BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಕಾಡುಗೊಲ್ಲರು ಕೃಷ್ಣ ಜಯಂತಿ ಬದಲು ಬುಡಕಟ್ಟಿನ ಮೂಲ ಸಂಸ್ಕೃತಿ ಉಳಿಸಿ
  • ರಾಹುಲ್‌ಗಾ0ಧಿ ಅವರ ಮೇಲಿನ ಎಫ್‌ಐಆರ್ ಖಂಡಿಸಿ ಪ್ರತಿಭಟನೆ
  • ಕ0ಪನಹಳ್ಳಿ ರಸ್ತೆಗೆ ದುರಸ್ತಿ ಭಾಗ್ಯ
  • ಸರ್ಕಾರಿ ಕಚೇರಿಗಳಿಗೆ ಅಲೆದಾಟ ತಪ್ಪಿಸಲು ಪ್ರಜಾಸೇವಾ ಆಂದೋಲನ
  • ಜ್ಞಾನಾರ್ಜನೆ-ನೈತಿಕ ಮೌಲ್ಯಗಳೇ ವಿದ್ಯಾರ್ಥಿಗಳ ಬದುಕಿನ ದಿಕ್ಸೂಚಿ
  • ಕೆವೈಸಿ ಮಾಡಿಸದಿದ್ದರೆ ಕೈಸೇರದು ಪಿಎಂ ಕಿಸಾನ್ ಕಂತು
  • ರಾಜ್ಯದಲ್ಲಿ ಖಾಲಿ ಇರುವ ಉದ್ಯೋಗಗಳನ್ನು ಭರ್ತಿ ಮಾಡಲು ಡಿವೈಎಫ್ ೧೦ನೇ ಜಿಲ್ಲಾ ಸಮ್ಮೇಳನ ಆಗ್ರಹ
  • ಕನ್ನಡದ ನಾಟಕ ಜಗತ್ತಿಗೆ ದೊಡ್ಡ ಇತಿಹಾಸವಿದೆ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಶೈಕ್ಷಣಿಕ ಕ್ಷೇತ್ರದ ಸಾಧನೆಗೆ ದೊರೆತ ‘ಶಿಕ್ಷಣ ಸಿರಿ’
news

ಶೈಕ್ಷಣಿಕ ಕ್ಷೇತ್ರದ ಸಾಧನೆಗೆ ದೊರೆತ ‘ಶಿಕ್ಷಣ ಸಿರಿ’

ತುಮಕೂರು ವಿವಿಯ ಕುಲಪತಿ ಪ್ರೊ.ಎಂ.ವೆ0ಕಟೇಶ್ವರಲು ಅಭಿನಂದನಾ ಸಮಾರಂಭ
By News Desk BenkiyabaleUpdated:July 17, 2026 5:21 pm

ತುಮಕೂರು: ತುಮಕೂರು ವಿಶ್ವವಿದ್ಯಾನಿಲಯವನ್ನು ರಾಷ್ಟçಮಟ್ಟದಲ್ಲಿ ಕೀರ್ತಿಯ ಶಿಖರಕ್ಕೆ ಏರಿಸಿರುವ ಪ್ರೊ. ಎಂ. ವೆಂಕಟೇಶ್ವರಲು ಅವರ ಕಾರ್ಯ ವೈಖರಿ ಹೆಮ್ಮೆಯ ವಿಚಾರ. ಸರಳ ವ್ಯಕ್ತಿತ್ವ ಮತ್ತು ಶ್ರಮಜೀವಿ ಎಂಬ ಪದಗಳಿಗೆ ಅವರು ನಿದರ್ಶನವಾಗಿದ್ದಾರೆ ಎಂದು ಪಾವಗಡದ ಶ್ರೀ ರಾಮಕೃಷ್ಣ ಸೇವಾಶ್ರಮದ ಸ್ವಾಮಿ ಜಪಾನಂದಜೀ ಮಹಾರಾಜ್ ಅವರು ಶ್ಲಾಘಿಸಿದರು.
ನಗರದಲ್ಲಿ ಶ್ರೀ ರಾಮಕೃಷ್ಣ ಸೇವಾಶ್ರಮ (ಪಾವಗಡ), ಶ್ರೀ ಅನ್ನಪೂರ್ಣೇಶ್ವರಿ ಆಹಾರ ವಿತರಣಾ ಸಮಿತಿ (ತುಮಕೂರು), ಶ್ರೀ ಶಿರಡಿ ಸಾಯಿ ಮಂದಿರ (ಆದರ್ಶ ನಗರ, ತುಮಕೂರು) ಹಾಗೂ ಪ್ರೊ. ಎಂ. ವೆಂಕಟೇಶ್ವರಲು ಅಭಿನಂದನಾ ಗ್ರಂಥ ಸಮಿತಿ ಇವರ ಸಂಯುಕ್ತಾಶ್ರಯದಲ್ಲಿ ಜು. ೧೭ ಶುಕ್ರವಾರದಂದು ಹಮ್ಮಿಕೊಳ್ಳಲಾಗಿದ್ದ ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಎಂ. ವೆಂಕಟೇಶ್ವರಲು ಅವರ ಅಭಿನಂದನಾ ಸಮಾರಂಭ ಮತ್ತು ‘ಶಿಕ್ಷಣ ಸಿರಿ’ ಅಭಿನಂದನಾ ಗ್ರಂಥ ಲೋಕಾರ್ಪಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಾವು ಕೇವಲ ಅಭಿನಂದನೆ ಸಲ್ಲಿಸುವುದಷ್ಟೇ ಅಲ್ಲ, ಗುಣಾಗ್ರಹಿಗಳಾಗಬೇಕು. ಸದಾ ಕೆಲಸಗಳಲ್ಲಿ ಮಗ್ನರಾಗಿರುವ ಪ್ರೊ. ವೆಂಕಟೇಶ್ವರಲು ಅವರ ಜೀವನ ಇತರರಿಗೆ ಆದರ್ಶವಾಗಿದೆ. ಎಐ ಕಾಲಘಟ್ಟದಲ್ಲೂ ಗುರು-ಹಿರಿಯರನ್ನು ಗೌರವಿಸುವ ಗುಣವನ್ನು ಅವರು ಮೈಗೂಡಿಸಿಕೊಂಡಿದ್ದಾರೆ. ಹಸನ್ಮುಖಿಯಾಗಿ ಎಲ್ಲರನ್ನೂ ಪ್ರೀತಿಸುವ, ಒಳ್ಳೆಯ ನಾಯಕತ್ವದ ಗುಣಗಳನ್ನು ಇವರಲ್ಲಿ ಕಾಣಬಹುದು ಎಂದರು.
ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್. ಅರುಣ್ ಮಾತನಾಡಿ, ಯಾವುದೇ ಆಸೆ-ಆಮಿಷಗಳಿಗೆ ಒಳಗಾಗದೆ, ಸ್ವಂತ ಶ್ರಮದಿಂದ ಕುಲಪತಿಗಳಾಗಿ ಹೊರಹೊಮ್ಮಿದವರು ವೆಂಕಟೇಶ್ವರಲು. ಅವರು ಸ್ನೇಹಮಯಿಯಾಗಿದ್ದು, ಜನರ ಹೃದಯದಲ್ಲಿ ಸ್ಥಾನ ಪಡೆದಿದ್ದಾರೆ. ಉನ್ನತ ಶಿಕ್ಷಣ, ಸಂಶೋಧನೆ ಮತ್ತು ಅಧ್ಯಯನಕ್ಕೆ ಹೆಚ್ಚು ಒತ್ತು ನೀಡುವುದರ ಜೊತೆಗೆ, ರಾಜಕಾರಣಿಗಳ ಒತ್ತಡವನ್ನೂ ಮೀರಿ ಉತ್ತಮ ಕೆಲಸಗಳನ್ನು ಮಾಡಿದ್ದಾರೆ. ಅವರ ಶ್ರಮ ವಿಕಸಿತ ಭಾರತದ ದೂರದೃಷ್ಟಿಯನ್ನು ಹೊಂದಿದೆ ಎಂದು ಪ್ರಶಂಸಿದರು.
ಅಭಿನAದನಾ ಗ್ರಂಥದ ಪ್ರಧಾನ ಸಂಪಾದಕರಾದ ಪ್ರೊ.ತಿಪ್ಪೆಸ್ವಾಮಿ ಜಿ. ಅವರು ಮಾತನಾಡಿ, “ಒ. ಅನಂತ ರಾಮಯ್ಯ ಅವರಿಂದ ಹಿಡಿದು ಇಂದಿನ ಪ್ರೊ. ವೆಂಕಟೇಶ್ವರಲು ಅವರವರೆಗೆ ವಿವಿಯನ್ನು ಕಟ್ಟಿದ ಕೀರ್ತಿ ಸಲ್ಲುತ್ತದೆ. ಜಿಲ್ಲೆಗೊಂದು ವಿವಿಯಾಗಿ ತುಮಕೂರು ವಿವಿಯನ್ನು ರಾಜ್ಯ ಮತ್ತು ದೇಶದಲ್ಲಿ ಪ್ರಥಮ ಸ್ಥಾನಕ್ಕೆ ಕೊಂಡೊಯ್ದಿರುವುದು ವೆಂಕಟೇಶ್ವರಲು ಅವರ ಸಾಧನೆ. ಅನ್ನಪೂರ್ಣೇಶ್ವರಿ ಮಧ್ಯಾಹ್ನ ದಾಸೋಹ ಯೋಜನೆ ಆರಂಭಿಸಿ ವಿವಿಯ ಕಡೆಗೆ ಇಡೀ ದೇಶದ ಗಮನ ಸೆಳೆದಿದ್ದಾರೆ ಎಂದರು.
ತುಮಕೂರು ವಿವಿ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು ನನ್ನ ಎಲ್ಲಾ ಆಸೆ ಆಕಾಂಕ್ಷೆಗಳನ್ನು ಕಾರ್ಯರೂಪಕ್ಕೆ ತರಲು ತುಮಕೂರು ವಿವಿ ಪೂರಕವಾಗಿತ್ತು. ನಡೆದಾಡುವ ದೇವರ ನೆಲದಲ್ಲಿ ಸೇವೆ ಸಲ್ಲಿಸಿದ್ದು ನನ್ನ ಸೌಭಾಗ್ಯ. ವಿಶ್ವವಿದ್ಯಾನಿಲಯವನ್ನು ಬರೀ ಕಟ್ಟಡಗಳಿಗಷ್ಟೇ ಸೀಮಿತಗೊಳಿಸದೆ, ಜ್ಞಾನ ಮತ್ತು ಸಂಶೋಧನೆಯ ಕೇಂದ್ರವನ್ನಾಗಿ ಮಾಡಲು ಶ್ರಮಿಸಿದ್ದೇನೆ. ನನ್ನ ಮೇಲಿದ್ದ ನಂಬಿಕೆಗೆ, ಜನಶಿರ್ವಾದಕ್ಕೆ ನಾನು ಆಭಾರಿಯಾಗಿದ್ದೇನೆ ಎಂದರು.
ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಾಧೀಶರಾದ ರತ್ನಾಕಲಾ, ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಕೆ. ವಿ. ರಾಮ್ ಪ್ರಸಾದ್, ಕರ್ನಾಟಕ ಆರ್ಯವೈಶ್ಯ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಡಾ. ಜೆ. ಬಿ. ನಂದನ್ ಕುಮಾರ್ ಮಾತನಾಡಿದರು.
ತುಮಕೂರು ವಿವಿಯ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಸಂಯೋಜಕರಾದ ಡಾ. ಸಿಬಂತಿ ಪದ್ಮನಾಭ ಅವರು ನಿರೂಪಿಸಿದರು. ಸಹಪ್ರಾಧ್ಯಾಪಕರಾದ ಡಾ. ಎಂ. ಎಸ್. ನಾಗರಾಜ್ ಸ್ವಾಗತಿಸಿದರು. ಅಧ್ಯಾಪಕರಾದ ಡಾ. ಅಜಯ್ ಕುಮಾರ್ ಎಂ. ವಿ. ವಂದಿಸಿದರು.

(Visited 1 times, 1 visits today)
kannada news local news tumakur tumkur ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ
Previous Articleಕೃಷಿ ಪತ್ತಿನ ಸಹಕಾರ ಸಂಘದಿ0ದ ೨೦.೦೫ ಲಕ್ಷ ಸಾಲ ವಿತರಣೆ
Next Article ಮಹಮದ್ ಪೈಗಂಬರ್ ಅವರ ಬಗ್ಗೆ ಅವಹೇಳನಕಾರಿ ಮಾತು: ಆಕ್ರೋಶ
News Desk Benkiyabale

Related Posts

ಕಾಡುಗೊಲ್ಲರು ಕೃಷ್ಣ ಜಯಂತಿ ಬದಲು ಬುಡಕಟ್ಟಿನ ಮೂಲ ಸಂಸ್ಕೃತಿ ಉಳಿಸಿ

September 02, 2026 5:37 pm news

ರಾಹುಲ್‌ಗಾ0ಧಿ ಅವರ ಮೇಲಿನ ಎಫ್‌ಐಆರ್ ಖಂಡಿಸಿ ಪ್ರತಿಭಟನೆ

September 02, 2026 5:34 pm news

ಕ0ಪನಹಳ್ಳಿ ರಸ್ತೆಗೆ ದುರಸ್ತಿ ಭಾಗ್ಯ

September 02, 2026 5:35 pm news
ತಾಜಾ ಸುದ್ಧಿಗಳು
news

ಕಾಡುಗೊಲ್ಲರು ಕೃಷ್ಣ ಜಯಂತಿ ಬದಲು ಬುಡಕಟ್ಟಿನ ಮೂಲ ಸಂಸ್ಕೃತಿ ಉಳಿಸಿ

September 02, 2026 5:37 pm
news

ರಾಹುಲ್‌ಗಾ0ಧಿ ಅವರ ಮೇಲಿನ ಎಫ್‌ಐಆರ್ ಖಂಡಿಸಿ ಪ್ರತಿಭಟನೆ

September 02, 2026 5:34 pm
news

ಕ0ಪನಹಳ್ಳಿ ರಸ್ತೆಗೆ ದುರಸ್ತಿ ಭಾಗ್ಯ

September 02, 2026 5:35 pm
news

ಸರ್ಕಾರಿ ಕಚೇರಿಗಳಿಗೆ ಅಲೆದಾಟ ತಪ್ಪಿಸಲು ಪ್ರಜಾಸೇವಾ ಆಂದೋಲನ

September 02, 2026 5:30 pm
news

ಜ್ಞಾನಾರ್ಜನೆ-ನೈತಿಕ ಮೌಲ್ಯಗಳೇ ವಿದ್ಯಾರ್ಥಿಗಳ ಬದುಕಿನ ದಿಕ್ಸೂಚಿ

September 02, 2026 5:28 pm
news

ಕೆವೈಸಿ ಮಾಡಿಸದಿದ್ದರೆ ಕೈಸೇರದು ಪಿಎಂ ಕಿಸಾನ್ ಕಂತು

September 01, 2026 5:08 pm
Our Youtube Channel
Our Picks

ಕಾಡುಗೊಲ್ಲರು ಕೃಷ್ಣ ಜಯಂತಿ ಬದಲು ಬುಡಕಟ್ಟಿನ ಮೂಲ ಸಂಸ್ಕೃತಿ ಉಳಿಸಿ

September 02, 2026 5:37 pm

ರಾಹುಲ್‌ಗಾ0ಧಿ ಅವರ ಮೇಲಿನ ಎಫ್‌ಐಆರ್ ಖಂಡಿಸಿ ಪ್ರತಿಭಟನೆ

September 02, 2026 5:34 pm

ಕ0ಪನಹಳ್ಳಿ ರಸ್ತೆಗೆ ದುರಸ್ತಿ ಭಾಗ್ಯ

September 02, 2026 5:35 pm

ಸರ್ಕಾರಿ ಕಚೇರಿಗಳಿಗೆ ಅಲೆದಾಟ ತಪ್ಪಿಸಲು ಪ್ರಜಾಸೇವಾ ಆಂದೋಲನ

September 02, 2026 5:30 pm

ಜ್ಞಾನಾರ್ಜನೆ-ನೈತಿಕ ಮೌಲ್ಯಗಳೇ ವಿದ್ಯಾರ್ಥಿಗಳ ಬದುಕಿನ ದಿಕ್ಸೂಚಿ

September 02, 2026 5:28 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಕಾಡುಗೊಲ್ಲರು ಕೃಷ್ಣ ಜಯಂತಿ ಬದಲು ಬುಡಕಟ್ಟಿನ ಮೂಲ ಸಂಸ್ಕೃತಿ ಉಳಿಸಿ

By News Desk BenkiyabaleSeptember 02, 2026 5:37 pm

ತುಮಕೂರು: ಕಾಡುಗೊಲ್ಲರು ಮೂಲತಃ ಬುಡಕಟ್ಟು ಸಮುದಾಯದವರಾಗಿದ್ದು, ವೈದಿಕ ಅಥವಾ ಶಿಷ್ಟ ಸಂಸ್ಕೃತಿಯ ಪ್ರಭಾವದಿಂದ ತನ್ನ ಮೂಲ ಸಂಸ್ಕೃತಿ ಹಾಗೂ ಆಚರಣೆಗಳನ್ನು…

ರಾಹುಲ್‌ಗಾ0ಧಿ ಅವರ ಮೇಲಿನ ಎಫ್‌ಐಆರ್ ಖಂಡಿಸಿ ಪ್ರತಿಭಟನೆ

September 02, 2026 5:34 pm

ಕ0ಪನಹಳ್ಳಿ ರಸ್ತೆಗೆ ದುರಸ್ತಿ ಭಾಗ್ಯ

September 02, 2026 5:35 pm

ಸರ್ಕಾರಿ ಕಚೇರಿಗಳಿಗೆ ಅಲೆದಾಟ ತಪ್ಪಿಸಲು ಪ್ರಜಾಸೇವಾ ಆಂದೋಲನ

September 02, 2026 5:30 pm
News by Date
September 2026
M T W T F S S
 123456
78910111213
14151617181920
21222324252627
282930  
« Aug    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.