
ತುಮಕೂರು : ಇಂದು ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಮತ್ತು ಸ್ಲಂ ಜನಾಂದೋಲನ ಕರ್ನಾಟಕದಿಂದ ನಗರದ ಕನ್ನಡ ಭವನದಲ್ಲಿ ೨೪ನೇ ವರ್ಷದ ಸ್ಲಂ ವಿದ್ಯಾರ್ಥಿಗಳ ಪುರಸ್ಕಾರ ಕಾರ್ಯಕ್ರಮವನ್ನು ತುಮಕೂರು ನಗರ ಶಾಸಕರಾದ ಶ್ರೀ ಜಿ.ಬಿಜ್ಯೋತಿಗಣೇಶ್ ಉದ್ಘಟಿಸಿ ಮಾತನಾಡಿದರು.
ಕೊಳಚೆ ಪ್ರದೇಶಗಳಲ್ಲಿ ಯಾವುದೇ ಸೌಲಭ್ಯಗಳಿಲ್ಲದೆ ಕಷ್ಠದ ಪರಿಸ್ಥಿತಿಗಳಲ್ಲಿ ಪೋಷಕರು ತಮ್ಮ ಮಕ್ಕಳ ಓದನ್ನು ತಮ್ಮಗೆ ತೊಂದರೆಯಿದ್ದರೂ ಇತ್ತೀಚಿನ ದಿನಗಳಲ್ಲಿ ವಿದ್ಯಾಭ್ಯಾಸಕ್ಕೆ ಒತ್ತು ನೀಡುತ್ತಿರುವುದು ಶ್ಲಾಘನೀಯ ಕಳೆದ ೨೪ ವರ್ಷಗಳಿಂದ ತುಮಕೂರು ಸ್ಲಂ ಸಮಿತಿ ಜಾತ್ಯಾತೀತವಾಗಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತ ಬಂದಿರುವುದು ಅಭಿನಂದನೀಯವಾಗಿದೆ. ಭವಿಷ್ಯದಲ್ಲಿ ಮಕ್ಕಳು ಯಾರು ಯಾರು ಏನೇನಾಗುತ್ತಾರೋ ಗೊತ್ತಿಲ್ಲ ಹಾಗಾಗಿ ಸ್ಲಂ ವಿದ್ಯಾರ್ಥಿಗಳು ಭವಿಷ್ಯದ ದೃಷ್ಠಿಯಿಂದ ವಿದ್ಯಾವಂತರಾಗಿ ಕಷ್ಠದಿಂದ ಸುಖದದಾರಿಗೆ ಬರಬೇಕು. ಇಂದು ಶಿಕ್ಷಣ ದುಬಾರಿಯಾಗಿದೆ ಆದರೂ ಸರ್ಕಾರಿ ವ್ಯವಸ್ಥೆಯನ್ನು ಉಪಯೋಗಿಸಿಕೊಂಡು ಸ್ಲಂನಲ್ಲಿರುವ ಪ್ರತಿಭಾವಂತರು ಮುಂದೆ ಬರಬೇಕೆಂದರು. ಸ್ಲಂ ಎಂದು ಕರೆಯುವುದನ್ನು ನಿಲ್ಲಿಸಬೇಕು ಇದಕ್ಕಾಗಿ ಸರ್ಕಾರ ಪರ್ಯಾಯ ಪದವನ್ನು ನಾಮಕರಣ ಮಾಡಬೇಕೆಂದು ಸದನದಲ್ಲಿ ಒತಾಯಿಸುತ್ತೇನೆ ಎಂದರು.
ದೇಶಕ್ಕೆ ಸ್ವಾತಂತ್ರö್ಯ ಬಂದು ೭೮ ವರ್ಷಗಳು ಕಳೆಯುತ್ತಿವೆ ಪ್ರಧಾನ ಮಂತ್ರಿ ಆವಾಸ್ ಯೋಜನೆಯಲ್ಲಿ ಮನೆ ಇಲ್ಲದವರಿಗೆ ವಸತಿ ಕಲ್ಪಿಸಲು ಮುಂದಾಗಿದ್ದೇವೆ. ಸ್ಲಂ ನಿವಾಸಿಗಳಿಗೆ ನೀಡುವ ವಸತಿ ಸಮುಚ್ಚಯಗಳು ೨೦೦ ರಿಂದ ೫೦೦ ವಸತಿ ಸಮುಚ್ಚಯಗಳಾಗಿದ್ದಲ್ಲಿ ಎಲ್ಲಾ ರೀತಿಯ ಸೌಲಭ್ಯ ಕೊಡಲು ಸಾಧ್ಯ ಈ ಹಿಂದೆ ದಿಬ್ಬೂರಿನಲ್ಲಿ ೧೨೦೦ ಮನೆಗಳನ್ನು ನೀಡಿರುವುದು ವೈಜ್ಞಾನಿಕವಾಗಿಲ್ಲ ಹಾಗಾಗಿ ಮುಂದಿನ ದಿನಗಳಲ್ಲಿ ತುಮಕೂರು ಸೇರಿದಂತೆ ಇತರೆ ನಗರಗಳಲ್ಲಿ ಸ್ಲಂ ಜನರನ್ನುಅಥವಾ ನಿವೇಶನ ರಹಿತರನ್ನು ಪುನರ್ ವಸತಿಗೊಳಿಸಬೇಕಾದಲ್ಲಿ ಕನಿಷ್ಠ ಕುಟುಂಬಗಳನ್ನಷ್ಟೇ ಪರಿಗಣಿಸಬೇಕು. ಸ್ಲಂ ಸಮಿತಿ ನಿವೇಶನ ರಹಿತರ ೩೧ ಒಂಟಿ ಮಹಿಳೆ ನಿವೇಶನ ರಹಿತರಿಗೆ ಹೊನ್ನೇನಹಳ್ಳಿಯ ೧೯೨ ವಸತಿ ಸಮುಚ್ಚಯಗಳಲ್ಲಿ ಅನರ್ಹ ಪಲಾನುಭವಿಗಳನ್ನು ತೆಗೆದು ಆಧ್ಯತೆ ಮೇಲೆ ಸೇರಿಸುವುದಾಗಿ ತಿಳಿಸಿದರು.


