್ತಿದ್ದೇವೆ. ಪ್ರತಿಯೊಂದು ಜೀವಿಗೂ ಮಹಾವೀರರ ಸಂದೇಶಗಳು ಪ್ರಸ್ತುತ ದಿನಕ್ಕೂ ಅನ್ವಯವಾಗುತ್ತವೆ. ಸರ್ವ ಜೀವಿಯ ಒಳಿತಿಗೆ ಮಹಾವೀರರ ಸಾರ್ವಕಾಲಿಕ ಸಂದೇಶಗಳನ್ನು ಸಮಾಜದ ಪ್ರತಿಯೊಬ್ಬರೂ ಪಾಲನೆ ಮಾಡಿದರೆ ಎಲ್ಲರೂ ಶಾಂತಿ, ನೆಮ್ಮದಿಯಿಂದ ಬಾಳಲು ಸಾಧ್ಯವಾಗುತ್ತದೆ. ಗುರು ಪೂರ್ಣಿಮೆ ಧಾರ್ಮಿಕ ಸಭೆಗೆ ಮಹಿಳೆಯರು ಬಿಳಿ ಬಣ್ಣದ ಸೀರೆ ಉಟ್ಟು, ಪುರುಷರು ಬಿಳು ವಸ್ತçಧರಿಸ ಬರಬೇಕು ಎಂದು ಸ್ವಾಮೀಜಿ ಸಲಹೆ ಮಾಡಿದರು
ಕರ್ನಾಟಕ ಜೈನ್ ಅಸೋಸಿಯೇಷನ್ ಅಧ್ಯಕ್ಷ ಎಸ್.ಜಿತೇಂದ್ರ ಕುಮಾರ್, ಮುಖಂಡ ವಿನೋದ್ ಬಾಕ್ಲಿವಾದ್ ಅತಿಥಿಗಳಾಗಿ ಭಾಗವಹಿಸಿದ್ದರು. ನಗರದ ದಿಗಂಬರ ಜೈನ ಶ್ರೀ ಪಾರ್ಶ್ವನಥ ಸ್ವಾಮಿಜಿನ ಮಂದಿರ ಅಧ್ಯಕ್ಷ ಟಿ.ಡಿ. ಬಾಹುಬಲಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಶೀತಲ್, ಕಾರ್ಯದರ್ಶಿ ಟಿ.ಜೆ.ನಾಗರಾಜ್, ಖಜಾಂಚಿ ಸುಭೋದ್ ಕುಮಾರ್ ಜೈನ್, ನಿರ್ದೇಶಕರು, ಸಮಾಜದ ಮುಖಂಡರಾದ ಆರ್.ಎ.ಸುರೇಶ್, ಬಿ.ಎಲ್. ಚಂದ್ರಕೀರ್ತಿ, ವಿನಯ್ ಜೈನ್, ಜಿನೇಶ್ ಸುರೇಶ್ ಬಾಂಡ್ ಮೊದಲಾದವರು ಭಾಗವಹಿಸಿದ್ದರು. ಕುಮುದಾ ನಾಗಭೂಷಣ್ ಕಾರ್ಯಕ್ರಮದ ನಿರ್ವಹಣೆ ಮಾಡಿದರು. ಉತ್ತರ ಭಾರತದಿಂದ ನೂರಾರು ಮುನಿ ಭಕ್ತರು ಆಗಮಿಸಿ ಮುನಿಗಳ ಆಶೀರ್ವಾದ ಪಡೆದರು.
ನಗರ ವೀರಶೈವ ಸಮಾಜ ಸೇವಾ ಸಮಿತಿ ಅಧ್ಯಕ್ಷ ಕೋರಿ ಮಂಜುನಾಥ್, ಆರ್ಯ ವೈಶ್ಯ ಸಮಾಜದ ಆರ್.ಎಲ್. ರಮೇಶ್ ಬಾಬು, ಶ್ವೇತಂಬರ ಜೈನ್ ಸಮಾಜದ ಉತ್ತಮ್ ಜೈನ್, ಪ್ರಜಾ ಪ್ರಗತಿ ಸಂಪಾದಕ ಡಾ.ಎಸ್.ನಾಗಣ್ಣ ಸೇರಿದಂತೆ ವಿವಿಧ ಸಮಾಜಗಳ ಮುಖಂಡರು ಆಗಮಿಸಿ ಸಾಗರ್‌ಜೀ ಮಹಾರಾಜ್ ಸ್ವಾಮೀಜಿಗಳ ಆಶೀರ್ವಾದ ಪಡೆದರು.
ಇದಕ್ಕೂ ಮೊದಲು ನಗರದ ಚಿಕ್ಕಪೇಟೆಯ ಜಿನ ಮಂದಿರದಿAದ ಜೈನ್ ಭವನದವರೆಗೆ ಸಾಗರ್ ಜಿ, ಮಹಾರಾಜ ಸ್ವಾಮೀಜಿಗಳ ನೇತೃತ್ವದಲ್ಲಿ ಧ್ವಜಾ ಶೋಭಾ ಯಾತ್ರೆ ವೈಭವದಿಂದ ನಡೆಯಿತು. ಸಮಾಜದ ಹಲವು ಗಣ್ಯರು ಶೋಭಾ ಯಾತ್ರೆಯಲ್ಲಿ ಭಾಗವಹಿಸಿದ್ದರು. ಭಕ್ತರು ೫೦೦ಕ್ಕೂ ಹೆಚ್ಚು ಧ್ವಜಗಳ ಪ್ರದರ್ಶನದೊಂದಿಗೆ ಆಗಮಿಸಿದರು.
(Visited 1 times, 1 visits today)



