ತುಮಕೂರು: ದೆಹಲಿಯ ಜಂತರ್ ಮಂತರ್ ಹಾಗೂ ದೇಶವ್ಯಾಪಿ ಏಕಕಾಲದಲ್ಲಿ ನೀಟ್‌ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಹಗರಣ, ಭ್ರಷ್ಟಾಚಾರವನ್ನು ಖಂಡಿಸಿ ಸೋನಂ ವಾಂಗ್‌ಚುಕ್‌ರವರ ಪ್ರತಿಭಟನಾ/ಸತ್ಯಾಗ್ರಹವನ್ನು ಬೆಂಬಲಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟ ತುಮಕೂರು ವತಿಯಿಂದ ನಗರದ ಸ್ವಾತಂತ್ರö್ಯ ಚೌಕದಲ್ಲಿ ಪ್ರತಿಭಟನಾ ಧರಣಿಯನ್ನು ಹಮ್ಮಿಕೊಳ್ಳಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಪ್ರಗತಿಪರ ಚಿಂತಕರಾದ ಪ್ರೊ.ಕೆ.ದೊರೈರಾಜ್ ಮಾತನಾಡಿ ಕೇಂದ್ರದ ಬಿಜೆಪಿ ಸರ್ಕಾರ ಪ್ರಜಾಪ್ರಬುತ್ವ ವ್ಯವಸ್ಥೆಯಲ್ಲಿ ಪ್ರಜೆಗಳ ಮತವನ್ನು ಪಡೆದು ಆಡಳಿತಕ್ಕೆ ಬಂದಿದೆ ಎಂಬುದು ಮರೆತಿದೆ. ದೇಶದ ರಾಜದಾನಿ ದೆಹಲಿಯ ಜಂತರ್ ಮಂತರ್‌ನಲ್ಲಿ ಕಳೆದ ೨೧ ದಿವಸಗಳಿಂದ ಲಕ್ಷಾಂತರ ಯುವ ಜನರು ವಿದ್ಯಾರ್ಥಿಗಳು ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಹಗರಣದಿಂದಾಗಿ ಬೇಸತ್ತು ಆತ್ಮಹತ್ಯೇ ಮಾಡಿಕೊಂಡಿರುವ ೨೦ಕ್ಕೂ ಅಧಿಕ ವಿದ್ಯಾರ್ಥಿಗಳ ಸಾವಿಗೆ ನ್ಯಾಯಕ್ಕಾಗಿ ಆಗ್ರಹಿಸಿ ಪ್ರತಿಭಟಿಸುತ್ತಿದ್ದಾರೆ. ಇಡೀ ಸರ್ಕಾರ ಮತ್ತು ನಾಗರೀಕ ಸಮಾಜ ತಲೆ ತಗ್ಗಿಸುವಂತಹ ಘಟನೆ ವಿದ್ಯಾರ್ಥಿಗಳ ಆತ್ಮಹತ್ಯೆಯಾಗಿದೆ. ಇಂತಹ ಘಟನೆ ನಡೆಯಬಾರದಿತ್ತು, ಮನುಷ್ಯ ವಿರೋಧಿ ಸಂವಿಧಾನ ವಿರೋಧಿ ಭ್ರಷ್ಠಾಚಾರಕ್ಕೆ ಕಡಿವಾಣ ಹಾಕಬೇಕೆಂದರೇ ದೇಶದ ಯುವ ಜನರು ವಿದ್ಯಾರ್ಥಿಗಳು ಎಚ್ಚರಗೊಳ್ಳಬೇಕಿದೆ.ದೇಹಲಿಯ ಜಂತರ್ ಮಂತರ್‌ನಲ್ಲಿ ಶಾಂತಿಯುತ ಹೋರಾಟಕ್ಕೆ ಬೆಂಬಲವಾಗಿ ನಿಂತ ಸೋನಮ್ ವಾಂಗ್ಚುಕ್‌ರವರನ್ನು ಯಾವುದೇ ಕೋರ್ಟ್ ಆದೇಶವಿಲ್ಲದೆ ಮಾಹಿತಿ ನೀಡದೇ ಪೋಲಿಸ್ ವಶಕ್ಕೆ ಪಡೆದಿರುವುದು ಸಂವಿಧಾನ ವಿರೋಧಿ ಮತ್ತು ಹೋರಾಟವನ್ನು ಹತ್ತಿಕ್ಕುವ ಹುನ್ನಾರವಾಗಿದೆ. ಸೋನಮ್ ವಾಂಗ್ಚುAಕ್‌ರವರ ಪರ ನಾವಿದ್ದೇವೆ ಹೋರಾಟ ಮತ್ತಷ್ಟು ತೀರ್ವತೆ ಪಡೆದುಕೊಳ್ಳಲಿದೆ.ಕಾನೂನು ಬಾಹೀರ ನೀಟ್ ಹಗರಣಕ್ಕೆ ಬೆಂಬಲವಾಗಿ ನಿಂತು ವಿದ್ಯಾರ್ಥಿಗಳ ಆತ್ಮಹತ್ಯೆಗೆ ನೇರ ಹೊಣೆಗಾರರಾದ ಕೇಂದ್ರ ಸರ್ಕಾರ ಮತ್ತು ಅವರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಕೂಡಲೇ ರಾಜಿನಾಮೆ ನೀಡಲೇಬೇಕು ಯುವ ಜನರನ್ನು ವಿದ್ಯಾರ್ಥಿಗಳನ್ನು ಕೊಲ್ಲುವ ಭ್ರಷ್ಟ ವ್ಯವಸ್ಥೆಯ ಆಡಳಿತ ಕೊನೆಗಾಣಲಿ ಎಂದರು.
ನAತರ ಪರಿಸರವಾದಿ ವಿಜ್ಞಾನ ಕೇಂದ್ರದ ಸಿ.ಯತಿರಾಜ್, ನಂತರ ಪ್ರೊಫೆಸರ್ ಚಂದ್ರಕಾAತ್, ಪ್ರತಿಭಟನೆಯನ್ನು ಉದ್ದೇಶಿಸಿ ರೈತ ಸಂಘಟನೆಯ ಬಿ.ಉಮೇಶ್, ಸಾವಿತ್ರಿ ಬಾಯಿ ಪುಲೆ ಮಹಿಳಾ ಸಂಘಟನೆಯ ಸಂಚಾಲಕರಾದ ಅನುಪಮಾ, ಎಐಡಿಎಸ್‌ಓ ಜಿಲ್ಲಾಧ್ಯಕ್ಷರಾದ ಕಲ್ಯಾಣಿ, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಬ್ಬಣ್ಣ, ಸ್ಲಂ ಸಮಿತಿ ಜಿಲ್ಲಾಧ್ಯಕ್ಷರಾದ ಎ.ನರಸಿಂಹಮೂರ್ತಿ. ಎಪಿಸಿಆರ್ ತಾಜುದ್ದೀನ್ ಷರೀಫ್, ಎದ್ದೇಳು ಕರ್ನಾಟದ ಆದಂಖಾನ್, ತುಮಕೂರು ವಿಶ್ವವಿದ್ಯಾಲಯದ ನವೀನ್ ಪೂಜಾರ್, ಮುಸ್ಲಿಂ ವಿದ್ಯಾರ್ಥಿಗಳ ಸಂಘದ ಖಲೀಲ್ ಮುಂತಾದವರು ಮಾತನಾಡಿದರು.
ಪ್ರತಿಭಟನೆಯಲ್ಲಿ ನಟರಾಜಪ್ಪ, ಸ್ಲಂ ಸಮಿತಿಯ ಅರುಣ್ ಮತ್ತು ಶಂಕ್ರಯ್ಯ, ಕೃಷ್ಣಮೂರ್ತಿ, ಮಹಿಳಾ ಸಂಘಟನೆಯ ಪಾರ್ವತಮ್ಮ, ಕಲ್ಪನಾ, ಮುಬಾರಕ್, ವಕೀಲರಾದ ಖಾಲಿದ್ ಸುಹೇಲ್, ಪ್ರೊಫಸರ್ ಆಸದ್ ಉಲ್ಲಾ, ಅಬ್ಜಲ್ ಖಾನ್, ಸಲ್ಮಾನ್ ಖಾನ್, ಶರೀಫ್, ಸಲ್ಮಾ, ಪೂರ್ಣಿಮಾ, ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
(Visited 1 times, 1 visits today)





