BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಸಚಿವ ಬಿ.ನಾಗೇಂದ್ರ ವಿರುದ್ಧ ಪಿತೂರಿಗೆ ವಾಲ್ಮೀಕಿ ಸಮಾಜ ಖಂಡನೆ
  • ಉದ್ಯಮ ಸಂಸ್ಥೆ ಜೊತೆ ಎಸ್‌ಎಸ್‌ಐಟಿ ಒಡಂಬಡಿಕೆ
  • ವಿಬಿ ಜಿ ರಾಮ್ ಜಿ ಯೋಜನೆಯಡಿ ಜನರಿಗೆ ಉದ್ಯೋಗ ನೀಡಿ: ಜನರು ಗುಳೆ ಹೋಗುವುದನ್ನು ತಪ್ಪಿಸಿ
  • ಒಂದೇ ನಲ್ಲಿಯಲ್ಲಿ ೧೦೦ ಮನೆಯವರು ನೀರು ಹಿಡಿಯುವ ದುಸ್ಥಿತಿ
  • ಕಾಂಗ್ರೆಸ್ ಸರ್ಕಾರದ ವಿರುದ್ಧ ಶಾಸಕ ಸುರೇಶ್ ಗೌಡ ಆಕ್ರೋಶ
  • ತುಮಕೂರಿಗೆ ಆಗಮಿಸಿದ ರಾಜೀವ್ ಸದ್ಬಾವನ ರಥಯಾತ್ರೆ
  • ಕನಿಷ್ಠ ವೇತನ ಪರಿಷ್ಕೃರಣೆ ಆದೇಶ ಜಾರಿ ಮಾಡಲು ಒತ್ತಾಯಿಸಿ ಪ್ರತಿಭಟನೆ
  • ಅಲೆಮಾರಿಗಳಿಗೆ ಮನೆ ಕಟ್ಟಿಕೊಡುವಂತೆ ಶಾಸಕರಿಗೆ ಮನವಿ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಶನಿವಾರ, ಭಾನುವಾರವೂ ಎಸ್‌ಐಆರ್ ಪ್ರಕ್ರಿಯೆ
news

ಶನಿವಾರ, ಭಾನುವಾರವೂ ಎಸ್‌ಐಆರ್ ಪ್ರಕ್ರಿಯೆ

ಶೇ.೮೭.೬೫ ಪ್ರಗತಿ; ಯಾವುದೇ ಸಮಸ್ಯೆ ಪರಿಹಾರಕ್ಕೆ ಕರೆ ಮಾಡಿ: ಡಿಸಿ
By News Desk BenkiyabaleUpdated:July 31, 2026 4:50 pm

ತುಮಕೂರು: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ-೨೦೨೬ ಪ್ರಕ್ರಿಯೆ ಪೂರ್ಣಗೊಳ್ಳಲು ಕ್ಷಣಗಣನೆ ಆರಂಭವಾಗಿದ್ದು, ಕೊನೆಯ ಕ್ಷಣದವರೆಗೂ ಅರ್ಹ ಮತದಾರರು ಮತದಾರರ ಪಟ್ಟಿಯಿಂದ ಬಿಟ್ಟುಹೋಗದಂತೆ ಜಿಲ್ಲಾಡಳಿತ ಕ್ರಮವಹಿಸಿದ್ದು, ಮತದಾರರು ತಮ್ಮ ಯಾವುದೇ ಸಮಸ್ಯೆ, ಗೊಂದಲಗಳನ್ನು ಸಹಾಯವಾಣಿಗೆ ಕರೆ ಮಾಡಿ ಪರಿಹರಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನೋಂದಾಯಿತ ರಾಜಕೀಯ ಪಕ್ಷಗಳ ಪ್ರಮುಖರೊಂದಿಗೆ ಸಭೆ ನಡೆಸಿ ಅವರು ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ ಜಿಲ್ಲೆಯಲ್ಲಿ ಸಮರ್ಪಕವಾಗಿ ನಡೆಯುತ್ತಿದ್ದು, ಮತಗಟ್ಟೆ ಅಧಿಕಾರಿಗಳು ಈಗಾಗಲೇ ಜಿಲ್ಲೆಯಲ್ಲಿ ಒಟ್ಟು ೨೨,೯೮,೮೭೯ ಗಣತಿ ನಮೂನೆಗಳನ್ನು ವಿತರಣೆ ಮಾಡಿದ್ದು, ಈ ಪೈಕಿ ಶೇ.೮೭.೬೫ರಷ್ಟು ಗಣತಿ ನಮೂನೆಗಳನ್ನು ಹಿಂಪಡೆದು ಗಣಕೀಕರಣಗೊಳಿಸಿದ್ದಾರೆ. ಬಾಕಿ ಗಣತಿ ನಮೂನೆಗಳನ್ನು ನಿಯಮಾನುಸಾರ ಕೊನೆಯ ದಿನವಾದ ಆಗಸ್ಟ್ ೮ರೊಳಗೆ ಹಿಂಪಡೆದು ಗಣಕೀಕರಣಗೊಳಿಸಬೇಕಿರುವುದರಿಂದ ಮುಂದಿನ ೨ ದಿನದೊಳಗಾಗಿ ಮತದಾರರು ತಮ್ಮ ಭರ್ತಿ ಮಾಡಿದ ಗಣತಿ ನಮೂನೆಯನ್ನು ಮತಗಟ್ಟೆ ಅಧಿಕಾರಿಗಳಿಗೆ ಹಿಂತಿರುಗಿಸುವ ಮೂಲಕ ಪ್ರಕ್ರಿಯೆ ಸರಾಗವಾಗಿ ನಡೆಯಲು ಸಹಕರಿಸಬೇಕಾಗಿ ಜಿಲ್ಲಾಧಿಕಾರಿ ತಿಳಿಸಿದರು.
ಮತದಾರರು ಪ್ರಕ್ರಿಯೆಯಲ್ಲಿ ಯಾವುದೇ ರೀತಿಯ ಗೊಂದಲವಿದ್ದಲ್ಲಿ ಅಥವಾ ಸಮಸ್ಯೆಗಳಿದ್ದಲ್ಲಿ, ಮತಗಟ್ಟೆ ಅಧಿಕಾರಿಗಳು ಮನೆಗೆ ಬಾರದೆ, ಗಣತಿ ನಮೂನೆ ಹಿಂಪಡೆಯದಿದ್ದಲ್ಲಿ, ಸರಿಯಾದ ಮಾಹಿತಿ ನೀಡದಿದ್ದಲ್ಲಿ ಇಂತಹ ಯಾವುದೇ ಸಮಸ್ಯೆಗಳಿದ್ದಲ್ಲಿ ಸಹಾಯವಾಣಿ ಮೊಬೈಲ್ ಸಂಖ್ಯೆ ೭೩೦೪೯೭೫೫೧೯ ಅಥವಾ ಸ್ಥಿರ ದೂರವಾಣಿ ಸಂಖ್ಯೆ ೦೮೧೬-೨೨೧೩೪೦೦ ಈ ನಂಬರ್‌ಗೆ ಕರೆ ಮಾಡಿ ತಮ್ಮ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಿಕೊಂಡು ಪ್ರಕ್ರಿಯೆಗೆ ಸಹಕಾರ ನೀಡುವಂತೆ ಅವರು ತಿಳಿಸಿದರು.
ಪ್ರಸ್ತುತ ಪ್ರಕ್ರಿಯೆ ಸುಗಮವಾಗಿ ನಡೆಯುತ್ತಿದ್ದು, ಎಲ್ಲಾ ರಾಜಕೀಯ ಪಕ್ಷಗಳ ಮತಗಟ್ಟೆ ಏಜೆಂಟರ್ ಮತಗಟ್ಟೆ ಅಧಿಕಾರಿಗಳ ಸಮನ್ವಯದೊಂದಿಗೆ ಶೇ.೮೭.೬೫ರಷ್ಟು ಪ್ರಗತಿ ಸಾಧಿಸಲಾಗಿದ್ದು, ಇನ್ನೆರಡು ದಿನದಲ್ಲಿ ಶೇ.೧೦೦ರಷ್ಟು ಪ್ರಗತಿ ಸಾಧಿಸಲು ಸಹಕರಿಸಬೇಕು ಎಂದರು.
ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿ ಕಚೇರಿಗಳಲ್ಲಿ, ನಗರ ಸ್ಥಳೀಯ ಸಂಸ್ಥೆಗಳಲ್ಲಿ, ತುಮಕೂರು ಮಹಾ ನಗರಪಾಲಿಕೆಯ ಎಲ್ಲಾ ವಾರ್ಡುಗಳಲ್ಲಿ ಮತದಾರರ ಸಹಾಯವಾಣಿ ಕೇಂದ್ರಗಳನ್ನು ಸಾರ್ವಜನಿಕರ ಸಹಾಯಕ್ಕಾಗಿ ಸ್ಥಾಪಿಸಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಆಗಸ್ಟ್ ೨ರೊಳಗೆ ಮತದಾರರು ತಮ್ಮ ಗಣತಿ ನಮೂನೆಯನ್ನು ಮತಗಟ್ಟೆ ಅಧಿಕಾರಿಗಳಿಗೆ ಹಿಂತಿರುಗಿಸಿದಲ್ಲಿ ಗಣತಿ ಪ್ರಕ್ರಿಯೆ ತ್ವರಿತವಾಗಿ ಪೂರ್ಣಗೊಳಿಸಲು ಸಹಾಯವಾಗಲಿದೆ ಎಂದರು.
ಈಗಾಗಲೇ ಎಲ್ಲಾ ೧೧ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಸಹಾಯಕ ಚುನಾವಣಾಧಿಕಾರಿಗಳು ರಾಜಕೀಯ ಪಕ್ಷಗಳ ಸಭೆ ನಡೆಸಿ ಮತದಾರರ ಪಟ್ಟಿಯಲ್ಲಿನ ಗೈರು, ಸ್ಥಳಾಂತರ, ಮೃತರು, ನಕಲು ಹಾಗೂ ಇತರೆ ಮತದಾರರ ಮಾಹಿತಿಯನ್ನು ಪರಿಶೀಲಿಸಲಾಗಿದ್ದು, ನಿಯಮಾನುಸಾರ ರಾಜಕೀಯ ಪಕ್ಷಗಳ ಏಜೆಂಟರುಗಳಿಗೆ ಮಾಹಿತಿ ನೀಡಲಾಗಿದೆ. ಅದರಂತೆ ಈವರೆಗೆ ಜಿಲ್ಲೆಯ ಮತದಾರರ ಪಟ್ಟಿಯಲ್ಲಿ ೪೫,೨೬೮ ಮೃತಪಟ್ಟ ಮತದಾರರು, ೧೮,೮೮೪ ಗೈರು ಮತದಾರರು, ೯೯,೮೧೫ ಶಾಶ್ವತ ಸ್ಥಳಾಂತರಗೊAಡ ಮತದಾರರ ಮಾಹಿತಿ ಲಭ್ಯವಾಗಿದೆ ಎಂದು ಅವರು ವಿವರಿಸಿದರು.
ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ ಮಾತನಾಡಿ, ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಬಿಎಲ್‌ಎಗಳನ್ನು ನೇಮಿಸಲಾಗಿದ್ದು, ಮತದಾರರ ಪಟ್ಟಿಯಿಂದ ಹೊರಗುಳಿಯಬಹುದಾದ ಮತದಾರರ ಲಭ್ಯ ಮಾಹಿತಿಯನ್ನು ನೀಡಲಾಗಿದೆ. ಕರಡು ಮತದಾರರ ಪಟ್ಟಿ ಪ್ರಕಟ ನಂತರ ಈ ಸಂಬAಧಿಸಿದAತೆ ಹಕ್ಕು ಆಕ್ಷೇಪಣೆಗಳನ್ನು ಸೂಕ್ತ ದಾಖಲೆಯೊಂದಿಗೆ ಸಲ್ಲಿಸಲು ಆಗಸ್ಟ್ ೧೭ ರಿಂದ ಸೆಪ್ಟೆಂಬರ್ ೧೬ರವರೆಗೆ ಕಾಲಾವಕಾಶವಿದ್ದು, ಮತದಾರರ ನೋಂದಣಾಧಿಕಾರಿಗಳು ವಿಚಾರಣೆ ನಡೆಸಿ ಅಕ್ಟೋಬರ್ ೧೫ರೊಳಗೆ ಅಂತಿಮ ನಿರ್ಧಾರ ಕೈಗೊಳ್ಳಲು ಅವಕಾಶವಿರುತ್ತದೆ. ಅಕ್ಟೋಬರ್ ೧೯ರಂದು ಅಂತಿಮ ಪಟ್ಟಿ ಪ್ರಕಟವಾಗುವುದರಿಂದ ಅದಕ್ಕೆ ಪೂರ್ವದಲ್ಲಿಯೇ ಸರಿಪಡಿಸಿಕೊಂಡು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇರುವಂತೆ ನೋಡಿಕೊಳ್ಳಬೇಕು ಎಂದರು.
ಸಭೆಯಲ್ಲಿ ನೋಂದಾಯಿತ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

(Visited 1 times, 1 visits today)
kannada news karnataka SIR tumakur tumkur Tumkur mahanagara palike tumkur news ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು:
Previous Articleದೇಶದ ಶಿಕ್ಷಣ ವ್ಯವಸ್ಥೆ ರಾಜಕಾರಣದಷ್ಟೇ ಕಲುಷಿತಗೊಂಡಿದೆ
Next Article ನಾಲ್ಕು ದಿನಕ್ಕೊಮ್ಮೆ ನೀರು: ಶಾಲೆಯ ಬಿಸಿಯೂಟಕ್ಕೂ ತಟ್ಟಿದ ಸಂಕಷ್ಟ
News Desk Benkiyabale

Related Posts

ಸಚಿವ ಬಿ.ನಾಗೇಂದ್ರ ವಿರುದ್ಧ ಪಿತೂರಿಗೆ ವಾಲ್ಮೀಕಿ ಸಮಾಜ ಖಂಡನೆ

August 12, 2026 5:37 pm news

ಉದ್ಯಮ ಸಂಸ್ಥೆ ಜೊತೆ ಎಸ್‌ಎಸ್‌ಐಟಿ ಒಡಂಬಡಿಕೆ

August 12, 2026 5:35 pm news

ವಿಬಿ ಜಿ ರಾಮ್ ಜಿ ಯೋಜನೆಯಡಿ ಜನರಿಗೆ ಉದ್ಯೋಗ ನೀಡಿ: ಜನರು ಗುಳೆ ಹೋಗುವುದನ್ನು ತಪ್ಪಿಸಿ

August 12, 2026 5:33 pm news
ತಾಜಾ ಸುದ್ಧಿಗಳು
news

ಸಚಿವ ಬಿ.ನಾಗೇಂದ್ರ ವಿರುದ್ಧ ಪಿತೂರಿಗೆ ವಾಲ್ಮೀಕಿ ಸಮಾಜ ಖಂಡನೆ

August 12, 2026 5:37 pm
news

ಉದ್ಯಮ ಸಂಸ್ಥೆ ಜೊತೆ ಎಸ್‌ಎಸ್‌ಐಟಿ ಒಡಂಬಡಿಕೆ

August 12, 2026 5:35 pm
news

ವಿಬಿ ಜಿ ರಾಮ್ ಜಿ ಯೋಜನೆಯಡಿ ಜನರಿಗೆ ಉದ್ಯೋಗ ನೀಡಿ: ಜನರು ಗುಳೆ ಹೋಗುವುದನ್ನು ತಪ್ಪಿಸಿ

August 12, 2026 5:33 pm
news

ಒಂದೇ ನಲ್ಲಿಯಲ್ಲಿ ೧೦೦ ಮನೆಯವರು ನೀರು ಹಿಡಿಯುವ ದುಸ್ಥಿತಿ

August 12, 2026 5:30 pm
news

ಕಾಂಗ್ರೆಸ್ ಸರ್ಕಾರದ ವಿರುದ್ಧ ಶಾಸಕ ಸುರೇಶ್ ಗೌಡ ಆಕ್ರೋಶ

August 12, 2026 5:28 pm
news

ತುಮಕೂರಿಗೆ ಆಗಮಿಸಿದ ರಾಜೀವ್ ಸದ್ಬಾವನ ರಥಯಾತ್ರೆ

August 11, 2026 4:53 pm
Our Youtube Channel
Our Picks

ಸಚಿವ ಬಿ.ನಾಗೇಂದ್ರ ವಿರುದ್ಧ ಪಿತೂರಿಗೆ ವಾಲ್ಮೀಕಿ ಸಮಾಜ ಖಂಡನೆ

August 12, 2026 5:37 pm

ಉದ್ಯಮ ಸಂಸ್ಥೆ ಜೊತೆ ಎಸ್‌ಎಸ್‌ಐಟಿ ಒಡಂಬಡಿಕೆ

August 12, 2026 5:35 pm

ವಿಬಿ ಜಿ ರಾಮ್ ಜಿ ಯೋಜನೆಯಡಿ ಜನರಿಗೆ ಉದ್ಯೋಗ ನೀಡಿ: ಜನರು ಗುಳೆ ಹೋಗುವುದನ್ನು ತಪ್ಪಿಸಿ

August 12, 2026 5:33 pm

ಒಂದೇ ನಲ್ಲಿಯಲ್ಲಿ ೧೦೦ ಮನೆಯವರು ನೀರು ಹಿಡಿಯುವ ದುಸ್ಥಿತಿ

August 12, 2026 5:30 pm

ಕಾಂಗ್ರೆಸ್ ಸರ್ಕಾರದ ವಿರುದ್ಧ ಶಾಸಕ ಸುರೇಶ್ ಗೌಡ ಆಕ್ರೋಶ

August 12, 2026 5:28 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಸಚಿವ ಬಿ.ನಾಗೇಂದ್ರ ವಿರುದ್ಧ ಪಿತೂರಿಗೆ ವಾಲ್ಮೀಕಿ ಸಮಾಜ ಖಂಡನೆ

By News Desk BenkiyabaleAugust 12, 2026 5:37 pm

ತುಮಕೂರು: ವಾಲ್ಮೀಕಿ ಸಮಾಜದ ನಾಯಕರು, ಸಮುದಾಯದ ಧ್ವನಿಯಾಗಿ ಗುರುತಿಸಿಕೊಂಡಿರುವ ಸಚಿವ ಬಿ. ನಾಗೇಂದ್ರ ಅವರನ್ನು ಸಚಿವ ಸ್ಥಾನದಿಂದ ಕೆಳಗಿಳಿಸಲು ಬಿಜೆಪಿ…

ಉದ್ಯಮ ಸಂಸ್ಥೆ ಜೊತೆ ಎಸ್‌ಎಸ್‌ಐಟಿ ಒಡಂಬಡಿಕೆ

August 12, 2026 5:35 pm

ವಿಬಿ ಜಿ ರಾಮ್ ಜಿ ಯೋಜನೆಯಡಿ ಜನರಿಗೆ ಉದ್ಯೋಗ ನೀಡಿ: ಜನರು ಗುಳೆ ಹೋಗುವುದನ್ನು ತಪ್ಪಿಸಿ

August 12, 2026 5:33 pm

ಒಂದೇ ನಲ್ಲಿಯಲ್ಲಿ ೧೦೦ ಮನೆಯವರು ನೀರು ಹಿಡಿಯುವ ದುಸ್ಥಿತಿ

August 12, 2026 5:30 pm
News by Date
August 2026
M T W T F S S
 12
3456789
10111213141516
17181920212223
24252627282930
31  
« Jul    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.