
ತುಮಕೂರು: ಹೊರಗಿನ ಯಶಸ್ಸನ್ನು ಹುಡುಕುವ ಆತುರದಲ್ಲಿ ನಾವಿಂದು ಅಂತರ್ಯದಲ್ಲಿರುವ ನಿಜವಾದ ಯಶಸ್ಸನ್ನು ಕಂಡುಕೊಳ್ಳುವುದರಲ್ಲಿ ವಿಫಲರಾಗುತ್ತಿದ್ದೇವೆ. ಹಾಗಾಗಿ, ಪ್ರತಿಯೊಬ್ಬರೂ ಮೊದಲು ತಮ್ಮ ಅಂತರಳವನ್ನು ಗೆಲ್ಲಲು ಕಲಿಯಬೇಕು ಎಂದು ಬೆಂಗಳೂರಿನ ಕರ್ನಾಟಕ ಸಂಸ್ಕöÈತ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಎಸ್. ಅಹಲ್ಯಾ ಅವರು ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯದ ವಾಣಿಜ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಹಾಗೂ ಡಾ. ಪಿ. ಸದಾನಂದ ಮಯ್ಯ ಸ್ಕೂಲ್ ಆಫ್ ಕಾಮರ್ಸ್ ಅಂಡ್ ಮ್ಯಾನೇಜ್‌ಮೆಂಟ್ ವತಿಯಿಂದ ಜೂ. ೨೯ ಸೋಮವಾರದಂದು ಎಂ.ಕಾA ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ‘ಆಂತರ್ಯ’ ವಿದಾಯ ಸಮಾರಂಭದಲ್ಲಿ ಮಾತನಾಡಿದರು.
ಕೃತಕ ಬುದ್ಧಿಮತ್ತೆಯ ಇಂದಿನ ಯುಗದಲ್ಲಿ ಉದ್ಯೋಗಾವಕಾಶಗಳ ಕುರಿತು ಆತಂಕ ಮೂಡುವುದು ಸಹಜ. ಆದರೆ ತಂತ್ರಜ್ಞಾನ ಅಥವಾ ಯಂತ್ರಗಳು ಬಂದ ತಕ್ಷಣವೇ ಎಲ್ಲವೂ ಮುಗಿಯುವುದಿಲ್ಲ. ಬದಲಿಗೆ ಅದಕ್ಕೆ ಪೂರಕವಾದ ಹೊಸ ಕೆಲಸಗಳು ಮತ್ತು ಅವಕಾಶಗಳು ಸೃಷ್ಟಿಯಾಗುತ್ತವೆ. ನಾವೀಗ ಬದಲಾವಣೆಯ ಸುನಾಮಿಯಲ್ಲಿ ಸಿಲುಕಿದ್ದೇವೆ. ಈ ಅನಿವಾರ್ಯ ಪರಿಸ್ಥಿತಿಯಲ್ಲಿ ಬಿದ್ದು, ಎದ್ದು, ಈಜಿ ದಡ ಸೇರುವುದನ್ನು ನಾವೆಲ್ಲರೂ ಕಲಿಯಬೇಕಾಗಿದೆ ಎಂದರು.
ದೇಶದ ಸರ್ವಾಂಗೀಣ ಬೆಳವಣಿಗೆಯಿಂದ ಹಿಡಿದು ಸಾಮಾನ್ಯ ಜನರ ದೈನಂದಿನ ಜೀವನದವರೆಗೆ ಅರ್ಥಶಾಸ್ತç ಮತ್ತು ವ್ಯವಹಾರ ಜ್ಞಾನ ಅತ್ಯಂತ ಅನಿವಾರ್ಯವಾಗಿದೆ. ಈ ಸಂದರ್ಭದಲ್ಲಿ ಕೌಟಿಲ್ಯನ ಚಿಂತನೆಗಳನ್ನು ಸ್ಮರಿಸಿದ ಅವರು, “ನಮಗೆ ಬೇಕಾದುದನ್ನು ಮೊದಲು ಪಡೆದುಕೊಳ್ಳಬೇಕು, ತದನಂತರ ಅದನ್ನು ಸೂಕ್ತವಾಗಿ ರಕ್ಷಿಸಬೇಕು. ಆ ಮೂಲಕ ಬಂದ ಆದಾಯವನ್ನು ವೃದ್ಧಿಸಿಕೊಳ್ಳಬೇಕು ಹಾಗೂ ಕೊನೆಯಲ್ಲಿ ಬಂದ ಲಾಭವನ್ನು ಸಮಾಜಕ್ಕೆ ದೇಣಿಗೆಯ ರೂಪದಲ್ಲಿ ಹಿಂತಿರುಗಿಸಬೇಕು ಎಂದರು.
ಇAದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಓದು ಮತ್ತು ಮಾನಸಿಕ ಒತ್ತಡಗಳ ಬರದಲ್ಲಿ ಸಿಲುಕಿ ನಾವು ಪ್ರಮುಖವಾದದ್ದನ್ನು ಮರೆಯುತ್ತಿದ್ದೇವೆ. ಪ್ರತಿಯೊಬ್ಬ ರಲ್ಲೂ ನಾನು, ನನ್ನ ಕುಟುಂಬ, ನನ್ನ ಸ್ನೇಹಿತರು ಹಾಗೂ ನನ್ನ ದೇಶ ಎಂಬ ಅಭಿಮಾನ ಮೂಡಬೇಕು. ದೇಶದ ಸಾಂಸ್ಕöÈತಿಕ ಶ್ರೀಮಂತಿಕೆಯನ್ನು ಮೆಲಕು ಹಾಕುವ ಕೆಲಸವಾಗಬೇಕು. ಎಂದರು.
ಎA.ಕಾA (ಮಾಹಿತಿ ವ್ಯವಸ್ಥೆ) ಮುಖ್ಯಸ್ಥರಾದ ಪ್ರೊ. ಪಿ. ಪರಮಶಿವಯ್ಯ ಸ್ವಾಗತಿಸಿದರು. ವಾಣಿಜ್ಯಶಾಸ್ತç ಅಧ್ಯಯನ ಮತ್ತು ಸಂಶೋಧನ ವಿಭಾಗದ ಮುಖ್ಯಸ್ಥರಾದ ಪ್ರೊ. ಸುರೇಶ್ ಬಿ.ಕೆ ವಂದಿಸಿದರು. ವಾಣಿಜ್ಯ ನಿಕಾಯದ ಡೀನ್ ಪ್ರೊ. ಜಿ. ಸುದರ್ಶನ ರೆಡ್ಡಿ, ಹಿರಿಯ ಪ್ರಾಧ್ಯಾಪಕರಾದ ಪ್ರೊ. ಬಿ. ಶೇಖರ್ ಉಪಸ್ಥಿತರಿದ್ದರು.


