BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಸರ್ಕಾರಿ ಭೂಮಿಯಲ್ಲಿ ಉಳುಮೆ ಮಾಡಿರುವ ರೈತರನ್ನು ಒಕ್ಕಲೆಬ್ಬಿಸುವ ಆರೋಪ
  • ಜಿ.ಪಂ. ಮೀಸಲಾತಿ ಕಾಂಗ್ರೆಸ್ ಅಭ್ಯರ್ಥಿಗಳಿಗಾಗಿಯೇ ಮಾಡಲಾಗಿದೆಯೇ?
  • ದಸರಾ ಮಹೋತ್ಸವಕ್ಕೆ ಶಾಸಕ ಜ್ಯೋತಿಗಣೇಶ್ ಚಾಲನೆ
  • ವಿದ್ಯಾರ್ಥಿಗಳು ಎಬಿಸಿಡಿ ತಂತ್ರಜ್ಞಾನ-ಕೌಶಲ್ಯಾಭಿವೃದ್ಧಿಗೆ ಆದ್ಯತೆ ನೀಡಿ
  • ತುಮಕೂರು ರಂಗ ದಸರಾದಲ್ಲಿ “ಮೂರುವರೆ ವಜ್ರಗಳು” ನಾಟಕ ಪ್ರದರ್ಶನ
  • ರಸ್ತೆ ಕಾಮಗಾರಿ ವಿಳಂಬ: ಪೂರ್ಣಗೊಳಿಸಲು ಸಿಪಿಐ(ಎಂ) ಒತ್ತಾಯ
  • ಪತ್ರಿಕೋದ್ಯಮಕ್ಕೆ ಭಾಷೆ, ಬರವಣಿಗೆಯೇ ಜೀವಾಳ
  • ರಂಗೋಲಿ ಸ್ಪರ್ಧೆ-ಹಗ್ಗ ಜಗ್ಗಾಟದಲ್ಲಿ ಮಹಿಳೆಯರ ಕಸರತ್ತು
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಸರ್ಕಾರಿ ಕಟ್ಟಡಗಳಲ್ಲಿ ವಿಕಲಚೇತನ ಸ್ನೇಹಿ ವಾತಾವರಣ ನಿರ್ಮಿಸಿ
news

ಸರ್ಕಾರಿ ಕಟ್ಟಡಗಳಲ್ಲಿ ವಿಕಲಚೇತನ ಸ್ನೇಹಿ ವಾತಾವರಣ ನಿರ್ಮಿಸಿ

By News Desk BenkiyabaleUpdated:July 20, 2026 5:13 pm

ತುಮಕೂರು: ವಿಕಲಚೇತನ ಸ್ನೇಹಿ ವಾತಾವರಣ ನಿರ್ಮಿಸಲು ಹೊಸದಾಗಿ ನಿರ್ಮಾಣವಾಗುವ ಸರ್ಕಾರಿ ಕಟ್ಟಡಗಳ ನಕ್ಷೆ ತಯಾರಿಸುವ ಸಮಯದಲ್ಲಿ ಕಡ್ಡಾಯವಾಗಿ ರ‍್ಯಾಂಪ್ಸ್, ರೈಲಿಂಗ್ಸ್, ನಾಮಫಲಕ, ವಿಕಲಚೇತನ ಸ್ನೇಹಿ ಶೌಚಾಲಯ, ಲಿಫ್ಟ್ ಮಾರ್ಕಿಂಗ್ ಟೈಲ್ಸ್ ಅಳವಡಿಸುವಂತೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿಗಳ ನ್ಯಾಯಾಲಯದ ಸಭಾಂಗಣದಲ್ಲಿ ಸೋಮವಾರ ನಡೆದ ವಿಕಲಚೇತನ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ-೨೦೧೬ರ ಉಪನಿಯಮ(೭೨)ರಡಿ ಅಂಗವಿಕಲರ ಕುಂದು ಕೊರತೆ ಮತ್ತು ಜಿಲ್ಲಾ ಮಟ್ಟದ ಅನುಷ್ಟಾನ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಸ್ಥಗಿತಗೊಂಡಿರುವ ವಿಕಲಚೇತನರ ಪಿಂಚಣಿ ಅರ್ಜಿಗಳನ್ನು ಆದ್ಯತೆಯ ಮೇರೆಗೆ ಶೀಘ್ರವಾಗಿ ಪರಿಶೀಲಿಸಿ, ಅರ್ಹ ಫಲಾನುಭವಿಗಳಿಗೆ ಪಿಂಚಣಿ ಸೌಲಭ್ಯ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಅವರು, ವಿವಿಧ ಇಲಾಖೆಗಳಲ್ಲಿ ಕ್ರೋಢೀಕೃತಗೊಂಡಿರುವ ವಿಕಲಚೇತನರ ಶೇ.೫ರಷ್ಟು ಅನುದಾನವನ್ನು ಸಮರ್ಪಕವಾಗಿ ಹಾಗೂ ಉದ್ದೇಶಿತ ರೀತಿಯಲ್ಲಿ ಬಳಸಿಕೊಳ್ಳುವಂತೆ ಸಂಬA ಧಿಸಿದ ಇಲಾಖೆಗಳಿಗೆ ನಿರ್ದೇಶನ ನೀಡಿದರು.
ಜಿಲ್ಲೆಯಲ್ಲಿ ಸ್ಥಗಿತಗೊಂಡಿರುವ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರವನ್ನು ಆಗಸ್ಟ್ ೧೫ರಂದು ಜಿಲ್ಲಾ ಆಸ್ಪತ್ರೆಯ ನೂತನ ಕಟ್ಟಡದಲ್ಲಿ ಪುನರಾರಂಭಿಸಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವ ಕುರಿತು ಚರ್ಚಿಸಿ ಕ್ರಮವಹಿಸಬೇಕೆಂದು ಸೂಚನೆ ನೀಡಿದರು.
ಬಯೋಮೆಟ್ರಿಕ್ ಸಮಸ್ಯೆಯಿಂದ ಆಧಾರ್ ಕಾರ್ಡ್ ಮಾಡಿಸಿಕೊಳ್ಳಲು ಸಾಧ್ಯವಾಗದ ವಿಕಲಚೇತನರಿಗೆ ವಿಶೇಷ ಶಿಬಿರವನ್ನು ಆಯೋಜಿಸಿ, ಆಧಾರ್ ನೋಂದಣಿ ಹಾಗೂ ಸೀಡಿಂಗ್ ಕಾರ್ಯವನ್ನು ಪೂರ್ಣಗೊಳಿಸಲು ಸಂಬAಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ವಿಕಲಚೇತನರ ಹಕ್ಕುಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಸಮನ್ವಯದೊಂದಿಗೆ ಕಾರ್ಯನಿರ್ವಹಿಸುವಂತೆ ಸೂಚಿಸಿದ ಅವರು, ಜಿಲ್ಲೆಯ ವಿಕಲಚೇತನರ ಕಲ್ಯಾಣ ಮತ್ತು ಪುನರ್ವಸತಿಗೆ ಸಂಬAಧಿಸಿದ ವಿವಿಧ ವಿಷಯಗಳ ಕುರಿತು ಸಮಗ್ರವಾಗಿ ಚರ್ಚಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸಂಬAಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಬಿ.ಎಸ್. ಚಿದಾನಂದಮೂರ್ತಿ ಮಾತನಾಡಿ, ವಿಕಲಚೇತನರಿಗೆ ಇಲಾಖೆಯಿಂದ ಒದಗಿಸುವ ವಿದ್ಯಾರ್ಥಿ ವೇತನ, ಪ್ರೋತ್ಸಾಹ ಧನ, ಯಂತ್ರಚಾಲಿತ ದ್ವಿಚಕ್ರ ವಾಹನ ಮತ್ತು ಬ್ಯಾಟರಿ ಚಾಲಿತ ವ್ಹೀಲ್ ಛೇರ್, ಟಾಕಿಂಗ್ ಲ್ಯಾಪ್‌ಟಾಪ್ ಮತ್ತು ಬ್ರೆöÊಲ್ ಕಿಟ್, ಹೊಲಿಗೆ ಯಂತ್ರ, ಸಾಧನ ಸಲಕರಣೆ, ವಿಕಲಚೇತನರ ಗ್ರಾಮೀಣ ಪುನರ್ವಸತಿ, ಆಧಾರ್ ಯೋಜನೆ, ಆರೈಕೆದಾರರ ಪ್ರೋತ್ಸಾಹಧನ, ವಿವಾಹ ಪ್ರೋತ್ಸಾಹಧನ, ಶುಲ್ಕ ಮರುಪಾವತಿ, ಶಿಶುಪಾಲನಾ ಭತ್ಯೆ, ನಿರಾಮಯ, ವಿಕಲಚೇತನರ ಸಹಾಯವಾಣಿ ಕೇಂದ್ರ, ವಿಶೇಷ ಶಾಲೆಗಳು, ವಸತಿನಿಲಯಗಳ ಕುರಿತು ಸಭೆಗೆ ಸಮಗ್ರ ಮಾಹಿತಿ ನೀಡಿದರು.
ಸಭೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಲೋಕೇಶ್ ಧನಪಾಲ ಹವಲೆ, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

(Visited 1 times, 1 visits today)
DC kannada news local news tumakur tumkur tumkur news ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು:
Previous Articleತುಮಕೂರು ಏರ್ ಪೋರ್ಟ್: ಬಿ.ಎಸ್.ವಿಜಯೇಂದ್ರರವರ ನಿಲುವಿಗೆ ಸ್ವಾಗತ
Next Article ಮೌಲ್ಯ ಪ್ರಸಾರಕ್ಕೆ ಯಕ್ಷಗಾನ ತಾಳಮದ್ದಳೆ ಸಶಕ್ತ ಮಾಧ್ಯಮ
News Desk Benkiyabale

Related Posts

ಸರ್ಕಾರಿ ಭೂಮಿಯಲ್ಲಿ ಉಳುಮೆ ಮಾಡಿರುವ ರೈತರನ್ನು ಒಕ್ಕಲೆಬ್ಬಿಸುವ ಆರೋಪ

October 19, 2026 5:21 pm news

ಜಿ.ಪಂ. ಮೀಸಲಾತಿ ಕಾಂಗ್ರೆಸ್ ಅಭ್ಯರ್ಥಿಗಳಿಗಾಗಿಯೇ ಮಾಡಲಾಗಿದೆಯೇ?

October 19, 2026 5:18 pm news

ದಸರಾ ಮಹೋತ್ಸವಕ್ಕೆ ಶಾಸಕ ಜ್ಯೋತಿಗಣೇಶ್ ಚಾಲನೆ

October 19, 2026 5:15 pm news
ತಾಜಾ ಸುದ್ಧಿಗಳು
news

ಸರ್ಕಾರಿ ಭೂಮಿಯಲ್ಲಿ ಉಳುಮೆ ಮಾಡಿರುವ ರೈತರನ್ನು ಒಕ್ಕಲೆಬ್ಬಿಸುವ ಆರೋಪ

October 19, 2026 5:21 pm
news

ಜಿ.ಪಂ. ಮೀಸಲಾತಿ ಕಾಂಗ್ರೆಸ್ ಅಭ್ಯರ್ಥಿಗಳಿಗಾಗಿಯೇ ಮಾಡಲಾಗಿದೆಯೇ?

October 19, 2026 5:18 pm
news

ದಸರಾ ಮಹೋತ್ಸವಕ್ಕೆ ಶಾಸಕ ಜ್ಯೋತಿಗಣೇಶ್ ಚಾಲನೆ

October 19, 2026 5:15 pm
news

ವಿದ್ಯಾರ್ಥಿಗಳು ಎಬಿಸಿಡಿ ತಂತ್ರಜ್ಞಾನ-ಕೌಶಲ್ಯಾಭಿವೃದ್ಧಿಗೆ ಆದ್ಯತೆ ನೀಡಿ

October 19, 2026 5:13 pm
news

ತುಮಕೂರು ರಂಗ ದಸರಾದಲ್ಲಿ “ಮೂರುವರೆ ವಜ್ರಗಳು” ನಾಟಕ ಪ್ರದರ್ಶನ

October 19, 2026 5:12 pm
news

ರಸ್ತೆ ಕಾಮಗಾರಿ ವಿಳಂಬ: ಪೂರ್ಣಗೊಳಿಸಲು ಸಿಪಿಐ(ಎಂ) ಒತ್ತಾಯ

October 19, 2026 5:11 pm
Our Youtube Channel
Our Picks

ಸರ್ಕಾರಿ ಭೂಮಿಯಲ್ಲಿ ಉಳುಮೆ ಮಾಡಿರುವ ರೈತರನ್ನು ಒಕ್ಕಲೆಬ್ಬಿಸುವ ಆರೋಪ

October 19, 2026 5:21 pm

ಜಿ.ಪಂ. ಮೀಸಲಾತಿ ಕಾಂಗ್ರೆಸ್ ಅಭ್ಯರ್ಥಿಗಳಿಗಾಗಿಯೇ ಮಾಡಲಾಗಿದೆಯೇ?

October 19, 2026 5:18 pm

ದಸರಾ ಮಹೋತ್ಸವಕ್ಕೆ ಶಾಸಕ ಜ್ಯೋತಿಗಣೇಶ್ ಚಾಲನೆ

October 19, 2026 5:15 pm

ವಿದ್ಯಾರ್ಥಿಗಳು ಎಬಿಸಿಡಿ ತಂತ್ರಜ್ಞಾನ-ಕೌಶಲ್ಯಾಭಿವೃದ್ಧಿಗೆ ಆದ್ಯತೆ ನೀಡಿ

October 19, 2026 5:13 pm

ತುಮಕೂರು ರಂಗ ದಸರಾದಲ್ಲಿ “ಮೂರುವರೆ ವಜ್ರಗಳು” ನಾಟಕ ಪ್ರದರ್ಶನ

October 19, 2026 5:12 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಸರ್ಕಾರಿ ಭೂಮಿಯಲ್ಲಿ ಉಳುಮೆ ಮಾಡಿರುವ ರೈತರನ್ನು ಒಕ್ಕಲೆಬ್ಬಿಸುವ ಆರೋಪ

By News Desk BenkiyabaleOctober 19, 2026 5:21 pm

ತುರುವೇಕೆರೆ: ತಾಲ್ಲೂಕಿನ ಮಾಯಸಂದ್ರ ಹೋಬಳಿ, ದೊಡ್ಡಬೀರನಕೆರೆ ಮತ್ತು ಡಿ.ಬಿ.ಪಟ್ಟ ಡಣನಾಯಕನಪುರ ಗ್ರಾಮದಲ್ಲಿ ಸರ್ಕಾರಿ ಭೂಮಿಯಲ್ಲಿ ಉಳುಮೆ ಮಾಡಿರುವ ರೈತರನ್ನು ತಾಲೂಕು…

ಜಿ.ಪಂ. ಮೀಸಲಾತಿ ಕಾಂಗ್ರೆಸ್ ಅಭ್ಯರ್ಥಿಗಳಿಗಾಗಿಯೇ ಮಾಡಲಾಗಿದೆಯೇ?

October 19, 2026 5:18 pm

ದಸರಾ ಮಹೋತ್ಸವಕ್ಕೆ ಶಾಸಕ ಜ್ಯೋತಿಗಣೇಶ್ ಚಾಲನೆ

October 19, 2026 5:15 pm

ವಿದ್ಯಾರ್ಥಿಗಳು ಎಬಿಸಿಡಿ ತಂತ್ರಜ್ಞಾನ-ಕೌಶಲ್ಯಾಭಿವೃದ್ಧಿಗೆ ಆದ್ಯತೆ ನೀಡಿ

October 19, 2026 5:13 pm
News by Date
October 2026
M T W T F S S
 1234
567891011
12131415161718
19202122232425
262728293031  
« Sep    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.