ತುಮಕೂರು: ನಗರದ ಮಹಾನಗರ ಪಾಲಿಕೆ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆಯ ಮುಂಭಾಗದಲ್ಲಿ ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ವತಿಯಿಂದ ನಾಡಪ್ರಭು ಕೆಂಪೇಗೌಡರ ಜಯಂತಿ, ಛತ್ರಪತಿ ಶಾಹು ಮಹಾರಾಜ್ ಜಯಂತಿ ಹಾಗೂ ಕ್ರಾಂತಿಕಾರಿ ಕುಂದ್ಮಲ್ ರಂಗರಾವ್ ರವರುಗಳ ಜಯಂತ್ಯೋತ್ಸವವನ್ನು ಒಟ್ಟಿಗೆ ಆಚರಣೆ ಮಾಡಲಾಯಿತು.
ಮಹಾನ್ ನಾಯಕರುಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಸಿಹಿ ಹಂಚಿಕೆ ಮಾಡುವುದರ ಮೂಲಕ ಜನ್ಮ ದಿನಾಚರಣೆಯನ್ನು ವಿಶೇಷಪೂರ್ಣವಾಗಿ ಆಚರಣೆ ಮಾಡುವುದರ ಮೂಲಕ ವಿಶೇಷ ಸಂದೇಶವನ್ನು ರವಾನೆ ಮಾಡಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಜಿಲ್ಲಾ ಅಧ್ಯಕ್ಷರು ಎನ್. ಕೆ ನಿಧಿ ಕುಮಾರ್ ವಹಿಸಿಕೊಂಡು ಮಹಾನ್ ನಾಯಕರುಗಳ ಜೀವನದ ಚರಿತ್ರೆಯ ಬಗ್ಗೆ ವಿಶ್ಲೇಷಣೆ ನೀಡಿದರು.
ನಾಡಪ್ರಭು ಕೆಂಪೇಗೌಡರು ಆಧುನಿಕ ಬೆಂಗಳೂರಿನ ನಿರ್ಮಾತರು, ಭರತ ಖಂಡದ ಇತಿಹಾಸದಲ್ಲಿ ಕೇವಲ ಯುದ್ಧಗಳನ್ನು ಗೆದ್ದು ರಕ್ತದ ಹಾದಿಯಲ್ಲಿ ಸಾಮ್ರಾಜ್ಯ ಕಟ್ಟಿದ ರಾಜರಿದ್ದಾರೆ. ಆದರೆ, ಕತ್ತಿ ಹಿಡಿಯುವ ಕೈಗಳಿಂದಲೇ ಪ್ರಜಾ ಕಲ್ಯಾಣದ ಭವ್ಯ ನಗರಿಯನ್ನು ಸೃಷ್ಟಿಸಿ, ಜನಮನ ಗೆದ್ದ ಮಹಾ ಮಾನವತಾವಾದಿ, ವಿಜೇತ ರಾಜ ಎಂದರೆ ಅದು ನಾಡಪ್ರಭು ಕೆಂಪೇಗೌಡರು ಮಾತ್ರ. ೧೬ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ಅತ್ಯಂತ ಶಕ್ತಿಶಾಲಿ ಪಾಳೇಗಾರರಾಗಿದ್ದ ಕೆಂಪೇಗೌಡರು, ಕೇವಲ ಒಬ್ಬ ಆಡಳಿತಗಾರನಾಗಿರಲಿಲ್ಲ ಅವರು ಕಾಲವನ್ನು ಮೀರಿದ ದೂರದೃಷ್ಟಿ ಹೊಂದಿದ್ದ ಮಹಾನ್ ಯುಗಪುರುಷ. ರಣರಂಗದ ವೀರ, ರಾಜತಾಂತ್ರಿಕ ಚತುರ ಕೆಂಪೇಗೌಡರು ಶೌರ್ಯ ಮತ್ತು ಪರಾಕ್ರಮಗಳ ಮೂರ್ತಿ ರೂಪವಾಗಿದ್ದರು. ವೈರಿ ಪಡೆಗಳನ್ನು ರಣರಂಗದಲ್ಲಿ ಧೂಳೀಪಟ ಮಾಡುವ ವೀರತ್ವ ಅವರ ರಕ್ತದಲ್ಲೇ ಇತ್ತು ಎಂದರು.
ಮುAದುವರೆದು ಕ್ರಾಂತಿಕಾರಿ ಸಮಾಜ ಸುಧಾರಕ ಕುದ್ಮುಲ್ ರಂಗರಾವ್ ರವರ ಕುರಿತು ಮಾತನಾಡುತ್ತಾ ಮಂಗಳೂರಿನ ಮಣ್ಣಿನಲ್ಲಿ ದೀನದಲಿತರ, ಶೋಷಿತರ ಕಣ್ಣೀರು ಒರೆಸಲು ಅವತರಿಸಿದ ಮಹಾನ್ ಚೇತನ ಕುದ್ಮುಲ್ ರಂಗರಾವ್ ಆಗಿದ್ದರು. ಇಡೀ ಸಮಾಜವೇ ಅಸ್ಪöÈಶ್ಯತೆಯ ಕತ್ತಲಲ್ಲಿ ಮುಳುಗಿದ್ದ ಕಾಲದಲ್ಲಿ, ದಲಿತರ ಏಳಿಗೆಗಾಗಿ ತಮ್ಮ ಇಡೀ ಜೀವನ, ಆಸ್ತಿ-ಅಂತಸ್ತು ಎಲ್ಲವನ್ನೂ ಧಾರೆ ಎರೆದಂತಹವರಾಗಿದ್ದರು. ದಲಿತ ಸಮುದಾಯದ ಮಕ್ಕಳಿಗೆ ಶಿಕ್ಷಣ ನೀಡಲು ಅವರು ‘ಡಿಪ್ರೆಸ್ಡ್ ಕ್ಲಾಸಸ್ ಮಿಷನ್’ ಸ್ಥಾಪಿಸಿ, ತಾವೇ ಖುದ್ದಾಗಿ ಶಾಲೆಗಳನ್ನು ತೆರೆದರು. ಅಸ್ಪöÈಶ್ಯತೆಯನ್ನು ಸಮಾಜದಿಂದ ಕಿತ್ತೊಗೆಯಲು ಅವರು ಪಟ್ಟ ಶ್ರಮ ಇತಿಹಾಸದಲ್ಲಿ ಬಂಗಾರದ ಅಕ್ಷರಗಳಲ್ಲಿ ಬರೆದಿಡುವಂಥದ್ದು ಎಂದರು.
ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ರವಿಕುಮಾರ್ ಎನ್ ಮಾತನಾಡುತ್ತ ಸಾಮಾಜಿಕ ನ್ಯಾಯದ ಹರಿಕಾರ ಸಮಾನತೆಯ ಪ್ರತಿಪಾದಕ ಶಿಕ್ಷಣದ ಮಹತ್ವವನ್ನು ಜನಸಾಮಾನ್ಯರಿಗೆ ತಲುಪಿಸಿದ ಮಹಾನ್ ಸಮಾಜ ಸುಧಾರಕ ಛತ್ರಪತಿ ಶಾಹು ಮಹಾರಾಜರವರು ಅವರ ಜನ್ಮದಿನಾಚರಣೆಯನ್ನು ಇಂದು ನಾವು ಆಚರಿಸುತ್ತಿದ್ದೇವೆ, ಈ ಮಹಾನ್ ನಾಯಕರು ಶೋಷಿತರು ದಲಿತರು ಹಿಂದುಳಿದ ವರ್ಗಗಳು ರೈತರು ಹಾಗೂ ಮಹಿಳೆಯರ ಬದುಕಿನಲ್ಲಿ ಹೊಸ ಭರವಸೆ ಮೂಡಿಸಿದ ಮಹಾನ್ ದೂರದೃಷ್ಟಿಯ ನಾಯಕರಾಗಿದ್ದವರು. ಜನಸೇವೆಯ ಸಾಧನವಾಗಿ ಬಳಸಿದ ಅವರು, ಶಿಕ್ಷಣ, ಸಮಾನ ಅವಕಾಶ ಸಾಮಾಜಿಕ ನ್ಯಾಯ ಮತ್ತು ಮಾನವೀಯತೆಯ ಮೌಲ್ಯಗಳನ್ನು ಎತ್ತಿಹಿಡಿದು ಆದರ್ಶ ಆಡಳಿತವನ್ನು ನೀಡಿದಂತಹವರು ಎಂದು ತಿಳಿಸಿದರು.
ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ಜಿಲ್ಲಾ ಕಾರ್ಯದರ್ಶಿ ತ್ಯಾಗರಾಜ್ ಕೆ ಮಾತನಾಡುತ್ತಾ ಬಾಬಾಸಾಹೇಬರ ವಿದ್ವತ್ತು ಮತ್ತು ನಾಯಕತ್ವವನ್ನು ಮೊದಲ ಬಾರಿಗೆ ಗುರುತಿಸಿ ಅವರೇ ನಿಜವಾದ ನಾಯಕ ಎಂದು ಘೋಷಿಸಿದ ಕೀರ್ತಿ ಶಾಹು ಮಹಾರಾಜರಿಗೆ ಸಲ್ಲುತ್ತದೆ. ಬಾಬಾಸಾಹೇಬರು ಹೊರತಂದ ‘ಮೂಕನಾಯಕ’ ಪತ್ರಿಕೆಗೆ ಆರ್ಥಿಕ ನೆರವು ನೀಡುವ ಮೂಲಕ ಶೋಷಿತರ ಧ್ವನಿ ಜಗತ್ತಿಗೆ ತಲುಪುವಂತೆ ಮಾಡಿದರು. ೧೯೨೦ರ ಮಾಂಗಾವ್ ಪರಿಷತ್ತಿನಲ್ಲಿ ಅವರು ಬಾಬಾಸಾಹೇಬರನ್ನು ಕೊಂಡಾಡಿದ ರೀತಿ ಇತಿಹಾಸ ಪುಟಗಳಲ್ಲಿ ದಾಖಲಾಗಿದೆಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಜಿಲ್ಲಾ ಅಧ್ಯಕ್ಷರು ಎನ್. ಕೆ ನಿಧಿಕುಮಾರ್, ಕರ್ನಾಟಕ ರಾಜ್ಯದ ಮಾಜಿ ಸಚಿವರು ಹಾಗೂ ಮಾಜಿ ಶಾಸಕರಾದ ಸೊಗಡು ಶಿವಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ರವಿಕುಮಾರ್ ಎನ್., ಜಿಲ್ಲಾ ಉಪಾಧ್ಯಕ್ಷರಾದ ಲಕ್ಷಿ÷್ಮÃನಾರಾಯಣ ಎಸ್, ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷರಾದ ಟೈಲರ್ ಜಗದೀಶ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹರೀಶ್ ಕುಮಾರ್, ವಿದ್ಯಾರ್ಥಿ ಘಟಕದ ಜಿಲ್ಲಾಧ್ಯಕ್ಷರಾದ ಕಿರಣ್ ವೈ.ಎಸ್. ಜಿಲ್ಲಾ ಕಾರ್ಯದರ್ಶಿ ತ್ಯಾಗರಾಜ ಕೆ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ನಿರ್ದೇಶಕರಾದ ಮೇಳೇಕಲ್ಲಹಳ್ಳಿ ಯೋಗೇಶ್, ಕಾಂಗ್ರೆಸ್ ಮುಖಂಡರು & ವಕೀಲರಾದ ಬಿ.ಜಿ ಲಿಂಗರಾಜ್, ಪದಾಧಿಕಾರಿಗಳಾದ ಗಂಗಾಧರ್ ಜಿ. ಆರ್. ಹನುಮನರಸಯ್ಯ. ರವಿಕುಮಾರ್ ಬಿ. ಸೋಮಣ್ಣ ಜೈಪುರ, ಶ್ರೀಕಾಂತ್ ಸೇರಿದಂತೆ ಇನ್ನು ಮುಂತಾದವರು ಉಪಸ್ಥಿತರಿದ್ದರು.

(Visited 1 times, 1 visits today)