
ತುಮಕೂರು: ಕುಡಿಯುವ ನೀರು ಮತ್ತು ಬರವನ್ನು ತುರ್ತು ಪರಿಸ್ಥಿತಿ ಎಂದು ತಿಳಿದು ತ್ವರಿತ ರೀತಿ ಕೆಲಸ ಮಾಡಲು ಉಪ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ.ಜಿ ಪರಮೇಶ್ವರ ಸೂಚನೆ.
ಬರದ ಪರಿಸ್ಥಿತಿ ಇರುವುದರಿಂದ ಕಡಿಮೆ ನೀರು ಬಳಸಿ ಕಡಿಮೆ ಹಣ ಖರ್ಚು ಮಾಡಲು ಸಾರ್ವಜನಿಕರಿಗೆ ಸೂಚನೆ. ೧೮೭೬ ರಲ್ಲಿ ಎಲ್ಮಿನೋ ಪ್ರಕೃತಿ ವಿಕೋಪ ಉಂಟಾಗಿತ್ತು. ಅದೇ ರೀತಿ ಸೂಪರ್ ಎಲ್ಮಿನೋ ಈಗ ಬಂದಿದೆ.ಸಮುದ್ರದ ಮೇಲ್ಭಾಗದ ಲ್ಲಿ ಉಷ್ಣಂಶಾ ಹೆಚ್ಚಾಗಿ ಪ್ರಪಂಚದ ಅರ್ಧ ಭಾಗ ಬರದ ಛಾಯೆ ಉಂಟಾಗಿದೆ.
ಪಾವಗಡ ಬಿಟ್ಟರೆ ಉಳಿದೆಲ್ಲ ತಾಲ್ಲೂಕಿನಲ್ಲಿ ಮಳೆಯೆ ಕೊರತೆಯಾಗಿದೆ. ಸುರೇಶ್ ಬಾಬು ಮಾತನಾಡಿ ಮುಂಗಾರು ಸಂಪೂರ್ಣ ವೈಫಲ್ಯ ವಾಗಿದೆ. ಕೆಲವು ರೈತರು ಗೊಬ್ಬರ ಕೊಂಡು ಬಿತ್ತನೆ ಮಾಡಿದ್ದಾರೆ ,ರೈತರಿಗೆ ಎಕರೆಗೆ ಇಷ್ಟು ಅಂತ ಪರಿಹಾರ ನೀಡಬೇಕು .ಹಾಗೂ ವಿಮೆಯನ್ನು ಎಲ್ಲಾ ರೈತರಿಗೂ ಬರುವಂತೆ ನೋಡಿಕೊಳ್ಳಲು ಸಲಹೆ ನೀಡಿದರು.
ಗುಬ್ಬಿ ಶಾಸಕ ಶ್ರೀನಿವಾಸ ಮಾತನಾಡಿ ಕುಡಿಯುವ ನೀರು ಅದರು ಅಧಿಕಾರಿಗಳು ಕೋಬೇಕು ಜಿ ಪಂ ಸಿ ಇ ಓ ಪೋನ್ ಎತ್ತಲ್ಲ.ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ನೀರಿಲ್ಲ ಕರೆ ಮಾಡಿದ್ದರು ಅವರು ಎತ್ತಲ್ಲ.ರೈತರು ಹಾಸ್ಟೆಲ್ ಗೆ ನೀಡುತ್ತಿದ್ದಾರೆ.ನೀವು ತ್ವರಿತ ರೀತಿಯಲ್ಲಿ ಕೆಲಸ ಮಾಡುವುದು ಇದ್ದರೆ ನೀವು ಕಾರ್ಯಕ್ರಮ ಅನುಷ್ಠಾನ ಮಾಡಿ.ಜೆ ಜೆ ಎಂ ಅನುಷ್ಠಾನವು ಸರಿಯಾಗಿ ಆಗುತ್ತಿಲ್ಲ.ಮೋಟರ್,ಪಂಪು,ಪೈಪ್ ಗಳನ್ನು ಕೊಡಲು ಹಣ ಇಲ್ಲ ಅಂದರೆ ಹೇಗೆ.ಬರ ನಿರ್ವಹಣೆಗೆ ಡಿ.ಸಿ ಅಕೌಂಟ್ ನಲ್ಲಿ ಹಣ ಮುಂಗಡವಾಗಿ ಇಡ ಬೇಕು.ಮೊದಲು ಅಧಿಕಾರಿಗಳು ಜನ ಪ್ರತಿನಿಧಿಗಳ ಪೋನ್ ಮೊದಲು ಸ್ವೀಕರ ಮಾಡಲು ಹೇಳಿ ಎಂದರು.
ಕುಣಿಗಲ್ ಶಾಸಕ ರಂಗನಾಥ್ ಮಾತನಾಡಿ ಗುಬ್ಬಿ ಶಾಸಕರ ಸ್ಥಿತಿ ಯನ್ನೆ ನಾನು ಅನುಭವಿಸುತ್ತಿದೇನೆ.ಜನ ನಮ್ಮ ನ್ನೂ ಸುಮ್ಮನೆ ಬಿಡತ್ತಾ ಇಲ್ಲ.ಸದ್ಯಕ್ಕೆ ಈಗ ೪೦ ಬೋರ್ ವೇಲ್ ಗಳು ಬೇಕು.ಬೋರ್ ವೆಲ್ಲಾ ಏಜೆನ್ಸಿ ಅವರಿಗೆ ಸರಿಯಾಗಿ ಹಣ ಬಿಡುಗಡೆ ಮಾಡತ್ತಾ ಇಲ್ಲ ಅವರು ಹೇಗೆ ಬಂದು ಬೋರ್ ವೇಲ್ ಕೊರಿಯುತ್ತಾರೆ..ಮತ್ತೆ ಫೇಲ್ ಅದ ಬೋರ್ ವೇಲ್ ಗಳ ಕಥೆ ಏನು..?೨೬ ಶುದ್ಧ ಕುಡಿಯುವ ನೀರಿನ ಘಟಕಗಳು ಕೆಟ್ಟು ನಿಂತ್ತಿವೆ.ಅವನು ರಿಪೇರಿ ಮಾಡಲು ಸಹ ಹಣ ಇಲ್ಲ.ಕುಡಿಯುವ ನೀರಿಗಾದರು ಸರಿಯಾದ ಕ್ರಮ ಕೈಗೊಳ್ಳಿ ಜೆ ಜೆ ಎಂ ಕೆಲಸಗಳು ಸರಿಯಾಗಿ ಆಗತ್ತಾ ಇಲ್ಲ ಇದರ ಬಗ್ಗೆ ಸಭೆ ನಡೆಸಲು ಸೂಚನೆ ನೀಡಿದರು.ಹನ್ನೊಂದು ತಾಲ್ಲೂಕುಗಳನ್ನು ನಿಭಾಯಿಸಲು ಸಾದ್ಯವಾಗಿಲ್ಲ ಅಂದರೆ ಪ್ರತ್ಯೇಕ ಜಿಲ್ಲೆ ಮಾಡಿ ಎಂದು ಶಾಸಕರೆ ಹೇಳಿದರು.
ರಮೇಶ್ ಬಾಬು ಮಾತನಾಡಿ ಮೇವು ಬ್ಯಾಂಕ್ ತೆರೆಯಲು ಸೂಚನೆ ನೀಡಿದರು. ವಿಧಾನ ಪರಿಷತ್ ಸದಸ್ಯ ಡಿ.ಟಿ ಶ್ರೀನಿವಾಸ ಮಾತನಾಡಿದರು.
ಜಿಲ್ಲೆಯಲ್ಲಿ ಕೇವಲ ೯/ ಮಾತ್ರ ಬಿತ್ತನೆ ಆಗಿದೆ ಎಂದು ಕೃಷಿ ಅಧಿಕಾರಿ ತಿಳಿಸಿದಾಗ ಪರಮೇಶ್ವರ್ ಎಷ್ಚು ರೈನ್ ಗೇಜ್ ಗಳಿವೆ ಎಂದಾಗ ಕೃಷಿ ಅಧಿಕಾರಿ ೩೫ ರೈನ್ ಗೇಜ್ ಗಳಿವೆ ಎಂದಾಗ ಯಾಕೆ ಮಳೆಗಾಲಕ್ಕೂ ಮುಂಚೆ ಈ ರೈನ್ ಗೇಜ್ ಗಳನ್ನು ರಿಪೇರಿ ಮಾಡತ್ತಾ ಇಲ್ಲ ಎಂದು ಕೃಷಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.೩೪೦ ನಲ್ಲಿ ೨೨೯ ಸುಸ್ಥಿತಿಯಲ್ಲಿವೆ.ಇನ್ನೂ ಉಳಿಕೆ ೧೧೧ ಕ್ಕೂ ಹೆಚ್ಚು ಕೆಟ್ಟು ನಿಂತಿವೆ ಎಂದರು.ಈ ವೇಳೆ ಸಹ ರೈನ್ ಪಾಲ (ಮಳೆಮಾಪನ) ಕೇಂದ್ರಗಳು ಯಾಕೆ ಕೆಟ್ಟಿವೆ ಮೊದಲು ಸರಿ ಮಾಡಿಸಿ ಎಂದು ಅಧಿಕಾರಿಗಳ ವಿರುದ್ಧ ಹರಿಹಾಯಿದರು.
ಗ್ರಾ ಪಂ ನವರು ಇದು ತುರ್ತು ಪರಿಸ್ಥಿತಿ ಇರುವುದರಿಂದ ಪಂಚಾಯತಿ ಅಧಿಕಾರಿಗಳು ನಿಮ್ಮ ಒಟ್ಟು ಅನುದಾನದಲ್ಲಿ ೫೦ / ಹಣ ಕುಡಿಯುವ ನೀರಿಗೆ ಖರ್ಚು ಮಾಡಿ ಎಂದು ಆದೇಶ ನೀಡಿದರು. ಗೋಶಾಲ ಪ್ರಾರಂಭ ಸದ್ಯಕ್ಕೆ ಇಲ್ಲ. ಗುಬ್ಬಿ ಶಾಸಕ ಶ್ರೀನಿವಾಸ ಈ ಬಗ್ಗೆ ಗಮನ ಸೇಳೆದಾಗ ಆಂದ್ರ, ತೆಲಂಗಾಣ ರಾಜ್ಯದ ಲ್ಲೂ ಮೇವು ಇಲ್ಲ.ಅದ್ದರಿಂದ ಗೋ ಶಾಲೆ ಪ್ರಾರಂಭದ ಬಗ್ಗೆ ಮುಂದಿನ ದಿನಗಳಲ್ಲಿ ನೋಡೋಣ ಎಂದು ಪರಮೇಶ್ವರ ಹೇಳಿದರು.
ತುಮಕೂರು ನಗರದಲ್ಲಿ ೧೭೬೧ ಬೋರ್ ವೇಲ್ ಗಳು ಗುಬ್ಬಿ ಪಟ್ಟಣದಲ್ಲಿ ೬೬ ಬೋರ್ ವೇಲ್ ಗಳಿವೆ.ಸಿರಾ ಮತ್ತು ಕೊರಟಗೆರೆ ಸ್ಥಿತಿ ಚಿಂತಾ ಜನಕ ಸ್ಥಿತಿ ಸನ್ನಿವೇಶ ಇದೆ.೩೬೬ ಎಂ ಸಿ ಎಫ್ ಟಿ ನೀರು ಬುಗಡನಹಳ್ಳಿಯಲ್ಲಿ ಇದೆ.ಎರಡು ದಿನಕ್ಕೆ ಒಮ್ಮೆ ನೀರು ಬಿಟ್ಟರೆ ಮೂರು ತಿಂಗಳು ನೀರು ಕೊಡಬಹುದು ೭೬೦ ಬೋರ್ ವೇಲ್ ಗಳು ಸುಸ್ಥಿತಿಯಲ್ಲಿವೆ ಎಂದು ಆಯುಕ್ತೆ ಶುಭ ಮಾಹಿತಿ ನೀಡಿದರು. ಯಾವುದೆ ಕೆರೆ ಮತ್ತು ಡ್ಯಾಮ್‌ಗಳಲ್ಲಿನ ನೀರು ಕೃಷಿ ಚಟುವಟಿಕೆ ಗಳಿಗೆ ಬಳಸದಂತೆ ಮುಖ್ಯಮಂತ್ರಿಗಳು ಈಗಾಗಲೇ ಸೂಚಿಸಿದ್ದಾರೆ.ಕೆರೆ ನೀರು ಸಂರಕ್ಷಣೆಗೆ ಎಲ್ಲಾ ಅಧಿಕಾರಿಗಳು ಮುಂದಾಗಬೇಕು ಎಂದರು.


