
ಕೊರಟಗೆರೆ: ಮೇವು ಕೆಡಬಾರದುಎಂದುಕೆಮಿಕಲ್ ಬಳಸಿದ ಮೇವನ್ನ ಕುರಿಗಳು ಸ್ಥಳದಲ್ಲಿಯೇ ಮೃತಪಟ್ಟಿರುವಘಟನೆ ವಡ್ಡೇರಹಳ್ಳಿ ಗ್ರಾಮದಲ್ಲಿ ನೆಡೆದಿದೆ.
ತಾಲೂಕಿನ ಕೋಳಾಲ ಹೋಬಳೀಯ ಚಿನ್ನಹಳ್ಳಿ ಗ್ರಾಪಂ ವ್ಯಾಪ್ತಿಯ ವಡ್ಡೇರಹಳ್ಳಿ ಗ್ರಾಮದ ಹನುಮಂತೇಗೌಡಎನ್ನವರೈತಹೈನುಗಾರಿಕೆ ಮಾಡಿಕೊಂಡಿದ್ದು, ಮನೆಯ ಪಕ್ಕದಲ್ಲಿಯೇ ಸುಮಾರು ೭೦ ಕ್ಕೂ ಹೆಚ್ಚು ನಾಟಿ ಸುವರ್ಣ, ಡಾರ್ಪರ್‌ಎನ್ನವ ಹೈಬ್ರೀಡ್ ತಳಿ ಕುರಿಗಳನ್ನ ಸಾಕಾಣಿಕೆ ಮಾಡುತ್ತಿದ್ದರು. ಒಂದುಕುರಿ ೬೦ ಸಾವಿರ, ಒಂದುಟಗರು ೧.೫ ಲಕ್ಷ ಬೆಲೆ ಬಾಳುವಂತ ಕುರಿಗಳನ್ನ ಕಳೆದುಕೊಂಡು ರೈತಕಂಗಾಲಾಗಿದ್ದಾನೆ. ಸುಮಾರು ೬೨ ಕುರಿಗಳು ಸ್ಥಳದಲ್ಲಿಯೇ ಮೃತಪಟ್ಟಿದ್ರೆ ಉಳಿದ ಕುರಿಗಳ ಪರಿಸ್ಥಿತಿ ಚಿಂತಾಜನಕವಾಗಿವೆಎನ್ನಲಾಗಿದೆ.
ಸುಮಾರು ವರ್ಷಗಳಿಂದ ರೈತಹನುಮಂತೇಗೌಡ ಸುಮಾರು ೧೧೦ ಕ್ಕೂ ಹೆಚ್ಚು ನಾಟಿ ಸುವರ್ಣ, ಡಾರ್ಪರ್‌ಕುರಿಗಳನ್ನ ಸಾಕಾಣಿಕೆ ಮಾಡಿಕೊಂಡು ಬರುತ್ತಿದ್ದು, ೪೦ ಕುರಿಗಳನ್ನ ಬೇರೆಡೆ ಸಾಕಾಣಿಕೆ ಮಾಡಲಾಗುತ್ತಿದ್ದ, ಮನೆ ಹತ್ತಿರ ಸುಮಾರು ೭೦ ಕ್ಕೂ ಹೆಚ್ಚು ಕುರಿಗಳನ್ನ ಸಾಕಾಣಿಕೆ ಮಾಡುತ್ತಿದ್ದರು. ಮನೆಯಲ್ಲಿದ್ದಕುರಿಗೆ ಹಾಕುವ ಮೇವು ಕೆಡಬಾರದುಎನ್ನವಉದ್ದೇಶದಿಂದಕೆಮಿಕಲ್ ಬಳಸಲಾಗಿದೆ ಎನ್ನಲಾಗಿದೆ.ಸುಮಾರು ೬೨ ಕುರಿಗಳು ಮೇವು ತಂದುಜೀವ ಕಳೆದುಕೊಂಡಿವೆ. ಸ್ಥಳಕ್ಕೆ ಆರೋಗ್ಯ ಇಲಾಖೆ, ಪಶು ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನೆಡೆಸಿದ್ದಾರೆ ಎಂದು ತಿಳಿದುಬಂದಿದೆ.
ಇದೇ ವೇಳೆ ಕುರಿ ಕಳೆದುಕೊಂಡ ಹನುಮಂತೇಗೌಡ ಪತ್ನಿಸರೋಜಮ್ಮ ಮಾತನಾಡಿಸುಮಾರು ೧೧೦ ಕ್ಕೂ ಹೆಚ್ಚು ನಾಟಿ ಸುವರ್ಣ, ಡಾರ್ಪರ್‌ಕುರಿಗಳನ್ನ ಸಾಕಾಣಿಕೆ ಮಾಡಲಾಗುತ್ತಿದ್ದು೪೦ ಕುರಿಗಳನ್ನ ಬೇರೆಡೆ ಸಾಕಾಣಿಕೆ ಮಾಡುತ್ತಿದ್ದೇವು. ಉಳಿದ ಕುರಿಗಳನ್ನ ಮನೆ ಹತ್ತಿರನೇ ಸಾಕಾಣಿಕೆ ಮಾಡುತ್ತಿದ್ದು, ಮೇವು ತಿಂದು ೬೨ ಕುರಿಗಳು ಮೃತಪಟ್ಟಿವೆ. ೨೫ ಲಕ್ಷ ಬಡವಾಳ ಹಾಕಲಾಗಿತ್ತು.ಅಧಿಕಾರಿಗಳು ಸರ್ಕಾರದಿಂದಸೂಕ್ತ ಪರಿಹಾರ ನೀಡಬೇಕುಎಂದು ಒತ್ತಾಯಿಸಿದರು.
ಸ್ಥಳಕ್ಕೆ ತಹಸೀಲ್ದಾರ್ ಭೇಟಿ: ೬೨ ಕುರಿಗಳು ಮೃತಪಟ್ಟಿರುವ ವಿಷಯ ತಿಳಿದ ತಕ್ಷಣಕೊರಟಗೆರೆ ತಹಸೀಲ್ದಾರ್ ಮಂಜುನಾಥ್ ಸ್ಥಳಕ್ಕೆ ಬೇಟಿ ನೀಡಿದ್ದಾರೆ.ಎಲ್ಲಾ ಕುರಿಗಳನ್ನ ಮತಣೋತ್ತರ ಪರೀಕ್ಷೆ ಮಾಡಿಬಂದ ವರದಿಯನ್ನ ಜಿಲ್ಲಾಧಿಕಾರಿಗಳ ಮೂಲಕ ಕರ್ನಾಟಕ ಸರ್ಕಾರಕ್ಕೆ ವರದಿ ಸಲ್ಲಿಸಿ ರೈತನಿಗೆ ಸೂಕ್ತ ಪರಿಹಾರ ನೀಡುವಂತೆ ಮನವಿ ಮಾಡಲಾಗುವುದುಎಂದು ತಿಳಿಸಿದ್ದಾರೆ.


